ಕಾಂಗ್ರೆಸ್ ಗೆ ಜನರ ಪರಿಚಯ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ – ಸಿಎಂ ಬೊಮ್ಮಾಯಿ
ತುಮಕೂರು; ( ಮಧುಗಿರಿ) ಕಾಂಗ್ರೆಸ್ ನವರು ಗ್ಯಾರಂಟಿ ಕಾರ್ಡ್ ಕೊಡುತ್ತಿದ್ದಾರೆ. ಆದರೆ ಅವರ ಮಾತಿನಲ್ಲಿ ಜನರಿಗೆ ಗ್ಯಾರಂಟಿ ಇಲ್ಲ. ಅವರು ವಿಜಿಟಿಂಗ್ ಕಾರ್ಡ್ ಕೊಟ್ಟು ಜನರಿಗೆ ಪರಿಚಯ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಅವರು ಇಂದು ಮಧುಗಿರಿಯಲ್ಲಿ ಬಿಜೆಪಿ ಪಕ್ಷದಿಂದ ಆಯೋಜಿಸಿದ್ದ ವಿಜಯ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.
ಅವರು ಹಿಂದೆ ಸರ್ಕಾರ ಮಾಡಿದಾಗ 10 ಕೆಜಿ ಅಕ್ಕಿ ಮೊದಲೇ ಸಿಗ್ತಾ ಇತ್ತು. ಅವರು ಬಂದು 5 ಕೆಜಿ ಮಾಡಿದ್ರು. ಈಗ ಮತ್ತೆ 10 ಕೆಜಿ ಅಕ್ಕಿ ಕೊಡ್ತೀವಿ ಅಂತ ಜನರಿಗೆ ಸುಳ್ಳು ಹೇಳ್ತಿದ್ದಾರೆ
ಜನ ಬಳಕೆ ಮಾಡೋದು 70- 80 ಯೂನಿಟ್ ವಿದ್ಯುತ್ ಮಾತ್ರ. 200 ಯೂನಿಟ್ ಫ್ರೀ ಕೊಡ್ತೀವಿ ಅಂತಾರೆ. ಅಂದರೆ 120 ಯೂನಿಟ್ ಖರ್ಚೇ ಆಗಲ್ಲ. ಅದನ್ನ ಫ್ರೀ ಕೊಡ್ತೀವಿ ಅಂತಾರೆ. ಇವರು ಜನರಿಗೆ ಯಾಮಾರಿಸುತ್ತಾ ಇದ್ದಾರೆ. ಅವರು ಕೊಡುವ ಗ್ಯಾರಂಟಿ ಕಾರ್ಡ್ ಹಿಂದೆ ಏನೂ ಇಲ್ಲ. ಬ್ಯಾಂಕ್ ಗಳಲ್ಲಿ ಕಾರ್ಡ್ ಕೊಟ್ರೆ ಅದರಲ್ಲಿ ಹಣ ಇರುತ್ತೆ. ಅವರು ಕೊಡುತ್ತಿರೋದು ಪುಕ್ಕಟ್ಟೆ ಕಾರ್ಡ್ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಅದು ಕೇವಲ ವಿಸಿಟಿಂಗ್ ಕಾರ್ಡ್
ಕಾಂಗ್ರೆಸ್ ಕೊಡ್ತಿರೋ ಕಾರ್ಡ್ ಗಳು ವಿಸಿಟಿಂಗ್ ಕಾರ್ಡ್. ಜನರ ಜೊತೆ ಕಾಂಗ್ರೆಸ್ ಪರಿಚಯ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಅದನ್ನ ತಗೊಂಡು ಉಪ್ಪಿನಕಾಯಿಯೂ ಹಾಕೋಕ ಆಗಲ್ಲ. ಅದನ್ನು ಹೆಣ್ಣುಮಕ್ಕಳು ತಿರಸ್ಕಾರ ಮಾಡಿ ಕಸದ ಬುಟ್ಟಿಗೆ ಹಾಕಿದ್ದಾರೆ ಎಂದು ಸಿಎಂ ಬೊಮ್ಮಾಯಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಗೆ ಲೇವಡಿ ಮಾಡಿದರು.
ಕಾಂಗ್ರೆಸ್ ನ ಕಸದ ಬುಟ್ಟಿಗೆ ಹಾಕಿ
ಮೇ ತಿಂಗಳು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ನ ಕಸದ ಬುಟ್ಟಿಗೆ ಹಾಕಿ. ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಜನಪರ ಆಡಳಿತ ಮಾಡಲು ಕಮಲವನ್ನು ಅರಳಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಧುಗಿರಿ ಮತದಾರರಿಗೆ ವಿನಂತಿ ಮಾಡಿಕೊಂಡರು