ನಡೆ ಕನ್ನಡ, ನುಡಿ ಕನ್ನಡ, ಮನ ಕನ್ನಡವಾಗಿರಬೇಕು, ಶಾಸಕ ವೆಂಕಟರಮಣಪ್ಪ.
ಪಾವಗಡ: ಪಟ್ಟಣದ ಎಸ್.ಎಸ್.ಕೆ ಸಮುದಾಯ ಭವನದಲ್ಲಿ ಶನಿವಾರ 7 ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಶಾಸಕ ವೆಂಕಟರಮಣಪ್ಪ ಮಾತನಾಡಿದರು.
ಗಡಿ ತಾಲೂಕಾದ ಪಾವಗಡದಲ್ಲಿ ತೆಲುಗಿನ ಪ್ರಭಾವ ಹೆಚ್ಚಾಗಿದ್ದು , ಹೆಚ್ಚಿನ ಜನ ಕನ್ನಡ ಬರೆದು, ಓದುತ್ತಾರೆ. ಮನೆಗಳಲ್ಲಿ. ಮಾತ್ರ ತೆಲುಗು ಮಾತನಾಡುತ್ತಾರೆ. ಅದೇ ರೀತಿ ಆಂಧ್ರ ಭಾಗಗಳಲ್ಲಿ ಕನ್ನಡವನ್ನು ಸ್ವಚ್ಚವಾಗಿ ಮಾತನಾಡುತ್ತಾರೆ. ಸರ್ಕಾರ ಖಡ್ಡಾಯವಾಗಿ ಕನ್ನಡ ಮಾದ್ಯಮದಲ್ಲಿ ಶಿಕ್ಷಣ ಪಡೆಯುವಂತೆ ಕಾನೂನು ರೂಪಿಸಬೇಕು ಎಂದರು.
ಸಮ್ಮೇಳನಾಧ್ಯಕ್ಷ ಹ. ರಾಮಚಂದ್ರಪ್ಪ ಮಾತನಾಡಿ, ಪಾವಗಡ ತಾಲೂಕು ವಿಶಿಷ್ಟ ಸಂಸ್ಕೃತಿಯನ್ನು ಹೊಂದಿದ ಜನಗಳಿಂದ ಕೂಡಿದೆ , ತಾಲೂಕು ಹಲವು ಸಾಹಿತಿಗಳಿಗೆ, ಕವಿಗಳಿಗೆ ಹೋರಾಟಗಾರರಿಗೆ ಜನ್ಮ ನೀಡಿದ ಪ್ರದೇಶವಾಗಿದೆ ಎಂದರು. .
ಕಾದಂಬರಿಕಾರ ಡಾ.ಕುಂ.ವೀರಭದ್ರಪ್ಪ ಮಾತನಾಡಿ, ಗಡಿ ಪ್ರದೇಶವಾದ ಪಾವಗಡವನ್ನು ಜಿಲ್ಲಾ ಕೇಂದ್ರವನ್ನಾಗಿ ಸರ್ಕಾರ ಘೋಷಣೆ ಮಾಡಬೇಕು .
ಕನ್ನಡಕ್ಕೆ ಪ್ರಥಮ ಸ್ಥಾನ ನೀಡಿ, ಗೌರವಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂದರು. ಪರಭಾಷೆ ವ್ಯಾಮೋಹದಿಂದ ನಮ್ಮ ಭಾಷೆ ಹಾಳಾಗುವಂತಾಗಬಾರದು.
ಈ ನಿಟ್ಟಿನಲ್ಲಿ ಹೆಚ್ಚಿನ ಕನ್ನಡ ಕಾರ್ಯಕ್ರಮಗಳು ತಾಲೂಕಿನಾದ್ಯಂತ ನಡೆಯಬೇಕು, ಇದಕ್ಕೆ ಪ್ರತಿಯೊಬ್ಬ ಕನ್ನಡಿಗನು ಸಹಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸ್ವಾಮಿ ಜಪಾನಂದ , ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಕಟ್ಟಾ ನರಸಿಂಹಮೂರ್ತಿ, ಇತಿಹಾಸ ಲೇಖಕ ವಿ.ಆರ್.ಚೆಲುವರಾಜನ್, ನೇ.ಭ.ರಾಮಲಿಂಗಶೆಟ್ಟಿ, ರೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ವೆಂಕಟೇಶ್, ಉಪ ನಿರ್ದೇಶಕ ಕೆ.ಜಿ.ರಂಗಯ್ಯ, ನಿವೃತ್ತ ಉಪ ಕಾರ್ಯದರ್ಶಿ ಎಚ್.ವಿ.ರಾಮಚಂದ್ರರಾವ್, ಎಂ ಎಸ್ ವಿಶ್ವನಾಥ್, ಡಾ.ಕೆ.ಎಂ.ಪ್ರಭಾಕರ್, ಐ ಎ ನಾರಾಯಣಪ್ಪ, ಜಿ.ಪಿ.ಪ್ರಮೋದ್ ಕುಮಾರ್, ರಂಗಪ್ಪ ಮಾತನಾಡಿದರು.
ಎಸ್ ಎಸ್ ಕೆ ಸಂಘದ ಅಧ್ಯಕ್ಷ ಶ್ರೀನಿವಾಸ್, ಪುರಸಭೆ ಅಧ್ಯಕ್ಷೆ ಧನಲಕ್ಷ್ಮಿ, ಪ್ರಾಂಶುಪಾಲ ಕೆ.ಒ.ಮಾರಪ್ಪ, ಕಂಟಲಕೆರೆ ಸಣ್ಣಹೊನ್ನಯ್ಯ, ಸಣ್ಣರಾಮರೆಡ್ಡಿ ಇತರರು ಉಪಸ್ಥಿತರಿದ್ದರು