IMG 20230706 WA0001

ಸವಾಲುಗಳನ್ನು ಎದುರಿಸುವ ಶಕ್ತಿ ವೀರಶೈವ ಲಿಂಗಾಯತ ಸಮಾಜಕ್ಕೆ ಇದೆ..!

Genaral STATE

ರಾಜಕೀಯ ಮೀರಿ ಒಗ್ಗಟ್ಟಾದರೆ ಸಮಾಜದ ಸಮಸ್ಯೆಗಳಿಗೆ ಪರಿಹಾರ:

ಸವಾಲುಗಳನ್ನು ಎದುರಿಸುವ ಶಕ್ತಿ ವೀರಶೈವ ಲಿಂಗಾಯತ ಸಮಾಜಕ್ಕೆ ಇದೆ: ಬಸವರಾಜ ಬೊಮ್ಮಾಯಿ

ಬೆಂಗಳೂರು: ಈ ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯ ಹಲವಾರು ಸವಾಲುಗಳನ್ನು ಎದುರಿಸಿದೆ. ಸವಾಲನ್ನು ಎದುರಿಸುವವರು ನಾಯಕರಾಗುತ್ತಾರೆ. ಸವಾಲುಗಳನ್ನು ಎದುರಿಸುವ ಶಕ್ತಿ ವೀರಶೈವ ಲಿಂಗಾಯತ ಸಮಾಜಕ್ಕೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಸಮಾಜದ ನೂತನ ಶಾಸಕರು ಹಾಗೂ ಸಚಿವರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚುನಾವಣೆಯ ನಂತರ ನೂತನವಾಗಿ ಆಯ್ಕೆಯಾದ ಶಾಸಕರಿಗೆ ಅಭಿನಂದನೆ ಮಾಡುವುದು ಸಂಪ್ರದಾಯ. ಅದು ಪರಮ ಪೂಜ್ಯರ ನೇತೃತ್ವದಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.

IMG 20230706 WA0016


ನಾವು ಒಂದು ಕಡೆ ಸೇರಿ ಪರಮಪೂಜ್ಯರ ನೇತೃತ್ವದಲ್ಲಿ ಸನ್ಮಾನಕ್ಕೆ ಒಳಪಡುವುದರ ಸಂದೇಶ ಏನೆಂದರೆ ಪರಮಪೂಜ್ಯರ ಹಾಗೂ ಸಮಾಜದ ರಕ್ಷಾ ಕವಚ ಮತ್ತು ಜವಾಬ್ದಾರಿಯ ಮಾಲೆ ಅಂತ ನನ್ನ ಭಾವನೆ. ರಾಜಕಾರಣಿ ಗಳಿಗೆ ಹಲವಾರು ಸವಾಲುಗಳಿವೆ. ಕೇವಲ ಚುನಾವಣೆ ಒಂದೆ ಸವಾಲಲ್ಲ. ಸವಾಲುಗಳನ್ನು ಎದುರಿಸುವ ಶಕ್ತಿ ವೀರಶೈವ ಲಿಂಗಾಯತ ಸಮಾಜಕ್ಕೆ ಇದೆ. ನಾವು ವಿಶ್ವಗುರು ಬಸವಣ್ಣನವರ ಅವರ ಕಾಯಕವೇ ಕೈಲಾಸ ತತ್ವ ಪಾಲಿಸಬೇಕು. ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಅನ್ಯರಿಗೆವಾಸಹ್ಯ ಪಡಬೇಡ ಅನ್ನುವುದನ್ನು ಪಾಲಿಸಿದರೆ ಸಾಕು ಎಂದರು.

IMG 20230706 WA0018


ನಮಗೆ ಚರಿತ್ರೆ ಇದೆ‌ ಚಾರಿತ್ರ್ಯ ಬೇಕಿದೆ. ಆಚಾರ್ಯರಿದ್ದಾರೆ ಆಚರಣೆ ಬೇಕಿದೆ. ಚಾರಿತ್ರ್ಯ ಪರಮಪೂಜ್ಯರ ಆಶೀರ್ವಾದದಿಂದ ದೊರೆಯುತ್ತದೆ. ಒಬ್ಬ ನಾಯಕರು ಮಠಗಳನ್ನು ವಿರೋಧ ಮಾಡಿದ್ದರು, ಕೊಳ್ಳೆಗಾಲದಿಂದ ಹಿಡಿದು ಬೀದರ ವರೆಗೂ ನಮ್ಮ ಸಮಾಜ ಸಾವಿರಾರು ವರ್ಷಗಳಿಂದ ಮಠಗಳು ಶಿಕ್ಷಣ, ದಾಸೋಹ ಮಾಡಿಕೊಂಡು ಬಂದಿವೆ. ಸರ್ಕಾರ ಇಲ್ಲದ ಸಂದರ್ಭದಲ್ಲಿ ಶಿಕ್ಷಣ ನೀಡುತ್ತ ಬಂದಿವೆ. ಒಗ್ಗಟ್ಟಿನಲ್ಲಿ ಬಲ ಇದೆ. ರಾಜಕೀಯ ಮೀರಿ ಒಗ್ಗಟ್ಟಾದರೆ ನಮ್ಮ ಮುಂದಿನ ಪೀಳಿಗೆ ಈಗ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎಂದರು.

IMG 20230706 WA0017


ಕಾರ್ಯಕ್ರಮದಲ್ಲಿ ಬಾಳೆಹೊನ್ನೂರು ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ ಸೇರಿದಂತೆ ಅನೇಕ ಮಠಾಧೀಶರು, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ, ನೂತನವಾಗಿ ಆಯ್ಕೆಯಾದ ವೀರಶೈವ ಲಿಂಗಾಯತ ಸಮುದಾಯದ ಸಚಿವರು ಹಾಗೂ ಶಾಸಕರು ಹಾಜರಿದ್ದರು.