IMG20230706115525 01

ಪಾವಗಡ : ಅಂತರರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ

DISTRICT NEWS ತುಮಕೂರು

ವೈ.ಎನ್.ಹೊಸಕೋಟೆ: ಗ್ರಾಮದ ರಾಷ್ಟ್ರೀಯ ವಿಧ್ಯಾಪೀಠ ಪ್ರಥಮ ಧರ್ಜೆ ಕಾಲೇಜಿನಲ್ಲಿ  ದಿನಾಂಕ 6/07/2023 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಇವರ ವಗಿಯಿಂದ ಅಂತರರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆಯನ್ನು ಆಚರಿಸಲಾಯಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಿ.ಎಸ್.ಐ. ಅರ್ಜುನ್ ಗೌಡ ರವರು  ಇತ್ತಿಚಿನ ದಿನಗಳಲ್ಲಿ  14 ರಿಂದ 24ನೆ ವಯಸ್ಸಿನ ಯುವಕರೆ ಈ ಮಾದಕ ವಸ್ತುಗಳಿಗೆ ಹೆಚ್ಚು ಅವಲಂಬಿತರಾಗಿದ್ದಾರೆ ಈ ಮಾದಕ ವಸ್ತುಗಳಿಂದ ವರ್ಷಕ್ಕೆ 8 ಲಕ್ಷ ಜನ ಸಾಯುತ್ತಿದ್ದು ಇದರಿಂದ ಮನುಷ್ಯನನ್ನು ಅಪರಾದ ಕೃತ್ಯಗಳನ್ನು ಎಸಗಲು ದಾರಿ ಮಾಡಿಕೊಡುತ್ತವೆ  ಇದರಿಂದ ಯಾರು ಸಹ ಮಾದಕ ವಸ್ತುಗಳನ್ನು ಬಳಸಬಾರದು  ಎಂದು ಹೆಚ್ಚರಿಸಿದರು.

ಜನ ಜಾಗೃತಿ ಸದಸ್ಯರು ಹಾಗೂ ರಾಷ್ಟ್ರೀಯ ವಿಧ್ಯಾಪೀಠ ಪ್ರಥಮ ಧರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಸಣ್ಣನಾಗಪ್ಪ ರವರು ಮಾತನಾಡುತ್ತಾ  17ನೇ ಶತಮಾನದಲ್ಲಿ ಬ್ರಿಟಿಷರು  ಸಿಗರೇಟ್ ಅನ್ನು ನಮ್ಮ ದೇಶಕ್ಕೆ ತಂದರು.

ಸಿಗರೇಟ್ ಅನ್ನು ಸೈನಿಕರಿಗೆ ಆಹಾರದ ಜೋತೆ ಯುದ್ದದ ಸಮಯದಲ್ಲಿ ನೀಡುತ್ತಿದ್ದರು.

ಈಗ ಇದರಿಂದ ಲಕ್ಷಾಂತರ ಜನ ಸಾವನ್ನಪ್ಪಿದ್ದಾರೆ ಇದರಿಂದ ಯಾರು ಸಹ ಇನ್ನು ಮುಂದೆ ಮಾದಕ ವಸ್ತುಗಳಿಗೆ ಬಲಿಯಾಗಬಾರದು ಎಂದು ಕಾಲೇಜು ವಿಧ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದ್ದಾರೆ.

ಈ ಸಂದರ್ಭದಲ್ಲಿ ಬೋರಣ್ಣ.  ಕೃಷಿ ಮೇಲ್ವಿಚಾರಕರು, ಮಹೇಶ್ ಯೋಜನಾಧಿಕಾರಿ, ದಯಾನಂದ್ ವಲಯ ಮೇಲ್ವಿಚಾರಕರು, ರಮ್ಯಾ, ಕವಿತಾ, ಶಿಕ್ಷಕರಾದ ರಾಜು,ಪ್ರಕಾಶ್, ವರದಿಗಾರ ರಾಮಚಂದ್ರ ಹಾಗೂ ಕಾಲೇಜು ವಿಧ್ಯಾರ್ಥಿಗಳು ಹಾಜರಿದ್ದರು