IMG 20230711 WA0003

ಜಾನ್ಸನ್‌ ಕಂಟ್ರೋಲ್ಸ್‌ನ ಅತಿದೊಡ್ಡ ಓಪನ್‌ಬ್ಲೂ ಇನ್ನೋವೇಷನ್‌ ಕೇಂದ್ರ ಆರಂಭ….!

BUSINESS

ಜಾನ್ಸನ್‌ ಕಂಟ್ರೋಲ್ಸ್‌ ಇಲ್ಲಿ ಮೊಟ್ಟ ಮೊದಲನೆಯ ವಿಶಿಷ್ಟ ವರ್ಚುವಲ್‌ ರಿಯಾಲಿಟಿ ಬಿಲ್ಡಿಂಗ್‌ ಅನುಭವವನ್ನು ನೀಡಲಿದೆ

ಜಾನ್ಸನ್‌ ಕಂಟ್ರೋಲ್ಸ್‌ನ ಅತಿದೊಡ್ಡ ಓಪನ್‌ಬ್ಲೂ ಇನ್ನೋವೇಷನ್‌ ಕೇಂದ್ರ ಆರಂಭ, ಭಾರತದ ನೆಟ್‌ ಝೀರೋ ಭವಿಷ್ಯಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನಗಳ ಪ್ರದರ್ಶನ

ಭಾರತದ ನೆಟ್‌ ಝೀರೋ ಹವಾಮಾನ ಗುರಿಗಳನ್ನು ಸಾಧಿಸಲು ಎಐ ಆಧಾರಿತ ಎನರ್ಜಿ ಮತ್ತು ಮಾಲಿನ್ಯ ನಿಯಂತ್ರಗಳು ಎಷ್ಟರಮಟ್ಟಿಗೆ ಮುಖ್ಯವಾಗುತ್ತವೆ ಎಂಬುದನ್ನು ಇಲ್ಲಿ ವೀಕ್ಷಿಸಬಹುದು

· ಜಾನ್ಸನ್‌ ಕಂಟ್ರೋಲ್ಸ್‌ ಇಲ್ಲಿ ಮೊಟ್ಟ ಮೊದಲನೆಯ ವಿಶಿಷ್ಟ ವರ್ಚುವಲ್‌ ರಿಯಾಲಿಟಿ ಬಿಲ್ಡಿಂಗ್‌ ಅನುಭವವನ್ನು ನೀಡಲಿದ್ದು, ಗ್ರಾಹಕರು ನೆಟ್‌ ಝೀರೋ ಬಿಲ್ಡಿಂಗ್‌ ಪ್ರೋಗ್ರಾಮ್‌ನ ಸಂಪೂರ್ಣ ವಿವರಗಳನ್ನು ಇಲ್ಲಿ ಅನ್ವೇಷಿಸಬಹುದು

· ಎಐ, ನೆಟ್‌ ಝೀರೋ ಬಿಲ್ಡಿಂಗ್ಸ್‌ ಮತ್ತು ಕಟ್ಟಡಗಳಲ್ಲಿ ಜನರ ಆರೋಗ್ಯ, ಸುರಕ್ಷತೆ ಮತ್ತು ಅನುಕೂಲಕರ ಅನುಭವ ಹೆಚ್ಚಿಸಲು ಜಾನ್ಸನ್‌ ಕಂಟ್ರೋಲ್ಸ್‌ನ ಅತ್ಯಾಧುನಿಕ ಜಾಗತಿಕ ಸಂಶೋಧನೆ ಮತ್ತು ಅಭಿವೃದ್ಧಿಗೆ ಪ್ರಾಶಸ್ತ್ಯ ನೀಡಲಾಗುತ್ತದೆ.

ಬೆಂಗಳೂರು, ಜುಲೈ 11- ಸ್ಮಾರ್ಟ್‌, ಆರೋಗ್ಯಕರ ಮತ್ತು ಸುಸ್ಥಿರ ನಿರ್ಮಾಣ ಕ್ಷೇತ್ರದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಜಾನ್ಸನ್‌ ಕಂಟ್ರೋಲ್ಸ್‌ ಬೆಂಗಳೂರಿನಲ್ಲಿ ತನ್ನ ಅತಿದೊಡ್ಡ ಅತ್ಯಾಧುನಿಕ ಓಪನ್‌ಬ್ಲೂ ಇನ್ನೋವೇಷನ್‌ ಕೇಂದ್ರವನ್ನು ಆರಂಭಿಸಿದೆ. ಹೊಸ ಕೇಂದ್ರ ನಿರ್ಮಾಣ ಕ್ಷೇತ್ರದ ಹೊಸ ತಂತ್ರಜ್ಞಾನಗಳ ಮಾದರಿಯನ್ನು ಪ್ರದರ್ಶಿಸಲಿದ್ದು, ಜಾನ್ಸನ್‌ ಕಂಟ್ರೋಲ್ಸ್‌ನ ಓಪನ್‌ಬ್ಲೂ ಕ್ಲೌಡ್‌, ಮತ್ತು ಸಂಪೂರ್ಣವಾಗಿ ಕಾರ್ಯಗತಗೊಂಡಿರುವ ಎಐ ತಂತ್ರಜ್ಞಾನವನ್ನು ಪರಿಚಯಿಸಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಜಾನ್ಸನ್‌ ಕಂಟ್ರೋಲ್ಸ್‌ನ ಚೀಫ್‌ ಟೆಕ್ನಾಲಜಿ ಆಫೀಸರ್‌ ವಿಜಯ್‌ ಶಂಕರನ್‌ “ನಮ್ಮ ಕಾಲದಲ್ಲಿ ತುರ್ತಾಗಿ ನಿಭಾಯಿಸಬೇಕಾದ ಸವಾಲುಗಳಲ್ಲಿ ಒಂದಾಗಿರುವ ಹವಾಮಾನ ಬದಲಾವಣೆಯನ್ನು ಕಟ್ಟಡಗಳಲ್ಲಿ ವ್ಯವಸ್ಥಿತರವಾಗಿ ಡಿಜಿಟಲ್‌ ವ್ಯವಸ್ಥೆಯನ್ನು ಜಾರಿಗೊಳಿಸುವುದರಿಂದ ಕ್ಲೌಡ್‌, ಎಡ್ಜ್‌ ಮತ್ತು ಎಐ ತಂತ್ರಜ್ಞಾನ ಬಳಸುವುದರಿಂದ, ಸ್ವಯಂಚಾಲಿತ ವ್ಯವಸ್ಥೆ ರೂಪಿಸುವುದರಿಂದ ನಿಭಾಯಿಸಬಹುದು. ಓಪನ್‌ಬ್ಲೂಪ್‌ ಡಿಜಿಟಲೀಕರಣದಲ್ಲಿ ಮುಂಚೂಣಿಯಲ್ಲಿದ್ದು, ಶೂನ್ಯ ಮಾಲಿನ್ಯವನ್ನು ಸಾಧಿಸಲು ಮತ್ತು ಇಂಧನ ಉಳಿತಾಯಕ್ಕೆ ಸಹಾಯ ಮಾಡುತ್ತದೆ. ತಂತ್ರಜ್ಞಾನ ಆವಿಷ್ಕಾರಗಳಲ್ಲಿ ಭಾರತ ಸದಾ ಮುಂದಿದ್ದು, ನಮ್ಮ ಓಪನ್‌ಬ್ಲೂ ನೆಟ್‌ವರ್ಕ್‌ ಇಲ್ಲಿಯೂ ವಿಸ್ತರಿಸಲು ಉತ್ಸುಕರಾಗಿದ್ದೇವೆ. ಇಲ್ಲಿ ತೀವ್ರವಾಗಿ ಬೆಳೆಯುತ್ತಿರುವ ಟೆಕ್‌ ಇಕೋಸಿಸ್ಟಮ್‌ನ ಜೊತೆಗೂಡಿ ನಿರ್ಮಾಣ ಕ್ಷೇತ್ರದಲ್ಲಿ ನೆಟ್‌ ಝೀರೋ ಸೊಲ್ಯೂಷನ್‌ಗಳಲ್ಲಿ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ” ಎಂದರು.

ಭಾರತದಲ್ಲಿ ಮೂರನೇಯದಾಗಿರುವ ಓಪನ್‌ಬ್ಲೂ ಇನ್ನೋವೇಷನ್‌ ಸೆಂಟರ್‌, ಭಾರತದಲ್ಲಿ ಹೆಚ್ಚುತ್ತಿರುವ ಜಾನ್ಸನ್‌ ಕಂಟ್ರೋಲ್ಸ್‌ನ ಉಪಸ್ಥಿತಿಯನ್ನು ತೋರಿಸುತ್ತಿದ್ದು, ಭಾರತದ ಜಿ20 ಲೀಡರ್‌ಷಿಪ್‌ನಡಿ ಸುಸ್ಥಿರತೆ ಮತ್ತು ಡಿಜಿಟಲೀಕರಣ ಮಾತ್ರವಲ್ಲದೇ ದೀರ್ಘಾವಧಿಯ ಹವಾಮಾನ ಬದ್ಧತೆಗಳಿಗೂ ತನ್ನ ಬೆಂಬಲವನ್ನು ಸೂಚಿಸುತ್ತಿದೆ. ಎಐ ತಂತ್ರಜ್ಞಾನದಲ್ಲಿ ಆಗುತ್ತಿರುವ ಆವಿಷ್ಕಾರಗಳು ಮತ್ತು ಸುಸ್ಥಿರತೆ, ಶಕ್ತಿಯ ಮಿತವ್ಯಯದ ನಿರ್ಮಾಣ ತಂತ್ರಜ್ಞಾನದ ಮೇಲೆ ಹೆಚ್ಚು ಗಮನ ಹರಿಸುತ್ತಿರುವ ಹೊಸ ಕೇಂದ್ರ ಭಾರತದ ನೆಟ್‌ ಝೀರೋ ಪ್ರಗತಿಯನ್ನು ಕ್ಷಿಪ್ರಗೊಳಿಸಲಿದೆ.

ಬೆಂಗಳೂರು ಸೆಂಟರ್‌ ಭಾರತದ ಮೂರನೇ ಎಕ್ಸ್‌ಪೀರಿಯನ್ಸ್‌ ಸೆಂಟರ್‌ ಆಗಿಯೂ ಕೆಲಸ ಮಾಡಲಿದ್ದು, ವಹಿವಾಟು ಮತ್ತು ಮುಂಚೂಣಿಯ ಕಂಪೆನಿಗಳಿಗೆ ನಿರ್ಮಾಣ ತಂತ್ರಜ್ಞಾನದ ಪ್ರಾಯೋಗಿಕ ಪ್ರದರ್ಶನ ನೀಡಲಿದೆ. ಜಾನ್ಸನ್‌ ಕಂಟ್ರೋಲ್ಸ್‌ ಓಪನ್‌ಬ್ಲೂ ಎನ್ನುವುದು ಕ್ಲೌಡ್‌, ಎಡ್ಜ್‌ ಮತ್ತು ಎಐ ತಂತ್ರಜ್ಞಾನ ಬಳಸಿ ರೂಪಿಸಲಾದ ಕನೆಕ್ಟೆಡ್‌ ಸೊಲ್ಯೂಷನ್‌ ಆಗಿದ್ದು, ಈ ಸೆಂಟರ್‌ನಲ್ಲಿ ಪರಿಪೂರ್ಣವಾಗಿ ಕೆಲಸ ಮಾಡಲಿದೆ. ಗ್ರಾಹಕರು ಸೆಟ್ಸ್‌, ಪ್ರೊಸೆಸ್‌, ಪ್ಲೇಸ್‌, ಸಿಸ್ಟಮ್ಸ್‌ ಮತ್ತು ಸ್ಮಾರ್ಟ್‌ ಬಿಲ್ಡಿಂಗ್‌ನ ಸಾಧನಗಳ ಡಿಜಿಟಲ್‌ ರೂಪದ ಅನುಭವವನ್ನು ಇಲ್ಲಿ ಪಡೆಯಬಹುದು. ಇದಲ್ಲದೇ ನಿಯಂತ್ರಣ ತಂತ್ರಜ್ಞಾನಗಳು, ವೀಡಿಯೋ ಅನಾಲಿಟಿಕ್ಸ್‌ನ ಕಂಪ್ಯೂಟರ್‌ ವಿಷನ್‌ ಮತ್ತು ಫೈರ್‌ ಸೇಫ್ಟಿ ಸೊಲ್ಯೂಷನ್ಸ್‌ನ 3ಡಿ ಪ್ರಿಂಟೆಡ್‌ ಮಾದರಿಗಳನ್ನೂ ಇಲ್ಲಿ ವೀಕ್ಷಿಸಬಹುದು.

ಜಾನ್ಸನ್‌ ಕಂಟ್ರೋಲ್ಸ್‌ ವರ್ಚುವಲ್‌ ರಿಯಾಲಿಟಿ ಅನುಭವವನ್ನು ಗ್ರಾಹಕರು ಇಲ್ಲಿ ಪಡೆದು ಸ್ಮಾರ್ಟ್‌, ಇಂಧನ ಕ್ಷಮತೆಯ ಮತ್ತು ನೆಟ್‌ ಝೀರೋ ಮಾಲಿನ್ಯದ ಕಟ್ಟಡಗಳನ್ನು ಹೇಗೆ ನಿರ್ಮಿಸಿ ನಿರ್ವಹಿಸಬಹುದು ಎಂಬ ಪರಿಪೂರ್ಣ ಮಾಹಿತಿಯನ್ನು ಇಲ್ಲಿ ಪಡೆಯಬಹುದು. ತಮ್ಮದೇ ಆದ ನೆಟ್‌ ಝೀರೋ ಗುರಿಗಳನ್ನು ಕಂಡುಕೊಳ್ಳಲು ಕೇಂದ್ರ ಅವರಿಗೆ ನೆರವಾಗುತ್ತದೆ.

ಜಾನ್ಸನ್‌ ಕಂಟ್ರೋಲ್ಸ್‌ನ ಓಪನ್‌ಬ್ಲೂ ಇನ್ನೋವೇಷನ್‌ ಕೇಂದ್ರದ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾನ್ಸನ್‌ ಕಂಟ್ರೋಲ್ಸ್‌ನ ಚೀಫ್‌ ಟೆಕ್ನಾಲಜಿ ಆಫೀಸರ್‌ ವಿಜಯ್‌ ಶಂಕರನ್‌ ವಹಿಸಿದ್ದರು. ಅಕ್ಸೆಂಚರ್‌ನ ಚೀಫ್‌ ಸ್ಟ್ರಾಟೆಜಿ ಆಫೀಸರ್‌ ಡಾ. ಭಾಸ್ಕರ್‌ ಘೋಷ್‌, ಜಾನ್ಸನ್‌ ಕಂಟ್ರೋಲ್ಸ್‌ ಇಂಡಿಯಾದ ಓಪನ್‌ಬ್ಲೂ ಇಂಡಿಯಾ ಸಾಫ್ಟ್‌ವೇರ್‌ ಎಂಜಿನಿಯರಿಂಗ್‌ ಮತ್ತು ಏಷ್ಯಾ ಪೆಸಿಫಿಕ್‌ ಸೊಲ್ಯೂಷನ್ಸ್‌ನ ಉಪಾಧ್ಯಕ್ಷ ಶಿವಕುಮಾರ್‌ ಸೆಲ್ವ ಗಣಪತಿ ಮತ್ತು ಜಾನ್ಸನ್‌ ಕಂಟ್ರೋಲ್ಸ್‌ ಇಂಡಿಯಾದ ಹ್ಯೂಮನ್‌ ರಿಸೋರ್ಸಸ್‌ ನಿರ್ದೇಶಕಿ ದಿವ್ಯಾ ಝಾ ಉಪಸ್ಥಿತರಿದ್ದರು.

“ಕಟ್ಟಡಗಳ ಡೀಕಾರ್ಬನೈಸೇಷನ್‌ ರಾಷ್ಟ್ರೀಯ ನೆಟ್‌ ಜೀರೋ ಗುರಿಗಳನ್ನು ಸಾಧಿಸಲು ಮುಖ್ಯವಾಗಿ ನೆರವಾಗುತ್ತದೆ. ಏಕೆಂದರೆ ಜಾಗತಿಕ ಮಾಲಿನ್ಯಕ್ಕೆ ಕಟ್ಟಡಗಳು ಶೇ 40ರಷ್ಟು ಕಾರಣವಾಗುವುದಲ್ಲದೇ ಬಹಳಷ್ಟು ಶಕ್ತಿಯ ವ್ಯಯಕ್ಕೆ ಅವಕಾಶ ನೀಡುತ್ತದೆ. ಹಾಗಾಗಿ ಕಟ್ಟಡಗಳ ಡಿಜಿಟಲೀಕರಣ, ಭಾರತದ ಕಟ್ಟಡಗಳಲ್ಲಿ ನೆಟ್‌ ಝೀರೋ ಗುರಿ ಸಾಧನೆಗೆ ಮಹತ್ವದ ಮತ್ತು ತ್ವರಿತ ಕೊಡುಗೆ ನೀಡಬಲ್ಲದು. ಪ್ರತಿಯೊಂದು ಕ್ಷೇತ್ರದಲ್ಲಿಯೂ ಇದು ಕಾರ್ಯಗತಗೊಳ್ಳಬೇಕು ಎನ್ನುವುದು ನಮ್ಮ ಅನಿಸಿಕೆ. ಜಾನ್ಸನ್‌ ಕಂಟ್ರೋಲ್ಸ್‌ನ ಓಪನ್‌ಬ್ಲೂ ಇನ್ನೋವೇಷನ್‌ ಸೆಂಟರ್‌ ಜಾಲದ ವಿಸ್ತರಣೆ ಈ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ನಮ್ಮ ಸಮಗ್ರ ನೆಟ್‌ ಝೀರೋ ನಿರ್ಮಾಣ ಕೊಡುಗೆಗೆ ಇದು ಮುಖ್ಯ ಪಾತ್ರ ವಹಿಸಲಿದೆ. ಆ ಮೂಲಕ ದೇಶದ ಮಾಲಿನ್ಯ ಮುಕ್ತ ಭವಿಷ್ಯವನ್ನು ಕ್ಷಿಪ್ರಗೊಳಿಸಲಿದೆ” ಎಂದು ಗಣಪತಿ ಹೇಳಿದರು.

ಭಾರತದಲ್ಲಿ 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಜಾನ್ಸನ್‌ ಕಂಟ್ರೋಲ್ಸ್‌ ಮೂರು ಉತ್ಪಾದನೆ ಮತ್ತು ಐದು ಎಂಜಿನಿಯರಿಂಗ್‌ ಕೇಂದ್ರಗಳನ್ನು ಸ್ಥಾಪಿಸಿದ್ದು, 3000 ಎಂಜಿನಿಯರ್‌ಗಳು ಸೇರಿ 8000ಕ್ಕೂ ಹೆಚ್ಚು ಸಿಬ್ಬಂದಿಯನು ಹೊಂದಿದೆ. ಬೆಂಗಳೂರಿನ ಓಪನ್‌ಬ್ಲೂ ಇನ್ನೋವೇಷನ್‌ ಸೆಂಟರ್‌ 300ಕ್ಕೂ ಹೆಚ್ಚು ಎಂಜಿನಿಯರ್‌ಗಳೊಂದಿಗೆ ಕಾರ್ಯಾರಂಭ ಮಾಡಿದೆ. ಮುಂದಿನ ಎರಡು ವರ್ಷಗಳಲ್ಲಿ ಆರ್‌ ಆಂಡ್‌ ಡಿ, ಡಿಜಿಟಲ್‌ ಟ್ವಿನ್‌, ಮತ್ತು ಎಡ್ಜ್‌ ಎಂಜಿನಿಯರ್ಸ್‌ ಸೇರಿ ಹೆಚ್ಚುವರಿ ಪಾತ್ರ ವಹಿಸಲು ಉದ್ದೇಶಿಸಿದೆ. ಭಾರತದಲ್ಲಿ ಅತಿ ಹೆಚ್ಚು ಐಟಿ ಮತ್ತು ಎಂಜಿನಿಯರಿಂಗ್‌ ಪ್ರತಿಭೆಗಳನ್ನು ಹೊಂದಿರುವ ಸ್ಥಳದಲ್ಲಿ ಹೊಸ ಕೇಂದ್ರವನ್ನು ಆರಂಭಿಸುವ ಮೂಲಕ ಜಾನ್ಸನ್‌ ಕಂಟ್ರೋಲ್ಸ್‌ ಭಾರತದಲ್ಲಿ ಇದನ್ನು ಸ್ಮಾರ್ಟ್‌ ಬಿಲ್ಡಿಂಗ್‌ ತಂತ್ರಜ್ಞಾನದ ಘಟಕವನ್ನಾಗಿ ರೂಪಿಸಲು ಉದ್ದೇಶಿಸಿದೆ.

ಮಹದೇವಪುರದಲ್ಲಿರುವ ಬ್ರೂಕ್‌ಫೀಲ್ಡ್‌ ಪ್ರಾಪರ್ಟೀಸ್‌ ಆರ್‌ಎಂಝೀ ಸೆಂಟಿನಿಯಲ್‌ ಸಿ ಆವರಣದಲ್ಲಿರುವ ಜಾನ್ಸನ್‌ ಕಂಟ್ರೋಲ್ಸ್‌ ಓಪನ್‌ಬ್ಲೂ ಇನ್ನೋವೇಷನ್‌ ಸೆಂಟರ್‌ ಭಾರತದಲ್ಲಿ ಮೂರನೇ ಅತಿದೊಡ್ಡ ಮತ್ತು ಅತ್ಯಾಧುನಿಕ ಕೇಂದ್ರವಾಗಿದ್ದು, ಜಾಗತಿಕವಾಗಿ 10ನೇ ಇನ್ನೋವೇಷನ್‌ ಸೆಂಟರ್‌ ಎನಿಸಿದೆ.