IMG 20231004 WA0012

Karnatka : ಬಳಸಿದ ಕಾರುಗಳ ಖರೀದಿ ಮಾರುಕಟ್ಟೆಯಲ್ಲಿ ಶೇ 133ರಷ್ಟು ಹೆಚ್ಚಳ

BUSINESS

ಬೆಂಗಳೂರಿನ ಬಳಸಿದ ಕಾರುಗಳ ಖರೀದಿ ಮಾರುಕಟ್ಟೆಯಲ್ಲಿ ಶೇ 133ರಷ್ಟು ಹೆಚ್ಚಳ

  • ಸಣ್ಣ ಕಾರುಗಳ ಖರೀದಿಗೆ ಹೆಚ್ಚು ಆದ್ಯತೆ, ಎಸ್‌ಯುವಿಯತ್ತಲೂ ಒಲವು
  • ಸುಲಭ ಹಣಕಾಸು ನೆರವಿನಿಂದ ಯುವಜನರಿಂದ ಹೆಚ್ಚು ಖರೀದಿ

ಬೆಂಗಳೂರು, ಅಕ್ಟೋಬರ್‌ 3: ಬಳಸಿದ ಕಾರುಗಳ ಬೃಹತ್‌ ಮಾರುಕಟ್ಟೆಯಾಗಿ ಬೆಂಗಳೂರು ದೇಶದಲ್ಲೇ ಮೊದಲನೇ ಸ್ಥಾನದಲ್ಲಿದೆ. ಕಾರ್ಸ್‌24 ಮೂಲಕ ಬಳಸಿದ ಕಾರುಗಳ ಮಾರಾಟದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ 133ರಷ್ಟು ಹೆಚ್ಚಳವಾಗಿದೆ. ಕಡಿಮೆ ಬೆಲೆಯ ಕಾರುಗಳ ಖರೀದಿಗೆ ಮೊದಲ ಕಾರು ಖರೀದಿದಾರರು ಹೆಚ್ಚು ಆಸಕ್ತಿ ತೋರುತ್ತಿರುವುದು ಇದಕ್ಕೆ ಕಾರಣ. ಭಾರತೀಯ ಕಾರು ಮಾರುಕಟ್ಟೆಯಲ್ಲಿಯೇ ಟೆಕ್‌ ಹಬ್‌ ಎನಿಸಿಕೊಂಡ ಬೆಂಗಳೂರು, ಬಳಸಿದ ಕಾರುಗಳ ಖರೀದಿಗೆ ಹೆಚ್ಚು ಆಸಕ್ತಿ ತೋರುತ್ತಿರುವುದು ಮಾರುಕಟ್ಟೆ ವಿಶ್ಲೇಷಕರನ್ನು ಅಚ್ಚರಿಗೊಳಿಸಿದೆ.

ಭಾರತದ ಸಿಲಿಕಾನ್‌ ಕಣಿವೆ ಎನಿಸಿಕೊಂಡಿರುವ ಬೆಂಗಳೂರಿನಲ್ಲಿ ಕಾರು ಮಾಲೀಕತ್ವದ ದೃಷ್ಟಿಕೋನದಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ವಿಶೇಷವಾಗಿ ಯುವ ಖರೀದಿದಾರರ ಮನಸ್ಥಿತಿ ಬದಲಾಗುತ್ತಿದೆ. ಕಾರ್ಸ್‌24ನಂಥ ಪ್ಲಾಟ್‌ಫಾರಂಗಳಲ್ಲಿ ಆರ್ಥಿಕವಾಗಿ ಸುಲಭವಾಗಿ ಆದರೆ ಉತ್ತಮ ಆಯ್ಕೆಯ ಕಾರುಗಳು ಲಭ್ಯವಾಗುತ್ತಿರುವುದು ಇದಕ್ಕೆ ಕಾರಣ. ಆರ್ಥಿಕ ಅನುಕೂಲತೆಗಳು ಮತ್ತು ಸುಲಭ ಲಭ್ಯತೆಯಿಂದಾಗಿ ಮೊದಲ ಕಾರು ಖರೀದಿಸುವವರು ಬಳಸಿದ ಕಾರುಗಳನ್ನೇ ಹೆಚ್ಚು ನೆಚ್ಚಿಕೊಳ್ಳುತ್ತಿದ್ದಾರೆ.

ಕಾರ್ಸ್‌24 ಕರ್ನಾಟಕದಲ್ಲಿ 2015ರಲ್ಲಿ ಬೆಂಗಳೂರಿನ ಮೂಲಕ ಕಾರ್ಯಾಚರಣೆ ಆರಂಭಿಸಿದ್ದು, ಪ್ರಸ್ತುತ 12 ಪಟ್ಟಣಗಳಲ್ಲಿ ಸೇವೆ ಸಲ್ಲಿಸುತ್ತಿದೆ. ಈ ವಿಶಾಲ ಮಾರುಕಟ್ಟೆ ಮತ್ತು ಡೀಲರ್‌ಷಿಪ್‌ ಜಾಲದಿಂದ ಬಳಸಿದ ಕಾರುಗಳ ಮಾರುಕಟ್ಟೆ ಕ್ಷಿಪ್ರವಾಗಿ ಬೆಳವಣಿಗೆ ಕಾಣುತ್ತಿದೆ.

ಈ ಕುರಿತು ಮಾತನಾಡಿದ ಕಾರ್ಸ್‌24ನ ಸಹಸ್ಥಾಪಕ ಗಜೇಂದ್ರ ಜಾಂಗಿಡ್‌ ಅವರು “ಬೆಂಗಳೂರಿನಲ್ಲಿ ಬಳಸಿದ ಕಾರುಗಳು ಗಮನಾರ್ಹವಾಗಿ ಹೆಚ್ಚು ಮಾರಾಟವಾಗುತ್ತಿರುವುದು ನಗರದ ಆಟೋಮೊಬೈಲ್‌ ಮಾರುಕಟ್ಟೆ ಸಕ್ರಿಯವಾಗಿರುವುದರ ದ್ಯೋತಕ. ಖರೀದಿದಾರರು ವಾಸ್ತವತೆ ಮತ್ತು ಆರ್ಥಿಕವಾಗಿ ಸುಲಭವಾಗಿ ದೊರೆಯುತ್ತಿರುವುದಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ನಮ್ಮ ಭವಿಷ್ಯ ಅರ್ಥವ್ಯವಸ್ಥೆಗೂ ಇದು ದಿಕ್ಸೂಚಿಯಾಗಿದೆ” ಎಂದು ಅಭಿಪ್ರಾಯಪಟ್ಟರು.

IMG 20231004 WA0013

ಸಂಚಾರ ದಟ್ಟಣೆಯನ್ನು ಹೆಚ್ಚು ಎದುರಿಸುತ್ತಿರುವ ಬೆಂಗಳೂರಿನಲ್ಲಿ ಗ್ರಾಹಕರಿಗಾಗಿ ಕಾರ್ಸ್‌24 ಕಾರು ಖರೀದಿಯ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಕಂಪೆನಿಯಲ್ಲಿರುವ ಖರೀದಿಯ ಸ್ವರೂಪದ ವಿಶ್ಲೇಷಣೆಯ ಪ್ರಕಾರ ಬೆಂಗಳೂರಿನಲ್ಲಿ ಬಳಸಿದ ಮಾರುತಿ ಸುಜುಕಿ ಸ್ವಿಫ್ಟ್‌, ರೆನಾಲ್ಟ್‌ ಕ್ವಿಡ್‌ ಮತ್ತು ಹ್ಯುಂಡೈ ಐ20 ಕಾರುಗಳಿಗೆ ಹೆಚ್ಚು ಮಾರಾಟವಾಗಿವೆ. ಸಣ್ಣ ಕಾರುಗಳಿಗೆ ಗ್ರಾಹಕರು ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಖರೀದಿದಾರರಲ್ಲಿ ಸಿಂಹಪಾಲು ಮಂದಿ 35 ವರ್ಷ ವಯಸ್ಸಿನೊಳಗಿನ ಯುವಜನರೇ ಇದ್ದಾರೆ. ಕಚೇರಿ, ಕಾಲೇಜು ಇತ್ಯಾದಿ ಕೆಲಸಗಳಿಗೆ ದಿನನಿತ್ಯದ ಸಣ್ಣ ಕಾರುಗಳೇ ಹೆಚ್ಚು ಅನುಕೂಲಕರ ಎಂಬ ಭಾವನೆಯನ್ನು ಖರೀದಿದಾರರು ಹೊಂದಿದ್ದಾರೆ. ಅದ್ದೂರಿತನಕ್ಕಿಂತ ಹಣಕ್ಕೆ ತಕ್ಕ ಮೌಲ್ಯದ ಪ್ರತಿಪಾದನೆಗೆ ಒತ್ತು ನೀಡುತ್ತಿದ್ದಾರೆ.

ಹ್ಯಾಚ್‌ಬ್ಯಾಕ್‌ ಮಾದರಿಗಳ ಬೆಲೆ ಆರು ಲಕ್ಷ ರೂಪಾಯಿಗಳೊಳಗೆ ಇರುವುದರಿಂದ ಆರ್ಥಿಕವಾಗಿ ಸುಲಭವಾಗಿ ಲಭ್ಯವಾಗುವುದು ಮಾತ್ರವಲ್ಲದೇ ಒಳಸ್ಥಳಾವಕಾಶದ ಕ್ಷಮತೆಯ ಬಳಕೆ ಮತ್ತು ಇಂಧನ ವೆಚ್ಚವೂ ಕಡಿಮೆ ಇರುವುದು ಇದಕ್ಕೆ ಕಾರಣ.

ಹ್ಯಾಚ್‌ಬ್ಯಾಕ್‌ ಮಾದರಿಗಳನ್ನು ಹೊರತುಪಡಿಸಿದರೆ, ಪ್ರಮಾಣದಲ್ಲಿ ಗಮನಾರ್ಹವಲ್ಲದಿದ್ದರೂ ಕೆಲವು ಖರೀದಿದಾರರು ಎಸ್‌ಯುವಿ ಮತ್ತು ಮಿನಿ ಎಸ್‌ಯುವಿಯತ್ತ ಆಕರ್ಷಕವಾಗುತ್ತಿದ್ದಾರೆ. ಹೆಚ್ಚು ಸಾಮರ್ಥ್ಯದ ಸ್ಟೈಲಿಷ್‌ ವಾಹನಗಳು ಕಾರುಪ್ರಿಯರನ್ನು ಮರುಳು ಮಾಡುತ್ತಿದೆ. ಹ್ಯುಂಡೈ ಕ್ರೆಟಾ, ಮಾರುತಿ ಬ್ರೆಜಾ, ಮಹಿಂದ್ರಾ ಎಕ್ಸ್‌ಯುವಿ 700 ಮತ್ತು ಫೋರ್ಡ್‌ ಇಕೋಸ್ಪೋರ್ಟ್‌ ಈ ವಿಭಾಗದಲ್ಲಿ ಜನಪ್ರಿಯ ಆಯ್ಕೆಗಳಾಗಿವೆ.

ಬೆಂಗಳೂರಿನಲ್ಲಿ ಬಳಸಿದ ಪ್ರೀಮಿಯಂ ಕಾರುಗಳ ಖರೀದಿಯಲ್ಲಿಯೂ ಗಮನಾರ್ಹ ಹೆಚ್ಚಳವಾಗಿದ್ದರೂ ಎಲ್ಲ ಖರೀದಿದಾರರಲ್ಲಿಯೂ ಇರುವ ಮೊದಲ ಆತಂಕ ಮತ್ತು ಪ್ರಶ್ನೆಯೆಂದರೆ, ಮೈಲೇಜ್‌. 2023ರ ಅರ್ಧ ವರ್ಷದಲ್ಲಿ ಮಾಹಿತಿ ಕೋರಿ ಬಂದ ಕರೆಗಳಲ್ಲಿ ಪ್ರತಿ ಎರಡು ನಿಮಿಷಗಳಿಗೊಂದು ಬಾರಿ ಮೈಲೇಜ್‌ ಕುರಿತು “ಕಾರಿನ ಎವರೇಜ್‌ ಮೈಲೇಜ್‌ ಎಷ್ಟು?” ಎಂಬ ಪ್ರಶ್ನೆ ಬರುತ್ತಿದೆ.

ಮೈಲೇಜ್‌ ಹೊರತುಪಡಿಸಿದರೆ ಏರ್‌ಬ್ಯಾಗ್‌, ಡ್ರೈವರ್‌ ಅಸಿಸ್ಟ್‌ ಸಿಸ್ಟಮ್‌, ಆಟೋಪ್ಲೇ ಮ್ಯೂಸಿಕ್‌ ಸಿಸ್ಟಮ್‌, ಲಾರ್ಜ್‌ ಸ್ಕ್ರೀನ್‌, ಸನ್‌ರೂಫ್‌ ಕುರಿತೂ ವಿಚಾರಣೆಗಳು ಬರುತ್ತಿವೆ. ಬೆಂಗಳೂರಿನ ಖರೀದಿದಾರರು ಅನುಕೂಲತೆಗಳು ಮತ್ತು ಸುಧಾರಿತ ತಂತ್ರಜ್ಞಾನಗಳಿಗೂ ಒತ್ತು ನೀಡುತ್ತಿರುವುದು ಇದಕ್ಕೆ ಸಾಕ್ಷಿ. ಇದರಿಂದಾಗಿಯೇ ಕಾರ್ಸ್‌24 ಮೂಲಕ ಮಾರಾಟವಾದ ಕಾರುಗಳಲ್ಲಿ ಮಿಡ್ಲ್‌ ವೇರಿಯಂಟ್‌ (ವಿಎಕ್ಸ್‌ಐ) ಮುಂಚೂಣಿಯಲ್ಲಿದೆ. ಜೊತೆಗೆ ಸಾಂಪ್ರದಾಯಿಕ ಬಿಳಿ ಮತ್ತು ಗ್ರೇ ಬಣ್ಣಗಳಿಂದ ಖರೀದಿದಾರರು ವಿವಿಧ ಬಣ್ಣಗಳತ್ತ ಸರಿಯುತ್ತಿದ್ದಾರೆ. ಅನುಕೂಲತೆಗಳ ಜೊತೆಗೆ ಉತ್ತಮ ಚಾಲನಾ ಅನುಭವಕ್ಕೂ ಒತ್ತು ನೀಡುತ್ತಿದ್ದಾರೆ.

ಕಾರು ಖರೀದಿಗೆ ಹಣಕಾಸು ನೆರವು ಬೆಂಗಳೂರಿನ ಬಳಸಿದ ಕಾರುಗಳ ಖರೀದಿದಾರರಲ್ಲಿ ಜನಪ್ರಿಯವಾಗುತ್ತಿದ್ದು ಅನೇಕರು ತಮ್ಮ ನೆಚ್ಚಿನ ಕಾರು ಖರೀದಿಗೆ ಅನುಕೂಲಕರ ದಾರಿ ಕಂಡುಕೊಳ್ಳುತ್ತಿದ್ದಾರೆ. ಇದಕ್ಕಾಗಿಯೇ ಕಾರ್ಸ್24, ಝೀರೋ ಡೌನ್‌ಪೇಮೆಂಟ್‌ ಆಯ್ಕೆ ನೀಡಿದ್ದು, ಖರೀದಿ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಿದೆ. ಆರ್ಥಿಕ ನೆರವು ಪಡೆದು ಖರೀದಿಸಿದ ಕಾರಿನ ಪ್ರಮಾಣದಲ್ಲಿ ಈ ವರ್ಷದ ಮೊದಲಾರ್ಧದಲ್ಲಿ ಶೇ 130ರಷ್ಟು ಹೆಚ್ಚಳವಾಗಿದೆ. ಸಾಲ ಅರ್ಜಿದಾರರಲ್ಲಿ ವೇತನದಾರರೇ ಅಧಿಕ ಮಂದಿಯಿದ್ದು ಸರಾಸರಿ 11,500 ರೂಪಾಯಿ ಮಾಸಿಕ ಕಂತು ಭರಿಸಲು ಸಿದ್ಧರಿದ್ದಾರೆ. ಸರಾಸರಿ ಆರು ವರ್ಷಗಳ ಸಾಲ ಅವಧಿ ಹೆಚ್ಚು ಜನಪ್ರಿಯವಾಗುತ್ತಿದೆ. ಆರ್ಥಿಕ ನೆರವಿನ ಮೂಲಕ ಕಾರು ಖರೀದಿಸುವವರ ಸರಾಸರಿ ವಯಸ್ಸೂ 35 ವರ್ಷಗಳು.

ಕಾರ್ಸ್‌24 ನ ಮಾಹಿತಿ ವಿಶ್ಲೇಷಣೆಯ ಪ್ರಕಾರ ಬೆಂಗಳೂರಿನ ಬಳಸಿದ ಕಾರುಗಳ ಮಾರಾಟ ಮಾರುಕಟ್ಟೆ ಪ್ರಮಾಣ 2023ರಲ್ಲಿ (ಆಗಸ್ಟ್‌ವರೆಗೆ) ಸುಮಾರು 500 ಕೋಟಿ ರೂಪಾಯಿಗಳಾಗಿವೆ. ಈ ಕಾರಿನ ಬಳಿಕ ಹೊಸ ಕಾರುಗಳಿಗೆ ಬಹುತೇಕ ಖರೀದಿದಾರರು ಮುಖ ಮಾಡುವುದರಿಂದ ಕಾರು ಮಾರುಕಟ್ಟೆ ಗಣನೀಯ ಪ್ರಗತಿ ಕಾಣಲಿದೆ. ಬಳಸಿದ ಕಾರುಗಳ ಖರೀದಿದಾರರ ಆಸಕ್ತಿಯೂ, ಆದ್ಯತೆಯೂ ವೈವಿಧ್ಯಮಯವಾಗಿದೆ. ಇವು ತ್ವರಿತವಾಗಿ ಬದಲಾಗುತ್ತ, ಖರೀದಿದಾರರು ಕ್ಷಿಪ್ರವಾಗಿ ಬಳಸಿದ ಕಾರುಗಳನ್ನು ಬದಲಾಯಿಸುತ್ತಲೇ ಇರುವುದರಿಂದ, ಸುಲಭವಾಗಿ ಕಾರುಗಳನ್ನು ಮಾರಬಹುದಾದ್ದರಿಂದ, ಸುಲಭ ಹಣಕಾಸು ನೆರವೂ ದೊರೆಯುತ್ತಿರುವುದರಿಂದ, ಈ ಮಾರುಕಟ್ಟೆ ಅಭೂತಪೂರ್ವವಾಗಿ ಬದಲಾಗುತ್ತಿದೆ.

ಆಟೋಮೊಬೈಲ್‌ ಕ್ಷೇತ್ರ ಹೊಸ ತಂತ್ರಜ್ಞಾನ ಮತ್ತು ಅನುಕೂಲತೆಗಳನ್ನು ಅಳವಡಿಸಿಕೊಳ್ಳುತ್ತಲೇ ಇರುವುದರಿಂದ, ದೇಶದ 150ಕ್ಕೂ ಹೆಚ್ಚು ಕಡೆಗಳಲ್ಲಿರುವ ಕಾರ್ಸ್‌24, ಕಾರು ಮಾರುಕಟ್ಟೆ ಮತ್ತು ಖರೀದಿಯ ಭವಿಷ್ಯವನ್ನು ಬದಲಾಯಿಸುತ್ತಿದೆ.