ಬೆಂಗಳೂರು: ಅತ್ತಿಬೆಲೆ ಪಟಾಕಿ ಅವಗಡ ಬೆನ್ನಲ್ಲೇ ರಾಜ್ಯ ಸರ್ಕಾರ ಸಭೆ ನಡೆಸಿತ್ತು. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿತ್ತು. .ತಹಶೀಲ್ದಾರ್, ಇನ್ಸ್ ಪೆಕ್ಟರ್ ಮತ್ತು ರೀಜನಲ್ ಫೈರ್ ಆಫೀಸರ್ ಅಮಾನತಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದ ಬೆನ್ನಲ್ಲೆ ಕಂದಾಯ ಇಲಾಖೆ ಗೆ ಸಂಬಂದಿಸಿದ ಅಧಿಕಾರಿಗಳ ಅಮಾನತ್ತು ಆದೇಶ ಜಾರಿ ಗೊಂಡಿದೆ.
1. ಶಶಿಧರ ಮಡ್ಕಾಳ್ ಹಿಂದಿನ ತಹಶೀಲ್ದಾರ್, ಆನೇಕಲ್.
.2. ಶ್ರೀಧರ್ ವಿ.ಸಿ ,ಉಪ ತಹಶೀಲ್ದಾರ್- ಅತ್ತಿಬೆಲೆ ನಾಡಕಚೇರಿ
3. ಪುಶ್ಪರಾಜ್ ಎ- ರಾಜಸ್ವ ನಿರೀಕ್ಷಕರು ಅತ್ತಿಬೆಲೆ ವೃತ್ತ
4. ಭಾಗೇಶ್ ಹೊಸಮನಿ – ಗ್ರಾಮ ಆಡಳಿತ ಅಧಿಕಾರಿ, ಅತ್ತಿಬೆಲೆ ಕಂದಾಯ ವೃತ್ತ
ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಈ ನಾಲ್ಕು ಜನ ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆ ಎಂಬ ಆದೇಶವನ್ನು ಮುಕ್ತಾರ್ ಪಾ಼ ಹೆಚ್ ಜಿ – ಸರ್ಕಾರದ ಅಧೀನ ಕಾರ್ಯದರ್ಶಿ- ಕಂದಾಯ ಇಲಾಖೆ ಸೇವೆಗಳು -3 ಇವರು ಹೊರಡಿಸಿದ್ದಾರೆ.
ಸರ್ಕಾರವು ಈ ನಾಲ್ಕು ಅಧಿಕಾರಿ/ ಸಿಬ್ಬಂದಿಗಳು ತೋರಿದ ಕರ್ತವ್ಯ ದುರ್ನಡತೆ/ನಿರ್ಲಕ್ಷತೆಗಾಗಿ ಕರ್ನಾಟಕ ನಾಗರೀಕ ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ ನಿಯಮಗಳು, 1957 ರ ನಿಯಮ 10(1) ಡಿ ರನ್ವಯ ಇಲಾಖಾ ವಿಚಾರಣೆ ಕಾಯ್ದಿರಿಸಿ.ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತು ಗೊಳಿಸಿ ಆದೇಶಿಸಿದೆ.
ಗೃಹ ಇಲಾಖೆ ಗೆ ಸೇರಿದ ಇನ್ಸ್ ಪೆಕ್ಟರ್ ಮತ್ತು ರೀಜನಲ್ ಫೈರ್ ಆಫೀಸರ್ ಗಳ ಅಮಾನತ್ತು ಆದೇಶ ಜಾರಿಯಾಗಬೇಕಿದೆ.