IMG 20200820 WA0050

ವಿಧಾನಸೌಧದಲ್ಲಿ ಕೂರಿಸುವವರೆಗೂ ಜನಧ್ವನಿ ನಿಲ್ಲಿಸಲ್ಲ- ಡಿಕೆಶಿ

STATE POLATICAL

*ಜನ ವಿರೋಧಿ ಸರ್ಕಾರದ ವಿರುದ್ಧ ‘ಜನಧ್ವನಿ’ ಕಾರ್ಯಕ್ರಮ ಮುಂದುವರಿಯಲಿದೆ: ಡಿ.ಕೆ ಶಿವಕುಮಾರ್*

ವಿಧಾನಸೌಧದಲ್ಲಿ ಕೂರಿಸುವವರೆಗೂ ಜನಧ್ವನಿ ನಿಲ್ಲಿಸಲ್ಲ….

ಬೆಂಗಳೂರು :ಸರ್ಕಾರದ ಜನ ವಿರೋಧಿ ನೀತಿ ವಿರುದ್ಧ ನಡೆಸುತ್ತಿರುವ ‘ಜನಧ್ವನಿ’ ಕಾರ್ಯಕ್ರಮ ಇವತ್ತಿಗೆ ಮುಗಿಯುವುದಿಲ್ಲ. ಇದು ಪ್ರಾರಂಭ. ನಿಮ್ಮನ್ನು ವಿಧಾನಸೌಧದಲ್ಲಿ ಕೂರಿಸುವವರೆಗೂ ಜನಧ್ವನಿ ಕಾರ್ಯಕ್ರಮ ತೆಗೆದುಕೊಂಡು ಹೋಗುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ ಗುರುವಾರ ನಡೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮದಿನ ಆಚಹರಣೆ ಹಾಗೂ ‘ಜನಧ್ವನಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅಧ್ಯಕ್ಷರು, ದೇಶಕ್ಕೆ ರಾಜೀವ್ ಗಾಂಧಿ ಅವರ ಕೊಡುಗೆ, ರಾಜ್ಯಕ್ಕೆ ದೇವರಾಜ ಅರಸು ಅವರ ಕೊಡುಗೆ ಸ್ಮರಿಸಿದರು. ಜತೆಗೆ ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ವಿರುದ್ಧ ಗುಡುಗಿದರು. ಈ ವೇಳೆ ಅವರು ಹೇಳಿದ್ದಿಷ್ಟು…IMG 20200820 WA0031

‘ಇಂದು ಬಹಳ ಪವಿತ್ರವಾದ ದಿನ.
ರಾಜೀವ್ ಗಾಂಧಿ ಅವರ ನಾಯಕತ್ವದ ಗುಣಕ್ಕೆ ನಾನೇ ಸಾಕ್ಷಿ. ಈಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೂ ಚುನಾವಣೆಯನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ಪಂಚಾಯಿತಿಗೂ ನಾಯಕರು ಬೇಕು, ಪಾರ್ಲಿಮೆಂಟ್ ಗೂ ನಾಯಕರು ಬೇಕು. ಇವೆರಡರ ಮಧ್ಯೆ, ಹಲವು ಹಂತಗಳು ಬರುತ್ತವೆ. ಇದರ ಮೂಲಕ ದೇಶದ ಭವಿಷ್ಯಕ್ಕಾಗಿ ಮಹಿಳೆಯರು ಮತ್ತು ಎಲ್ಲ ವರ್ಗದ ಹೊಸ ನಾಯಕರನ್ನು ತಯಾರು ಮಾಡಬೇಕಿದೆ. ಹಳ್ಳಿ ಮಕ್ಕಳನ್ನು ನಾಯಕರನ್ನಾಗಿ ಮಾಡಬೇಕು. ಇದು ನನ್ನ ಸಂಕಲ್ಪ ಅಂತಾ ಹೇಳಿದರು.

ಇಲ್ಲಿ ಯುವಕರಿಗೆ ಮಾತನಾಡಲು ಅವಕಾಶ ನೀಡಲಾಗಿದೆ. ಹೊಸ ಪೀಳಿಗೆ ಹೊರಬರಬೇಕು. ನಿಮ್ಮಲ್ಲೂ ಕಿಚ್ಚಿದೆ. ಅದನ್ನು ನಾವು ಸರಿಯಾಗಿ ಬಳಸಿಕೊಳ್ಳಬೇಕು.

ದೇವರಾಜ ಅರಸರು ಮತ್ತು ರಾಜೀವ್ ಗಾಂಧಿ ಅವರು ಮುಂದಿನ ಪೀಳಿಗೆಗೆ ಏನು ಬೇಕು ಎಂದು ಆಲೋಚಿಸಿ ಈ ದೇಶಕ್ಕೆ ಕೊಡುಗೆ ನೀಡಿದ್ದಾರೆ. ಈ ನಾಯಕರ ಜನ್ಮದಿನದಂದು ನಾವು ಅವರಿಗೆ ನಮಿಸೋಣ.

ನಾನು ಶಾಸಕನಾಗಿದ್ದಾಗ ಭೂ ಗ್ರಾಂಟ್ ಹಾಗೂ ಲ್ಯಾಂಡ್ ಟ್ರಿಬ್ಯುನಲ್ ನಲ್ಲಿ ಕೆಲಸ ಮಾಡಿದ್ದೇನೆ. ಉಳುವವನಿಗೆ ಭೂಮಿ ಸಿಗಬೇಕು ಎಂದು ಇಡೀ ದೇಹಕ್ಕೆ ಅಡಿಪಾಯ ಹಾಕಿಕೊಟ್ಟಿದ್ದು ದೇವರಾಜ ಅರಸು ಅವರು. ನಮ್ಮ ಕಾಂಗ್ರೆಸ್ ನ ಪ್ರಣಾಳಿಕೆಯಲ್ಲಿ ಬಗರ್ ಹುಕುಂ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದವರಿಗೆ ಭೂಮಿ ನೀಡಿದೆವು. ಇದು ಕಾಂಗ್ರೆಸ್ ಪಕ್ಷದ ಚರಿತ್ರೆ. ಇದನ್ನು ಬಿಜೆಪಿ ಅವರು ಹೇಳಲು ಸಾಧ್ಯನಾ?IMG 20200820 WA0040

ನಾವು ಭೂಮಿ ಕೊಟ್ಟ ಜನ. ಇಂದು ಜನರ ಸಮಸ್ಯೆಯನ್ನು ವಿಧಾನ ಸೌಧ ಹಾಗೂ ರಾಜಭವನದಲ್ಲಿರುವವರಿಗೆ ಮುಟ್ಟಿಸಲು ಈ ಜನಧ್ವನಿ ಕಾರ್ಯಕ್ರಮ ಮಾಡಿದ್ದೇವೆ. ಈ ಕಾರ್ಯಕ್ರಮ ಇವತ್ತಿಗೆ ಮುಗಿಯುವುದಿಲ್ಲ. ಇದು ಪ್ರಾರಂಭ. ನಿಮ್ಮನ್ನು ವಿಧಾನಸೌಧದಲ್ಲಿ ಕೂರಿಸುವವರೆಗೂ ಜನಧ್ವನಿ ಕಾರ್ಯಕ್ರಮ ತೆಗೆದುಕೊಂಡು ಹೋಗುತ್ತೇನೆ.

ಕಾಂಗ್ರೆಸ್ ಪಕ್ಷ ಜನ್ಮ ತಾಳಿದ್ದು ಅಧಿಕಾರಕ್ಕೋಸ್ಕರ ಅಲ್ಲ. ಜನರ ನೋವು, ಸಂಕಟ, ಸಮಸ್ಯೆ, ಪ್ರತಿ ವ್ಯಕ್ತಿ ಜೀವನದಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಬದಲಾವಣೆ, ಉತ್ತೇಜನ ತರಲು ಹಾಗೂ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಈ ಕಾಂಗ್ರೆಸ್ ಹುಟ್ಟಿತು.

ರಾಜೀವ್ ಗಾಂಧಿ ಅವರು ವಿಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನ, ಯುವಕರ ಮೇಲೆ ಹೆಚ್ಚಿನ ನಂಬಿಕೆ ಇಟ್ಟಿದ್ದರು. ಇವತ್ತು ಟೆಲಿಫೋನ್, ಕಂಪ್ಯೂಟರ್, ತಂತ್ರಜ್ಞಾನ ಇಲ್ಲ ಅಂದ್ರೆ ಊಹಿಸಲು ಸಾಧ್ಯವಿಲ್ಲ. ಯಾವುದೇ ಕ್ಷೇತ್ರ ತೆಗೆದುಕೊಂಡರೂ ತಂತ್ರಜ್ಞಾನ ಇದೆ. ಅದು ನಮ್ಮ ಜೀವನದ ಭಾಗ.IMG 20200820 WA0051

ರಾಜೀವ್ ಗಾಂಧಿ ಅವರು ತಂತ್ರಜ್ಞಾನ ಕೊಡುಗೆ ನೀಡಿ ದೇಶಕ್ಕೆ ಹೊಸ ದಿಕ್ಕು ತೋರಿಸಿದರು. ಇಂದು ದೇಶವನ್ನು ಇಡೀ ವಿಶ್ವ ನೋಡುತ್ತಿದೆ ಎಂದರೆ, ನಮ್ಮ ಐಟಿ ಬಿಟಿ ನೋಡುತ್ತಿದೆ ಎಂದರೆ ಅದು ರಾಜೀವ್ ಗಾಂಧಿ ಅವರು ಹಾಕಿಕೊಟ್ಟ ಅಡಿಪಾಯ ಕಾರಣ.

ನೆಹರು ಅವರ ಕಾಲದಿಂದ ಇವತ್ತಿನವರೆಗೂ ಕಾಂಗ್ರೆಸ್ ಏನು ಮಾಡಿದೆ ಅಂತಾ ಬಿಜೆಪಿ ಸ್ನೇಹಿತರು ಕೇಳುತ್ತಿದ್ದಾರೆ. ಅವರು ಮಾತನಾಡುವಷ್ಟು ಶಕ್ತಿ, ಧ್ವನಿ ಹಾಗೂ ಅಧಿಕಾರ ಕೊಟ್ಟಿದ್ದೆ ಕಾಂಗ್ರೆಸ್ ಪಕ್ಷ. ಪ್ರತಿ ವಿಚಾರದಲ್ಲಿ ಪಾರದರ್ಶಕತೆ ತರಲು ಒಂದೊಂದೇ ತಿದ್ದುಪಡಿ ತಂದು ಸಂವಿಧಾನಕ್ಕೆ ರೂಪಕೊಟ್ಟು, ಪ್ರಜಾಪ್ರಭುತ್ವ ಬುನಾದಿ ಗಟ್ಟಿ ಮಾಡಿದೆವು.

*ಬಿಜೆಪಿ ಸರ್ಕಾರದ ವಿರುದ್ಧ ಟೀಕೆ:*

ಇವತ್ತು ಜನಧ್ವನಿಯಲ್ಲಿ ಬಿಜೆಪಿ ಬ್ರಹ್ಮಾಂಡ ಭ್ರಷ್ಟಾಚಾರ ಅಂತಾ ನಾವು ನೀವು ಹೇಳಬೇಕಿಲ್ಲ. ನಮ್ಮ ಮಾಧ್ಯಮ ಸ್ನೇಹಿತರೇ ಎಲ್ಲವನ್ನು ಬಿಡಿಬಿಡಿಯಾಗಿ ಹೇಳಿದ್ದಾರೆ.

ನೆರೆಯಿಂದ 4 ಸಾವಿರ ಕೋಟಿ ನಷ್ಟ ಆಗಿದೆ ಎಂದು ಕಂದಾಯ ಸಚಿವರು ಪ್ರಧಾನಿಗಳಿಗೆ ಹೇಳಿದ್ದಾರೆ. ಆದರೆ ಅಧಿಕಾರಿಗಳು 485 ಕೋಟಿ ನಷ್ಟ ಆಗಿದೆ ಅಂತಾ ಹೇಳಿದ್ದಾರೆ. ಪ್ರಧಾನಿಗಳ ಮುಂದೆ ನಿಮ್ಮ ಸಚಿವರು ಹೇಳಿರುವುದು ಸತ್ಯನೋ ಅಥವಾ ಅಧಿಕಾರಿಗಳು ಹೇಳಿದ್ದು ಸತ್ಯನೋ ನೀವು ಹೇಳಬೇಕು.

ನೀವು ಅಧಿಕಾರಕ್ಕೆ ಬಂದಮೇಲೆ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಲು 5 ಲಕ್ಷ, ಮನೆ ಕಟ್ಟುವವರೆಗೂ 5 ಸಾವಿರ ಬಾಡಿಗೆ ಕೊಡುತ್ತೇವೆ ಎಂದು ಹೇಳಿದ್ದೀರಿ. ಎಷ್ಟು ಜನಕ್ಕೆ ಪರಿಹಾರ ಕೊಟ್ಟಿರಿ? ನೆರೆಯಿಂದ 35 ಸಾವಿರ ಕೋಟಿ ನಷ್ಟ ಆಗಿದೆ ಎಂದು ಕೇಂದ್ರ ಸರ್ಕಾರಕ್ಕೆ ವರದಿ ನೀಡಿದಿರಿ. ಅವರು 1800 ಕೋಟಿ ಮಾತ್ರ ಕೊಟ್ಟರು. ನಮ್ಮ ರಾಜ್ಯ ನಿಮಗೆ 25 ಸಂಸದರನ್ನು ಕೊಟ್ಟಿದೆ. ಅವರಲ್ಲಿ ಒಬ್ಬರೂ ಜನರ ಪರವಾಗಿ ಧ್ವನಿ ಎತ್ತಲಿಲ್ಲ. ಹೀಗಾಗಿ ಕಾಂಗ್ರೆಸ್ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಜನ ಮತ ಕೊಟ್ಟರಲ್ಲ ಅದಕ್ಕೆ ಪ್ರತಿಯಾಗಿ ನಿಮ್ಮ ಸಂಸದರು ಕೇಂದ್ರದ ಮುಂದೆ ಅವರ ಧ್ವನಿಗೆ ಸ್ಪಂದಿಸಿ ಹಣ ತೆಗೆದುಕೊಂಡು ಬನ್ನಿ. ನಾವು ಯಾವುದೇ ತಕರಾರು ಮಾಡುವುದಿಲ್ಲ. ಉತ್ತಮ ಆಡಳಿತ ಕೊಡಿ, ಭ್ರಷ್ಟಾಚಾರ ಮಾಡಬೇಡಿ ಅಂತಾ ಹೇಳುತ್ತೇವೆ. ಆದರೆ ಕೊರೋನಾ ವಿಚಾರದಲ್ಲಿ ರೈತರಿಗೂ ಕೊಡಲಿಲ್ಲ, ಕಾರ್ಮಿಕರಿಗೂ ಕೊಡಲಿಲ್ಲ.

ಈಗಷ್ಟೇ ರಾಷ್ಟ್ರೀಯ ಚಾಲಕರ ಒಕ್ಕೂಟ ಪ್ರತಿನಿಧಿಗಳು ನನಗೆ ಒಂದು ಮನವಿ ಪತ್ರ ಕೊಟ್ಟಿದ್ದಾರೆ. ರಾಜ್ಯದಲ್ಲಿ 7.5 ಲಕ್ಷ ಚಾಲಕರಿಗೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ. ಅದರಲ್ಲಿ ಈವರೆಗೂ 2 ಲಕ್ಷದ 37 ಸಾವಿರ ಅರ್ಜಿಗಳು ತಿರಸ್ಕಾರವಾಗಿ ಕೇವಲ 1 ಲಕ್ಷ ಚಾಲಕರಿಗೆ ಹಣ ನೀಡಲಾಗಿದೆ. ಮುಖ್ಯಮಂತ್ರಿಗಳೇ 5 ಸಾವಿರ ಕೊಡುತ್ತೇವೆ ಎಂದು ಹೇಳಿದ ಮೇಲೆ ಅದನ್ನು ನೀಡಲು ಸಾಧ್ಯವಾಗಿಲ್ಲವಾದರೆ ನಿಮ್ಮ ಸರ್ಕಾರ ಯಾಕೆ?

ಪ್ರತಿ ತಾಲೂಕು ಹಾಗೂ ಬ್ಲಾಕ್ ಮಟ್ಟದಲ್ಲಿ ಚಾಲಕರ ಘಟಕ ಆರಂಭಿಸಿ ಅವರ ಸಂಕಷ್ಟ ಆಲಿಸಲು ನಮ್ಮ ಪದಾಧಿಕಾರಿಗಳಿಗೆ ಸೂಚಿಸಿದ್ದೇನೆ. ಚಾಲಕರ ವಿಚಾರ ಕೇವಲ ಉದಾಹರಣೆ, ಸವಿತಾ ಸಮಾಜದವರು, ಆಚಾರಿಗಳು, ನೇಕಾರರಿಗೂ ಇದೇ ಕತೆ. ಮೊನ್ನೆ ಕೃಷ್ಣಭೈರೇ ಗೌಡ ಅವರ ಕ್ಷೇತ್ರದಲ್ಲಿ ನಾಲ್ವರು ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅನಿವಾಸಿ ಕನ್ನಡಿಗರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದಾಗ ಅವರಿಗೆ 5-6 ತಿಂಗಳ ಸಂಬಳ ನೀಡಿದ್ದಾರೆ. ಭಾರತದಲ್ಲಿ ಮಾತ್ರ ಈ ರೀತಿ ಸೌಲಭ್ಯ ನೀಡಲಾಗಿಲ್ಲ. ರಿಯಾಯಿತಿ ಸಾಲ ಸೌಲಭ್ಯ ನೀಡಿದೆ. ಭಾರತದಲ್ಲಿ 20 ಲಕ್ಷ ಕೋಟಿ ಅಂತಾ ಹೇಳಿದರು. ಯಾರಿಗೆ ಎಷ್ಟು ಕೊಟ್ಟಿದ್ದೇವೆ ಅಂತಾ ಶ್ವೇತಪತ್ರ ಹೊರಡಿಸಿ. ವೆಬ್ಸೈಟ್ ನಲ್ಲಿ ಮಾಹಿತಿ ಹಾಕಿ. 1600 ಕೋಟಿಯನ್ನೇ ನಿಮ್ಮ ಕೈಲಿ ಕೊಡಲು ಸಾಧ್ಯವಾಗಿಲ್ಲ. ಇನ್ನು 20 ಲಕ್ಷ ಕೋಟಿ ಕೊಡಲು ಸಾಧ್ಯವೇ?

ಕಾರ್ಮಿಕ ವಿಚಾರದಲ್ಲಿ ಸರ್ಕಾರ ಇಷ್ಟು ನಿರ್ಲಕ್ಷ್ಯ ವಹಿಸಿದೆ. ಜನರ ಶಾಪ ನಿಮಗೆ ತಟ್ಟಲಿದೆ.

*ಪೊಲೀಸ್ ಅಧಿಕಾರಿಗಳಿಗೆ ಮನವಿ ಹಾಗೂ ಎಚ್ಚರಿಕೆ:*

ಮೊನ್ನೆ ಕೆ.ಜಿ ಹಳ್ಳಿ ಹಾಗೂ ಡಿ.ಜೆ ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿ ಎಚ್ಚರಿಕೆ ನೀಡುತ್ತಿದ್ದೇನೆ. ಈ ಗಲಭೆ ವಿಚಾರದಲ್ಲಿ ಬಿಜೆಪಿ ಸರ್ಕಾರದ ಸಚಿವರ ಹೇಳಿಕೆಗೆ ಒತ್ತಾಯ ಹೇರುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಸಿಲುಕಿಸಲು ನಿಮಗೆ ಒತ್ತಡ ಹಾಕುತ್ತಿದ್ದಾರೆ. ಮಿಸ್ಟರ್ ಪೊಲೀಸ್ ಕಮಿಷನರ್, ನಾವು ಇದಕ್ಕೆ ಅವಕಾಶ ನೀಡುವುದಿಲ್ಲ. ನೀವು ತನಿಖೆ ಹಾದಿ ತಪ್ಪಿದರೆ ನಮ್ಮ ಹೋರಾಟ ಬಿಜೆಪಿ ವಿರುದ್ಧ ಬಿಟ್ಟು ನಿಮ್ಮ ವಿರುದ್ಧ ಆರಂಭವಾಗುತ್ತದೆ. ಈ ಗಲಭೆಗೆ ನಿಮ್ಮ ವೈಫಲ್ಯ ಕಾರಣವೇ ಹೊರತು ಯಾವುದೇ ಕಾಂಗ್ರೆಸಿಗನಲ್ಲ. ನೀವು ಈ ಪರಿಸ್ಥಿತಿ ನಿಭಾಯಿಸಲು ವಿಫಲರಾಗಿದ್ದೀರಿ. ನಾವು ಈ ಘಟನೆಯನ್ನು ಖಂಡಿಸುತ್ತೇವೆ. ಇದಕ್ಕೆ ಕಾರಣನಾದವನ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳದೇ ಕಾಂಗ್ರೆಸ್ ನವರ ಮೇಲೆ ಮಸಿ ಬಲಿಯಲು ಮುಂದಾದರೆ ಈ ಡಿ.ಕೆ ಶಿವಕುಮಾರ್ ಸಹಿಸಲ್ಲ.

ನೀವು ಬಿಜೆಪಿ ಏಜೆಂಟರಂತೆ ವರ್ತಿಸಬೇಡಿ. ನಿಮಗೆ ಕಾಂಗ್ರೆಸ್ ಪಕ್ಷ ಶಕ್ತಿ ಕೊಟ್ಟಿದೆ, ಸಂವಿಧಾನ ಕೊಟ್ಟಿದೆ. ಆ ಸಂವಿಧಾನ ಅಡಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಈ ರೀತಿ ಕೋಮು ಗಲಭೆ ನಡೆದು ರಾಜ್ಯಕ್ಕೆ ಕಳಂಕ ತರಲಾಗುತ್ತಿದೆ.

ನಮ್ಮ ಕಾರ್ಯಕರ್ತ ಅಮಿತ್ ಶಾ ಅವರ ಬಗ್ಗೆ ಕಾಮೆಂಟ್ ಹಾಕಿದಾಗ ನಾನು ಕ್ಷಮೆ ಕೇಳಿದ್ದೀನಿ ಇದು ಕಾಂಗ್ರೆಸ್ ಪಕ್ಷದ ಸಂಸ್ಕೃತಿ. ನೀವೇನು ಮಾಡಿದಿರಿ. ಕಾಂಗ್ರೆಸ್ ನಾಯಕರಿಗೆ ನೋಟೀಸ್ ಜಾರಿ ಮಾಡುತ್ತೇವೆ ಎಂದು ಹೇಳುವುದು ಗೃಹಸಚಿವರ ಕೆಲಸನಾ? ಇದು ಸಂವಿಧಾನಬದ್ಧವೇ? ಅವರ ಹೇಳಿಕೆಯಿಂದ ನೀವು ಪ್ರಭಾವಿತರಾಗುತ್ತಿದ್ದೀರಿ.IMG 20200820 WA0030

ತಪ್ಪು ಮಾಡಿದವರನ್ನು ಶಿಕ್ಷೆಗೆ ಒಳಪಡಿಸಿ. ಕಾನೂನು ಕೈಗೆತ್ತಿಕೊಂಡವರನ್ನು ಬಂಧಿಸಿ. ನಾವು ಪ್ರಶ್ನಿಸಲ್ಲ. ಆದರೆ ನಿಮಗೆ ನಂಬರ್ ಬೇಕು ಅಂತಾ ಅಮಾಯಕರನ್ನು ಬಂಧಿಸಿದರೆ ಅದನ್ನು ನೋಡಿಕೊಂಡು ಸುಮ್ಮನಿರುವುದಿಲ್ಲ.

ನಿಮ್ಮ ಸಚಿವರು, ಶಾಸಕರು, ಸಂಸದರು ಪ್ರಚೋದನಕಾರಿ ಹೇಳಿಕೆ ಕೊಟ್ಟರಲ್ಲ ಅವಾಗ ಏಕೆ ಕ್ರಮ ಕೈಗೊಳ್ಳಲಿಲ್ಲ. ಮುಖ್ಯಮಂತ್ರಿಗಳೇ, ಗೃಹಸಚಿವರೇ ಏನು ಮಾಡುತ್ತಿದ್ದೀರಿ? ನಿಮ್ಮ ತಪ್ಪು ಮರೆ ಮಾಚಲು ಕಾಂಗ್ರೆಸ್ ಪಕ್ಷದವರ ಮೇಲೆ ಹಾಕಲು ಹೊರಟಿದ್ದೀರಿ. ಇದಕ್ಕೆಲ್ಲಾ ನಾವು ಬಗ್ಗುವುದಿಲ್ಲ. ನಾನು ಪಕ್ಷದ ಅಧ್ಯಕ್ಷನಾಗಿದ್ದು, ನಮ್ಮ ಯಾವುದೇ ಒಬ್ಬ ಕಾರ್ಯಕರ್ತನ ವಿರುದ್ಧ ಸುಳ್ಳು ಆರೋಪ ಮಾಡಿದರೂ ಅವನ ಪರವಾಗಿ ನಿಂತು ಹೋರಾಡುತ್ತೇನೆ ಅದು ನನ್ನ ಧರ್ಮ.

ನಮ್ಮ ತಾಳ್ಮೆಗೂ ಒಂದು ಇತಿ ಮಿತಿ ಇದೆ. ನಮ್ಮ ನಾಯಕಿ ಸೋನಿಯಾ ಗಾಂಧಿ ಅವರ ಮೇಲೆ ಯಾರೋ ಒಬ್ಬ ಕೇಸ್ ಹಾಕಿದ. ಮುಖ್ಯಮಂತ್ರಿಗಳು 24 ಗಂಟೆಯಲ್ಲಿ ಬಿ ರಿಪೋರ್ಟ್ ಸಲ್ಲಿಸುವುದಾಗಿ ನನಗೆ ಮಾತು ಕೊಟ್ಟರು. ಇವತ್ತಿನವರೆಗೂ ಅದು ನಡೆದಿಲ್ಲ. ನೀವು ನುಡಿದಂತೆ ನಡಿತೀರಿ ಎಂಬ ನಂಬಿಕೆ ಇದೆ.

ಶಿವಮೊಗ್ಗದಲ್ಲಿ ಕೂತು ಮಂತ್ರಿಯೊಬ್ಬರು ಕಾಂಗ್ರೆಸ್ ಆಂತರಿಕ ಬಿಕ್ಕಟ್ಟಿನಿಂದ ಗಲಭೆ ಆಗಿದೆ ಅಂತಿದ್ದಾರೆ. ನಿಮ್ಮ ಪಕ್ಷದ ಆಂತರಿಕ ಕಚ್ಚಾಟದ ಬಗ್ಗೆ ನಾನು ಮಾತನಾಡಲಾ? ಅದು ನನಗೆ ನಿಮ್ಮ ಆಂತರಿಕ ರಾಜಕೀಯ ಬೇಡ. ನಮಗೆ ನಮ್ಮದೇ ಆದ ರಾಜಕೀಯ ಬದ್ಧತೆ ಇದೆ. ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ.

ನಮಗೆ ನಿಮ್ಮಮ್ಯಾಜಿಸ್ಟ್ರೇಟ್ ತನಿಖೆ, ನಿಮ್ಮ ಆಡಳಿತದ ಮೇಲೆ ನಂಬಿಕೆ ಇಲ್ಲ. ಈ ಪ್ರಕರಣ ವಿಚಾರಣೆಯನ್ನು ಹಾಲಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನಡೆಯಬೇಕು. ನ್ಯಾಯಾಂಗ ತನಿಖೆಯಾಗಬೇಕು.