Congress 1

Congress: ಸಾರಥಿ ಯಾರು…? ಕೈ ನಲ್ಲಿ ಕಚ್ಚಾಟ……

National - ಕನ್ನಡ

 ʻ ಕೈ ʼ ಸಾರಥಿ ಯಾರು…?  ʻ ಕೈ ʼ ನಲ್ಲಿ ಕಚ್ಚಾಟ……

ಕಾಂಗ್ರೆಸ್‌ ಪಕ್ಷದಲ್ಲಿ ಗಾಂಧಿ ಕುಟುಂಬದ ನಾಯಕತ್ವ ಪ್ರಶ್ನಿಸುತ್ತಿರುವುದು ದುರದೃಷ್ಟಕರ – ಸಿದ್ದರಾಮಯ್ಯ

ಗಾಂಧಿ ಕುಟುಂಬಕ್ಕೆ ನನ್ನ ನಿಷ್ಟೆ – ಡಿಕೆಶಿ

ಬೆಂಗಳೂರು : –   ಎಐಸಿಸಿ ಅಧ್ಯಕ್ಷಸ್ಥಾನಕ್ಕೆ   ಪಕ್ಷದೊಳಗೆ ಆಂತರಿಕ ಕಿತ್ತಾಟ ಶುರುವಾಗಿದೆ ಗಾಂಧಿ ಕುಟುಂಬದ ನಾಯಕತ್ವ ಪ್ರಶ್ನೆ ಮಾಡುವ ಅಂತ ತಲುಪಿದೆ.

ಕಳೆದ ಲೊಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯವಾಗಿ ಸೋತ ಬಳಿಕ ಎಐಸಿಸಿ ಅಧ್ಯಕ್ಷರಾಗಿದ್ದ ರಾಹುಲ್‌ ಗಾಂಧಿ ಅವರು ಆ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು ನಂತರ ಸೋನಿಯಾಗಾಂಧಿ ಯವರನ್ನು ಹಂಗಾಮಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿತ್ತು.

ಕಾಂಗ್ರೆಸ್‌ ದಿನದಿಂದ ದಿನ ಕುಸಿಯುತ್ತಾ ಸಾಗುತ್ತಿದೆ. ಪಕ್ಷದ ಪ್ರತಿ ಹಂತದಲ್ಲೂ ಬದಲಾವಣೆ ತರುವಂತೆ ಕಾಂಗ್ರಸ್‌ ಪಕ್ಷದ ಮಾಜಿ ಸಿಎಂ ಗಳು, ಮಾಜಿ ಕೇಂದ್ರ ಸಚಿವರು, ಕಾರ್ಯಕಾರಿ ಸಮಿತಿ ಸದಸ್ಯರು, ಸಂಸದರು ಸೇರಿದಂತೆ  ಕಾಂಗ್ರಸ್‌ ಪಕ್ಷದ ೨೩ ನಾಯಕರು ಕೈ ಅಧಿನಾಯಕಿ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರೆ.  ಮುಖಂಡರ ಪತ್ರ ಕ್ಕೆ ಪ್ರತಿಕ್ರಿಯಿಸಿರುವ ಸೋನಿಯಾಗಾಂಧಿ  ಸೋಮವಾರ ಕಾಂಗ್ರಸ್‌ ಕಾರ್ಯಕಾರಿ ಸಮಿತಿ ಸಭೆ ಕರೆದಿದ್ದಾರೆ. ಯಾರಿಗೆ ಸಿಗಲಿದೆ ಏಐಸಿಸಿ ಸಾರಥ್ಯ….?

ಮತ್ತೆ ರಾಹುಲ್…..,? ಗಾಂಧಿ ಏತರ ಕುಟುಂಬಕ್ಕೂ...?

ಕಾಂಗ್ರೆಸ್‌ ಪಕ್ಷದ ಹೊಸ ಸಾರಥಿ ಗಾಂಧಿ ಕುಟುಂಬದವರ…? ಹೊರಗಿನವರ ಎಂಬ ಚರ್ಚೆ ಪಕ್ಷದಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಗಾಂಧಿ ಕುಟುಂಬದ ವಿರುಧ್ದ 23 ನಾಯಕರು ಧ್ವನಿ ಎತ್ತಿರುವುದು ಮುಂಬರುವ ದಿನಗಳಲ್ಲಿ ಕಾಂಗ್ರಸ್‌ ಪಕ್ಷದಲ್ಲಿ ಆಂತರಿಕ ಕಲಕ್ಕೆ ನಾಂದಿ ಯಾಗಲಿದೆ ಎನ್ನುತ್ತಿವೆ ಪಕ್ಷದ ಮೂಲಗಳು.

ಕಾಂಗ್ರೆಸ್‌ ಪಕ್ಷದಲ್ಲಿ ಗಾಂಧಿ ಕುಟುಂಬದ ನಾಯಕತ್ವ ಪ್ರಶ್ನಿಸುತ್ತಿರುವುದು ದುರದೃಷ್ಟಕರ ಎಂದಿದ್ದಾರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.

ಗಾಂಧಿ ಕುಟುಂಬಕ್ಕೆ  ಕರ್ನಾಟಕ ಕಾಂಗ್ರೆಸ್ ನ ನಿಷ್ಟೆ – ಡಿಕೆಶಿ

IMG 20200823 WA0078