IMG 20250107 WA0005 scaled

Karnataka : ಎಚ್ ಎಂ.ಪಿ.ವಿ ವೈರಸ್ ಬಗ್ಗೆ ಭಯ ಬೇಡ…!

Genaral STATE

*ಎಚ್ ಎಂ.ಪಿ.ವಿ ವೈರಸ್ ಬಗ್ಗೆ ಭಯ ಬೇಡ: ಸಿಎಂ ಸಿದ್ದರಾಮಯ್ಯ*

ಬೆಂಗಳೂರು, ಜನವರಿ 07: ಎಚ್ ಎಂ.ಪಿ. ವೈರಾಣು ಬಗ್ಗೆ ಸಾರ್ವಜನಿಕರು ಭಯಪಡಬೇಕಾದ ಅಗತ್ಯವಿಲ್ಲ. ಜಾಗರೂಕರಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಈಗಾಗಲೇ ಆರೋಗ್ಯ ಇಲಾಖೆಯವರು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಗಾಂಧಿಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.IMG 20250107 WA0013

ಎಚ್ ಎಂ.ಪಿ.ವಿ ಬಗ್ಗೆ ಇಂದು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಚರ್ಚಿಸಲಾಗಿದ್ದು, ಇದು ಆತಂಕಾರಿಯಾದ ವೈರಸ್ ಅಲ್ಲ ಹಾಗೂ ಅದು ಚೀನಾದಿಂದ ಬಂದಿಲ್ಲ. 2001 ರಿಂದಲೇ ಈ ವೈರಾಣು ಪತ್ತೆಯಾಗಿದ್ದು, ಎಚ್.ಎಂ.ಪಿ ವೈರಸ್ ಮಕ್ಕಳಿಗೆ, ವಯಸ್ಸಾದವರಿಗೆ ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಹೆಚ್ಚಾಗಿ ತಗಲುತ್ತದೆ. ಆದರೆ ಅದು ಅಪಾಯಕಾರಿಯಲ್ಲ ಎಂದು ತಜ್ಞರು ತಿಳಿಸಿದ್ದಾರೆ.ಆದ್ರೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದು ಉತ್ತಮ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಗೃಹ ಸಚಿವ ಜಿ.ಪರಮೇಶ್ವರ ಅವರು ಏರ್ಪಡಿಸಿದ್ದ ಔತಣಕೂಟ ರದ್ದಾಗಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ಈ ಬಗ್ಗೆ ಗೊತ್ತಿಲ್ಲ ಎಂದರು.

ಔತಣ ಕೂಟ ಕರೆದಿರುವುದಾಗಲಿ ಅಥವಾ ರದ್ದಾಗಿರುವುದಾಗಲಿ ನನಗೆ ತಿಳಿದಿಲ್ಲ. ಅವರೊಂದಿಗೆ ಮಾತನಾಡುವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

Leave a Reply

Your email address will not be published. Required fields are marked *