ಪತ್ರಿಕೆ ಸಂಪಾದಕರ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗಳ ಬಂಧನ….!
ಪಾವಗಡ : ಪಟ್ಟಣದ ಖಾಸಗಿ ಪತ್ರಿಕೆಯ ಸಂಪಾದಕಪತ್ರಿಕೆಯ ಸಂಪಾದಕನ ಮೇಲೆ ಮಾರಣಾಂತಿಕ ಹಲ್ಲೆ ಖಂಡಿಸಿ. ಪ್ರತಿಭಟನೆ. ರಾಮಾಂಜಿನಪ್ಪನ ಮೇಲೆ
ಆರೋಪಿಗಳಾದ ನಾರಾಯಣ ರೆಡ್ಡಿ, ಶೋಭಾ, ಆದಿಲಕ್ಷ್ಮಿ, ಲಕ್ಷ್ಮೀದೇವಿ ಎನ್ನುವವರು ಸೋಮವಾರ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಮಾರಣಾಂತಿಕ ಹಲ್ಲೆ ನಡೆಸಿದ್ದರು.
ಪತ್ರಿಕೆಯ ಸಂಪಾದಕನ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿ ಮಂಗಳವಾರ ತಾಲ್ಲೂಕಿನ ಪತ್ರಕರ್ತ ಸಂಘಗಳು, ದಲಿತ ಸಂಘಟನೆಗಳು, ಶ್ರೀರಾಮ ಸೇನೆ, ಕುರುಬರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿದರು.
ಪಟ್ಟಣದ ನಿರೀಕ್ಷಣ ಮಂದಿರದಿಂದ ರ್‍ಯಾಲಿ ಹೊರಟ ಪ್ರತಿಭಟನಾಕಾರರು ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ. ಪಟ್ಟಣದ ಶನಿಮಹಾತ್ಮ ದೇವಾಲಯದ ಬಳಿ ಮಾನವ ಸರಪಳಿ ನಿರ್ಮಿಸಿ, ನ್ಯಾಯಕ್ಕಾಗಿ ಘೋಷಣೆಗಳನ್ನು ಕೂಗಿದರು.
ಪೊಲೀಸ್ ಠಾಣೆಯ ಬಳಿ ಪ್ರತಿಭಟನೆ ನಡೆಸಿ ನ್ಯಾಯ ಕೊಡಿಸುವಂತೆ ಸಿಐ ಸುರೇಶಗೆ ಮನವಿ ಪತ್ರ ಸಲ್ಲಿಸಿ ದರು.
ನಂತರ ತಾಲ್ಲೂಕು ಕಛೇರಿಯ ಬಳಿ ಪ್ರತಿಭಟನೆ ಮಾಡಿ ತಹಶೀಲ್ದಾರ್ ವರದರಾಜು ರವರಿಗೆ ಮನವಿ ಪತ್ರ ಸಲ್ಲಿಸಿ
ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.
ನಂತರ ಪತ್ರಕರ್ತ ಸಂಘದ ಅಧ್ಯಕ್ಷ ಹನುಮಂತರಾಯಪ್ಪ ಮಾತನಾಡಿ ವೈಯಕ್ತಿಕ ವಿಚಾರವಾಗಿ ಒಬ್ಬ ಹಿರಿಯ ಪತ್ರಕರ್ತನಿಗೆ ಈ ರೀತಿ ಸಾರ್ವಜನಿಕವಾಗಿ ಕಾನೂನನ್ನು ಲೆಕ್ಕಿಸದೆಯೇ ಎಳೆದಾಡಿ, ಅಮಾನುಷವಾಗಿ ಮಹಿಳೆಯರಿಂದ ಹಲ್ಲೆ ಮಾಡಿರುವುದು ಸಮಂಜಸವಲ್ಲವೆಂದರು.
ಘಟನೆ ಬಗ್ಗೆ ಪುರಸಭೆ ಮಾಜಿ ಸದಸ್ಯ ಮನು ಮಹೇಶ್ ಮಾತನಾಡಿ ಹಿರಿಯ ಪತ್ರಕರ್ತ ರಾಮಾಂಜಿನಪ್ಪ ನವರ ಮೇಲೆ ನಡೆದಿರುವ ಹಲ್ಲೆ ನಿಜವಾಗಿಯೂ ನವ ಸಮಾಜ ತಲೆತಗ್ಗಿಸುವ ಕೆಲಸ ವೆಂದರು.
ಹಲ್ಲೆಗೆ ಕುಮ್ಮಕ್ಕು ಕೊಟ್ಟ ನಾರಾಯಣ್ ರೆಡ್ಡಿ ಮತ್ತು ಮೂರು ಮಹಿಳೆಯರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.ಪತ್ರಕರ್ತರಿಗೆಯೇ ರಕ್ಷಣೆ ಇಲ್ಲವೆಂದರೆ ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದರು.
ಪೊಲೀಸ್ ವರಿಷ್ಠಾಧಿಕಾರಿಗಳು, ನಾರಾಯಣ ರೆಡ್ಡಿ ಮತ್ತು ಮೂವರು ಮಹಿಳೆಯರ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು.ಒಂದು ವೇಳೆ ಕಣ್ಣು ಒರೆಸುವ ತಂತ್ರ ಮಾಡಿದರೆ ಬೀದಿಗಿಳಿದು ಪ್ರತಿಭಟನೆ ಮಾಡುವುದಾಗಿ ತಿಳಿಸಿದರು.
ಸ್ವತಃಹ ಗೃಹ ಮಂತ್ರಿಗಳ ತವರು ಜಿಲ್ಲೆಯಲ್ಲಿ ಈ ಘಟನೆ ನಡೆದಿರುವುದು ದುರದೃಷ್ಟಕರ ಸಂಗತಿ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕಿನ ಎಲ್ಲಾ ಪತ್ರಕರ್ತರು. ವಿವಿಧ ಸಂಘಟನೆಗಳ ಮುಖಂಡರು ಹಾಜರಿದ್ದರು.
ಹಲ್ಲೆ ಮಾಡಿದ ವ್ಯಕ್ತಿ ಗಳ ಬಂಧನ...
ವರದಿ : ಶ್ರೀನಿವಾಸಲು ಎ