school 1608116893

TUMKUR: ಜುಲೈ 1 ರಿಂದ ಶಾಲೆ ಪ್ರಾರಂಭ

DISTRICT NEWS ತುಮಕೂರು

ಜುಲೈ 1 ರಿಂದ ಶಾಲೆ ಪ್ರಾರಂಭ: ಜೂ. 30ರೊಳಗೆ ದಾಖಲಾತಿಗೆ ಸೂಚನೆ

ತುಮಕೂರು(ಕವಾ)ಜೂ.26: ಜಿಲ್ಲೆಯಲ್ಲಿ ಜುಲೈ 1 ರಿಂದ ಶಾಲೆಗಳನ್ನು ಪ್ರಾರಂಭಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತಾಲಯ ಸೂಚಿಸಿದ್ದ ಹಿನ್ನೆಲೆಯಲ್ಲಿ ಈಗಾಗಲೇ ಜೂನ್ 21 ರಿಂದ ಆರಂಭಿಸಿರುವ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆಯನ್ನು ಜೂ.30ರೊಳಗೆ ಪೂರ್ಣಗೊಳಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ನಂಜಯ್ಯ ಸೂಚಿಸಿದ್ದಾರೆ.

ಎಲ್ಲಾ ಶಾಲಾ ಮುಖ್ಯ ಶಿಕ್ಷಕರು ಸಮೀಪದ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಒಂದನೇ ತರಗತಿಗೆ ಅರ್ಹ ಮಕ್ಕಳ ಪಟ್ಟಿ ಪಡೆದು ಪೋಷಕರು ಹಾಗೂ ಎಸ್.ಡಿ.ಎಂ.ಸಿ, ಸದಸ್ಯರನ್ನು ಭೇಟಿ ಮಾಡಿ ಅರ್ಹ ಎಲ್ಲಾ ಮಕ್ಕಳನ್ನು ಜೂ.30 ರೊಳಗೆ ದಾಖಲಾತಿ ಮಾಡಿಕೊಂಡು ಎಸ್.ಎ.ಟಿ.ಎಸ್.ನಲ್ಲಿ ಇಂದೀಕರಿಸಬೇಕು.
ಉಳಿದಂತೆ 2 ರಿಂದ 10ನೇ ತರಗತಿಗೆ ಜೂ.30ರೊಳಗೆ ದಾಖಲಾತಿಯನ್ನೂ ಪೂರ್ಣಗೊಳಿಸಲು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಕ್ರಮವಹಿಸಬೇಕು. ಜುಲೈ 1ರಿಂದ ಶಾಲೆಗಳನ್ನು ಪ್ರಾರಂಭಿಸಬೇಕಾಗಿರುವುದರಿಂದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ತಮ್ಮ ವ್ಯಾಪ್ತಿಯ ಪುರಸಭೆ ಮುಖ್ಯಾಧಿಕಾರಿ/ ನಗರಪಾಲಿಕೆ ಆಯುಕ್ತರು/ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳ ಸಹಕಾರದಲ್ಲಿ ಶಾಲೆಗಳಿಗೆ ಸ್ಯಾನಿಟೈಸೇಷನ್ ಮಾಡಿಸಿ ಶಾಲಾ ಆವರಣಗಳನ್ನು ಸ್ವಚ್ಛಗೊಳಿಸಬೇಕು. ಶಾಲೆಯನ್ನು ಪ್ರಾರಂಭ ಮಾಡಲು ಎಲ್ಲಾ ಮೂಲಭೂತ ಸೌಕರ್ಯಗಳನ್ನು ಸುಸಜ್ಜಿತಗೊಳಿಸಿಕೊಂಡು ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಇಲಾಖೆಯ ಆದೇಶ/ನಿರ್ದೇಶನಗಳನ್ನು ಅನುಸರಿಸಿ ಶಾಲೆಗಳನ್ನು ತಳಿರು ತೋರಣಗಳಿಂದ ಅಲಂಕರಿಸಿ ಕೊಳ್ಳುವಂತೆ ನಿರ್ದೇಶಿಸಿದ್ದಾರೆ.
ಆಯುಕ್ತರ ಮುಂದಿನ ನಿರ್ದೇಶನದ ಮೇರೆಗೆ ಶಾಲಾ ಶೈಕ್ಷಣಿಕ ಚಟುವಟಿಕೆಗಳನ್ನು ಜುಲೈ-21 ರಿಂದಲೇ ಆನ್‍ಲೈನ್ ಅಥವಾ ಆಫ್ ಲೈನ್‍ನಲ್ಲಿ ಅನುμÁ್ಠನಗೊಳಿಸತಕ್ಕದ್ದು ಎಂದು ಶಾಲಾ ಮುಖ್ಯಸ್ಥರಿಗೆ ಅವರು ಸೂಚಿಸಿದ್ದಾರೆ.