IMG 20250806 WA0067 scaled

ಪಾವಗಡ : ಜೆಡಿ (ಎಸ್ ) – ದ್ವೇಷದ ರಾಜಕಾರಣ ಸಲ್ಲದು…!

DISTRICT NEWS ತುಮಕೂರು

ದ್ವೇಷದ ರಾಜಕಾರಣ ಸಲ್ಲದು. ಮಾಜಿ ಶಾಸಕ
ಕೆ.ಎಂ ತಿಮ್ಮ ರಾಯಪ್ಪ

ಪಾವಗಡ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅಭಿವೃದ್ಧಿ ಕೆಲಸಗಳ ಕಡೆ ಗಮನ ಹರಿಸದೆ ಬರಿ ದ್ವೇಷದ ರಾಜಕಾರಣ ಮಾಡುತ್ತಾ ಬಂದಿದೆ ಎಂದು ಮಾಜಿ ಶಾಸಕ ತಿಮ್ಮ ರಾಯಪ್ಪ ಕಾಂಗ್ರೆಸ್ ಸರ್ಕಾರವನ್ನುಲೇವಡಿ ಮಾಡಿದರು.

ಪಟ್ಟಣದಲ್ಲಿ ಬುಧವಾರ ಜೆಡಿಎಸ್ ಪಕ್ಷದ ವತಿಯಿಂದ ಪುರಸಭೆ ಮತ್ತು ರಾಜ್ಯ ಸರ್ಕಾರದ ವಿರುದ್ಧ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಪುರಸಭೆಯ ಅಧ್ಯಕ್ಷ ಸುದೇಶ್ ಬಾಬುರವರಿಗೆ ಮನವಿ ಪತ್ರ ಸಲ್ಲಿಸಿ ಅವರು ಮಾತನಾಡಿದರು.

2007ರಲ್ಲಿ ಅಂದಿನ ಮುಖ್ಯಮಂತ್ರಿಗಳಾದಂತಹ ಕುಮಾರಸ್ವಾಮಿರವರು ಪಾವಗಡ ಪಟ್ಟಣದಲ್ಲಿ ಬಡವರಿಗಾಗಿ ಆಶ್ರಯ ಯೋಜನೆ ಅಡಿಯಲ್ಲಿ 400 ಮನೆಗಳನ್ನು ಮಂಜೂರು ಮಾಡಿದ್ದು, ಅವರ ಅಮೃತ ಹಸದಿಂದ ಸ್ಥಾಪನೆಯಾದ ಬಡಾವಣೆಗೆ ಅಂದಿನ ಪುರಸಭೆಯ ಆಡಳಿತ ಮಂಡಳಿಯವರು ಕುಮಾರಸ್ವಾಮಿ ಬಡಾವಣೆಎಂದು ನಾಮಕರಣ ಮಾಡಿದ್ದು.
ಆದರೆ ಈಗ ಕಾಂಗ್ರೆಸ್ ಬೆಂಬಲದಿಂದ ರಚನೆಯಾದ ಪುರಸಭೆಯಲ್ಲಿ ಕುಮಾರಸ್ವಾಮಿ ಬಡಾವಣೆಯನ್ನು ವೆಂಕಟರಮಣಪ್ಪ ಬಡಾವಣೆ ಎಂದು ಮರು ನಾಮಕರಣ ಮಾಡಲು ಪುರಸಭೆಯಲ್ಲಿ ತೆಗೆದುಕೊಂಡಿರುವ ನಿರ್ಣಯವನ್ನು ಖಂಡಿಸಿದರು.

IMG 20250806 WA0065
ಬಡಾವಣೆಯ ಹೆಸರನ್ನು ಇದ್ದಕ್ಕಿದ್ದಂತೆ ಬದಲಾವಣೆ ಮಾಡಿದರೆ ಬಡಾವಣೆಯ ನಿವಾಸಿಗಳಿಗೆ ತೊಂದರೆಯಾಗುತ್ತದೆ ಎಂದು ಆಗ್ರಹಿಸಿದರು.
ಯಾವುದೇ ಕಾರಣಕ್ಕೂ ಮರುನಾಮಕಾರಣ ಮಾಡಬಾರದೆಂದು ಆಗ್ರಹಿಸಿದರು.

ಕಾರ್ಯಕ್ರಮ ಉದ್ದೇಶಿಸಿ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್ ಸಿ ಅಂಜಿನಪ್ಪ ಮಾತನಾಡಿ. ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ, ರೈತರಿಗೆ ಸರಿಯಾದ ಸಮಯಕ್ಕೆ ಗೊಬ್ಬರ ಒದಗಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದರು.
ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ 92 ರಲ್ಲಿ ನಿವೇಶನಗಳು ಮಂಜೂರಾಗಿದ್ದು ಫಲಾನುಭವಿಗಳಿಗೆ ಈ ಖಾತೆ ಮಾಡಿಸಿಕೊಡುವಲ್ಲಿ ತಾಲೂಕಿನ ಆಡಳಿತ ವಿಫಲವಾಗಿದೆ ಎಂದು.
ತಹಶೀಲ್ದಾರ್ ವರದರಾಜ ರವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ನ ಈರಣ್ಣ, ಸೊಗಡು ವೆಂಕಟೇಶ್, ಚೆನ್ನ ಮಲ್ಲಪ್ಪ, ತಿಮ್ಮಾರೆಡ್ಡಿ, ಮನು ಮಹೇಶ್ ನಾಗೇಶ್ ಯುನಸ್, ಸೀತಾರಾಮ್ ಭರತ್, ಮಣಿ, ರಾಮಾಂಜಿ, ಗಂಗಾಧರ್ ನಾಯ್ಡು ಮುಂತಾದ ಮುಖಂಡರು ಹಾಜರಿದ್ದರು.

ವರದಿ : ಶ್ರೀನಿವಾಸಲು ಎ