* ಹೆಚ್ಚು ಸಮಯ ಸ್ಕ್ರೀನ್ ವೀಕ್ಷಣೆ ಮತ್ತು ಹೊರಾಂಗಣ ಚಟುವಟಿಕೆ ಕಡಿಮೆಯಾದ ಕಾರಣದಿಂದ ಬೆಂಗಳೂರಿನಲ್ಲಿ ಕಳೆದ ಒಂದು ದಶಕದಲ್ಲಿ ಮೈಯೋಪಿಯಾ ಮತ್ತು ಆಸ್ಟಿಗ್ಮಾಟಿಸಂ ಪ್ರಕರಣಗಳಲ್ಲಿ ಹೆಚ್ಚಳ
* ಕರ್ನಾಟಕದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸುಧಾರಿತ ಕಂಟೋರಾ ವಿಷನ್ ಟೆಕ್ನಾಲಜಿಯನ್ನು ಪರಿಚಯಿಸಿದ ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್
* ಕರ್ನಾಟಕದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸುಧಾರಿತ ಕಂಟೋರಾ ವಿಷನ್ ಟೆಕ್ನಾಲಜಿಯನ್ನು ಪರಿಚಯಿಸಿದ ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್
ಬೆಂಗಳೂರು / ಆಗಸ್ಟ್ ೧೯, ೨೦೨೫: ಹೆಚ್ಚು ಸ್ಕಿçÃನ್ ನೋಡುವ ಮಕ್ಕಳು, ಯುವಕರು ಮತ್ತು ಐಟಿ ವೃತ್ತಿಪರರಲ್ಲಿ ಮಯೋಪಿಯಾ ಮತ್ತು ಆಸ್ಟಿಗ್ಮಾಟಿಸಂನAತಹ ರಿಫ್ರಾಕ್ಟಿವ್ ಪ್ರಕರಣಗಳ ಆತಂಕಕಾರಿ ಹೆಚ್ಚಳಕ್ಕೆ ಬೆಂಗಳೂರು ಸಾಕ್ಷಿಯಾಗಿದೆ ಎಂದು ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್‌ನ ವೈದ್ಯರು ಹೇಳುತ್ತಾರೆ. ಡಿಜಿಟಲ್ ಸ್ಕಿçÃನ್ ನೋಡುವ ಸಮಯ ಹೆಚ್ಚುತ್ತಿರುವುದು ಮತ್ತು ಹೊರಾಂಗಣ ಚಟುವಟಿಕೆ ಕಡಿಮೆ ಆಗುತ್ತಿರುವುದರ ಜೊತೆಗೆ ಹೆಚ್ಚು ಬೇಡಿಕೆ ಇರುವ ಶೈಕ್ಷಣಿಕ ಮತ್ತು ಕಾರ್ಯದ ಒತ್ತಡದಿಂದಾಗಿ ಈ ಪ್ರಕರಣಗಳಲ್ಲಿ ಹೆಚ್ಚಳ ಕಾಣುತ್ತಿದೆ. ಕರ್ನಾಟಕದಲ್ಲಿ ಈ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಪ್ರತಿಕ್ರಿಯೆಯಾಗಿ, ಬೆಂಗಳೂರಿನಲ್ಲಿ ವೇವ್‌ಲೈಟ್ ಇಘಿ೫೦೦ ಕಂಟೋರಾ ಎಕ್ಸಿಮರ್ ಲೇಸರ್ ಎಂಬ ಹೊಸ ಮಶಿನ್ ಅನ್ನು ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್ ಬಿಡುಗಡೆ ಮಾಡಿದ್ದು, ಇದು ಸುಧಾರಿತ ಟೋಪೋಗ್ರಫಿ ಮಾರ್ಗದರ್ಶಿತ ಲಸಿಕ್ ಸಿಸ್ಟಮ್ ಆಗಿದೆ. ಇದು ಅಧಿಕ ನಿಖರ ಮತ್ತು ಕಸ್ಟಮೈಸ್ ಮಾಡಿದ ಚಿಕಿತ್ಸೆಗಳನ್ನು ನೀಡುವ ಮೂಲಕ ಸ್ಪಷ್ಟ ದೃಷ್ಟಿಯನ್ನು ಪಡೆಯಲು ರೋಗಿಗಳಿಗೆ ಸಹಾಯ ಮಾಡುತ್ತದೆ.
ರಿಫ್ರಾಕ್ಟಿವ್ ದೋಷಗಳು ಸಾಮಾನ್ಯವಾಗಿ ದೃಷ್ಟಿ ಸಂಬAಧಿತ ಸಮಸ್ಯೆಯಾಗಿದ್ದು, ಬೆಳಕಿನ ಮೇಲೆ ಕಣ್ಣು ಸರಿಯಾಗಿ ಕೇಂದ್ರೀಕರಿಸಲು ಸಾಧ್ಯವಾಗದೇ ಇದ್ದಾಗ ಸಂಭವಿಸುತ್ತದೆ. ಇದರಿಂದ ವಸ್ತುಗಳು ಮಂದವಾಗಿ ಕಾಣಿಸುತ್ತವೆ. ಕರ್ನಾಟಕದಲ್ಲಿ ಮೈಯೋಪಿಯಾ ಮತ್ತು ಆಸ್ಟಿಗ್ಮಾಟಿಸಂ ಪ್ರಕರಣಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ತೀವ್ರ ಏರಿಕೆ ಕಂಡುಬAದಿದ್ದು, ೮-೧೫ ವರ್ಷಗಳ ಮಕ್ಕಳು ಮತ್ತು ೨೦-೩೫ ವರ್ಷಗಳ ಯುವಕರಲ್ಲಿ ಇದು ಹೆಚ್ಚು ಕಂಡುಬರುತ್ತಿದೆ. ಮೊದಲೇ ತಪಾಸಣೆ ಮಾಡುವುದು ಮತ್ತು ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡುವುದರಿಂದ ರಿಫ್ರಾಕ್ಟಿವ್ ಸಮಸ್ಯೆಯನ್ನು ಸರಿಪಡಿಸಬಹುದಾಗಿದ್ದು, ಮಕ್ಕಳಲ್ಲಿ ಲೇಝಿ ಐ ಸಮಸ್ಯೆ ಕಡಿಮೆ ಮಾಡಬಹುದು ಮತ್ತು ಯುವಕರಲ್ಲಿ ಕಣ್ಣಿನ ತೊಂದರೆಯನ್ನು ಕಡಿಮೆ ಮಾಡಬಹುದು. ಅಷ್ಟೇ ಅಲ್ಲ, ಜೀವನದ ಮಟ್ಟವನ್ನು ಕೂಡಾ ಸುಧಾರಿಸಬಹುದಾಗಿದೆ.
ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್‌ನ ಕ್ಲಿನಿಕಲ್ ಸೇವೆಗಳ ಮುಖ್ಯಸ್ಥರಾದ ಡಾ. ಅಮೋದ್ ನಾಯಕ್ ಮಾತನಾಡಿ “ರಿಫ್ರಾಕ್ಟಿವ್ ಸಮಸ್ಯೆಗಳು ಅದರಲ್ಲೂ ವಿಶೇಷವಾಗಿ ಮೈಯೋಪಿಯಾ ಮತ್ತು ಆಸ್ಟಿಗ್ಮಾಟಿಸಂ ಪ್ರಕರಣಗಳು ಬೆಂಗಳೂರು ಮತ್ತು ಕರ್ನಾಟಕದಲ್ಲಿ ಹೆಚ್ಚುತ್ತಿರುವುದನ್ನು ನಾವು ಗಮನಿಸಿದ್ದೇವೆ. ಮಕ್ಕಳು ಮತ್ತು ವೃತ್ತಿಪರರು ಹೆಚ್ಚು ಸ್ಕಿçÃನ್ ನೋಡುತ್ತಿದ್ದು, ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುವ ಸಂಭಾವ್ಯತೆಯನ್ನು ಹೊಂದಿದ್ದಾರೆ. ಕೊಂಟೋರಾ ವಿಷನ್ ಟೆಕ್ನಾಲಜಿಯು ಮೈಯೋಪಿಯಾ, ಹೈಪರಾಪಿಯಾ ಮತ್ತು ಆಸ್ಟಿಗ್ಮಾಟಿಸಂನAತಹ ರಿಫ್ರಾಕ್ಟಿವ್ ಸಮಸ್ಯೆಗಳನ್ನು ಸರಿಪಡಿಸುವುದರ ಜೊತೆಗೆ ಮೈಕ್ರೋಸ್ಕೋಪಿಕ್ ಕಾರ್ನಿಯಲ್ ಅಸಹಜತೆಗಳನ್ನೂ ಸರಿಪಡಿಸಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಈ ಸಮಸ್ಯೆಯನ್ನು ೧೮ ವರ್ಷಗಳಿಗಿಂತ ಹೆಚ್ಚಿನವರಲ್ಲಿ ಗ್ಳಾಸ್‌ಗಳು ಅಥವಾ ಸ್ಟಾಂಡರ್ಡ್ ಲಸಿಕ್‌ನಿಂದ ಪರಿಹರಿಸಲಾಗುವುದಿಲ್ಲ. ಅಂದರೆ, ನಮ್ಮ ರೋಗಿಗಳಿಗೆ ಹೆಚ್ಚು ಸ್ಪಷ್ಟ ಮತ್ತು ಹೆಚ್ಚು ನೈಸರ್ಗಿ ದೃಷ್ಟಿಯನ್ನು ಪಡೆಯಲು ಇವು ಸಹಾಯ ಮಾಡುತ್ತವೆ.”
ಸಾಂಪ್ರದಾಯಿಕ ಲಸಿಕ್‌ಗಿಂತ ವಿಭಿನ್ನವಾಗಿ ಕೊಂಟೋರಾ ವಿಷನ್ ೨೨,೦೦೦ ವರೆಗೆ ವಿಶಿಷ್ಟ ಪಾಯಿಂಟ್‌ಗಳನ್ನು ಕಾರ್ನಿಯಾದಲ್ಲಿ ಮ್ಯಾಪ್ ಮಾಡಿ, ಅತ್ಯಂತ ವೈಯಕ್ತಿಕವಾದ ಚಿಕಿತ್ಸೆಯನ್ನು ನೀಡುತ್ತದೆ. ಈ ಸುಧಾರಿತ ಕಾರ್ಯವಿಧಾನವು ಕಣ್ಣಿನ ಮೇಲ್ಭಾಗದಲ್ಲಿರುವ ಅತಿ ಸಣ್ಣ ಅಸಹಜತೆಗಳನ್ನೂ ಸರಿಪಡಿಸುತ್ತದೆ ಮತ್ತು ದೃಶ್ಯದ ಸ್ಪಷ್ಟತೆಯನ್ನು ಹೆಚ್ಚಿಸುತ್ತದೆ ಮತ್ತು ಗ್ಲೇರ್ ಮತ್ತು ಹ್ಯಾಲೋಸ್‌ನಂತಹ ಅಡ್ಡ ಪರಿಣಾಮಗಳನ್ನು ಕಡಿಮೆ ಮಾಡಿ, ವೇಗವಾಗಿ ಚೇತರಿಸಿಕೊಳ್ಳುವಿಕೆ ಮತ್ತು ಸ್ಪಷ್ಟ ದೃಷ್ಟಿಯನ್ನು ಒದಗಿಸುತ್ತದೆ.
ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್‌ನ ಕಾರ್ನಿಯಾ ಮತ್ತು ರಿಫ್ರಾಕ್ಟಿವ್ ಐ ಸರ್ಜನ್ ಆಗಿರುವ ಡಾ. ಸಂಜನಾ ವತ್ಸ ಮಾತನಾಡಿ “ಹಲವು ರೋಗಿಗಳಿಗೆ ರಿಫ್ರಾಕ್ಟಿವ್ ಸರ್ಜರಿ ಕೇವಲ ಕಾಸ್ಮೆಟಿಕ್ ಆಯ್ಕೆಯಲ್ಲ. ಇದು ಅನುಕೂಲ, ಉತ್ಪಾದಕತೆ ಮತ್ತು ದೀರ್ಘಕಾಲೀನ ಕಣ್ಣಿನ ಆರೋಗ್ಯದ ಸಂಗತಿಯಾಗಿದೆ. ಈ ಯಂತ್ರವು ಬೆಂಗಳೂರಿನಲ್ಲಿ ನಿಖರತೆ ಮತ್ತು ಸುರಕ್ಷತೆಗೆ ಹೊಸ ಮಾನದಂಡವನ್ನು ಒದಗಿಸಿ, ಚಿಕಿತ್ಸೆ ಪಡೆದ ೪೮-೭೨ ಗಂಟೆಗಳೊಳಗೆ ಕೆಲಸಕ್ಕೆ ಮರಳಲು ರೋಗಿಗೆ ಅನುವು ಮಾಡಿಕೊಡುತ್ತದೆ. ಗ್ಲಾಸ್‌ಗಳ ಮೇಲೆ ಅವಲಂಬನೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಮತ್ತು ಹಲವು ವಯೋ ಸಮೂಹ ಜೀವನ ಮಟ್ಟವನ್ನು ಸುಧಾರಿಸಲು ಈ ಅನ್ವೇಷಣೆಯು ಸಹಾಯ ಮಾಡುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ.”
ಕಂಟೋರಾ ಟೆಕ್ನಾಲಜಿಯು ಬೆರಳಚ್ಚಿನಷ್ಟೇ ವಿಶಿಷ್ಟತೆಯ ಮಟ್ಟದಲ್ಲಿ ನಮ್ಮ ಕಣ್ಣನ್ನು ಮ್ಯಾಪ್ ಮಾಡುತ್ತದೆ ಮತ್ತು ಅದೇ ಪ್ಯಾಟರ್ನ್ಗೆ ಹೊಂದಿಕೆಯಾಗುವ ಲೇಸರ್ ಮೂಲಕ ಕಸ್ಟಮೈಸ್ ಮಾಡುತ್ತದೆ. ಇದರಿಂದ ಅತ್ಯಂತ ನಿಖರ ಫಲಿತಾಂಶ ಸಿಗುತ್ತದೆ ಮತ್ತು ಪ್ರತಿ ವ್ಯಕ್ತಿಯ ಕಾರ್ನಿಯಾವನ್ನು ಹೈಯರ್ ಆರ್ಡರ್ ಅಬರ‍್ರೇಶನ್ಸ್ (ಎಚ್‌ಒಎ) ಸಮಸ್ಯೆಯಿಂದ ನಿವಾರಣೆ ಮಾಡುತ್ತದೆ. ಅಲ್ಲದೇ, ಗ್ಲೇರ್ ಮತ್ತು ರಂಧ್ರಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ, ಒಟ್ಟಾರೆ ದೃಷ್ಟಿಯ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ದೃಷ್ಟಿಯನ್ನೂ ಸುಧಾರಿಸುತ್ತದೆ.
“ಕರ್ನಾಟಕದಲ್ಲಿ ಐದು ಮತ್ತು ಭಾರತದಲ್ಲಿ ೬೫ ರಿಫ್ರಾಕ್ಟಿವ್ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಬೆಂಗಳೂರಿನಲ್ಲಿ ೧೩ ಆಸ್ಪತ್ರೆಗಳಲ್ಲಿ ಈ ಸೌಲಭ್ಯವಿದ್ದು, ಸುಧಾರಿತ ರಿಫ್ರಾಕ್ಟಿವ್ ಶಸ್ತçಚಿಕಿತ್ಸೆಯಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ. ಈ ವಿಸ್ತರಣೆಯು ಪ್ರಾಯೋಗಿಕವಲ್ಲ. ಆದರೆ, ಈಗಾಗಲೇ ಸಾಬೀತಾಗಿರುವ ಚಿಕಿತ್ಸೆಯ ವಿಸ್ತರಣೆಯಾಗಿದ್ದು, ಈ ವಿಧಾನದ ಮೂಲಕ ಸಾವಿರಾರು ಜೀವಗಳನ್ನು ಸುರಕ್ಷಿತ, ವಿಶ್ವಾಸಾರ್ಹ ಮತ್ತು ವೈಯಕ್ತಿಕ ಕಾರ್ಯವಿಧಾನಗಳಿಂದ ಪರಿವರ್ತಿಸಲಾಗಿದೆ.”
ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್ ಸುಮಾರು ೨,೫೦೦-೩,೦೦೦ ರಿಫ್ರಾಕ್ಟಿವ್ ಸರ್ಜರಿಗಳನ್ನು ಪ್ರತಿ ತಿಂಗಳು ನಡೆಸುತ್ತದೆ. ಹೀಗಾಗಿ, ಸುಧಾರಿತ ದೃಷ್ಟಿ ಸಮಸ್ಯೆಗೆ ವಿಶ್ವಾಸಾರ್ಹತೆ ಮತ್ತು ಪರಿಣಿತಿಯನ್ನು ಇದು ಒದಗಿಸುತ್ತದೆ. ಬಿಡುಗಡೆಯ ಭಾಗವಾಗಿ, ಉಚಿತ ರಿಫ್ರಾಕ್ಟಿವ್ ಮೌಲ್ಯಮಾಪನವನ್ನು ಆಸ್ಪತ್ರೆಯು ಒದಗಿಸುತ್ತದೆ ಮತ್ತು ಕೊಂಟೋರಾ ಕಾರ್ಯವಿಧಾನಗಳನ್ನು ಕರ್ನಾಟಕದಲ್ಲಿ ಎಲ್ಲ ಶಾಖೆಗಳಲ್ಲಿ ಇಡೀ ಆಗಸ್ಟ್ ತಿಂಗಳಲ್ಲಿ ಒದಗಿಸುತ್ತದೆ.
