- ಕರಾವಳಿ ಕರ್ನಾಟಕದಲ್ಲಿ ಸುಧಾರಿತ ಕಣ್ಣಿನ ಆರೈಕೆ ಸೌಲಭ್ಯವನ್ನು ಒದಗಿಸುವುದಕ್ಕಾಗಿ ಮಂಗಳೂರಿನಲ್ಲಿ ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್‍ನಿಂದ ಹೊಸ ಘಟಕ ಉದ್ಘಾಟನೆ
- ಹೊಸ ಉದ್ಘಾಟನೆಯಾದ ಆಸ್ಪತ್ರೆಯು 15000 ಚದರಡಿ ಸ್ಥಳವನ್ನು ಹೊಂದಿದೆ ಮತ್ತು ಸುಧಾರಿತ ಆಪರೇಶನ್ ಥಿಯೇಟರ್ ಇದೆ, ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ವಿವಿಧ ಕಣ್ಣಿನ ಅನಾರೋಗ್ಯಕ್ಕೆ ಅತ್ಯಾಧುನಿಕ ಚಿಕಿತ್ಸೆಯನ್ನು ಒದಗಿಸುತ್ತದೆ
- 2025 ಸೆಪ್ಟೆಂಬರ್ 30 ರ ವರೆಗೆ ಎಲ್ಲ ರೋಗಿಗಳಿಗೆ ಉಚಿತ ಸಮಗ್ರ ಕಣ್ಣಿನ ತಪಾಸಣೆಯನ್ನು ಆಸ್ಪತ್ರೆಯು ಘೋಷಿಸಿದೆ
ಮಂಗಳೂರು, ಸೆಪ್ಟೆಂಬರ್ 5, 2025: ಕರ್ನಾಟಕದ ಕರಾವಳಿ ಭಾಗ ಮಂಗಳೂರಿನ ಜನರಿಗೆ ಈಗ ಕಂಕನಾಡಿಯ ಮಹಾವೀರ ಸರ್ಕಲ್ ಬಳಿ ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್ ಉದ್ಘಾಟನೆಯಿಂದಾಗಿ, ಸುಧಾರಿತ ಕಣ್ಣಿನ ಆರೈಕೆ ಸೌಲಭ್ಯ ದೊರೆಯುವಂತಾಗಿದೆ. 15,000 ಚದರಡಿ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಹೊಸ ಆಸ್ಪತ್ರೆಯು ಹೊಸ ತಲೆಮಾರಿನ ಡಯಾಗ್ನಾಸ್ಟಿಕ್ ಮತ್ತು ಸರ್ಜಿಕಲ್ ಟೆಕ್ನಾಲಜಿಯನ್ನು ಒಳಗೊಂಡಿದ್ದು, ವಿವಿಧ ಸೂಪರ್ ಸ್ಪೆಷಾಲಿಟಿ ಸೇವೆಯು ಒಂದೇ ಕಡೆ ಸಿಗುತ್ತಿದೆ. ಬೆಂಗಳೂರು ಅಥವಾ ಚೆನ್ನೈಯಂತಹ ನಗರಗಳಿಗೆ ಚಿಕಿತ್ಸೆಗಾಗಿ ರೋಗಿಗಳು ಪ್ರಯಾಣ ಮಾಡುವ ಅಗತ್ಯವನ್ನು ಇದು ನಿವಾರಿಸಿದೆ.

ಕರ್ನಾಟಕ ವಿಧಾನಸಭೆಯ ಸ್ಪೀಕರ್ ಶ್ರೀ ಯು. ಟಿ. ಖಾದರ್ ಫರೀದ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು ಮತ್ತು ಗೌರವಯುತ ಅತಿಥಿಗಳಾಗಿ ಸಂಸದ ಶ್ರೀ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಶಾಸಕ ಡಾ. ವೇದವ್ಯಾಸ ಕಾಮತ್ ಅವರು ಹಾಜರಿದ್ದರು. ವೈದ್ಯಕೀಯ ವಲಯದ ಗಣ್ಯ ವ್ಯಕ್ತಿಗಳು ಹಾಗೂ ದಕ್ಷಿಣ ಕನ್ನಡದ ಡಿಎಚ್‍ಒ ಡಾ. ಎಚ್ ಆರ್ ತಿಮ್ಮಯ್ಯ, ಮಂಗಳೂರಿನ ಐಎಂಎ ಅಧ್ಯಕ್ಷ ಡಾ. ಜೆಸ್ಸಿ ಮರಿಯಾ ಗೊವೆಯಸ್ ಡಿಸೋಝಾ, ಆರೋಗ್ಯ ಸೇವೆಗಳ ವಿಭಾಗದ ಹಿರಿಯ ಮ್ಯಾನೇಜರ್ ಮತ್ತು ಎಂಆರ್‍ಪಿಎಲ್‍ನ ಸಿಎಂಒ ಲೆ. ಕರ್ನಲ್ ಡಾ. ಝಹೀದ್ ಅಲಿ ಖಾನ್ ಅವರು ಹಾಜರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಯು ಟಿ ಖಾದರ್ “ಮಂಗಳೂರು ಎಂದಿಗೂ ಗುಣಮಟ್ಟದ ಆರೋಗ್ಯಸೇವೆ ಮತ್ತು ಶಿಕ್ಷಣಕ್ಕೆ ಹೆಸರಾಗಿದೆ. ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್ ಈಗ ಇಲ್ಲಿ ಆರಂಭವಾಗಿದ್ದು, ನಮ್ಮ ಜನರಿಗೆ ವಿಶ್ವದರ್ಜೆಯ ಕಣ್ಣಿನ ಆರೈಕೆ ಸಿಗುವಂತಾಗಿದೆ. ಕಣ್ಣಿನ ಸಮಸ್ಯೆಯನ್ನು ತಡೆಯುವ ಮತ್ತು ಸಮಯಕ್ಕೆ ಸರಿಯಾಗಿ ಸಂಕೀರ್ಣ ಕಣ್ಣಿನ ಅನಾರೋಗ್ಯವನ್ನು ತಡೆಯುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ” ಎಂದಿದ್ದಾರೆ.
ಆಸ್ಪತ್ರೆಯಲ್ಲಿ ಅತ್ಯಾಧುನಿಕ ಡಯಾಗ್ನಾಸ್ಟಿಕ್ ಮತ್ತು ಸರ್ಜಿಕಲ್ ಸಲಕರಣೆಗಳು ಇವೆ. ಒಸಿಟಿ, ರೆಟಿನಾ ಲೇಸರ್ ಸಿಸ್ಟಮ್, ಕಾರ್ನಿಯಲ್ ಟೋಪೆÇೀಗ್ರಫಿ, ಆಪ್ಟಿಕಲ್ ಬಯೋ ಮೋಟರ್ ಝೀಸ್ ಮೈಕ್ರೋಸ್ಕೋಪ್ ಆಧರಿತ ಸರ್ಜಿಕಲ್ ಪ್ಲಾಟ್‍ಫಾರಂಗಳು ಇದರಲ್ಲಿವೆ. ದಿನಕ್ಕೆ 500 ರೋಗಿಗಳನ್ನು ನಿರ್ವಹಿಸುವ ಸಾಮಥ್ರ್ಯವನ್ನು ಹೊಂದಿದೆ ಮತ್ತು ಆಪರೇಶನ್ ಥಿಯೇಟರ್, ಇನ್ ಹೌಸ್ ಆಪ್ಟಿಕಲ್ಸ್, ಲ್ಯಾಬ್, ಫಾರ್ಮಸಿ (ಬೆಳಗ್ಗೆ 9 ರಿಂದ ಸಂಜೆ 8), ಜಿಎ ಬ್ಯಾಕಪ್, ಆಂಪಲ್ ಪಾರ್ಕಿಂಗ್ ಮತ್ತು ಸುಧಾರಿತ ತನಿಖಾ ಸೂಟ್‍ಗಳನ್ನು ಇದು ಹೊಂದಿದೆ.

ಕ್ಯಾಟರ್ಯಾಕ್ಟ್ ಶಸ್ತ್ರಚಿಕಿತ್ಸೆ, ಕಾರ್ನಿಯಲ್ ಸೇವೆಗಳು, ಡಯಾಬೆಟಿಕ್ ರೆಟಿನೋಪತಿ, ಗ್ಲಾಕೋಮಾ ನಿರ್ವಹಣೆ, ಪೀಡಿಯಾಟ್ರಿಕ್ ಆಪ್ತಾಲ್ಮಾಲಜಿ, ಲಸಿಕ್ ಮತ್ತು ರೆಲೆಕ್ಸ್ ಸ್ಮೈಲ್, ರೆಟಿನಲ್ ಸರ್ಜರಿಗಳು, ಸ್ಕ್ವಿಂಟ್ ಮ್ಯಾನೇಜ್‍ಮೆಂಟ್, ಆಕ್ಯುಲೋಪ್ಲಾಸ್ಟಿ ಯುವಿಯಾ, ನ್ಯೂರೋ ಆಪ್ಥಾಲ್ಮಾಲಜಿ ಮತ್ತು ಜನರಲ್ ಆಪ್ಥಾಲ್ಮಾಲಜಿಯಂತಹ ಸೇವೆಗಳನ್ನು ಇಲ್ಲಿ ಒದಗಿಸಲಾಗುತ್ತದೆ.
ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್‍ನ ಚಿಕಿತ್ಸಾ ಸೇವೆಗಳ ಪ್ರಾದೇಶಿಕ ಮುಖ್ಯಸ್ಥ ಡಾ. ಶ್ರೀನಿವಾಸ ರಾವ್ ಮಾತನಾಡಿ “ಈ ಸೌಲಭ್ಯವು ಕೇವಲ ಕಣ್ಣಿನ ರೋಗಗಳಿಗೆ ಚಿಕಿತ್ಸೆ ನೀಡುವುದಷ್ಟೇ ಅಲ್ಲ, ಸಮಸ್ಯೆಯನ್ನು ಮೊದಲೇ ಪತ್ತೆ ಮಾಡುವುದು, ತಡೆಯುವುದು ಮತ್ತು ಜಾಗೃತಿಯನ್ನು ಮೂಡಿಸುವ ಕೆಲಸವನ್ನೂ ಮಾಡುತ್ತದೆ. ಜೀವನಶೈಲಿಗೆ ಸಂಬಂಧಿಸಿದ ಕಣ್ಣಿನ ಸಮಸ್ಯೆಗಳು ಮತ್ತು ಮಯೋಪಿಯಾ ಹೆಚ್ಚುತ್ತಿರುವುದರಿಂದ, ವಯಸ್ಕರು ಮತ್ತು ಮಕ್ಕಳ ಕಣ್ಣಿನ ಆರೋಗ್ಯವನ್ನು ರಕ್ಷಿಸುವಲ್ಲಿ ನಮ್ಮ ಆಸ್ಪತ್ರೆಯು ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ಆಸ್ಪತ್ರೆಯಲ್ಲಿ ಮೂವರು ಸ್ಪೆಷಲಿಸ್ಟ್ ವೈದ್ಯರ ತಂಡವಿದೆ.”
