ತಾಲ್ಲೂಕಿನಲ್ಲಿ ಕನ್ನಡ ಭವನ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು. ಶಾಸಕ ಎಚ್ ವಿ ವೆಂಕಟೇಶ್.
ಪಾವಗಡ: ಕನ್ನಡ ಭಾಷೆಗೆ ಹೆಚ್ಚು ಓತ್ತನ್ನು ನೀಡಬೇಕು ಹಾಗೂ ವ್ಯವಹಾರ ದೃಷ್ಟಿಯಿಂದ ಇತರೆ ಭಾಷೆಗಳನ್ನು ಸಹ ಕಲಿಯಬೇಕು ಎಂದು ಶಾಸಕ ಹೆಚ್ ವಿ ವೆಂಕಟೇಶ್ ತಿಳಿಸಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕನ್ನಡದ ನೆಲ ಜಲ ಭಾಷೆಯ ಬಗ್ಗೆ ನಮ್ಮೆಲ್ಲರಿಗೂ ಅಭಿಮಾನವಿರಬೇಕು, ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸವನ್ನು ಮಾಡಬೇಕು ಎಂದರು.ತಾಲೂಕಿನಲ್ಲಿ ವಿದ್ಯಾಭ್ಯಾಸ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತನ್ನು ನೀಡಲಾಗುವುದೆಂದು.ಮಕ್ಕಳ ಉತ್ತಮ ಭವಿಷ್ಯಕ್ಕೆ, ಉತ್ತಮ ಶಿಕ್ಷಣ ಅಗತ್ಯವೆಂದರು.
ತಾಲೂಕಿನ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಕಾರ್ಮಿಕ ಶಾಲೆ, ಅಲ್ಪಸಂಖ್ಯಾತರ ಮುರಾರ್ಜಿ ಶಾಲೆ, ಮತ್ತು ಮೂರು ಕೆಪಿಎಸ್‌ಸಿ ಶಾಲೆಗಳನ್ನು ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಕಾರ್ಯಕ್ರಮ ಉದ್ದೇಶಿಸಿ ತಹಶೀಲ್ದಾರ್ ವೈ ರವಿ ಮಾತನಾಡಿ.
ಕನ್ನಡ ಭಾಷೆ ಕೇವಲ ಒಂದು ಭಾಷೆ ಮಾತ್ರವಲ್ಲ, ಅದು ನಮ್ಮ ಅಸ್ತಿತ್ವ ಸಂಸ್ಕೃತಿಯ ಪ್ರತೀಕವೆಂದರು.
ಕನ್ನಡ ಭಾಷೆಯನ್ನು ಪ್ರತಿಯೊಬ್ಬರೂ ಪ್ರೀತಿಸಬೇಕು ಬಳಸಬೇಕು. ಕನ್ನಡ ನಾಡಿನ ನೆಲ, ಜಲ ಮತ್ತು ಭಾಷೆಯ ಬಗ್ಗೆ ಅಭಿಮಾನ ಇರಲಿ ಎಂದು.ಕನ್ನಡ ನಾಡನು ಉಳಿಸಿ ಬೆಳೆಸುವಲ್ಲಿ ಹಲವಾರು ಮಹನೀಯರ ಶ್ರಮವಿದೆ ಎಂದರು.
ನಮ್ಮ ಭಾಷೆ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಇಂದಿನ ವಿದ್ಯಾರ್ಥಿಗಳ ಮೇಲಿದೆ ಎಂದರು.
ಕರ್ನಾಟಕ ರಾಜ್ಯ ನಿರ್ಮಾಣದಲ್ಲಿ ಹಲವಾರು ಹೋರಾಟಗಾರರ ಶ್ರಮವಿದೆ ಎಂದರು.
ಪ್ರಧಾನ ಭಾಷಣಕಾರ ಉಪನ್ಯಾಸಕ ಮುಧವೀರಪ್ಪ ಮಾತನಾಡಿ.
ವಿಶ್ವದಾದ್ಯಂತ ಕನ್ನಡದ ಬಗ್ಗೆ ವ್ಯಾಪಕ ಪ್ರಸಾರ
ನಡೆದಿದೆ ಎಂದರಿ.. ಮೂರನೇ ಗೋವಿಂದ ಅರಸನ ಆಳ್ವಿಕೆಯಲ್ಲಿ, ರಾಷ್ಟ್ರಕೂಟ ಸಾಮ್ರಾಜ್ಯವು ತನ್ನ ಉತ್ತುಂಗವನ್ನು ತಲುಪಿ, ಉತ್ತರದ ಕನ್ಯಾಕುಬ್ಜದಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ ಹಾಗೂ ಪೂರ್ವದಲ್ಲಿ ಬನಾರಸ್‌ನಿಂದ ಪಶ್ಚಿಮದಲ್ಲಿ ಭರೂಚ್‌ವರೆಗೆ ವಿಸ್ತರಿಸಲಾಗಿತ್ತು ಎಂದರು.
ಅಮೆರಿಕದಲ್ಲಿ ಕನ್ನಡ ಸಮ್ಮೇಳನ, ದುಬೈನಲ್ಲಿ ಕನ್ನಡ ಶಾಲೆ ಪ್ರಾರಂಭ, ಕರ್ನಾಟಕ ಮತ್ತು ಆಂಧ್ರ ಗಡಿಗಳಲ್ಲಿ ಉತ್ತಮ ಬಾಂಧವ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು ಹಾಗೂ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರೊಪ್ಪ ಗ್ರಾಮದ ಶೌಕತ್ ಅಲಿ ಎಂಬುವರ ಮಗ ಸೈಫ್ ಅಲಿಖಾನ್ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನವರ ವೇಷ ಧರಿಸಿ ಕಿರು ನಾಟಕ ಪ್ರದರ್ಶಿಸಿ ಗಣ್ಯರಿಂದ ಮೆಚ್ಚುಗೆ ಪಡೆದರು.
ಈ ಸಂದರ್ಭದಲ್ಲಿ ತಾ..ಪಂ ಇ.ಓ.ಬಿ ಕೆ ಉತ್ತಮ್, ಪುರಸಭಾ ಅಧ್ಯಕ್ಷ ಸುದೇಶ್ ಬಾಬು, ಉಪಾಧ್ಯಕ್ಷೆ ಮಾಲೀನ್ ತಾಜ್,ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಮ್ಮ, ಸಿ ಡಿ ಪಿ ಓ ಸುನಿತಾ, ಕೃಷಿ ಇಲಾಖೆಯ ಎ.ಡಿ ಅಜಯ್ ಕುಮಾರ್, ಪುರಸಭಾ ಮಾಜಿ ಅಧ್ಯಕ್ಷ ಶಂಕರ್ ರೆಡ್ಡಿ, ವೇಲುರಾಜ್, ರವಿ ರವರು,ಆರ್ ಎ ಹನುಮಂತರಾಯಪ್ಪ, ಮೊಹಮ್ಮದ್ ಇಮ್ರಾನ್,ರೈತ ಸಂಘದ ಅಧ್ಯಕ್ಷ ನರಸಿಂಹ ರೆಡ್ಡಿ, ಪೂಜಾರಪ್ಪ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹೆಚ್ ವಿ ರವಿ ಕುಮರ್,ನಗರ ವೃತ್ತ ನಿರೀಕ್ಷಕರಾದ ಸುರೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕಟ್ಟಾ ನರಸಿಂಹ ಮೂರ್ತಿ ರವರು ಸೇರಿ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ಶ್ರೀನಿವಾಸಲು ಎ
