IMG 20251205 WA0014

ಪಾವಗಡ : ಸರ್ಕಾರಿ ರಸ್ತೆಗಳ ಒತ್ತುವರಿ ಎಂದಿದ್ದಕ್ಕೆ – ಸರ್ಕಾರಿ ಹಿರಿಯ ಅಧಿಕಾರಗಳ ಮೇಲೆ ಕೇಸ್….!

DISTRICT NEWS ತುಮಕೂರು
  •  ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ‌ ಮತ್ತು ಪಿಡಿಒ ಶ್ರೀರಾಮನಾಯಕ್‌ ಮೇಲೆ ಕೇಸ್‌ ದಾಖಲು  ದಾಖಲು….!

   *      ಎರಡು ಸರ್ಕಾರಿ ರಸ್ತೆ ಒತ್ತುವರಿ ತರೆವು ಮಾಡುತ್ತೇವೆ  ಎಂದರೆ ಕೇಸ್..

  • IMG 20251205 WA0007

ಪಾವಗಡ : ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ ಮತ್ತು ಪಿಡಿಒ ಶ್ರೀರಾಮನಾಯಕ್‌   ಮೇಲೆ ಪಾವಗಡ ದ ಜೆ.ಎಂ ಎಫ್‌ ಸಿ ನ್ಯಾಯಾಲಯದಲ್ಲಿ ಡಾನ್‌ ಸೀನ ಅಲಿಯಾಸ್‌ ಶ್ರೀನಿವಾಸ್‌ ಮತ್ತು ಉದಯಕುಮಾರ್‌ ಎಂಬುವರು ಕೇಸ್‌ ದಾಖಲು ಮಾಡಿದ್ದಾರೆ. (ಕೇಸ್‌ ನಂಬರ್‌  426/2025 )ಇಂದು ವಿಚಾರಣೆ  ಪ್ರತಿವಾದಿಗಳಿಗೆ ನೋಟೀಸ್‌ ಜಾರಿಯಾಗಿತ್ತು.

ಪ್ರತ್ಯರ್ತಿಗಳ ಪರ ವಕೀಲರು ತಕ್ಷಣ ತಡೆ ನೀಡುವಂತೆ ವಾದ ಮಂಡಿಸಿದ್ದಾರೆ. ಪ್ರತಿವಾದಿಗಳ ಪರ ವಕೀಲರು ತಡೆ ನೀಡದಂತೆ ತಕರಾರು  ಸಲ್ಲಿಸಿದ್ದಾರೆ. ವಿಚಾರಣೆಯನ್ನು  ಡಿಶಂಬರ್‌ 8 ಕ್ಕೆ ಮುಂದೂಡಲಾಗಿದೆ.

6150e884 cd46 4abc 85f3 922422de81bf

ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌  ಇವರ ಜೊತೆಗೆ ವೈ ಎನ್‌ ಹೊಸಕೋಟೆ ಗ್ರಾಮಪಂಚಾಯತಿ ಪಿಡಿಒ ಶ್ರೀರಾಮನಾಯಕ್‌, ಲೋಕಾಯುಕ್ತ ದಲ್ಲಿ ದೂರು ದಾಖಲಿಸಿರುವ ನಾಗರಾಜ್‌ ಮತ್ತು ರಾಜೇಶ್‌ ಅವರನ್ನು ಪ್ರತಿವಾದಿಗಳಾಗಿಸಿದ್ದಾರೆ.

——————————————————————————

ಪ್ರಕರಣ ದ  ಸಂಪೂರ್ಣ ಕಥೆ :

IMG 20251205 WA0021
ಪಚಾಯತಿ ರಸ್ತೆ

ಪಾವಗಡ ತಾಲ್ಲೂಕು ವೈ ಎನ್ ಹೊಸಕೋಟೆ ಗ್ರಾಮಪಂಚಾಯತಿ ವ್ಯಾಪ್ತಿಯ ಡಿ ಬ್ಲಾಕ್ ನಲ್ಲಿ ಇದೇ ಬ್ಲಾಕ್ ನ ಗ್ರಾಮಪಂಚಾಯತಿ ಸದಸ್ಯೆ ಕಾಮಾಕ್ಷಮ್ಮ ಮತ್ತು ಡಾನ್ ಸೀನ ಅಲಿಯಾಸ್ ಶ್ರೀನಿವಾಸ್ ಇವರು ಗ್ರಾಮಪಂಚಾಯತಿ ಗೆ ಸೇರಿದ ಎರಡು ರಸ್ತೆಗಳನ್ನು ಒತ್ತುವರಿ ಮಾಡಿಕೊಂಡು ರಸ್ತೆ ಗೆ ಕಾಂಪೌಂಡ್ ನಿರ್ಮಾಣ ಮಾಡಿದ್ದಾರೆ. ಈ ಸಂಬಂಧ ಮೂರು ದೂರುಗಳು ಲೋಕಾಯುಕ್ತ ಸಂಸ್ಥೆ ಯಲ್ಲಿ ದಾಖಲಾಗಿವೆ.

ಉಪಲೋಕಾಯುಕ್ತ ನ್ಯಾಯಮೂರ್ತಿಗಳಾದ ವೀರಪ್ಪ ಅವರು  21-11-2025 ರಂದು ಮಧುಗಿರಿಯಲ್ಲಿ ವಿಚಾರಣೆ ನಡೆಸಿದರು ಆ ಸಂದರ್ಭದಲ್ಲಿ ರಸ್ತೆ ಒತ್ತುವರಿ ದೂರುಗಳಲ್ಲಿ ಒಬ್ಬರಾದ ಅಜಿತ್‌ ಕುಮಾರ್‌ ರ ಕೇಸ್ ವಿಚಾರಣೆಗೆ ಬಂದಿತ್ತು

ಪಾವಗಡ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಉತ್ತಮ್ ಮತ್ತು ವೈ ಎನ್ ಹೊಸಕೋಟೆ ಗ್ರಾಮಪಂಚಾಯತಿ ಪಿಡಿಒ ಶ್ರೀ ರಾಮನಾಯಕ್  ನವರಿಗೆ ರಸ್ತೆ ತೆರವು ಗೊಳಿಸುವುದಾಗಿ ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ವೀರಪ್ಪ ಅವರಿಗೆ  ತಿಳಿಸಿದ್ದರು

ಪಾವಗಡ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಉತ್ತಮ್ ಮತ್ತು ಪಿಡಿಒ ಶ್ರೀರಾಮನಾಯಕ್ ಅವರು ತಮ್ಮ ಸಿಬ್ಬಂದಿಯೊಂದಿಗೆ  26-11-2025 ರಂದು ಸ್ಥಳ ಪರಿಶೀಲನೆ ನಡೆಸಿದ ನಂತರ ಡಾನ್‌ ಸೀನ ಅಲಿಯಾಸ್‌ ಶ್ರೀನಿವಾಸ್‌ ಮತ್ತು ನಾಗರಾಜ್‌ ಗೆ ನೋಟೀಸ್‌ ಜಾರಿ ಮಾಡುತ್ತಾರೆIMG 20251126 WA0044

ನಾಗರಾಜ್‌ ನೋಟೀಸ್‌ ಪಡೆದಿದ್ದು ಡಾನ್‌ ಸೀನ ಅಲಿಯಾಸ್‌ ಶ್ರೀನಿವಾಸ್‌ ನೋಟೀಸ್‌ ಪಡೆಯದೆ ಗ್ರಾಮಪಂಚಾಯತಿ ಸಿಬ್ಬಂದಿಯನ್ನು ವಾಪಸ್ಸು ಕಳುಹಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ಡಾನ್‌ ಸೀನ ಅಲಿಯಾಸ್‌ ಶ್ರೀನಿವಾಸ್‌ ಮತ್ತು ಈತನ ಮಗ ಉದಯಕುಮಾರ್‌ ಪಾವಗಡ ದ ಜೆ.ಎಂ ಎಫ್‌ ಸಿ ನ್ಯಾಯಾಲಯದಲ್ಲಿ ಕೇಸ್‌ ದಾಖಲಿಸಿದ್ದಾರೆ.

ಕೇಸ್‌ ನಂಬರ್‌ ( 426/2025 ) ಪ್ರಮುಖ ಅಂಶಗಳು :

ವೈ ಎನ್‌ ಹೊಸಕೋಟೆ ಬೆಸ್ತರಹಳ್ಳಿ ರಸ್ತೆ ಯ ಅಸಸ್‌ ಮೆಂಟ್‌ ಸಂಖ್ಯೆ 2414/1542/2 ರಲ್ಲಿ ಮನೆ ಮತ್ತು ಕಾಂಪೌಡ್‌ ನಿರ್ಮಾಣ ಮಾಡಿದ್ದು ನಮ್ಮ ಕಾಂಪೌಂಡ್‌ ಒಡೆದು ಹಾಕಲು ಮುಂದಾಗುತ್ತಿದ್ದಾರೆ ಆದ್ದರಿಂದ ನಮಗೆ ಕಾಂಪೌಂಡ್‌ ಗೋಡೆ ಒಡೆಯದಂತೆ ತಡೆ ನೀಡುವಂತೆ ಘನ ನ್ಯಾಯಾಲದಲ್ಲಿ ದಾವೆ ಹಾಕಿದ್ದಾರೆ.

ಅಸಸ್‌ ಮೆಂಟ್‌ ಸಂಖ್ಯೆ 2414/1542/2 ವಿಸ್ತೀರ್ಣ

ಪೂರ್ವ – ಪಶ್ಚಿಮ – 63 ಅಡಿ

ಉತ್ತರ – ದಕ್ಷಿಣ –  50 ಅಡಿ ಎಂಬ ಅಂಶಗಳನ್ನು ಕೇಸ್‌ ನಲ್ಲಿ ಉಲ್ಲೇಖಿಸಿದ್ದಾರೆ.

   ————————————————————————–                    

ನ್ಯಾಯಾಲಯಕ್ಕೆ  ತಪ್ಪು ಮಾಹಿತಿಯುಳ್ಳ ಕೇಸ್

ಈ ಕೇಸ್‌ ನಲ್ಲಿ ತಪ್ಪು ಮಾಹಿತಿಗಳನ್ನು ನ್ಯಾಯಾಲಕ್ಕೆ ನೀಡಿದ್ದಾರೆ ಎಂದು ಅದರ ಸಂಪೂರ್ಣ ವಿವರಗಳನ್ನು ನಾಗರಾಜ್‌ ಸಪ್ತಸ್ವರ ಮಾದ್ಯಮಕ್ಕೆ ನೀಡಿದ್ದಾರೆ.

ತಪ್ಪು ಮಾಹಿತಿ : 1

ವೈ ಎನ್‌ ಹೊಸಕೋಟೆ ಬೆಸ್ತರಹಳ್ಳಿ ರಸ್ತೆ ಯಲ್ಲಿ ಡಾನ್‌ ಸೀನ ಅಲಿಯಾಸ್‌ ಶ್ರೀನಿವಾಸ್‌ ಮತ್ತು ಉದಯಕುಮಾರ್ ಇವರು ಅಸಸ್‌ ಮೆಂಟ್‌ ಸಂಖ್ಯೆ: 2412/A/1541 ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ.

ಅಸಸ್‌ ಮೆಂಟ್‌ ಸಂಖ್ಯೆ: 2412/A/1541  ಇದರ ಇ ಸ್ವತ್ತು  ಸಂಖ್ಯೆ (152500603300102376)

IMG 20251205 WA0027
ಇಸ್ವತ್ತು ನ ಪ್ರತಿ

 

ಆದರೆ ಕೇಸ್‌ ನಲ್ಲಿ ಉಲ್ಲೇಖ ಮಾಡಿರುವುದು ಅಸಸ್‌ ಮೆಂಟ್‌ ಸಂಖ್ಯೆ 2414/1542/2 ಎಂದು , ಬೇರೆ ನಿವೇಶದ ಸಂಖ್ಯೆಯನ್ನು ಕೇಸ್‌ ನಲ್ಲಿ ಉಲ್ಲೇಖ ಮಾಡಿದ್ದಾರೆ

ಅಸಸ್‌ ಮೆಂಟ್‌ ಸಂಖ್ಯೆ 2414/1542/2  ಸ್ವತ್ತಿಗೆ ಸಂಬಂಧಿಸಿದಂತೆ  ಪಾವಗಡ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳ  ನ್ಯಾಯಾಲದಲ್ಲಿ ಕೇಸ್‌ ದಾಖಲಾಗಿದೆ.

IMG 20251205 220156 815
EO ಕೋರ್ಟ್ ನಲ್ಲಿ ಕೇಸ್ ದಾಖಲಾಗಿದೆ

ಪಂಚಾಯತಿ ದಾಖಲೆಗಳಲ್ಲಿ ಈ ನಿವೇಶನ ಮೊದಲು 2413/1542/ 1/2  ಅಂತ ಇದ್ದು ಉದಯಕುಮರ್‌ ಗೆ ಬದಲಾವಣೆಯಾದಾಗ 2414/1542/2  ಎಂದು ಬದಲಾಯಿಸಲಾಗಿದೆ (ಇ ಸ್ವತ್ತು  ಸಂಖ್ಯೆ _152500603300102378)

ತಾಲ್ಲೂಕು ಪಂಚಾಯತಿ ನ್ಯಾಯಾಲಯದಲ್ಲಿ ಕೇಸ್‌  ಇದ್ದರು ಪಾವಗಡ  ನ್ಯಾಯಾಲಯಕ್ಕೆ ಈ ನಿವೇಶನಕ್ಕೆ ಸಂಬಂಧಿಸಿದ ಯಾವ ಕೇಸ್‌ ಇಲ್ಲ ಎಂದು ತಿಳಿಸಿದ್ದಾರೆ

ತಪ್ಪು ಮಾಹಿತಿ :3

IMG 20251205 WA0023
ಒರಜಿನಲ್ ವಿಸ್ತೀರ್ಣ – ಪಂಚಾಯತಿ ದಾಖಲೆ

ಕೇಸ್‌ ನಲ್ಲಿ ಉಲ್ಲೇಖಿತ ಅಸಸ್‌ ಮೆಂಟ್‌ ಸಂಖ್ಯೆ 2414/1542/2   ರ ವಿಸ್ರೀರ್ಣ ಪೂರ್ವ – ಪಶ್ಚಿಮ – 9 ಅಡಿ, ಉತ್ತರ –ದಕ್ಷಿಣ – 30 ಅಡಿ ವಾಸ್ತವಾಗಿ ಇರುವುದು ಆದರೆ ಇವರು  ನ್ಯಾಯಾಲಯಕ್ಕೆ ಹಾಕಿರುವ ಕೇಸ್ ನಲ್ಲಿ ಪೂರ್ವ – ಪಶ್ಚಿಮ – 63 ಅಡಿ ಉತ್ತರ – ದಕ್ಷಿಣ –  50 ಅಡಿ.ಎಂಬ ಅಂಶಗಳನ್ನು ಕೇಸ್‌ ನಲ್ಲಿ ಉಲ್ಲೇಖಿಸುವ ಮೂಲಕ ಸುಳ್ಳನ್ನು ಹೇಳಿದ್ದಾರೆ

IMG 20251205 WA0022
ನ್ಯಾಯಾಲಯಕ್ಕೆ ನೀಡಿರುವ ಮಾಹಿತಿ

 

ನ್ಯಾಯಾಲಯ ಕ್ಕೆ ನೀಡಿರುವ ಚೆಕ್‌ ಬಂದಿ ಮತ್ತು  ಈ ನಿವೇಶನ ದ 2413/1542/ 1/2 (ಇ-ಸ್ವತ್ತು)   ಚೆಕ್‌ ಮಂದಿ ಮ್ಯಾಚ್‌ ಆಗುತ್ತದೆ

 

ತಪ್ಪು ಮಾಹಿತಿ: 4

ಈ ನಿವೇಶನಗಳ ಅಕ್ಕ –ಪಕ್ಕ ಗ್ರಾಮಪಂಚಾಯತಿ ಗೆ ಸೇರಿದ ಎರಡು ರಸ್ತೆಗಳಿವೆ ಈ ಬಗ್ಗೆ ನ್ಯಾಯಾಲಕ್ಕೆ ಮಾಹಿತಿ ನೀಡಿಲ್ಲ ಈ ಎರಡು ರಸ್ತೆಗಳನ್ನು ಒತ್ತುವರಿ ಮಾಡಿಕೊಂಡು ಕಾಂಪೌಂಡ್‌ ನಿರ್ಮಾಣ ಮಾಡಿಕೊಂಡು ನ್ಯಾಯಾಲಯಕ್ಕೆ ಮನೆಯ ಕಾಂಪೌಂಡ್‌ ಎಂಬ ಸುಳ್ಳು ಮಾಹಿತಿ ನೀಡಿದ್ದಾರೆ. ಎರಡು ರಸ್ತೆಗಳ ಅಸಸ್‌ ಮೆಂಟ್‌ ನಂಬರ್‌ – 2421/1549 ಮತ್ತು 2415/1543 ಗ್ರಾಮಪಂಚಾಯತಿ ದಾಖಲೆಗಳಲ್ಲಿ ಉಲ್ಲೇಖವಾಗಿದೆ.

ಪಂಚಾಯತಿ ರಸ್ತೆ ದಾಖಲೆ
ಪಂಚಾಯತಿ ರಸ್ತೆ ದಾಖಲೆ

ತಪ್ಪು ಮಾಹಿತಿ: 5

ಲೋಕಾಯುಕ್ತದಲ್ಲಿ ಅಜಿತ್‌ ಕುಮಾರ್‌ ಒತ್ತುವರಿ ಯಾಗಿರುವ ಎರಡು ರಸ್ತೆಗಳನ್ನು ತೆರವು ಗೊಳಿಸಲು ದಾಖಲು ಮಾಡಿರುವ ಪ್ರಕರಣ ವಾಪಸ್ಸು ಪಡೆಯಲಾಗಿದೆ ಎಂಬ  ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ದೂರುಗಳನ್ನು ದೂರುದಾರ ವಾಪಸ್ಸು ಪಡೆಯಲು ಆಗುವುದಿಲ್ಲ. ಅಜಿತ್‌ ಕುಮಾರ್‌ –ಡಾನ್‌ ಸೀನ ಎಂಬ ವ್ಯಕ್ತಿಯಿಂದ ಹಣ ಪಡೆದು ಸೈಟ್‌ ಮಾರಿದ್ದಾರೆ ಆದರೆ ದೂರು ನಲ್ಲಿ ಉಲ್ಲೇಖಿತ ಸಮಸ್ಯೆ ಇಂದಿಗೂ ಅಂತ್ಯವಾಗಿಲ್ಲ ಆದರಿಂದ ಕೇಸ್‌ ಮುಕ್ತಾಯವಾಗುವುದಿಲ್ಲ.

Screenshot 20251205 174210

ಅಜಿತ್‌ ಕುಮಾರ್‌ ಸಮಸ್ಯೆ ಬಗೆಹರಿದಿದೆ ಎಂದು ಸುಳ್ಳು ಅರ್ಜಿ ಸಲ್ಲಿಸಿದ್ದರೆ ಅಜಿತ್‌ ಕುಮಾರ್‌  ಗೆ ಆರು ತಿಂಗಳಿನಿಂದ ಮೂರು ವರ್ಷ ಶಿಕ್ಷೆ ವಿಧಿಸಲು ಲೋಕಯುಕ್ತ ಕಾಯ್ದೆಯಲ್ಲಿ ಉಲೇಖಿತವಾಗಿದೆ . ಅಜಿತ್‌ ಕುಮಾರ್  ಕೇಸ್‌15/12/2025‌ ರಂದು ವಿಚಾರಣೆಗೆ ಬರಲಿದೆ

12881/2024)  ಜೊತೆಗೆ ಇದೆ ವಿಷಯಕ್ಕೆ ಸಂಬಂದಿಸಿದಂತೆ ಇನ್ನು ಎರಡು ಕೇಸ್‌ ಲೋಕಾಯುಕ್ತದಲ್ಲಿ ದಾಖಲಾಗಿದೆ.

ಕೇಸ್‌ ದಾಖಲಾಗಲು ಹಿನ್ನಲೆ :

ಗ್ರಾಮೀಣಾಭಿವೃದ್ಧಿ ಪಂಚಾಯತ್‌ ಇಲಾಖೆ ಯ ಬೇಜವಾಬ್ದಾರಿ :

ಗ್ರಾಮೀಣಾಭಿವೃದ್ಧಿ ಪಂಚಾಯತ್‌ ಇಲಾಖೆ ಯ ಬೇಜವಾಬ್ದಾರಿ ತನದಿಂದ ಇಂದು ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಈ ಕೇಸ್‌ ನಲ್ಲಿ ಎಳೆದು ತಂದಿದ್ದಾರೆ    ಇದ್ದಕ್ಕೆ ಮೂಲ ಕಾರಣ ಪಾವಗಡ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಜಾನಕೀರಾಮ್‌, ಪಿಡಿಒ ಗಳಾದ ತಿಪ್ಪಣ್ಣ, ಕೆಂಪರಾಜು, ಶ್ರೀರಾಮ ನಾಯಕ ಮತ್ತು ಎಫ್‌ ಡಿ ಎ  ರಾಜಾನಾಯಕ್‌ ಇವರುಗಳು ಡಾನ್‌ ಸೀನ ಅಲಿಯಾಸ್‌ ಶ್ರೀನಿವಾಸ್‌ ಮಾಜಿ ಗ್ರಾಮಪಂಚಾಯತಿ ಸದಸ್ಯನಿಗೆ ಕಾನೂನು ಬಾಹಿರವಾಗಿ ಕೆಲಸಮಾಡಿರುವುದೆ ಈ ಎಲ್ಲಾ ಸಂಘಟನೆಗಳಿಗೆ ಮೂಲ.

ಒಂದು ವರ್ಷದ ಹಿಂದೆ ಜಿಲ್ಲಾಪಂಚಾಯತಿಯಿಂದ ಈ ವ್ಯಾಪ್ತಿ ಯ ನಿವೇಶನಗಳ ಹದ್ದು-ಬಸ್ತು, ಅಕ್ರಮ ಇ ಸ್ವತ್ತು ಮತ್ತು ಒತ್ತುವರಿಯಾದ  ಎರಡು ಸರ್ಕಾರಿ ರಸ್ತೆ ತೆರವು ಗೊಳಿಸಿದ್ದರೆ ಈ ಕೇಸ್‌ ದಾಖಲಾಗುತ್ತಿರಲಿಲ್ಲ….?

IMG 20251205 WA0024
ಒಂದು ವರ್ಷದ ಹಿಂದಿನ ಆದೇಶ

ಗ್ರಾಮೀಣಾಭಿವೃದ್ಧಿ ಪಂಚಾಯತ್‌ ಇಲಾಖೆ ಅದಿಕಾರಿಗಳು ತಮ್ಮ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿದ್ದರೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಶಾಲಿನಿ ರಜನೀಶ್‌ ಅವರು ಹೆಸರು ಬರುತ್ತಿರಲಿಲ್ಲ, ಮುಂದಿನ ದಿನಗಳಲ್ಲಾದರು ಸಂಬಂಧ ಪಟ್ಟ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸಮಾಡಿ, ಸುಳ್ಳು ಕೇಸ್‌ ದಾಖಲು ಮಾಡಿರುವಂತ ಡಾನ್‌ ಸೀನ ಮತ್ತು ಉದಯಕುಮಾರ್‌ ಅಂತವರಿಗೆ ಕಾನೂನಿನ ಮೂಲಕ ಸರಿಯಾದ ಉತ್ತರ ಕೊಡುತ್ತಾರ …..?  ಕಾಲವೇ ಉತ್ತರಿಸಬೇಕು……!