*ಲಿವರ್ ಪೂಲ್ ಯೂನಿವರ್ಸಿಟಿ: ಬೆಂಗಳೂರಿನ ಹೊಸ ಕ್ಯಾಂಪಸ್ಗೆ ಶಿಲಾನ್ಯಾಸ*
_ಶೈಕ್ಷಣಿಕ ಸಂಸ್ಥೆಗಳು ಹಾಗೂ ಉದ್ಯಮ ಸಹಯೋಗದ ಪ್ರಗತಿಯ ಸಂಭ್ರಮಾಚರಣೆ_
• ಕಂಪ್ಯೂಟರ್ ಸೈನ್ಸ್, ಬಿಸಿನೆಸ್ ಮ್ಯಾನೇಜ್‌ಮೆಂಟ್, ಬಯೊಮೆಡಿಕಲ್ ಸೈನ್ಸಸ್, ಅಕೌಂಟಿಂಗ್ ಹಾಗೂ ಫೈನಾನ್ಸ್ ಮತ್ತು ಗೇಮ್ ಡಿಸೈನ್‌ನಲ್ಲಿ ಇಂಗ್ಲೆಂಡ್‌ನ ಮಾನ್ಯತೆ ಪಡೆದ ಶೈಕ್ಷಣಿಕ ಕಾರ್ಯಕ್ರಮಗಳನ್ನು ಭಾರತದಲ್ಲಿ ನೀಡಲಿರುವ ಇಂಗ್ಲೆಂಡ್‌ನ ಮೊದಲ ವಿಶ್ವವಿದ್ಯಾಲಯ
• ಉದ್ಯಮದ ದಿಗ್ಗಜರ ಜೊತೆ ಸಂಬಂಧ ಬಲಪಡಿಸಿಕೊಂಡ ಲಿವರ್ ಪೂಲ್ ಯೂನಿವರ್ಸಿಟಿ
ಬೆಂಗಳೂರು, ಡಿಸೆಂಬರ್ 15, 2025: ಬೆಂಗಳೂರಿನಲ್ಲಿ ಆರಂಭಗೊಳ್ಳಲಿರುವ ಇಂಗ್ಲೆಂಡ್ನ ಲಿವರ್ ಪೂಲ್ ಯೂನಿವರ್ಸಿಟಿ ಕ್ಯಾಂಪಸ್ ಗೆ ಅಲೆಂಬಿಕ್ ಸಿಟಿಯಲ್ಲಿ ಇಂದು ಶಿಲಾನ್ಯಾಸ ನೆರವೇರಿಸಲಾಗಿದೆ.
ಸಮಾರಂಭದಲ್ಲಿ ಲಿವರ್ ಪೂಲ್ ವಿಶ್ವವಿದ್ಯಾಲಯದ ಉನ್ನತಾಧಿಕಾರಿಗಳು, ಇಂಗ್ಲೆಂಡ್ ಸರ್ಕಾರದ ಪ್ರತಿನಿಧಿಗಳು, ಶೈಕ್ಷಣಿಕ ಪಾಲುದಾರರು ಮತ್ತು ಉದ್ಯಮಗಳ ದಿಗ್ಗಜರು ಭಾಗವಹಿಸಿದ್ದರು. ಭಾರತದಲ್ಲಿ ಭವಿಷ್ಯಕ್ಕೆ ಸನ್ನದ್ಧವಾಗಿರುವ ಶಿಕ್ಷಣ ಮತ್ತು ಸಂಶೋಧನಾ ವ್ಯವಸ್ಥೆ ಅಭಿವೃದ್ಧಿಪಡಿಸುವ ವಿಶ್ವವಿದ್ಯಾಲಯದ ಬದ್ಧತೆಯನ್ನು ಈ ಕಾರ್ಯಕ್ರಮವು ಪುನರುಚ್ಚರಿಸಿದೆ.
Watch video
ಕರ್ನಾಟಕ ಮತ್ತು ಕೇರಳದ ಬ್ರಿಟನ್ನಿ ನ ಡೆಪ್ಯುಟಿ ಹೈಕಮಿಷನರ್ ಚಂದ್ರು ಅಯ್ಯರ್ ಈ ವರ್ಷದ ಮೇನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ವಿಶ್ವವಿದ್ಯಾಲಯದ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದ ಸಮಾರಂಭದಲ್ಲಿ ಅವರೂ ಭಾಗವಹಿಸಿದ್ದರು. ಬೆಂಗಳೂರಿನ ದಿ ಸ್ಕೂಲ್ ಆಫ್ ರೇಯಾ-ದ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮದ ಪ್ರದರ್ಶನ ನೀಡಿದರು.
2026ರಲ್ಲಿ ಕಾರ್ಯಾರಂಭ ಮಾಡಲಿರುವ ಈ ಕ್ಯಾಂಪಸ್, ಭಾರತ-ಇಂಗ್ಲೆಂಡ್ ಉನ್ನತ ಶಿಕ್ಷಣ ಸಹಯೋಗದಲ್ಲಿನ ಮಹತ್ವದ ನಡೆಗೆ ನಿದರ್ಶನವಾಗಿದೆ.
ಭಾರತದ ಉನ್ನತ ಶಿಕ್ಷಣದ ಮಹತ್ವಾಕಾಂಕ್ಷೆಗಳೊಂದಿಗೆ ಜಾಗತಿಕ ಶೈಕ್ಷಣಿಕ ಮಾನದಂಡಗಳನ್ನು ಸಂಯೋಜಿಸುವ, ಭವಿಷ್ಯಕ್ಕೆ ಸನ್ನದ್ಧವಾದ ಕಲಿಕೆ ಮತ್ತು ಸಂಶೋಧನಾ ವಾತಾವರಣ ಒದಗಿಸಲು ವಿನ್ಯಾಸಗೊಳಿಸಲಾಗಿರುವ ಈ ಬೆಂಗಳೂರು ಕ್ಯಾಂಪಸ್, ಇಂಗ್ಲೆಂಡ್ ಮತ್ತು ಭಾರತದ ಶ್ರೇಷ್ಠ ಶೈಕ್ಷಣಿಕ ಪರಂಪರೆಗಳನ್ನು ಒಟ್ಟುಗೂಡಿಸಲಿದೆ. ಇಲ್ಲಿ ವಿದ್ಯಾರ್ಥಿಗಳು ಸ್ಮಾರ್ಟ್ ತರಗತಿ ಕೊಠಡಿಗಳು, ಸಂಶೋಧನೆ ಮತ್ತು ನಾವೀನ್ಯತೆ ಅವಕಾಶ, ಸಹಯೋಗ ಕೇಂದ್ರಗಳು, ವಿಶೇಷ ಪ್ರಯೋಗಾಲಯಗಳು ಮತ್ತು ಬ್ಲೂಮ್ಬರ್ಗ್ ಟರ್ಮಿನಲ್ ಗಳಿಗೆ ಪ್ರವೇಶ ಅವಕಾಶಗಳೊಂದಿಗೆ ಅನುಕೂಲಕರ ಹಾಗೂ ಸಂಯೋಜಿತ ಕಲಿಕಾ ವಾತಾವರಣದ ವಿಶಿಷ್ಟ ಅನುಭವ ಪಡೆಯಲಿದ್ದಾರೆ. ಇಲ್ಲಿರುವ ಭವಿಷ್ಯಕ್ಕೆ ಗಮನ ಕೇಂದ್ರಿತ ಸೌಲಭ್ಯಗಳಲ್ಲಿ- ಶೈಕ್ಷಣಿಕ ಕಲಿಕೆ, ಉದ್ಯಮ ತೊಡಗಿಸಿಕೊಳ್ಳುವಿಕೆ ಮತ್ತು ಅಂತರಶಿಸ್ತೀಯ ಸಂಶೋಧನೆಯನ್ನು ಸುಲಲಿತವಾಗಿ ನಡೆಸಲು ನೆರವಾಗುವ ವಾತಾವರಣ ಇದೆ.
ಲಿವರ್ ಪೂಲ್ ಯೂನಿವರ್ಸಿಟಿಯ ಕುಲಪತಿ ಪ್ರೊಫೆಸರ್ ಟಿಮ್ ಜೋನ್ಸ್ ಅವರು ಮಾತನಾಡಿ, “ನಮ್ಮ ಭವಿಷ್ಯದ ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ಹೊಸ ಕಲಿಕಾ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿನ ಮೊದಲ ಹೆಜ್ಜೆಯಾಗಿರುವ ಕ್ಯಾಂಪಸ್ನ ಶಿಲಾನ್ಯಾಸ ಸಮಾರಂಭ ನಡೆಯುತ್ತಿರುವುದು ಮಹತ್ವದ ಬೆಳವಣಿಗೆಯಾಗಿದೆ. ಜ್ಞಾನ ಮತ್ತು ತಂತ್ರಜ್ಞಾನದ ಶಕ್ತಿ ಕೇಂದ್ರವಾಗಿ ಹಾಗೂ ಕರ್ನಾಟಕದ ಖ್ಯಾತಿ ಮತ್ತು ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಗಾಗಿ ಬೆಂಗಳೂರಿನ ಅತ್ಯಂತ ಚಲನಶೀಲ ಬೆಳವಣಿಗೆ ತಾಣಗಳಲ್ಲಿ ಒಂದಾಗಿರುವ ಅಲೆಂಬಿಕ್ ಸಿಟಿಯು ಈ ಪ್ರದೇಶವನ್ನು ಭಾರತದಲ್ಲಿನ ಲಿವರ್ಪೂಲ್ ಯೂನಿವರ್ಸಿಟಿಯ ಕ್ಯಾಂಪಸ್ಗೆ ಸೂಕ್ತ ನೆಲೆಯನ್ನಾಗಿ ಮಾಡಿದೆ.
“ಬೆಂಗಳೂರಿನಲ್ಲಿ ಲಿವರ್ ಪೂಲ್ ಯೂನಿವರ್ಸಿಟಿಯ ಈ ಹೊಸ ಮೈಲಿಗಲ್ಲು ಸಾಧಿಸುವುದಕ್ಕೆ ನಮಗೆ ನೆರವಾಗಲು ಅನೇಕ ಗಣ್ಯ ಅತಿಥಿಗಳು ಸಮಾರಂಭದಲ್ಲಿ ಹಾಜರಿರುವುದು ನಮಗೆ ಗೌರವದ ಸಂಗತಿಯಾಗಿದೆ” ಎಂದು ಹೇಳಿದರು.
ಕರ್ನಾಟಕ ಹಾಗೂ ಕೇರಳದ ಬ್ರಿಟನ್ನಿ ನ ಡೆಪ್ಯುಟಿ ಹೈಕಮಿಷನರ್ ಚಂದ್ರು ಅಯ್ಯರ್ ಅವರು ಮಾತನಾಡಿ, “ಈ ವರ್ಷದ ಆರಂಭದಲ್ಲಿ ಪ್ರಕಟಿಸಲಾಗಿದ್ದ ಲಿವರ್ ಪೂಲ್ ಯೂನಿವರ್ಸಿಟಿಯು ನಮ್ಮ ಬೆಂಗಳೂರಿನಲ್ಲಿ ತನ್ನ ಕ್ಯಾಂಪ್ಸ್ ಆರಂಭಿಸಲಿದೆ ಎನ್ನುವ ಘೋಷಣೆಯನ್ನು ನಾವು ಹೆಮ್ಮೆಯಿಂದ ಸ್ವಾಗತಿಸಿದ್ದೇವೆ. ಅಲೆಂಬಿಕ್ ಸಿಟಿಯಲ್ಲಿ ನಡೆದ ಈ ಕ್ಯಾಂಪಸ್ ಶಿಲಾನ್ಯಾಸ ಸಮಾರಂಭದಲ್ಲಿ ನಾವು ಉತ್ಸುಕತೆಯಿಂದ ಭಾಗವಹಿಸುತ್ತಿದ್ದೇವೆ. ಭಾರತದ ಭವಿಷ್ಯದ ಪೀಳಿಗೆಯ ವಿದ್ಯಾರ್ಥಿಗಳಿಗೆ ವಿಶ್ವ ದರ್ಜೆಯ ಇಂಗ್ಲೆಂಡ್ ಶಿಕ್ಷಣದ ಕೊಡುಗೆ ನೀಡಲು ಮುಂದೆ ಬಂದಿರುವ ಲಿವರ್ಪೂಲ್ ಯೂನಿವರ್ಸಿಟಿಗೆ ನಾನು ಶುಭ ಹಾರೈಸುತ್ತೇವೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಕ್ಯಾಂಪಸ್ ನ ವಾಸ್ತುಶಿಲ್ಪಿ ರಾಮ್ ಜೋಶಿ ಅವರು ಮಾತನಾಡಿ, “ನಾವು ಮೊದಲ ಬಾರಿಗೆ ಅಲೆಂಬಿಕ್ ಪ್ರದೇಶಕ್ಕೆ ಕಾಲಿಟ್ಟಾಗ, ಭೂತಕಾಲವನ್ನು ಭವಿಷ್ಯಕ್ಕೆ ಬಗ್ಗಿಸಲು ಸಿದ್ಧವಾಗಿರುವ ಪರಿಸರವನ್ನು ನಾವು ಇಲ್ಲಿ ಗಮನಿಸಿದ್ದೆವು. ಈ ಹಳೆಯ ಗಾಜಿನ ಕಾರ್ಖಾನೆಯಲ್ಲಿ, ಲಿವರ್ ಪೂಲ್ ನ ಸೃಜನಶೀಲತೆಯ ಅಭಿವ್ಯಕ್ತಿಯು ಬೆಂಗಳೂರಿನ ಬೌದ್ಧಿಕ ಶಕ್ತಿ – ಸಾಮರ್ಥ್ಯದ ಜೊತೆಗೆ ಬೆಸೆಯಲು ಇರುವ ವಿಪುಲ ಅವಕಾಶವನ್ನು ನಾವು ನೋಡಿದ್ದೇವು. ಲಿವರ್ ಪೂಲ್ ಯೂನಿವರ್ಸಿಟಿಯ ಬೆಂಗಳೂರು ಕ್ಯಾಂಪಸ್ ಗೆ ನಾವು ಸಿದ್ಧಪಡಿಸಿರುವ ವಿನ್ಯಾಸವು ಉದ್ಯಮವನ್ನು ಜ್ಞಾನವನ್ನಾಗಿ ಪರಿವರ್ತಿಸಲಿದೆ.
ಕೆಂಪು ಉಕ್ಕು, ಹೊಸ ಕೆಂಪು ಇಟ್ಟಿಗೆಯಾಗಲಿದೆ. ಗಾಜಿನ ಬಾಗಿದ ಗೋಡೆಯು ವಿದ್ಯಾರ್ಥಿಗಳು ಜಗತ್ತನ್ನು ಹೊಸದಾಗಿ ನೋಡುವ ಮಸೂರವಾಗಲಿದೆ. ಈ ಕ್ಯಾಂಪಸ್ ಮರುಬಳಕೆ ಮತ್ತು ನವೀಕರಣದ ಜೀವಂತ ನಿರೂಪಣೆಯಾಗಿರಲಿದೆ. ಇಲ್ಲಿ ಶೈಕ್ಷಣಿಕ ಶ್ರೇಷ್ಠತೆಯು ಕೂಡ ಗಾಜಿನಂತೆ ಬೆಂಕಿಯಿಂದಲೇ ರೂಪುಗೊಳ್ಳಲಿದೆ. ಕರಕುಶಲತೆಯಿಂದ ಹರಿತವಾಗಲಿದೆ. ನೋಟದಿಂದ ಪ್ರಕಾಶಮಾನವಾಗಲಿದೆ” ಎಂದು ಬಣ್ಣಿಸಿದ್ದಾರೆ.
ಪ್ರತಿಷ್ಠಿತ ರಸೆಲ್ ಗ್ರೂಪ್ ನ ಸದಸ್ಯಸ್ವತ್ವ ಹೊಂದಿ ವಿಶ್ವದಾದ್ಯಂತ ಖ್ಯಾತಿ ಪಡೆದಿರುವ ಲಿವರ್ ಪೂಲ್ ಯೂನಿವರ್ಸಿಟಿಯ ಬೆಂಗಳೂರಿನ ಕ್ಯಾಂಪಸ್, ಭಾರತದ ಬದಲಾಗುತ್ತಿರುವ ಪ್ರತಿಭೆಗಳ ಶೈಕ್ಷಣಿಕ ಅಗತ್ಯಗಳನ್ನೆಲ್ಲ ಪೂರೈಸಲು ವಿನ್ಯಾಸಗೊಳಿಸಲಾಗಿರುವ ಇಂಗ್ಲೆಂಡ್-ಮಾನ್ಯತೆ ಪಡೆದ ಪದವಿಗಳನ್ನು ನೀಡಲಿದೆ. ಕೋರ್ಸ್ ಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಕಂಪ್ಯೂಟರ್ ಸೈನ್ಸ್, ಗೇಮ್ ಡಿಸೈನ್, ಬಿಸಿನೆಸ್ ಮ್ಯಾನೇಜ್ಮೆಂಟ್, ಅಕೌಂಟಿಂಗ್ ಮತ್ತು ಫೈನಾನ್ಸ್ ಮತ್ತು ಬಯೊಮೆಡಿಕಲ್ ಸೈನ್ಸಸ್ ಕೋರ್ಸ್ಗಳನ್ನು ಪ್ರಾರಂಭಿಸಲಾಗುವುದು.
ʼಗೇಮ್ ಡಿಸೈನ್ ಪ್ರೋಗ್ರಾಂ;- ಭಾರತದಲ್ಲಿನ ಇಂಗ್ಲೆಂಡ್ ಯೂನಿವರ್ಸಿಟಿಗಳ ಕ್ಯಾಂಪಸ್ಗಳಲ್ಲಿ ಮೊದಲ ಬಾರಿಗೆ ಪರಿಚಯಿಸಿದ ಕೋರ್ಸ್ ಆಗಿದೆ. ಈ ಕೋರ್ಸ್, ಉದ್ಯಮದ ಸ್ಪರ್ಧಾತ್ಮಕ ಸ್ವರೂಪಕ್ಕೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲಿದೆ. ಸಂವಾದಾತ್ಮಕ ದೃಕ್ – ಶ್ರವಣ ಮಾಧ್ಯಮದಲ್ಲಿ ವಿಶಿಷ್ಟವಾದ ಕೋರ್ಸ್ ನೀಡಲು ಕೋಡಿಂಗ್, ಸೃಜನಶೀಲತೆ ಮತ್ತು ಕ್ರಿಟಿಕಲ್ ಥಿಯರಿ ಸಂಯೋಜಿಸುವ ಈ ಕಾರ್ಯಕ್ರಮವು ಪ್ರತಿಷ್ಠಿತ ಯುಕೆ ರಸೆಲ್ ಗ್ರೂಪ್ ನಲ್ಲಿ ಇದೇ ಮೊದಲ ಬಾರಿಗೆ ಪರಿಚಯಿಸಲಾಗಿದೆ.
ಬ್ರಿಟಿಷ್ ಕೌನ್ಸಿಲ್ ನ ಇಂಡಿಯಾ ಕಂಟ್ರಿ ಡೈರೆಕ್ಟರ್ ಅಲಿಸನ್ ಬ್ಯಾರೆಟ್ ಎಂಬಿಇ ಅವರು ಮಾತನಾಡಿ, “ಬೆಂಗಳೂರಿನಲ್ಲಿರುವ ತನ್ನ ಕ್ಯಾಂಪಸ್ನಲ್ಲಿ ಶಿಲಾನ್ಯಾಸ ನೆರವೇರಿಸಿದ ಲಿವರ್ ಪೂಲ್ ಯೂನಿವರ್ಸಿಟಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ವಿಶ್ವ ದರ್ಜೆಯ ಕಲಿಕೆಗೆ ಪ್ರವೇಶ ವಿಸ್ತರಿಸಲು ಮತ್ತು ಜಾಗತಿಕ ಆದ್ಯತೆಗಳಿಗೆ ಸ್ಪಂದಿಸುವ ಸಂಶೋಧನೆ ಮುಂದುವರಿಸಲು ಇಂಗ್ಲೆಂಡ್ ಮತ್ತು ಭಾರತ ಬದ್ಧವಾಗಿವೆ. ಈ ಹೊಸ ಕ್ಯಾಂಪಸ್ ಭಾರತದಲ್ಲಿನ ವಿದ್ಯಾರ್ಥಿಗಳಿಗೆ ಇಂಗ್ಲೆಂಡ್ನ ಉತ್ತಮ ಗುಣಮಟ್ಟದ ಶಿಕ್ಷಣ, ಉದ್ಯಮದ ಜೊತೆ ಜೋಡಿಸಲಾಗಿರುವ ಕಾರ್ಯಕ್ರಮಗಳು ಮತ್ತು ಅಂತರರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಅಧ್ಯಾಪಕರನ್ನು ಬೆಂಗಳೂರಿಗೆ ತರಲಿದೆ. ಇದು ಇಂಗ್ಲೆಂಡ್ ಹಾಗೂ ಭಾರತದ ನಡುವಣ ಶೈಕ್ಷಣಿಕ ಸಂಬಂಧಗಳನ್ನು ಗಟ್ಟಿಗೊಳಿಸಲಿದೆ. ಪಾಲುದಾರಿಕೆ ಮತ್ತು ಅವಕಾಶದ ಅತ್ಯಾಕರ್ಷಕ ಹೊಸ ಮಾರ್ಗಗಳನ್ನು ತೆರೆಯಲಿದೆʼ ಎಂದು ಹೇಳಿದರು.
2026ರ ಶೈಕ್ಷಣಿಕ ವರ್ಷಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಶೈಕ್ಷಣಿಕ ಕಾರ್ಯಕ್ರಮಗಳು, ಅರ್ಹತೆ, ಪ್ರವೇಶಗಳ ಬಗ್ಗೆ ಮಾಹಿತಿ ಪಡೆಯಲು ಹಾಗೂ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು University of Liverpool India Campus ಅಂತರ್ಜಾಲ ತಾಣಕ್ಕೆ ಭೇಟಿ ನೀಡಬಹುದು.
ಲಿವರ್ ಪೂಲ್ ಯೂನಿವರ್ಸಿಟಿಯು ಕ್ಯುಎಸ್ ಜಾಗತಿಕ ವಿಶ್ವವಿದ್ಯಾಲಯಗಳ ಅಗ್ರ ಶ್ರೇಯಾಂಕದ 150 ಜಾಗತಿಕ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) 2020 ರ ಪ್ರಕಾರ, ವಿದೇಶಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ವಿಶ್ವವಿದ್ಯಾಲಯ ಅನುದಾನ ಆಯೋಗದ 2023 ನಿಯಮಗಳ ಅಡಿಯಲ್ಲಿ ಭಾರತದಲ್ಲಿ ಕ್ಯಾಂಪಸ್ ಸ್ಥಾಪಿಸಲು 2025ರ ಮೇ-ನಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯದಿಂದ ಅನುಮೋದನೆ ಪಡೆದಿದೆ.
