IMG 20230120 WA0070

Bengaluru:ಆರೋಗ್ಯ & ಕ್ಷೇಮ ಕ್ಷೇತ್ರದಲ್ಲಿ ಆಕರ್ಷಕ ಹೊಸ ಸೇವೆ ಆರಂಭಿಸಿದ ಹ್ಯಾಪಿಯೆಸ್ಟ್ ಹೆಲ್ತ್

BUSINESS

ಆರೋಗ್ಯ & ಕ್ಷೇಮ ಕ್ಷೇತ್ರದಲ್ಲಿ ಆಕರ್ಷಕ ಹೊಸ ಸೇವೆ ಆರಂಭಿಸಿದ ಹ್ಯಾಪಿಯೆಸ್ಟ್ ಹೆಲ್ತ್

ಬೆಂಗಳೂರು, ಜನವರಿ 20, 2023: ಆರೋಗ್ಯ ಮತ್ತು ಕ್ಷೇಮ ಜ್ಞಾನದ ಉದ್ದಿಮೆಯಾಗಿರುವ ಹ್ಯಾಪಿಯೆಸ್ಟ್ ಹೆಲ್ತ್ ಭಾರತದ ಮೊದಲ ಆರೋಗ್ಯ ಮತ್ತು ಕ್ಷೇಮ ಜೀವನಶೈಲಿಯ ಮ್ಯಾಗಜಿನ್ ಅನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಈ ಮ್ಯಾಗಜಿನ್ ಆರೋಗ್ಯ ಮತ್ತು ಕ್ಷೇಮದ ಕುರಿತಾದ ವಿಚಾರಗಳ ಬಗ್ಗೆ ಅತ್ಯಮೂಲ್ಯವಾದ ಜ್ಞಾನವನ್ನು ನೀಡುತ್ತದೆ.

ಸಂಸ್ಥೆಯ ಎರಡನೇ ಕೊಡುಗೆಯಾಗಿ ಮೊಬೈಲ್ ಆ್ಯಪ್ ಅನ್ನು ಇಂದು ಬಿಡುಗಡೆ ಮಾಡಲಾಯಿತು. ಆರಂಭಿಕ ರೋಗನಿರ್ಣಯ, ಮೈಲ್ಡ್ ಚಿಕಿತ್ಸೆಗಳು, ಆರೋಗ್ಯ ಮತ್ತು ತಂತ್ರಜ್ಞಾನದ ಇಂಟರ್ ಸೆಕ್ಷನ್ ನಿಂದ ಇತ್ತೀಚಿನ ಚಿಕಿತ್ಸೆಗಳು ಹಾಗೂ ಇನ್ನಿತರೆ ವಿಚಾರಗಳ ಬಗ್ಗೆ ಜ್ಞಾನಾರ್ಜನೆ ಮಾಡುವ ಮೊಟ್ಟ ಮೊದಲ ಆ್ಯಪ್ ಇದಾಗಿದೆ. ಹ್ಯಾಪಿಯೆಸ್ಟ್ ಹೆಲ್ತ್ ದೈಹಿಕ, ಭಾವನಾತ್ಮಕ, ಆಧ್ಯಾತ್ಮಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಹೆಚ್ಚಿಸಲು ಕ್ಷೇಮ ಕಾರ್ಯಕ್ರಮಗಳ ಒಂದು ಶ್ರೇಣಿಯನ್ನು ಪರಿಚಯಿಸುತ್ತದೆ. ಅಂತಿಮವಾಗಿ, ಮೆಟಾವರ್ಸ್ ಪ್ಲಾಟ್ ಫಾರ್ಮ್ ಸಹಿದ್ದು, ಇದು ಬಳಕೆದಾರರಿಗೆ ವರ್ಚುವಲ್ ಜಾಗದಲ್ಲಿ ಆರೋಗ್ಯ ಮತ್ತು ಕ್ಷೇಮದ ಜ್ಞಾನವನ್ನು ಅನುಭವಿಸಲು ನೆರವಾಗುತ್ತದೆ.

ಈ ಹೊಸ ಸೇವೆಗಳ ಬಗ್ಗೆ ಮಾತನಾಡಿದ ಹ್ಯಾಪಿಯೆಸ್ಟ್ ಹೆಲ್ತ್ ನ ಅಧ್ಯಕ್ಷ ಅಶೋಕ್ ಸೂಟ ಅವರು, “ಇವು ನಮ್ಮ ಡಿಜಿಟಲ್ ಕೊಡುಗೆಗೆ ಪೂರಕವಾಗಿರುತ್ತವೆ ಮತ್ತು ಹ್ಯಾಪಿಯೆಸ್ಟ್ ಹೆಲ್ತ್ ಅನ್ನು ಒಂದು ಅನನ್ಯವಾದ ಆರೋಗ್ಯ ಮತ್ತು ಕ್ಷೇಮ ಉದ್ಯಮವನ್ನಾಗಿ ಮಾಡುತ್ತದೆ. ಇನ್ನೂ ಹೆಚ್ಚಿನ ಗ್ರಾಹಕರು ಈ ಸಾಮರ್ಥ್ಯವನ್ನು ಬಳಸಿಕೊಳ್ಳಲು ಈ ಪ್ರಿಂಟ್ ಮ್ಯಾಗಜಿನ್ ನೆರವಾಗುತ್ತದೆ. ನಮ್ಮ ಮೊದಲ ಸಂಚಿಕೆಯ ಪ್ರಮುಖ ವಿಷಯ ಮಹಿಳೆಯರ ಆರೋಗ್ಯ. ಈ ಸಂಚಿಕೆಯು ಎಲ್ಲಾ ವಯೋಮಾನದ ಮಹಿಳೆಯರಿಗೆ ಸ್ಫೂರ್ತಿದಾಯಕ ಮತ್ತು ಉನ್ನತಿಗೇರಿಸುವ ಕಥೆಗಳನ್ನು ಹೊಂದಿದೆ. ಇದು ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಟ ಮಾಡಿದ ಹಾಗೂ ಉತ್ತಮ, ಆರೋಗ್ಯಕರವಾದ ಜೀವನವನ್ನು ನಡೆಸುತ್ತಿರುವ ಜನರ ಕಥೆಗಳನ್ನು ಹೇಳುತ್ತದೆ’’ ಎಂದು ತಿಳಿಸಿದರು.

ಡಿಜಿಟಲ್ ಸೇವೆಗಳ ಬೆಳವಣಿಗೆಯ ವೇಗವನ್ನು ಮುಂದುವರಿಸುವ ಸಲುವಾಗಿ ಹ್ಯಾಪಿಯೆಸ್ಟ್ ಹೆಲ್ತ್ ಮೆಟಾವರ್ಸ್ ಪ್ಲಾಟ್ ಫಾರ್ಮ್ ಅನ್ನು ಆರಂಭಿಸುವ ಮೂಲಕ ಹೆಚ್ಚು ತೊಡಗಿಸಿಕೊಳ್ಳುವ ಅನುಭವವನ್ನು ಪರಿಚಯಿಸಿದೆ. ಇದು ಬಳಕೆದಾರರಿಗೆ ವರ್ಚುವಲ್ ಜಾಗದಲ್ಲಿ ಆರೋಗ್ಯ ಮತ್ತು ಕ್ಷೇಮ ಜ್ಞಾನವನ್ನು ಹೊಂದಲು ಅವಕಾಶ ಕಲ್ಪಿಸುತ್ತದೆ.

ಸಂಸ್ಥೆಯ ಮುಖ್ಯ ಕಾರ್ಯಕಾರಿ ಅಧಿಕಾರಿ & ಅಧ್ಯಕ್ಷ ಅನಿಂದ್ಯಾ ಚೌಧುರಿ ಅವರು ಮಾತನಾಡಿ, “ನಾವು ಮಧುಮೇಹ ಜ್ಞಾನದೊಂದಿಗೆ ನಮ್ಮ ಮೆಟಾವರ್ಸ್ ಪ್ರಯಾಣವನ್ನು ಆರಂಭಿಸುತ್ತಿದ್ದೇವೆ. ನಾವು ವಿವಿಧ ರೀತಿಯ ಆಹಾರವನ್ನು ಸೇವಿಸಿದಾಗ ರಕ್ತದಲ್ಲಿನ ಸಕ್ಕರೆಯ ಹೆಚ್ಚಳವನ್ನು ನಮ್ಮ ಮೆದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಇದು ವಿವರಿಸುತ್ತದೆ. ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನೀವು ಟ್ರ್ಯಾಕ್ ಮಾಡಬಹುದಾಗಿದ್ದು, ಈ ಮೂಲಕ ಕೆಲವು ಉಪಯುಕ್ತತೆಗಳನ್ನು ಹೆಸರಿಸಲು ಮಾಹಿತಿ ಮತ್ತು ನಿರ್ವಹಣೆಯ ಬೆಂಬಲವನ್ನು ಕಂಡುಕೊಳ್ಳಬಹುದಾಗಿದೆ. ಮಾನವ ಅಂಗರಚನಾಶಾಸ್ತ್ರದ ತಿಳುವಳಿಕೆ, ತಜ್ಞರೊಂದಿಗೆ ಸಂವಾದಾತ್ಮಕ ಮಾನಸಿಕ ಆರೋಗ್ಯ ಅವಧಿಗಳು ಮತ್ತು ಇನ್ನೂ ಹೆಚ್ಚಿನ ವಿಷಯಗಳ ವ್ಯಾಪ್ತಿಯನ್ನು ಒಳಗೊಂಡಿರುವ ವರ್ಚುವಲ್ ರಿಯಾಲಿಟಿ ಅನುಭವಗಳ ಭಂಡಾರವನ್ನು ನಿರ್ಮಿಸುವುದು ನಮ್ಮ ಅಂತಿಮ ಗುರಿಯಾಗಿದೆ. ವರ್ಚುವಲ್ ಸ್ಪೇಸ್ ನಲ್ಲಿ ಬಳಕೆದಾರರು ಪರಸ್ಪರ, ತಜ್ಞರು ಮತ್ತು ಆರೋಗ್ಯ ಸೇವೆಗಳ ಪೂರೈಕೆದಾರರೊಂದಿಗೆ ಸಂಪರ್ಕ ಸಾಧಿಸಬಹುದಾದ ಅಭಿವೃದ್ಧಿ ಹೊಂದುತ್ತಿರುವ ಸಮುದಾಯವನ್ನು ರಚಿಸಲು ನಾವು ಬಯಸುತ್ತೇವೆ’’ ಎಂದು ತಿಳಿಸಿದರು.

ಹ್ಯಾಪಿಯೆಸ್ಟ್ ಹೆಲ್ತ್ ಸಹ ವಿಭಿನ್ನವಾದ ಕ್ಷೇಮ ಕಾರ್ಯಕ್ರಮಗಳನ್ನು ಆರಂಭಿಸಿದೆ. ಇದು ಜನರು ತಮ್ಮ ದೈನಂದಿನ ಒತ್ತಡವನ್ನು ಉತ್ತಮ ರೀತಿಯಲ್ಲಿ ನಿಭಾಯಿಸಲು ಹಾಗೂ ಆರೋಗ್ಯಕರವಾದ ಜೀವನಶೈಲಿ ಆಯ್ಕೆಗಳನ್ನು ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಕಾರ್ಯಕ್ರಮಗಳಲ್ಲಿ ಮೈಂಡ್ ಫುಲ್ ನೆಸ್, ಥಾಯ್ ಚಿ, ಲಾಫ್ಟರ್ ಯೋಗ, ಡ್ಯಾನ್ಸ್ ಫಿಟ್ನೆಸ್, ಯೋಗ ಮತ್ತು ಕರಾಟೆ ಸೇರಿವೆ.