ಕೋವಿಡ್‍ನಿಂದ ಸಂಕಷ್ಟದಲ್ಲಿರುವ ರೀಟೇಲರ್‍ಗಳಿಗೆ ಮಾಲ್‍ಸ್ಟ್ರೀಟ್ ಸಹಾಯಹಸ್ತ
ಬೆಂಗಳೂರು, ಸೆಪ್ಟೆಂಬರ್ 15, 2020: ರೀಕಾಸ್ಟ್ ರೀಟೇಲ್ ಸ್ಟೋರ್‍ಗಳಿಗೆ ಡಿಜಿಟಲ್ ಸೇವೆಗಳನ್ನು ಒದಗಿಸುತ್ತಿರುವ ಬೆಂಗಳೂರು ಮೂಲದ ರೀಕಾಸ್ಟ್ ಟೆಕ್ನಾಲಾಜೀಸ್ ಇಂದು ಆವಿಷ್ಕಾರಕ ಪ್ಲಾಟ್‍ಫಾರ್ಮ್ “ಮಾಲ್‍ಸ್ಟ್ರೀಟ್’’ ಅನ್ನು ಬಿಡುಗಡೆ ಮಾಡಿತು. ಇದು ರಿಮೋಟ್ ಲೈವ್ ವಿಡಿಯೋ ಶಾಪಿಂಗ್‍ಗಾಗಿ ಅಭಿವೃದ್ಧಿಪಡಿಸಿರುವ ಪ್ಲಾಟ್‍ಫಾರ್ಮ್ ಆಗಿದೆ. ಬ್ರೌಸರ್ ಆಧಾರಿತ ವೆಬ್ ಆ್ಯಪ್ ಆಗಿರುವ ಈ ಮಾಲ್‍ಸ್ಟ್ರೀಟ್ ಸೆನ್ಸರಿ & ಒಬ್ಬರ ನೆಚ್ಚಿನ ಅಂಗಡಿಗಳಲ್ಲಿನ ಶಾಪಿಂಗ್‍ನ ಸಾಮಾಜಿಕ ತೃಪ್ತಿಯನ್ನು ಒಳಗೊಂಡಿರುತ್ತದೆ. ಇ-ಕಾಮರ್ಸ್ ಅನುಕೂಲತೆಗಳು & ಸಾಮಾಜಿಕ ಅಂತರಕ್ಕೆ ತುರ್ತು ಅಗತ್ಯತೆ ಮತ್ತು ಸಂಪರ್ಕಿತ ಸಂವಹನಗಳನ್ನು ಕಡಿಮೆ ಮಾಡುತ್ತದೆ. ಇದು ಬೆಂಗಳೂರಿನ ಸ್ಟೋರ್‍ಗಳು ಮತ್ತು ಮಾಲ್‍ಗಳಲ್ಲಿನ ಜನಸಂದಣಿಯನ್ನು ಕಡಿಮೆ ಮಾಡಿ, ವರ್ಚುವಲ್ ವ್ಯವಸ್ಥೆಯ ಪರಿಚಯವನ್ನು ಹೆಚ್ಚಳ ಮಾಡುವ ಗುರಿಯನ್ನು ಹೊಂದಿದೆ. ದೂರದಲ್ಲಿರುವ ಗ್ರ್ರಾಹಕರು ನಿಜವಾದ ಇನ್-ಸ್ಟೋರ್, ಸಂವಹನದ ಖರೀದಿ ಅನುಭವವನ್ನು ನೀಡುತ್ತದೆ.
ರೀಕಾಸ್ಟ್ ಟೆಕ್ನಾಲಾಜಿಯ ಸಹ-ಸಂಸ್ಥಾಪಕ ಮತ್ತು ಸಿಇಒ ಜಯೇಶ್ ಚಕ್ರವರ್ತಿ ಅವರು ಮಾತನಾಡಿ, “ನಾವು ರೀಟೇಲ್ ಸಂಬಂಧಿತ ಸ್ಟೋರ್‍ಗಳಿಗೆ ಡಿಜಿಟಲ್ ಮೂಲ ಸೌಕರ್ಯವನ್ನು ಒದಗಿಸುತ್ತಿದ್ದೇವೆ. ಅವರನ್ನು ಡಿಜಿಟಲ್ ವಲಯಕ್ಕೆ ಪರಿವರ್ತಿಸುವ ಮೂಲಕ “ಹೌಸ್ ಆಫ್ ಸ್ಟೋರ್’’ ಪರಿಕಲ್ಪನೆಯನ್ನು ಪುನರ್‍ಸ್ಥಾಪಿಸಲಿದೆ. ಅವರ ಗುರುತನ್ನು ಬಹಿರಂಗಗೊಳಿಸದೇ ಸ್ಥಾಪಿತ ಮತ್ತು ವಿಶ್ವಾಸಾರ್ಹ ಸೇವೆಗಳನ್ನು ನೀಡಲಿದೆ’’ ಎಂದು ತಿಳಿಸಿದರು.
ಬಟ್ಟೆ, ಫರ್ನಿಚರ್, ಫರ್ನಿಶಿಂಗ್, ಅಪ್ಲೈಯನ್ಸಸ್, ಹೋಂ ಡೆಕೋರ್, ಎಲೆಕ್ಟ್ರಾನಿಕ್ಸ್, ಜ್ಯುವೆಲ್ಲರಿ, ಬ್ಯೂಟಿ & ಕಾಸ್ಮೆಟಿಕ್ಸ್, ಸ್ಪೋಟ್ರ್ಸ್, ಬ್ಯಾಗ್ಸ್ & ಫುಟ್‍ವೇರ್ ಸೇರಿದಂತೆ ಇನ್ನಿತರೆ ವೈವಿಧ್ಯಮಯ ವಿಭಾಗಗಳ ಸ್ಟೋರ್‍ಗಳನ್ನು ಮಾಲ್‍ಸ್ಟ್ರೀಟ್ ಹೊಂದಿದೆ. ಈ ಪ್ಲಾಟ್‍ಫಾರ್ಮ್‍ನಲ್ಲಿ ಗ್ರ್ರಾಹಕರು ಹೆಸರುವಾಸಿಯಾಗಿರುವ ಸ್ಟೋರ್‍ಗಳನ್ನು ಆಯ್ಕೆ ಮಾಡಿ ವಿಸ್ತಾರವಾದ ಶಾಪಿಂಗ್ ಮಾಡಬಹುದಾಗಿದೆ.
ರೀಕಾಸ್ಟ್ ಟೆಕ್ನಾಲಾಜಿಯ ಸಹ-ಸಂಸ್ಥಾಪಕ ಮತ್ತು ಸಿಟಿಒ ಪ್ರಸಾದ್ ಹೆಬ್ಬಾರ್ ಮಾತನಾಡಿ, “ಉತ್ತಮ ಕಾರ್ಯಕ್ಷಮತೆಗೆ ಸ್ಮಾರ್ಟ್‍ಫೋನ್ ಬೆಲೆಯನ್ನು ಸುಧಾರಿಸುವ 5ಜಿ ತಂತ್ರಜ್ಞಾನಗಳ ಮೂಲಕ ಕ್ಲೌಡ್ ಮತ್ತು ವೇಗದ ನೆಟ್‍ವರ್ಕ್ ಮೂಲಕ ಕಂಪ್ಯೂಟ್ ವೆಚ್ಚವನ್ನು ಕಡಿಮೆ ಮಾಡುವ ಮೂರು ಅಂಶಗಳು ಗ್ರಾಹಕರಿಗೆ ಲೈವ್ ಶಾಪಿಂಗ್ ಅನ್ನು ಮತ್ತೊಂದು ಅನುಕೂಲಕರವಾದ ಚಾನೆಲ್ ಆಗಿ ಸ್ಥಾಪಿಸುತ್ತದೆ’’ ಎಂದು ತಿಳಿಸಿದರು.
ಮಾಲ್‍ಸ್ಟ್ರೀಟ್‍ನ ಸಾಫ್ಟ್‍ವೇರ್-ಆಸ್-ಎ-ಸರ್ವೀಸ್(ಎಸ್‍ಎಎಎಸ್) ಪ್ಲಾಟ್‍ಫಾರ್ಮ್‍ಗೆ ಈಗಾಗಲೇ ಬೆಂಗಳೂರಿನ 200 ಕ್ಕೂ ಹೆಚ್ಚು ಸ್ಟೋರ್‍ಗಳು ಸಹಿ ಹಾಕಿವೆ. 2021 ರ ಮಾರ್ಚ್ ವೇಳೆಗೆ ಸ್ಟೋರ್‍ಗಳ ಸಂಖ್ಯೆಯನ್ನು 3000 ಕ್ಕೆ ಹೆಚ್ಚಿಸುವ ಗುರಿಯನ್ನು ಕಂಪನಿ ಹೊಂದಿದೆ.
ರೀಕಾಸ್ಟ್ ಟೆಕ್ನಾಲಾಜಿಯ ಸಹ-ಸಂಸ್ಥಾಪಕ ಮತ್ತು ಸಿಎಂಒ ಸಂದೀಪ್ ಉಪಾಧ್ಯಾಯ್ ಅವರು ಮಾತನಾಡಿ, “ನಿಮ್ಮ ಗ್ರಾಹಕರು ನಿಮ್ಮ ಬಳಿಗೆ ಬರದಿದ್ದರೆ, ನೀವೇ ನಿಮ್ಮ ಸ್ಟೋರ್ ಅನ್ನು ಅವರ ಬಳಿಗೆ ಕೊಂಡೊಯ್ಯಿರಿ. ಲೈವ್ ಕಾಮರ್ಸ್ ಅದನ್ನು ಮಾಡುತ್ತದೆ. ಇದು ಇ-ಕಾಮರ್ಸ್‍ನ ಸುರಕ್ಷತೆ ಮತ್ತು ಅನುಕೂಲಗಳೊಂದಿಗೆ ಅಂಗಡಿಯಲ್ಲಿನ ಶಾಪಿಂಗ್‍ನ ಸಂವೇದನಾಶೀಲ ಮತ್ತು ಸಾಮಾಜಿಕ ಶ್ರೀಮಂತಿಕೆಯನ್ನು ತುಂಬುತ್ತದೆ’’ ಎಂದು ತಿಳಿಸಿದರು.
ಹಬ್ಬದ ದಿನಗಳು ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ರೀಕಾಸ್ಟ್ ಈ ಅವಧಿಯಲ್ಲಿ ಎಲ್ಲಾ ರೀಟೇಲರ್‍ಗಳಿಗೆ ಉಚಿತವಾಗಿ ಪ್ಲಾಟ್‍ಫಾರ್ಮ್ ಅನ್ನು ನೀಡಲಿದೆ. ರೀಟೇಲರ್‍ಗಳು ರೀಕಾಸ್ಟ್ ವೆಬ್‍ಸೈಟ್ ಗೆ ಭೇಟಿ ನೀಡಿ ಪ್ಲಗ್-ಅಂಡ್-ಪ್ಲೇ ಸ್ಟೋರ್ ಆ್ಯಪ್ ಎಂಬ ಅನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದು ಮತ್ತು ಅದನ್ನು ಕೆಲವೇ ಗಂಟೆಗಳಲ್ಲಿ ಬಳಸಬಹುದಾಗಿದೆ. ಈಗಾಗಲೇ ಆನ್-ಬೋರ್ಡ್‍ನಲ್ಲಿರುವ ಸ್ಟೋರ್‍ಗಳು ತಮ್ಮ ಗ್ರ್ರಾಹಕರನ್ನು ಡಿಜಿಟಲ್ ರೀತಿಯಲ್ಲಿ ತಲುಪಲು ಕಂಪನಿಯು ಸಹಾಯ ಮಾಡುತ್ತದೆ. ಅಲ್ಲದೇ, ಶಾಪಿಂಗ್ ಮಾಡಲು ಸೃಷ್ಟಿಸಲಾಗಿರುವ ಈ ಹೊಸ ಮಾರ್ಗದ ಬಗ್ಗೆ ಅವರಿಗೆ ಅರಿವು ಮೂಡಿಸುತ್ತದೆ.