WhatsApp Image 2026 01 08 at 7.02.08 PM

ಇಂಟೆಕ್ಸ್ ಫಾರ್ಮಿಂಗ್ 2026 ಪ್ರದರ್ಶನ : ಜನವರಿ 21 ರಿಂದ 25ರವರೆಗೆ…..!

BUSINESS

ಇಂಟೆಕ್ಸ್ ಫಾರ್ಮಿಂಗ್ 2026ಏಷ್ಯಾದ ಅತಿದೊಡ್ಡ ಮೆಟಲ್ ಫಾರ್ಮಿಂಗ್ ತಂತ್ರಜ್ಞಾನ ಪ್ರದರ್ಶನ ಬೆಂಗಳೂರಿನಲ್ಲಿ ಆಯೋಜನೆ

  • ಏಷ್ಯಾದ ಅತಿದೊಡ್ಡ ಮೆಟಲ್ ಫಾರ್ಮಿಂಗ್ ಮತ್ತು ಉತ್ಪಾದನಾ ತಂತ್ರಜ್ಞಾನಗಳ ಪ್ರದರ್ಶನ
  • 20 ದೇಶಗಳ 600ಕ್ಕೂ ಹೆಚ್ಚು ಪ್ರದರ್ಶಕರು ಭಾಗಿ
  • 46,000 ಚದರ ಮೀಟರ್ ವಿಸ್ತೀರ್ಣದ 4 ಬೃಹತ್ ಹಾಲ್‌ಗಳಲ್ಲಿ ಈ ಪ್ರದರ್ಶನ ನಡೆಯಲಿದೆ

 ಬೆಂಗಳೂರು, 8 ಜನವರಿ 2026: ಭಾರತೀಯ ಯಂತ್ರೋಪಕರಣಗಳ ತಯಾರಕರ ಸಂಘ (ಐಎಂಟಿಎಂಎಇಂಟೆಕ್ಸ್ ಫಾರ್ಮಿಂಗ್ 2026 ಪ್ರದರ್ಶನವನ್ನು ಜನವರಿ 21 ರಿಂದ 25ರವರೆಗೆ ಬೆಂಗಳೂರಿನ ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿಆಯೋಜಿಸಿದೆ.

ಇಂಟೆಕ್ಸ್ ಫಾರ್ಮಿಂಗ್ 2026 ರ ಜೊತೆಗೆ ಈ ಕೆಳಗಿನ ಉಪ-ಕಾರ್ಯಕ್ರಮಗಳು ನಡೆಯಲಿವೆ:

  • ಟೂಲ್‌ಟೆಕ್:ಇಲ್ಲಿ ಯಂತ್ರೋಪಕರಣಗಳ ಬಿಡಿಭಾಗಗಳುಮೆಟ್ರಾಲಜಿ ಉತ್ಪನ್ನಗಳುಸಿಎಡಿ / ಸಿಎಎಂ ಉಪಕರಣಗಳು ಮತ್ತು ಹೊಸ ತಾಂತ್ರಿಕ ಟ್ರೆಂಡ್ ಗಳ ಬಗ್ಗೆ ಮಾಹಿತಿ ಇರಲಿದೆ.
  • ಡಿಜಿಟಲ್ ಮ್ಯಾನುಫ್ಯಾಕ್ಚರಿಂಗ್:ಇದರಲ್ಲಿ ಅಡಿಟಿವ್ ಮ್ಯಾನುಫ್ಯಾಕ್ಚರಿಂಗ್ ಮತ್ತು ಇಂಡಸ್ಟ್ರಿ 4.0ನ ಉತ್ಕೃಷ್ಟ ತಾಂತ್ರಿಕ ಪರಿಹಾರೋತ್ಪನ್ನಗಳನ್ನು ಪ್ರದರ್ಶಿಸಲಾಗುತ್ತದೆ.
  • ವೆಲ್ಡ್ ಎಕ್ಸ್‌ಪೋ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವೆಲ್ಡಿಂಗ್ (ಐಐಡಬ್ಲ್ಯೂಇಂಡಿಯಾಸಹಯೋಗದೊಂದಿಗೆ ಹೊಸ ವೆಲ್ಡಿಂಗ್ ತಂತ್ರಜ್ಞಾನಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ.
  • ಮೋಲ್ಡೆಕ್ಸ್ ಮತ್ತು ಫಾಸ್ಟೆನೆಕ್ಸ್ ಇಂಡಿಯಾ: ಮೆಸ್ಸೆ ಸ್ಟುಟ್‌ಗಾರ್ಟ್ ಆಯೋಜಿಸಿರುವ ಈ ವಿಭಾಗಗಳು ಮೋಲ್ಡಿಂಗ್ ಮತ್ತು ಫಾಸ್ಟೆನರ್ ತಂತ್ರಜ್ಞಾನಗಳ ಮೇಲೆ ಗಮನ ಕೇಂದ್ರೀಕರಿಸುತ್ತವೆ.

ಇಂಟೆಕ್ಸ್ ಫಾರ್ಮಿಂಗ್ 2026ರ ಇತರ ಪ್ರಮುಖ ಆಕರ್ಷಣೆಗಳು:

  • ಅಂತಾರಾಷ್ಟ್ರೀಯ ಸೆಮಿನಾರ್: ಜನವರಿ 22-23 ರಂದು ಮೆಟಲ್ ಫಾರ್ಮಿಂಗ್ ತಂತ್ರಜ್ಞಾನದ ಹೊಸ ಟ್ರೆಂಡ್ ಗಳ ಕುರಿತು 9ನೇ ಆವೃತ್ತಿಯ ಸೆಮಿನಾರ್ ನಡೆಯಲಿದೆ.
  • ಐ2 ಅಕಾಡೆಮಿಯಾ ಸ್ಕ್ವೇರ್ಸಂಶೋಧನಾ ಸಂಸ್ಥೆಗಳು ತಮ್ಮ ಹೊಸ ಸಂಶೋಧನೆಗಳನ್ನು (ಆ&ಡಿಉದ್ಯಮದ ಮುಖಂಡರಿಗೆ ಪ್ರಸ್ತುತಪಡಿಸಲು ಇದೊಂದು ವೇದಿಕೆ.
  • ಜಾಗೃತಿ: ಯುವ ವೃತ್ತಿಪರರಲ್ಲಿ ಉತ್ಪಾದನಾ ಕ್ಷೇತ್ರದ ಸುಧಾರಿತ ಬೆಳವಣಿಗೆಗಳ ಬಗ್ಗೆ ಅರಿವು ಮೂಡಿಸುವ ಯುವ ಕಾರ್ಯಕ್ರಮ.

ಮುಂಬರುವ ಈ ಆವೃತ್ತಿಯಲ್ಲಿ ಜರ್ಮನಿಇಟಲಿಜಪಾನ್ ಮತ್ತು ತೈವಾನ್ ದೇಶಗಳ ಪ್ರದರ್ಶಕ ಗುಂಪುಗಳು ಭಾಗವಹಿಸಲಿದ್ದುಇತ್ತೀಚಿನ ಉತ್ಪಾದನಾ ತಂತ್ರಜ್ಞಾನಗಳು ಮತ್ತು ಆವಿಷ್ಕಾರಗಳನ್ನು ಪ್ರದರ್ಶಿಸಲಿವೆ. ವಾಹನ ಮತ್ತು ಬಿಡಿಭಾಗಗಳುಬಾಹ್ಯಾಕಾಶ ಮತ್ತು ರಕ್ಷಣೆವೈದ್ಯಕೀಯ ಉಪಕರಣಗಳುಇಂಧನರೈಲ್ವೆನಿರ್ಮಾಣ ಉಪಕರಣಗಳುಸಾಮಾನ್ಯ ಮತ್ತು ಹೆವಿ ಎಂಜಿನಿಯರಿಂಗ್ಬಂಡವಾಳ ಸರಕುಗಳುಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಸೇರಿದಂತೆ ವಿವಿಧ ವಲಯಗಳ ಸಂದರ್ಶಕರು ಈ ಪ್ರದರ್ಶನಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.

ಈ ಕುರಿತು ಐಎಂಟಿಎಂಎ ಅಧ್ಯಕ್ಷರಾದ ಶ್ರೀಮತಿ ಮೋಹಿನಿ ಕೇಳ್ಕರ್ ಅವರು, “ಪ್ರಸ್ತುತ ಭಾರತೀಯ ಯಂತ್ರೋಪಕರಣಗಳ ಮಾರುಕಟ್ಟೆಯಲ್ಲಿ ಮೆಟಲ್ ಫಾರ್ಮಿಂಗ್ ವಿಭಾಗವು 29% ಪಾಲು ಹೊಂದಿದ್ದರೂಮುಂಬರುವ ವರ್ಷಗಳಲ್ಲಿ ಈ ಕ್ಷೇತ್ರವು ಗಣನೀಯವಾಗಿ ಬೆಳೆಯುವ ನಿರೀಕ್ಷೆಯಿದೆ. 2025ರ ಆರ್ಥಿಕ ವರ್ಷದಲ್ಲಿ ಮೆಟಲ್ ಫಾರ್ಮಿಂಗ್ ಯಂತ್ರೋಪಕರಣಗಳ ಬಳಕೆ 9,139 ಕೋಟಿಗಳಷ್ಟಿದ್ದರೆಉತ್ಪಾದನೆಯ ಮೌಲ್ಯ 2,696 ಕೋಟಿಗಳಾಗಿತ್ತು. ಒಟ್ಟಾರೆಯಾಗಿಮೆಟಲ್ ಫಾರ್ಮಿಂಗ್ ಯಂತ್ರೋಪಕರಣಗಳ ರಫ್ತು ವರ್ಷದಿಂದ ವರ್ಷಕ್ಕೆ ಸುಮಾರು 6% ರಷ್ಟು ಹೆಚ್ಚಾಗಿದೆ. ರಫ್ತಿನಲ್ಲಿ ಪ್ರೆಸ್‘ (Presses) ಯಂತ್ರಗಳು ಮೊದಲ ಸ್ಥಾನದಲ್ಲಿದ್ದರೆನಂತರದ ಸ್ಥಾನಗಳಲ್ಲಿ ಪ್ರೆಸ್ ಬ್ರೇಕ್‌ಗಳುಬೆಂಡಿಂಗ್ ಮತ್ತು ಶಿಯರಿಂಗ್ ಯಂತ್ರಗಳಿವೆ” ಎಂದು ತಿಳಿಸಿದರು

ಐಎಂಟಿಎಂಎ ಮಹಾನಿರ್ದೇಶಕ ಮತ್ತು ಸಿಇಒ ಶ್ರೀ ಜಿಬಾಕ್ ದಾಸ್ ಗುಪ್ತಾ ಅವರು, ಲೇಸರ್ ಮತ್ತು ಲೇಸರ್ ಆಧಾರಿತ ಅಪ್ಲಿಕೇಷನ್ ಗಳು ವಿವಿಧ ಉದ್ಯಮ ವಲಯಗಳಲ್ಲಿ ಹೆಚ್ಚಿನ ಮನ್ನಣೆ ಪಡೆಯುತ್ತಿವೆ. ಹೀಗಾಗಿ ಇಂಟೆಕ್ಸ್ ಫಾರ್ಮಿಂಗ್ ಪ್ರದರ್ಶನದಲ್ಲಿ ಲೇಸರ್ ಆಧಾರಿತ ತಯಾರಕರ ಭಾಗವಹಿಸುವಿಕೆ ಸ್ಥಿರವಾಗಿ ಹೆಚ್ಚುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಪ್ರದರ್ಶಕರು ಫೈಬರ್ ಲೇಸರ್ ಯಂತ್ರಗಳುಪ್ರಿಸಿಶನ್ ಲೆವೆಲರ್‌ ಗಳುಪಿಕ್- ಅಂಡ್- ಪ್ಲೇಸ್ ಯುನಿಟ್‌ಗಳುಸರ್ವೋ ಪ್ರೆಸ್‌ ಗಳುಯಂತ್ರ ಉತ್ಪಾದನಾ ಮಾನಿಟರಿಂಗ್ ಸಿಸ್ಟಮ್‌ ಗಳುವೆಲ್ಡಿಂಗ್ ಮತ್ತು 3ಡಿ ಪ್ರಿಂಟಿಂಗ್ ಪರಿಹಾರಗಳನ್ನು ಪ್ರದರ್ಶಿಸಲಿದ್ದಾರೆ. ಇಂಟೆಕ್ಸ್ ಫಾರ್ಮಿಂಗ್ 2026 ಸ್ವದೇಶಿ ಉತ್ಪನ್ನಗಳ ತಯಾರಿಕೆ ಮತ್ತು ಅವುಗಳ ರಫ್ತಿಗೆ ಹೆಚ್ಚಿನ ವೇಗ ನೀಡಲಿದೆ” ಎಂದು ಹೇಳಿದರು.

ಐದು ದಿನಗಳ ಕಾಲ ನಡೆಯುವ ಈ ಪ್ರದರ್ಶನವು ಉತ್ಪಾದನಾ ಕ್ಷೇತ್ರದಲ್ಲಿ ಡಿಜಿಟಲ್ ರೂಪಾಂತರ ಮತ್ತು ಹೆಚ್ಚಿನ ಉತ್ಪಾದಕತೆಯ ಉತ್ಪನ್ನಗಳನ್ನು ಅಳವಡಿಸಿಕೊಳ್ಳಲು ಒಂದು ವಿಶಿಷ್ಟ ವೇದಿಕೆಯಾಗಿದೆ.