IMG 20260117 WA0015

Karnataka : ಉತ್ತಮ ಆಹಾರ ಸೇವನೆ ಮಾಡಿ – ದೈನಂದಿನ ಅಡುಗೆ ಆಯ್ಕೆಗಳ ಕುರಿತಾದ ಒಂದು ಸಂವಾದ…..!

BUSINESS

ಫಿಯೋನಾ ರಿಫೈನ್ಡ್ ಸನ್‌ಫ್ಲವರ್ ಆಯಿಲ್‌ನಿಂದ ಈ ಸಂಕ್ರಾಂತಿ ಸಂದರ್ಭದಲ್ಲಿ ‘ಉತ್ತಮವಾದುದನ್ನೇ ಆಯ್ಕೆ ಮಾಡಿ. ಉತ್ತಮ ಆಹಾರ ಸೇವನೆ ಮಾಡಿ’ ಎಂಬ ಸಂದೇಶ;

ಕಾರ್ಯಕ್ರಮದಲ್ಲಿ ಬಹುಭಾಷಾ ನಟಿ ಕೀರ್ತಿ ಸುರೇಶ್ ಭಾಗಿ
ಉತ್ತಮವಾದುದನ್ನೇ ಆಯ್ಕೆ ಮಾಡಿ. ಉತ್ತಮ ಆಹಾರ ಸೇವನೆ ಮಾಡಿ – ದೈನಂದಿನ ಅಡುಗೆ ಆಯ್ಕೆಗಳ ಕುರಿತಾದ ಒಂದು ಸಂವಾದ

ಬೆಂಗಳೂರು, ಜನವರಿ 17, 2026: ಕರ್ನಾಟಕದಾದ್ಯಂತ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿರುವ ಈ ಸಂದರ್ಭದಲ್ಲಿ, ಫಿಯೋನಾ ರಿಫೈನ್ಡ್ ಸನ್‌ಫ್ಲವರ್ ಆಯಿಲ್ ಸಂಸ್ಥೆಯು ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದ ತನ್ನ ವ್ಯಾಪಾರ ಪಾಲುದಾರರ ಒಕ್ಕೂಟದೊಂದಿಗೆ ಬೆಂಗಳೂರಿನಲ್ಲಿ ಒಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಈ ಸಮಾರಂಭದಲ್ಲಿ ಫಿಯೋನಾ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಖ್ಯಾತ ನಟಿ ಕೀರ್ತಿ ಸುರೇಶ್ ಅವರು ಖುದ್ದಾಗಿ ಉಪಸ್ಥಿತರಿದ್ದು, ದೈನಂದಿನ ಅಡುಗೆ ಆಯ್ಕೆಗಳಲ್ಲಿ ಜಾಗರೂಕತೆ ಮತ್ತು ಕಾಳಜಿ ವಹಿಸಬೇಕಾದ ಮಹತ್ವವನ್ನು ತಿಳಿಸಿದರು.

ಕೊಯ್ಲು ಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ನಡೆದ ಈ ಕಾರ್ಯಕ್ರಮವು ಮನೆ ಅಡುಗೆ, ಕೌಟುಂಬಿಕ ಸಂಪ್ರದಾಯಗಳು ಮತ್ತು ದೈನಂದಿನ ಆರೋಗ್ಯವನ್ನು ರೂಪಿಸುವ ಸಣ್ಣಪುಟ್ಟ ಆಯ್ಕೆಗಳ ಕುರಿತ ಸಂವಾದಕ್ಕೆ ಸಾಕ್ಷಿಯಾಯಿತು. ಇಂದಿನ ಕುಟುಂಬಗಳು ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗುತ್ತಿದ್ದರೂ ಅವರ ಈ ಪಯಣದಲ್ಲಿ ಅಡುಗೆ ಎಣ್ಣೆಯ ಆಯ್ಕೆಯು ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬ ಫಿಯೋನಾ ಸಂಸ್ಥೆಯ ನಂಬಿಕೆಯನ್ನು ಈ ಸಂದರ್ಭದಲ್ಲಿ ಪುನರುಚ್ಚರಿಸಲಾಯಿತು.

ನಿಜವಾದ ಜಾಗರೂಕತೆ ಎಂದರೆ ಕೇವಲ ಅತ್ಯುತ್ತಮ ಪದಾರ್ಥಗಳನ್ನು ಆರಿಸುವುದು ಮಾತ್ರವಲ್ಲ, ಅಡುಗೆ ಎಣ್ಣೆಯ ವಿಷಯ ಬಂದಾಗಲೂ ಉತ್ತಮವಾದದ್ದನ್ನೇ ಆಯ್ಕೆ ಮಾಡುವುದಾಗಿದೆ. ಮಾರುಕಟ್ಟೆಯಲ್ಲಿರುವ ಸಾಮಾನ್ಯ ಸನ್‌ಫ್ಲವರ್ ಎಣ್ಣೆಗಳಿಗೆ ಹೋಲಿಸಿದರೆ, ಎಣ್ಣೆಯಿಂದ ಆಹಾರಕ್ಕೆ ಶೇಕಡ 50ರಷ್ಟು ಹೆಚ್ಚಿನ ವಿಟಮಿನ್ ಗಳು ದೊರೆಯುವಂತೆ ಮಾಡುವ ‘ವೀಟೋ ಪ್ರೊಟೆಕ್ಟ್ ಫಾರ್ಮುಲಾ’ ಹೊಂದಿರುವ ಫಿಯೋನಾ ಅಡುಗೆ ಎಣ್ಣೆಯು ಒಂದು ಉತ್ತಮ ಆಯ್ಕೆಯಾಗಿದೆ.

ಈ ಕುರಿತು ಬಂಜ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮಿ. ಸಂದೀಪ್ ಸಿಂಗ್ ಅವರು, “ಬಂಜ್ ಇಂಡಿಯಾದಲ್ಲಿ ನಾವು ನಂಬುವುದೇನೆಂದರೆ, ಪ್ರತಿಯೊಂದು ಭಾರತೀಯ ಅಡುಗೆಮನೆಯ ಅಡಿಪಾಯವು ಕೇವಲ ಪದಾರ್ಥಗಳ ಮೇಲೆ ಮಾತ್ರವಲ್ಲ, ನಾವು ಪ್ರತಿದಿನ ಆಯ್ಕೆ ಮಾಡುವ ಅಡುಗೆ ಎಣ್ಣೆಯ ಮೇಲೆ ನಿಂತಿರುತ್ತದೆ. ಹಬ್ಬ ಹರಿದಿನಗಳಲ್ಲಿ ಜನರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಾಗ, ಅಡುಗೆ ಎಣ್ಣೆಯ ಬಗ್ಗೆ ಜಾಗೃತಿ ಆಗಿರುವುದು ಅಷ್ಟೇ ಮುಖ್ಯವಾಗುತ್ತದೆ. ‘ಉತ್ತಮವಾದುದನ್ನೇ ಆಯ್ಕೆ ಮಾಡಿ. ಉತ್ತಮ ಆಹಾರ ಸೇವನೆ ಮಾಡಿ’ ಎಂಬುದು ಕೇವಲ ಫಿಯೋನಾ ಬ್ರ್ಯಾಂಡ್‌ನ ಟ್ಯಾಗ್‌ಲೈನ್ ಮಾತ್ರವಲ್ಲ, ಅದು ದೈನಂದಿನ ಅಡುಗೆಯ ಕುರಿತು ನಾವು ಯೋಚಿಸುವ ವಿಧಾನವೂ ಹೌದು. ಈ ಸಂಭ್ರಮದ ಸಮಯದಲ್ಲಿ ಆಹಾರ ಮತ್ತು ಕುಟುಂಬದ ಪ್ರಾಮುಖ್ಯತೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ನಟಿ ಕೀರ್ತಿ ಸುರೇಶ್ ಅವರು ಇಂದು ನಮ್ಮೊಂದಿಗೆ ಇರುವುದು ನಮಗೆ ಸಂತಸ ತಂದಿದೆ” ಎಂದು ಹೇಳಿದರು.

ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಅವರು, “ಹಬ್ಬಗಳೆಂದರೆ ಕೌಟುಂಬಿಕ ಸಮಯ ಮತ್ತು ಮನೆಯ ಅಡುಗೆ ಸಂಭ್ರಮದ ಸಮಯ. ಅಂತಹ ಸಂದರ್ಭಗಳಲ್ಲಿ ನಮ್ಮ ದೈನಂದಿನ ಆಯ್ಕೆಗಳು ಹೆಚ್ಚು ಮಹತ್ವ ಪಡೆಯುತ್ತವೆ. ಫಿಯೋನಾ ಸಂಸ್ಥೆಯ ‘ಉತ್ತಮವಾದುದನ್ನೇ ಆಯ್ಕೆ ಮಾಡಿ. ಉತ್ತಮ ಆಹಾರ ಸೇವನೆ ಮಾಡಿ’ ಎಂಬ ಸರಳ ಸಂದೇಶ ನನಗೆ ಇಷ್ಟವಾಯಿತು. ಇದು ನಮ್ಮ ದೈನಂದಿನ ಅಡುಗೆಗೆ ನಾವು ಏನನ್ನು ಆಯ್ಕೆ ಮಾಡುತ್ತೇವೆ ಎಂಬುದರ ಬಗ್ಗೆ ಸ್ವಲ್ಪ ಹೆಚ್ಚು ಜಾಗರೂಕರಾಗಿರುವುದರ ಬಗ್ಗೆ ಅರಿವೂ ಮೂಡಿಸುತ್ತದೆ” ಎಂದು ತಿಳಿಸಿದರು.

ಮಾರುಕಟ್ಟೆಯಲ್ಲಿರುವ ಸಾಮಾನ್ಯ ಸನ್‌ಫ್ಲವರ್ ಎಣ್ಣೆಗಳಿಗೆ ಹೋಲಿಸಿದರೆ, ಫಿಯೋನಾ ಅಡುಗೆ ಎಣ್ಣೆಯ ‘ವೀಟೋ ಪ್ರೊಟೆಕ್ಟ್’ ಫಾರ್ಮುಲಾವು ಎಣ್ಣೆಯಿಂದ ಆಹಾರಕ್ಕೆ ಶೇಕಡಾ 50 ರಷ್ಟು ಹೆಚ್ಚಿನ ಜೀವಸತ್ವಗಳು ವರ್ಗಾವಣೆಯಾಗುವುದನ್ನು ಖಚಿತಪಡಿಸಲು ಸಹಾಯ ಮಾಡುತ್ತದೆ. ಈ ಮೂಲಕ ಇದು ದೈನಂದಿನ ಪೋಷಣೆಗೆ ಬೆಂಬಲ ನೀಡುತ್ತದೆ.

ಈ ಕಾರ್ಯಕ್ರಮದ ಮೂಲಕ, ಫಿಯೋನಾ ಸಂಸ್ಥೆಯು ತನ್ನ ಗ್ರಾಹಕರು ಮತ್ತು ಬಳಕೆದಾರರೊಂದಿಗಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ಅಷ್ಟೇ ಅಲ್ಲದೆ, ಪ್ರತಿಯೊಂದು ಕುಟುಂಬವು ‘ಉತ್ತಮವಾದುದನ್ನೇ ಆಯ್ಕೆ ಮಾಡಿ. ಉತ್ತಮ ಆಹಾರ ಸೇವನೆ ಮಾಡಿ’ ಎಂಬ ತನ್ನ ಮೂಲ ತತ್ವವನ್ನು ಈ ಮೂಲಕ ಪುನರುಚ್ಚರಿಸುತ್ತಿದೆ.