ಆಂಗ್ಲ ಭಾಷೆಯ ಬಗ್ಗೆ ಪರಿಣತಿ ಇರಲಿ: ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಮ್ಮ.
ಪಾವಗಡ: ಸರಕಾರಿ ಶಾಲೆಗಳಲ್ಲಿ ಪ್ರಾಥಮಿಕ ಹಂತದಲ್ಲಿ ಆಂಗ್ಲ ಮಾಧ್ಯಮದ ತರಗತಿಗಳು ಆರಂಭಗೊಳ್ಳುತ್ತಿರುವುದು ಶೈಕ್ಷ ಣಿಕ ರಂಗದಲ್ಲಿ ಹೆಚ್ಚಿನ ಮಹತ್ವ ಪಡೆದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಮ್ಮ ತಿಳಿಸಿದ್ದಾರೆ.
ತಾಲ್ಲೂಕಿನ ರಾಜವಂತಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಇಂಗ್ಲೀಷ್ ಭಾಷಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಸರ್ಕಾರಿ ಶಾಲಾ ಮಕ್ಕಳು ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲೀಷ್ ಭಾಷೆಯನ್ನು ಕಲಿಯುವುದರ ಮೂಲಕ ಮುಂದಿನ ವಿದ್ಯಾಭ್ಯಾಸ ವನ್ನು ಆತ್ಮವಿಶ್ವಾಸದಿಂದ ಮುಂದುವರೆಸಿ ಸಾಧನೆ ಮಾಡುವುದರ ಮೂಲಕ ಸಮಾಜದ ಉಪಯುಕ್ತ ವ್ಯಕ್ತಿಗಳಾಗುವಂತೆ ಕರೆ ನೀಡಿದರು.
ಇಂಗ್ಲಿಷ್ ಜಾಗತಿಕ ಭಾಷೆಯಾಗಿದ್ದು, ಔದ್ಯೋಗಿಕ ಕ್ಷೇತ್ರದಲ್ಲಿ ಆಂಗ್ಲ ಭಾಷೆಯ ಜ್ಞಾನ ಅವಶ್ಯಕವಾಗಿದೆಎಂದು.
ಮಾತೃಭಾಷೆಯ ಕುರಿತು ಸದಾ ಅಭಿಮಾನವಿರಬೇಕು. ಆದರೆ, ವಿದ್ಯಾರ್ಥಿಗಳು ಆಂಗ್ಲ ಭಾಷೆಯ ಮೇಲೆ ಹಿಡಿತ ಸಾಧಿಸುವುದು ಉತ್ತಮ ಎಂದು.
ಆಂಗ್ಲಭಾಷ ಶಿಕ್ಷಕ ಆರ್ ಎಂ ನರಸಿಂಹ ರವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಎಲ್ಲಾ ಶಾಲೆಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ರೂಪಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಭಾಗವಹಿಸುವ ಅವಕಾಶವನ್ನು ಕಲ್ಪಿಸಬೇಕೆಂದರು.
ಇಂಗ್ಲೀಷ್ ಕ್ಲಬ್ ಕನ್ವಿನರ್ ಆರ್ ಎಂ ನರಸಿಂಹ ಪ್ರಾಸ್ತಾವಿಕವಾಗಿ ಮಾತನಾಡುತ್ತಾ. ಆಂಗ್ಲಭಾಷೆ ಕಲಿಕೆ ಹೊಸ ಜಗತ್ತಿನ ಬಾಗಿಲುಗಳನ್ನು ತೆರೆಯಲು ಅವಕಾಶ ಕಲ್ಪಿಸುತ್ತೆ, ಜೀವನದಲ್ಲಿ ಉತ್ತಮ ಉದ್ಯೋಗ ಅವಕಾಶಗಳು, ಉನ್ನತ ಶಿಕ್ಷಣಕ್ಕೆ ದಾರಿ ತೋರಿಸುತ್ತೆ ಎಂದರು.
ಅಟಲ್ ಬಿಹಾರಿ ವಾಜಪೇಯಿ ಕಾಲೇಜಿನ ಉಪನ್ಯಾಸಕರಾದ ಓಂಕಾರ್ ಮಾತನಾಡಿ. ಆಂಗ್ಲಭಾಷೆ ಯ ಮಹತ್ವ ಜೀವನದ ಗುರಿಗಳನ್ನು ಸಾಧಿಸಲು ಆತ್ಮವಿಶ್ವಾಸ. ಸಮರ್ಪಣಾ ಮನೋಭಾವನೆ ವಿದ್ಯಾರ್ಥಿಗಳು ರೂಡಿಸಿಕೊಳ್ಳಬೇಕು. ಕಠಿಣ ಶ್ರಮವಹಿಸಿ ಸಾಧನೆ ಮಾಡಿ ಗುರುಗಳಿಗೆ ಪೋಷಕರಿಗೆ ಕೀರ್ತಿ ತರಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಲ್ಲಿ ಮುಖ್ಯ ಶಿಕ್ಷಕ ಯರಿಸ್ವಾಮಿ ಹೆಚ್, ಈ ಸಿ ಓ ಗಳಾದ ವೇಣುಗೋಪಾಲರೆಡ್ಡಿ. ಖಾಜಾ ಹುಸೇನ್ ಶಿಕ್ಷಕರಾದ ಗಿರೀಶ್ ಬಾಬು. ವಾಗ್ದೇವಿ. ಕರಿಯಣ್ಣ, ನರಸಪ್ಪ, ಪ್ರಸಾದ್, ಶ್ರೀರಂಗನಾಯಕ . ಪೋಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
