IMG 20260307 WA0011 scaled

Karnataka : ಪಿಎಂಜೆ ಜ್ಯೂವೆಲ್ಸ್ ನಿಂದ ಬೆಂಗಳೂರಿನಲ್ಲಿ “ವಿಶ್ವದ ಅತ್ಯಂತ ದೊಡ್ಡ ಆಭರಣ ಪ್ರದರ್ಶ……!

BUSINESS

ಪಿಎಂಜೆ ಜ್ಯೂವೆಲ್ಸ್ ನಿಂದ ಬೆಂಗಳೂರಿನಲ್ಲಿ “ವಿಶ್ವದ ಅತ್ಯಂತ ದೊಡ್ಡ ಆಭರಣ ಪ್ರದರ್ಶನ- ಹಾಫ್ ಸ್ಯಾರೀ, ವೆಡ್ಡಿಂಗ್ಸ್ ಅಂಡ್ ಸೆಲೆಬ್ರೇಷನ್ಸ್” ತಂದಿದೆ

ಬೆಂಗಳೂರು, ಮಾರ್ಚ್ 7, 2026: 1964ರಲ್ಲಿ ಸ್ಥಾಪನೆಯಾದ ಪಾರಂಪರಿಕ ಆಭರಣ ಮಳಿಗೆ ಪಿಎಂಜೆ ಜ್ಯೂವೆಲ್ಸ್ ಬೆಂಗಳೂರಿನಲ್ಲಿ ಮಾರ್ಚ್ 7ರಿಂದ 9, 2026ರವರೆಗೆ ಬೆಂಗಳೂರಿನ ರಿಟ್ಜ್-ಕಾರ್ಲ್ಟನ್ ನಲ್ಲಿ `ಹಾಫ್ ಸ್ಯಾರೀ, ವೆಡ್ಡಿಂಗ್ಸ್ ಅಂಡ್ ಸೆಲೆಬ್ರೇಷನ್ಸ್’ ವಿಶ್ವದ ಅತ್ಯಂತ ದೊಡ್ಡ ಆಭರಣ ಪ್ರದರ್ಶನವನ್ನು ಆಯೋಜಿಸಿದೆ. ಈ ಮೂರು ದಿನಗಳ ಅದ್ಧೂರಿ ಪ್ರದರ್ಶನವು ವಿವಾಹದ ನಿರೀಕ್ಷೆಯಲ್ಲಿರುವ ಭಾವಿ ವಧುಗಳು, ಸಾಂಪ್ರದಾಯಿಕ ಹಾಫ್ ಸ್ಯಾರೀ ಕಾರ್ಯಕ್ರಮ ಆಚರಿಸುತ್ತಿರುವ ಯುವತಿಯರು ಮತ್ತು ಕುಟುಂಬಗಳನ್ನು ವಿವಾಹಗಳು ಮತ್ತು ಹಬ್ಬದ ಸಂಭ್ರಮಾಚರಣೆಗಳಿಗೆ ಸಿದ್ಧಗೊಳಿಸುತ್ತಿದೆ.

ಈ ಪ್ರದರ್ಶನವನ್ನು ಪಿಎಂಜೆ ಜ್ಯೂವೆಲ್ಸ್ ಸಿಇಒ ಕಿರಣ್ ಶಿಂದೆ, ಪಿಎಂಜೆ ಜ್ಯೂವೆಲ್ಸ್ ಬಿಸಿನೆಸ್ ಹೆಡ್ ಸೆಂಥಿಲ್ ಕುಮಾರ್ ನಟರಾಜನ್ ಮತ್ತು ಪಿಎಂಜೆ ಜ್ಯೂವೆಲ್ಸ್ ಪ್ರೊಮೋಟರ್ ಗ್ರೂಪ್ ನಿರ್ದೇಶಕ ಭಾಸ್ಕರ್ ಕೊಠಾರಿ ಮತ್ತು ಸ್ಟೋರ್ ಮ್ಯಾನೇಜರ್ ಗಳ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು.pic 3

ಈ ಪ್ರದರ್ಶನವು ಜೀವನದ ಅತ್ಯಂತ ಪ್ರಮುಖ ಸನ್ನಿವೇಶಗಳಿಗೆ ವಿಶೇಷವಾಗಿ ರೂಪಿಸಿದ ಆಭರಣ ಸಂಗ್ರಹಗಳನ್ನು ತಂದಿದೆ. ಸಂದರ್ಶಕರಿಗೆ ವಿಸ್ತಾರ ಶ್ರೇಣಿಯ ವಜ್ರಾಭರಣ, ಬಣ್ಣದ ಹರಳುಗಳ ಮಾಸ್ಟರ್ ಪೀಸ್ ಗಳು, ಟೆಂಪಲ್ ಜ್ಯೂವೆಲ್ಲರಿ, ಪೊಲ್ಕಿ ಸಂಗ್ರಹಗಳು ಮತ್ತು ಸೂಕ್ಷ್ಮವಾಗಿ ರೂಪಿಸಿದ ಸಾಂಪ್ರದಾಯಿಕ ವಿನ್ಯಾಸಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಭಾರತದ ಶ್ರೀಮಂತ ಪರಂಪರೆಯನ್ನು ಆಧುನಿಕ ಸೊಗಸಿನೊಂದಿಗೆ ಸಂಭ್ರಮಿಸಲು ಅವಕಾಶ ನೀಡುತ್ತದೆ.

ಈ ಪ್ರದರ್ಶನದ ಆಕರ್ಷಣೆ ಸಿತಾರಾ ಹಾಫ್ ಸ್ಯಾರೀ ಜ್ಯೂವೆಲ್ಲರಿ ಸಂಗ್ರಹವಾಗಿದ್ದು ಅದು ಯುವತಿಯರು ಪ್ರೌಢರಾಗುವ ಮೈಲಿಗಲ್ಲಿನ ಸಂಭ್ರಮಾಚರಣೆಯಿಂದ ಸ್ಫೂರ್ತಿ ಪಡೆದಿದೆ. ಈ ಸಂಗ್ರಹವು ಆಕಾಶದ ಅಂಶಗಳಿಂದ ಮತ್ತು ದಕ್ಷಿಣ ಭಾರತದ ನೈಸರ್ಗಿಕ ಅಲಂಕರಣಗಳಿಂದ ಸ್ಫೂರ್ತಿ ಪಡೆದಿದ್ದು ಸೂಕ್ಷ್ಮ ವಿವರಗಳನ್ನು ಅಪರೂಪದ ಕಲೆಯೊಂದಿಗೆ ಬೆಸೆಯುತ್ತದೆ.Inaugaration pic 1

ಈ ಪ್ರದರ್ಶನ ಕುರಿತು ಪಿಎಂಜೆ ಜ್ಯೂವೆಲ್ಸ್ ಸಿಇಒ ಕಿರಣ್ ಶಿಂದೆ, “ಪಿಎಂಜೆ ಜ್ಯೂವೆಲ್ಸ್ ನಲ್ಲಿ ನಾವು ಆಭರಣವು ಸದಾ ಭಾವನೆಗಳು, ಸಂಪ್ರದಾಯಗಳು ಮತ್ತು ಜೀವನದ ಅತ್ಯಂತ ಅರ್ಥಪೂರ್ಣ ಮೈಲಿಗಲ್ಲುಗಳೊಂದಿಗೆ ಆಳವಾದ ಸಂಪರ್ಕ ಹೊಂದಿರುತ್ತದೆ ಎಂದು ನಂಬಿದ್ದೇವೆ. ಈ `ಹಾಪ್ ಸ್ಯಾರೀ, ವೆಡ್ಡಿಂಗ್ಸ್ ಅಂಡ್ ಸೆಲೆಬ್ರೇಷನ್ಸ್’ ಪ್ರದರ್ಶನವನ್ನು ಕುಟುಂಬಗಳಿಗೆ ಪ್ರತಿ ಸಂದರ್ಭಕ್ಕೂ ಸರಿಸಾಟಿ ಇರದ ಅನುಭವವನ್ನು ಪಡೆಯುವಂತೆ ರೂಪಿಸಲಾಗಿದೆ. ಬೆಂಗಳೂರು ಸದಾ ನಮಗೆ ಉಜ್ವಲ ಮಾರುಕಟ್ಟೆಯಾಗಿದೆ ಮತ್ತು ನಾವು ಈ ಅಪರೂಪದ ಸಂಭ್ರಮಾಚರಣೆಗಳಿಗೆ ವಿಶ್ವದ ಅತ್ಯಂತ ದೊಡ್ಡ ಆಭರಣ ಪ್ರದರ್ಶನ ತರಲು ಬಹಳ ಸಂತೋಷ ಹೊಂದಿದ್ದೇವೆ” ಎಂದರು.

ಇದಕ್ಕೆ ಪೂರಕವಾಗಿ ಪಿಎಂಜೆ ಜ್ಯೂವೆಲ್ಸ್ ಬಿಸಿನೆಸ್ ಹೆಡ್ ಸೆಂಥಿಲ್ ಕುಮಾರ್ ನಟರಾಜನ್, “ಈ ಪ್ರದರ್ಶನವನ್ನು ಭಾರತದ ಆಭರಣದ ಕುಶಲತೆಯ ಆಳ ಮತ್ತು ವೈವಿಧ್ಯತೆಯನ್ನು ಪ್ರದರ್ಶಿಸಲು ವಿನ್ಯಾಸಗೊಳಿಸಲಾಗಿದೆ. ಸಮಯರಹಿತ ವಧುವಿನ ಆಭರಣಗಳಿಂದ ಸಮಕಾಲೀನ ಸ್ಟೇಟ್ಮೆಂಟ್ ಆಭರಣಗಳಿಂದ ಆಧುನಿಕ ಸಂಭ್ರಮಾಚರಣೆಗಳವರೆಗೆ ಸಂದರ್ಶಕರಿಗೆ ಒಂದೇ ಸೂರಿನಡಿ ಅಸಂಖ್ಯ ವೈವಿಧ್ಯತೆ ದೊರೆಯುತ್ತದೆ. ನಮ್ಮ ಗುರಿ ವಿವಾಹ ಮತ್ತು ಹಾಫ್ ಸ್ಯಾರೀ ಕಾರ್ಯಕ್ರಮಗಳಲ್ಲಿ ತಲೆಮಾರುಗಳ ಕಾಲ ಉಳಿಸಿಕೊಳ್ಳುವ ವಿನ್ಯಾಸಗಳನ್ನು ಪೂರೈಸಿ ಮತ್ತಷ್ಟು ಅವಿಸ್ಮರಣೀಯವಾಗಿಸುವುದು” ಎಂದರು.

Watch video : 

ಸಂದರ್ಶಕರಿಗೆ ಹಳೆಯ ಚಿನ್ನವನ್ನು ವಿನಿಮಯ ಮಾಡಿಕೊಂಡು ಪ್ರತಿ ಗ್ರಾಂಗೆ ರೂ.150 ಕಡಿತ ಪಡೆಯಲು ಅವಕಾಶವಿರುತ್ತದೆ.
ಭಾರತ ಮತ್ತು ಯು.ಎಸ್.ಎ.ಗಳಲ್ಲಿ ವಿಸ್ತರಿಸುತ್ತಿರುವ ಪಿಎಂಜೆ ಜ್ಯೂವೆಲ್ಸ್ ತನ್ನ ವಿಶ್ವಾಸ, ಕರಕುಶಲತೆ ಮತ್ತು ವಿನ್ಯಾಸದ ಶ್ರೇಷ್ಠತೆಯ ಪರಂಪರೆಯನ್ನು ಎತ್ತಿ ಹಿಡಿಯುತ್ತದೆ. ಇಂತಹ ಪ್ರದರ್ಶನಗಳ ಮೂಲಕ ಬ್ರಾಂಡ್ ಜೀವನದ ಅಪರೂಪದ ಕ್ಷಣಗಳನ್ನು ಸಂಭ್ರಮಿಸಲು ಸಂಪ್ರದಾಯ ಮತ್ತು ಸಮಕಾಲೀನ ಕಲೆಯನ್ನು ಒಟ್ಟಿಗೆ ತರುವ ಉದ್ದೇಶ ಹೊಂದಿದೆ.