ಪಾವಗಡ :ಮಾಜಿ ಸಚಿವ ವೆಂಕಟರಮಣಪ್ಪ ಇನ್ನಿಲ್ಲ.
ಪಾವಗಡ : ರಾಜಕೀಯ ಮುತ್ಸದ್ದಿ, ತಾಲ್ಲೂಕಿನ ಜನರು ಪ್ರೀತಿಯಿಂದ ದೊಡ್ಡಪ್ಪ ಎಂತಲೇ ಕರೆಯಿತ್ತಿದ್ದ ಮಾಜಿ ಸಚಿವ ವೆಂಕಟರಮಣಪ್ಪ (80) ವಯೋ ಸಹಜ ಕಾಯಿಲೆಯಿಂದ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಶುಕ್ರವಾರ ಬೆಳಗ್ಗೆ 6 ಗಂಟೆ ಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
2017 ರಲ್ಲಿ ಪತ್ನಿ ಶಾರದಮ್ಮ ದೈವಾದೀನರಾಗಿದ್ದು ಇವರು ಹಿರಿಯ ಪುತ್ರ ಎಚ್. ವಿ ಕುಮಾರಸ್ವಾಮಿ, ಹಾಲಿ ಶಾಸಕ ಎಚ್. ವಿ ವೆಂಕಟೇಶ್, ಮತ್ತು ಪುತ್ರಿ ಪದ್ಮಾವತಿ, ಮತ್ತು ಮೊಮ್ಮಕ್ಕಳು, ಅಪಾರ ಅಭಿಮಾನಿ ಗಳನ್ನು, ಬಂದು ಮಿತ್ರರನ್ನು ಅಗಲಿದ್ದಾರೆ
ಪಟ್ಟಣದ ಗುರುಭವನ ಮೈದಾನದಲ್ಲಿ ಮಧ್ಯಾಹ್ನ 1:00 ರಿಂದ ಸಂಜೆ 4:00 ರವರೆಗೆ ಪಾರ್ಥಿವ ಶರೀರದ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಸಂಜೆ 4:00 ರ ನಂತರ: ಮೃತರ ಸ್ವಗ್ರಾಮವಾದ ಹನುಮಂತನಹಳ್ಳಿಯ ಸ್ವಗೃಹಕ್ಕೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗಲಿದ್ದು, ಅಲ್ಲಿಯೂ ಸಾರ್ವಜನಿಕರ ದರ್ಶನಕ್ಕೆ ಅವಕಾಶಕಲ್ಪಿಸಿದ್ದು.
ಶನಿವಾರ ಅವರ ಸ್ವಗ್ರಾಮ ಹನುಮಂತನಹಳ್ಳಿಯ ತೋಟದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.
ರಾಜಕೀಯ ಹಿನ್ನಲೆ.
1989 ರಲ್ಲಿ ಪ್ರಥಮಬಾರಿಗೆ ಪಾವಗಡ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾಗುತ್ತಾರೆ.
1999 ರಲ್ಲಿ ಎರಡನೇ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗುತ್ತಾರೆ.ಎಸ್ ಎಂ ಕೃಷ್ಣರವರಿಗೆ ಅಪ್ತರಾಗಿದ್ದ ವೆಂಕಟರಮಣಪ್ಪನವರು ಪಾವಗಡ ಪಟ್ಟಣಕ್ಕೆ ಕುಜಿಯುವ ನೀರು ಕಲ್ಪಸಲು ಉತ್ತರ ಪಿನಾಕಿನಿ ನದಿಗೆ ಅಡ್ಡವಾಗಿ ಚಕ್ ಡ್ಯಾಮ್ ಕಟ್ಟಿಸಿ ಪಾವಗಡ ಜನ ಕುಡಿಯುವ ನೀರಿನ ದಾಹ ನಿಗಿಸಿದರು.
2008 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನಿರಾಕರಿಸಿದಾಗ ಧೃತಿಗೆಡದೆ ವಿವಿಧ ಜನಾಂಗಗಳ ನಾಯಕರನ್ನು ಸಂಘಟಿಸಿ ರೈಲು ಇಂಜನ್ ಚಿನ್ಹೆ ಅಡಿ ಪಕ್ಷೇತರವಾಗಿ ಸ್ಪರ್ಧೆ ಮಾಡಿ ಜಯಬೇರಿ ಗಳಿಸಿ ದಕ್ಷಿಣ ಭಾರತದಲ್ಲಿ ಪ್ರಥಮಬಾರಿಗೆ ಬಿಜೆಪಿ ಸರ್ಕಾರ ಬರಲು ಅಡಿಗಲ್ಲು ಹಾಕಿದರು.ಬಿಜೆಪಿಯ ಯಡ್ಡಿಯೂರಪ್ಪ ಸರ್ಕಾರದಲ್ಲಿ ಸಣ್ಣ ಕೈಗಾರಿಕೆ ಸಚಿವರಾಗಿ ಆಯ್ಕೆಯಾಗಿ ಹಲವು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡರು.ಈ ವೇಳೆ ತುಮಕೂರು, ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಹ ಕರ್ತವ್ಯ ನಿರ್ವಹಿಸಿದರು,ಹಾಗೂ ಪಾವಗಡ ಪಟ್ಟಣ ಸಮೀಪ ಕೈಗಾರಿಕಾ ಪಾರ್ಕ್ ಸಹ ನಿರ್ಮಾಣ ಆಗಲು ಕಾರಣರಾದರು.
2018 ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದಿಂದ ತಿಮ್ಮರಾಯಪ್ಪ ವಿರುದ್ಧ ಗೆದ್ದಿದ್ದ ವೆಂಕಟರಮಣಪ್ಪ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಕಾರ್ಮಿಕ ಮತ್ತು ರೇಷ್ಮೆ ಸಚಿವರಾಗಿ,ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾರೆ.2023 ರಲ್ಲಿ ವೆಂಕಟರಮಣಪ್ಪ ಪುತ್ರ ವೆಂಕಟೇಶ್ ರವರಿಗೆ ಕಾಂಗ್ರೆಸ್ ನಿಂದ ಟಿಕೆಟ್ ಕೊಡಸಿ ,ವೆಂಕಟೇಶ್ ರ ಗೆಲುವಿಗೆ ಶ್ರಮಿಸುತ್ತಾರೆ.
ತಾಲ್ಲೂಕಿನ ಜನರ ಬಹುದಿನಗಳ ಬೇಡಿಕೆ ಯಾಗಿದ್ದ ಶಾಶ್ವತ ಕುಡಿಯುವ ನೀರಿಗಾಗಿ ಅಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮೇಲೆ ಒತ್ತಡ ಏರುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ವೆಂಕಟರಮಣಪ್ಪನವರ ಸರಳತೆ ಮತ್ತು ಜನಸ್ನೇಹಿ ನಡವಳಿಕೆ ಮುಂದಿನ ಪೀಳಿಗೆಯ ರಾಜಕಾರಣಿಗಳಿಗೆ ಸದಾ ಆದರ್ಶಪ್ರಾಯವಾಗಿದೆ.
ಈ ಸಂದರ್ಭದಲ್ಲಿ ಗುಬ್ಬಿ ಶಾಸಕ ಶ್ರೀನಿವಾಸ್, ಬಿಜೆಪಿ ಸುರೇಶ್ ಗೌಡ,ಆಂಧ್ರಪ್ರದೇಶ ದ ಸಿ. ಡಬ್ಲ್ಯೂ. ಸಿ ಸದಸ್ಯ ರಘುವೀರರೆಡ್ಡಿ,
ಜಿಲ್ಲಾದಿಕಾರಿ ಶುಭಕಲ್ಯಾಣ್, ಎಸ್. ಪಿ ಅಶೋಕ್, ಎ ಸಿ ಗೂಟೂರುಶಿವಪ್ಪ,, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ದ ಮುಖಂಡರು ಮತ್ತು ಅಧಿಕಾರಿಗಳು ಹಾಜರಿದ್ದರು.
ಅಂತಿಮ ದರ್ಶನ
*ಇಂದು ವಿಧಿವಶರಾಗಿದ್ದ ಮಾನ್ಯ ಮಾಜಿ ಸಚಿವರಾದ ಶ್ರೀ ವೆಂಕಟರಮಣಪ್ಪ ನವರ ಅಂತಿಮ ದರ್ಶನ ಪಡೆಯಲು ನಾಳೆ ಬೆಳಗ್ಗೆ 11 ಗಂಟೆಗೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಮತ್ತು ಹಲವು ಸಂಪುಟ ಸಚಿವರು ಪಾವಗಡ ತಾಲ್ಲೂಕಿನ ಹನುಮಂತನಹಳ್ಳಿ ಗ್ರಾಮಕ್ಕೆ ಆಗಮಿಸಲಿದ್ದಾರೆ.
ವರದಿ : ಶ್ರೀನಿವಾಸಲು ಎ
