ಕೋವಿಡ್-19 ಸೋಂಕು ಭೀತಿಯಿಂದಾಗಿ ತೆರಿಗೆಪಾವತಿದಾರರು ನಿಗದಿತವಾಗಿ ಮತ್ತು ನಿಯಮಗಳಂತೆತೆರಿಗೆ ಪಾವತಿ ಕ್ರಮಗಳ ಪಾಲನೆಗೆ ಹಲವುಸವಾಲುಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರತೆರಿಗೆ ಮತ್ತು ಇತರ ಕಾನೂನುಗಳು(ಕೆಲವು ನಿಯಮಗಳಿಗೆವಿನಾಯಿತಿ) ಸುಗ್ರೀವಾಜ್ಞೆ-2020 ಅಡಿಯಲ್ಲಿ 31 ಮಾರ್ಚ್2020ಕ್ಕೆ ಸಲ್ಲಿಸಬೇಕಾಗಿದ್ದ ಕೆಲವೊಂದು ರಿಟರ್ನ್ಸ್ ಗಳಅವಧಿಯನ್ನು ವಿಸ್ತರಿಸಿದೆ. ಸುಗ್ರೀವಾಜ್ಞೆ ಬದಲಿಗೆ ಇದೀಗತೆರಿಗೆ ಮತ್ತು ಇತರೆ ಕಾನೂನುಗಳು(ಕೆಲವು ಅಂಶಗಳಿಗೆತಿದ್ದುಪಡಿ ಮತ್ತು ವಿನಾಯಿತಿ) ಕಾಯ್ದೆ ಜಾರಿಗೆ ಬಂದಿದೆ.
ಸರ್ಕಾರ 2020ರ ಜೂನ್ 24ರಂದು ಅಧಿಸೂಚನೆಹೊರಡಿಸಿ, 2019-20ನೇ ಹಣಕಾಸು ವರ್ಷದ ಆದಾಯತೆರಿಗೆ ಪಾವತಿ ರಿಟರ್ನ್ಸ್ ಸಲ್ಲಿಕೆಗೆ ನೀಡಲಾಗಿದ್ದ ಗಡುವನ್ನು2020ರ ನವೆಂಬರ್ 30ರವರೆಗೆ ವಿಸ್ತರಿಸಿತ್ತು. ಹಾಗಾಗಿ2020ರ ಜುಲೈ 31ಕ್ಕೆ ಮತ್ತು 2020ರ ಅಕ್ಟೋಬರ್ 31ಕ್ಕೆಸಲ್ಲಿಸಬೇಕಿದ್ದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ 2020ರನವೆಂಬರ್ 30ರೊಳಗೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಅದರಂತೆ ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿತೆರಿಗೆ ಲೆಕ್ಕ ಪರಿಶೋಧನೆ ಸೇರಿದಂತೆ ನಾನಾ ಲೆಕ್ಕಪತ್ರಪರಿಶೋಧನಾ ವರದಿಗಳನ್ನು ಸಲ್ಲಿಸಲು ನೀಡಲಾಗಿದ್ದಗಡುವನ್ನು 2020ರ ಅಕ್ಟೋಬರ್ 31ರ ವರೆಗೆವಿಸ್ತರಿಸಲಾಗಿತ್ತು.
ಇದೀಗ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ತೆರಿಗೆಪಾವತಿದಾರರಿಗೆ ಮತ್ತಷ್ಟು ಸಮಯಾವಕಾಶವನ್ನುನೀಡುವ ಉದ್ದೇಶದಿಂದ ಆದಾಯ ತೆರಿಗೆ ರಿಟರ್ನ್ಸ್ಸಲ್ಲಿಕೆಗೆ ನೀಡಿದ್ದ ಗಡುವನ್ನು ಮತ್ತೆ ವಿಸ್ತರಿಸಲುನಿರ್ಧರಿಸಲಾಗಿದೆ. ಆ ವಿವರ ಕೆಳಗಿನಂತಿದೆ:
(ಎ) ತೆರಿಗೆ ಪಾವತಿದಾರರಿಗೆ(ತಮ್ಮ ಪಾಲುದಾರರುಸೇರಿ) ಯಾರದು ಲೆಕ್ಕಪರಿಶೋಧನೆ ಆಗಿಲ್ಲವೋಅಂತಹವರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆನೀಡಲಾಗಿದ್ದ ಕೊನೆಯ ದಿನಾಂಕ, ಈ ಹಿಂದೆ 2020ರಅಕ್ಟೋಬರ್ 31ರ ವರೆಗೆ ಇದ್ದ ಗಡುವನ್ನು 2021ರಜನವರಿ 31ರ ವರೆಗೆ ವಿಸ್ತರಣೆ ಮಾಡಲಾಗಿದೆ.
(ಬಿ) ಯಾವ ತೆರಿಗೆ ಪಾವತಿದಾರರು, ಅಂತಾರಾಷ್ಟ್ರೀಯಮತ್ತು ನಿರ್ದಿಷ್ಟ ದೇಶೀಯ ವಹಿವಾಟುಗಳಿಗೆಸಂಬಂಧಿಸಿದಂತೆ ವರದಿಗಳು ಹಾಗೂ ಆದಾಯ ತೆರಿಗೆರಿಟರ್ನ್ಸ್ ಅನ್ನು ಸಲ್ಲಿಸಬೇಕಾಗಿದೆಯೋ ಅಂತಹವರಿಗೆ2020ರ ನವೆಂಬರ್ 30ರ ವರೆಗೆ ಇದ್ದ ಗಡುವನ್ನು 2021ರಜನವರಿ 31ರ ವರೆಗೆ ವಿಸ್ತರಿಸಲಾಗಿದೆ.
(ಸಿ) ಇತರೆ ತೆರಿಗೆ ಪಾವತಿದಾರರಿಗೆ ಆದಾಯ ತೆರಿಗೆಸಲ್ಲಿಕೆಗೆ ಈ ಹಿಂದೆ ನೀಡಲಾಗಿದ್ದ 2020ರ ಜುಲೈ 31ರಗಡುವನ್ನು 2020ರ ಡಿಸೆಂಬರ್ 31ರ ವರೆಗೆವಿಸ್ತರಿಸಲಾಗಿದೆ.
ಅದರಂತೆ ಕಾಯ್ದೆಯ ಅನುಸಾರ ನಾನಾ ಲೆಕ್ಕಪರಿಶೋಧನಾ ವರದಿಗಳು, ತೆರಿಗೆ ಲೆಕ್ಕಪರಿಶೋಧನಾವರದಿಗಳು ಹಾಗೂ ಅಂತಾರಾಷ್ಟ್ರೀಯ ಹಾಗೂ ನಿರ್ದಿಷ್ಟದೇಶಿ ವಹಿವಾಟಿಗೆ ಸಂಬಂಧಿಸಿದ ವರದಿಗಳನ್ನು ಸಲ್ಲಿಸಲುನೀಡಿದ್ದ ಗಡುವನ್ನು 2020ರ ಡಿಸೆಂಬರ್ 31ರ ವರೆಗೆವಿಸ್ತರಣೆ ಮಾಡಲಾಗಿದೆ.
ಸಣ್ಣ ಮತ್ತು ಮಧ್ಯಮ ವರ್ಗದ ತೆರಿಗೆ ಪಾವತಿದಾರರಿಗೆಸ್ವಲ್ಪಮಟ್ಟಿನ ಪರಿಹಾರವನ್ನು ನೀಡುವ ಉದ್ದೇಶದಿಂದ2020ರ ಜೂನ್ 24ರಂದು ಹೊರಡಿಸಿದ್ದಅಧಿಸೂಚನೆಯಲ್ಲಿ ಸುಮಾರು ಒಂದು ಲಕ್ಷದವರೆಗೆ ತೆರಿಗೆಪಾವತಿಸುವ ತೆರಿಗೆದಾರರು ಸ್ವಯಂ ತೆರಿಗೆಮೌಲ್ಯಮಾಪನ ಪದ್ಧತಿಯಡಿ ತೆರಿಗೆ ಪಾವತಿಗೆನೀಡಲಾಗಿದ್ದ ಅವಧಿಯನ್ನೂ ಸಹ ವಿಸ್ತರಿಸಲಾಗಿದೆ. ಅದರಂತೆ ಸ್ವಯಂ ತೆರಿಗೆ ಮೌಲ್ಯಮಾಪನ ಪಾವತಿ ಅಡಿ2020ರ ಜುಲೈ 31ರ ವರೆಗೆ ಇದ್ದ ಅವಧಿಯನ್ನು 2020ರನವೆಂಬರ್ 30ರ ವರೆಗೆ ವಿಸ್ತರಣೆ ಮಾಡಲಾಗಿದೆ ಮತ್ತುಲೆಕ್ಕ ಪರಿಶೋಧನೆ ಆಗಬೇಕಾಗಿರುವ ಪ್ರಕರಣಗಳಲ್ಲಿ ಈಗಡುವು 2020ರ ಅಕ್ಟೋಬರ್ 31 ರಿಂದ 2020ರನವೆಂಬರ್ 30ರ ವರೆಗೆ ವಿಸ್ತರಿಸಲಾಗಿದೆ.
ಸಣ್ಣ ಮತ್ತು ಮಧ್ಯಮ ವರ್ಗದ ತೆರಿಗೆ ಪಾವತಿದಾರರಿಗೆಎರಡನೇ ಬಾರಿ ಸಣ್ಣ ಪ್ರಮಾಣದ ಅವಕಾಶವನ್ನುನೀಡುವ ಸಲುವಾಗಿ ಸ್ವಯಂ ತೆರಿಗೆ ಮೌಲ್ಯಮಾಪನಪದ್ದತಿಯಡಿ ತೆರಿಗೆ ಪಾವತಿ ಅವಧಿಯನ್ನು ಮತ್ತೆ ವಿಸ್ತರಣೆಮಾಡಲಾಗಿದೆ. ಅದರಂತೆ ಸುಮಾರು ಒಂದು ಲಕ್ಷರೂಪಾಯಿಗಳ ವರೆಗೆ ಸ್ವಯಂ ತೆರಿಗೆ ಮೌಲ್ಯಮಾಪನಪದ್ದತಿಯಡಿ ತೆರಿಗೆಯನ್ನು ಪಾವತಿಸುವವರಿಗೆ 2020ರಜನವರಿ 31ರ ವರೆಗೆ ಗಡುವು ವಿಸ್ತರಿಸಲಾಗಿದ್ದು, ಇದುಪ್ಯಾರಾ 3(ಎ) ಮತ್ತು ಪ್ಯಾರಾ 3(ಬಿ) ಅಡಿಯಲ್ಲಿಉಲ್ಲೇಖಿಸಿರುವ ತೆರಿಗೆ ಪಾವತಿದಾರರಿಗೆ ಮತ್ತು 2020ರಡಿಸೆಂಬರ್ 31ರ ಗಡುವು ಪ್ಯಾರಾ 3(ಸಿ)ನಲ್ಲಿಉಲ್ಲೇಖಿಸಿರುವ ತೆರಿಗೆ ಪಾವತಿದಾರರಿಗೆಅನ್ವಯವಾಗಲಿದೆ.
ಈ ಕುರಿತಂತೆ ಅಗತ್ಯ ಅಧಿಸೂಚನೆಯನ್ನು ಮುಂದಿನದಿನಗಳಲ್ಲಿ ಹೊರಡಿಸಲಾಗುವುದು.