IMG 20201008 134600

ಮತಗಟ್ಟೆ ಮಾಹಿತಿಗೆ ವೆಬ್ ಸೈಟ್ ಬಳಸಿ….!

STATE Genaral

ವಿಧಾನ ಪರಿಷತ್ ಚುನಾವಣೆ :  ಮತಗಟ್ಟೆ ಮಾಹಿತಿಗೆ ವೆಬ್ ಸೈಟ್ ಬಳಸಿ

ಬೆಂಗಳೂರು, ಅಕ್ಟೋಬರ್ 23 (ಕರ್ನಾಟಕ ವಾರ್ತೆ): ಬೆಂಗಳೂರು ಶಿಕ್ಷಕರ ಕ್ಷೇತ್ರ ಮತ್ತು ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನಡೆಯಲಿರುವ ದ್ವೈವಾರ್ಷಿಕ ಚುನಾವಣೆ-2020ರ ಸಂಬಂಧ ದಿನಾಂಕ: 28-10-2020 ರಂದು ಮತದಾನ ನಡೆಯಲಿದ್ದು, ಸದರಿ ಚುನಾವಣೆಗೆ ಸಂಬಂಧಿಸಿದಂತೆ ಮುಖ್ಯ ಚುನಾವಣಾಧಿಕಾರಿಗಳು, ಕರ್ನಾಟಕ, ಬೆಂಗಳೂರು ಅವರ ಕಚೇರಿಯ ವೆಬ್‌ಸೈಟ್ “search your Name in Teacher’s and Graduate’s Electoral Roll” ಎಂಬ ಶೀರ್ಷಿಕೆಯಲ್ಲಿ ಅಥವಾ ನೇರವಾಗಿ http://ceokarnataka.kar.nic.in/SearchHome_TG.aspx ಈ ಲಿಂಕ್ ನಲ್ಲಿ ಮತದಾರರು ತಾವು ಯಾವ ಮತಗಟ್ಟೆಯಲ್ಲಿ ಮತ ಚಲಾಯಿಸಬೇಕೆಂಬ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಮತದಾರರು ಈ ಅವಕಾಶವನ್ನು ಉಪಯೋಗಿಸಿಕೊಂಡು ತಮ್ಮ ಮತವನ್ನು ಚಲಾಯಿಸುವಂತೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು, ಬೆಂಗಳೂರು ಶಿಕ್ಷಕರ ಕ್ಷೇತ್ರ ಮತ್ತು ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣಾಧಿಕಾರಿ ನವೀನ್ ರಾಜ್ ಸಿಂಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.