ಪಾವಗಡ: ಟಿಪ್ಪರ್ ಗೆ ಸಿಲುಕಿ ಯುವಕನೋರ್ವ ಸಾವು.
ಪಾವಗಡ : – ಟಿಪ್ಪರ್ ಲಾರಿಯ ಹಿಂಬದಿ ಚಕ್ರಕ್ಕೆ ಸಿಲುಕಿ ದ್ವಿಚಕ್ರವಾಹನ ಸವಾರ ಸಾವನ್ನಪ್ಪಿರುವ ಘಟನೆ ಪಾವಗಡ ಪೋಲೀಸ್ ಠಾಣಾ ವ್ಯಾಪ್ತಿಯ ಕಿಲಾರ್ಲಹಳ್ಳಿ ಮತ್ತು ದವಡಬೆಟ್ಟ ಗ್ರಾಮದ ರಸ್ತೆಯ ನಡುವೆ ಇಂದು ಬೆಳಿಗ್ಗೆ 8.30 ಸುಮಾರಿಗೆ ನಡೆದಿದೆ.
ಈ ಅಪಘಾತದಲ್ಲಿ ಇಪ್ಪತ್ತೇಳು ವರ್ಷದ ಯುವಕ ರಾಮ್ ಕುಮಾರ್ ನಾಯ್ಕ ಸಾವನ್ನಪ್ಪಿರುವ ದುರ್ಧೇವಿಯಾಗಿದ್ದಾನೆ.
ಈತ ಪಾವಗಡ ತಾಲ್ಲೂಕಿನ ದವಡಬೆಟ್ಟ ತಾಂಡದ ನಿವಾಸಿ ಎಂಬ ಮಾಹಿತಿ ಲಭ್ಯವಾಗಿದ್ದು
ನಾರಾಯಣ ನಾಯ್ಕ ಮತ್ತು ಸುಬ್ಬಮ್ಮ ದಂಪತಿಯ ಎರಡು ಗಂಡು ಮಕ್ಕಳ ಪೈಕಿ ಹಿರಿಯವ ಈ ಯುವಕ ಇತ್ತೀಚಿಗಷ್ಟೇ ವಿವಾಹವಾಗಿದ್ದು ಏಳು ತಿಂಗಳ ಹಸುಗೂಸನ್ನ ಹೊಂದಿದ್ದ ಎನ್ನಲಾಗಿದೆ.
.
ಕುಟುಂಬಕ್ಕೆ ಬೆನ್ನೆಲುಬಾಗಿದ್ದ ಮಗ ಕಣ್ಣಮುಂದೆ ಕಾಣದ ಲೋಕಕ್ಕೆ ತೆರಳಿದ್ದ ದೃಶ್ಯ ಕಂಡ ಪೋಷಕರ ಆಕ್ರಂದನ ನಿಜಕ್ಕೂ ಮುಗಿಲು ಮುಟ್ಟಿತ್ತು.
ಕಳೆದ ಹತ್ತು ವರ್ಷಗಳಿಂದೆ ಕುಟುಂಬ ಸಮೇತ ಕೆಲಸ ಅರಸಿ ಬೆಂಗಳೂರಿಗೆ ಹೋಗಿ ಖಾಸಗಿ ಕಂಪನಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡು ಬದುಕು ದೂಡುತ್ತಿದ್ದರು.
ದೀಪಾವಳಿ ಹಬ್ಬಕ್ಕೆಂದು ಬಂದಿದ್ದ ಇವರು ಮುಗಿಸಿ ಬೆಂಗಳೂರಿಗೆ ಹೋಗುವ ಸಿದ್ಧತೆಯಲ್ಲಿದ್ದ ದುರ್ದೇವಿ ರಾಮ್ ಕುಮಾರ್ ಇಂದು ದವಡ ಬೆಟ್ಟ ತಾಂಡದಿಂದ ಕಿಲಾರ್ಲಹಳ್ಳಿ ಮಾರ್ಗವಾಗಿ ಬರುತ್ತಿದ್ದ ಸಂದರ್ಭ ರಸ್ತೆ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆ ಮುಂಬದಿಯಿಂದ ಜಲ್ಲಿ ತುಂಬಿದ ಟಿಪ್ಪರ್ ಲಾರಿಯೊಂದು ಬಂದಿದೆ. ಎಡಭಾಗದಲ್ಲಿ ಜಲ್ಲಿಯನ್ನ ರಸ್ತೆ ಬದಿ ಅಲ್ಲೋಡ್ ಮಾಡುವ ಆತುರದಲ್ಲಿ ಲಾರಿಯೊಂದು ರಸ್ತೆ ನಡುವೆಯಿದ್ದಿತ್ತು… ಬಲಭಾಗಕ್ಕೆ ಸರಿದ ದ್ವಿಚಕ್ರ ವಾಹನ ಸವಾರ ನ ಬ್ಯಾಲೆನ್ಸ್ ತಪ್ಪಿ ಹಿಂಬದಿ ಬಿದ್ದಿದ್ದಾನೆ ಗಮನಿಸದ ಲಾರಿ ಚಾಲಕ ಹಿಂದೆ ಸರಿದ ಕೂಡಲೇ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿಯನ್ನ ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಗುತ್ತಿಗೆ ದಾರ ಶಂಕರ್ ರೆಡ್ಡಿಯವರಿಗೆ ಸೇರಿದ್ದ ಈ ಟಿಪ್ಪರ್ ಲಾರಿ ಎಂಬ ಮಾಹಿತಿ ಇದೆ.ಕೂಡಲೇ ಪಾವಗಡ ಠಾಣೆ .ಎ.ಎಸ್.ಐ ಗೋವಿಂದಪ್ಪ ಪೇದೆಗಳಾದ ಮುದ್ದುರಾಜು, ನವೀನ್ , ರಾಜೇಶ್ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ದೇಹವನ್ನು ಪಾವಗಡ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.
ಒಟ್ಟಾರೆ ಇಡಿ ಕುಟುಂಬದವರ ಆಸರೆಯಾಗಿದ್ದ ರಾಮ್ ಕುಮಾರ್ ನಾಯ್ಕನ ಸಾವು ಕುಟುಂಬಸ್ಥರಿಗೆ ತುಂಬಾ ಲಾರದ ನಷ್ಟವಾಗಿದೆ.ಆಗಾಗಿ ಸಂಬಂಧಪಟ್ಟಂತವರು ಇವರಿಗೆ ಪರಿಹಾರದ ನ್ಯಾಯ ಕೊಡಬೇಕಿದೆ ಎಂದು ಕುಟುಂಬಸ್ಥರು ಅಲವತ್ತುಕೊಂಡಿದ್ದಾರೆ.
ವರದಿ : ನವೀನ್ ಕಿಲಾರ್ಲಹಳ್ಳಿ