images 5

ಕಾಣದ ‘ ಕೈ’ ಹಿಂದೆ ಕೋಡಿಹಳ್ಳಿ…?

STATE Genaral

* ಸಾರಿಗೆ ನೌಕರರ ದಾರಿ ತಲಪ್ಪಿಸುತ್ತಿರುವ ಕೋಡಿಹಳ್ಳಿ ಚಂದ್ರಶೇಖರ್….

* ಕಾಣದ ಕೈ ತಾಳಕ್ಕೆ ಕೋಡಿಹಳ್ಳಿ ಕುಣಿಯುತ್ತಿದ್ದಾರ…?

*  ದಲ್ಲಾಳಿ ಗಳ ಹಾವಳಿಯಂದ ರೈತರನ್ನು ಕಾಪಡಲು ಹಾಗದೆ ಇರುವ ಕೋಡಿಹಳ್ಳಿ ಈಗ ಸಾರಿಗೆ ನೌಕರ ಜೊತೆ ಹೋಗಿದ್ದು ಯಾಕೆ.

* APMC ಮಾರುಕಟ್ಟೆ ಯ ದಲ್ಲಾಳಿಗಳಿಗೆ ಬುದ್ದಿ ಹೇಳಿ ರೈತರಿಗೆ ವಂಚಿಸುತ್ತಿರುವ ಕೋಟಿ ಕೋಟಿ ಹಣ‌ ದ ಲೂಟಿ ನಿಲ್ಲಿಸಲು ಆಗದ ವ್ಯಕ್ತಿ…..ಈಗ ಸರ್ಕಾರಕ್ಕೆ ಬುದ್ದಿ ಹೇಳಿ ಸಾರಿಗೆ ನೌಕರರಿಗೆ ನ್ಯಾಯ ಕೊಡಿಸಲು ಹೊರಟಿದ್ದಾರೆ…

10 ಬೇಡಿಕೆಯಲ್ಲಿ 9 ಬೇಡಿಗೆ ಈಡೇರಿಸಿದರು ಮುಷ್ಕರ  ಮುಂದುವರಿಕೆ ಯಾಕೆ…? ಇದರ ಹಿಂದೆ ಯಾರಿದ್ದಾರೆ..

ಸಾರಿಗೆ ನೌಕರ ಸಂಘಟನೆಯವರಿಗೆ  ಸರ್ಕಾರ ತೀರ್ಮಾನ ಒಪ್ಪದಂತೆ ಒತ್ತಡ.

ಬೆಂಗಳೂರು : – ಮೂರು ದಿನಗಳ ಸಾರಿಗೆ ನೌಕರರ ಮುಷ್ಕರ ಸಂಧಾನ ದ ಮೂಲಕ ಬಗೆಹರಿದಿತ್ತು ಎನ್ನುವಷ್ಟರಲ್ಲೆ ಮತ್ತೆ ಅನಿರ್ದಿಷ್ಟ ಮುಷ್ಕರ ಎಂಬ ಕೂಗು ಮತ್ತೆ ಶುರುವಾಗಿದೆ.

ಬೆಂಗಳೂರಿನ ವಿಕಾಸಸೌಧ ದಲ್ಲಿ ನಡೆದ ಸಂಧಾನ ಸಭೆಯನಂತರ ಮಧ್ಯಮ ದೊಂದಿಗೆ ಮಾತನಾಡಿದ ಸಾರಿಗೆ ನೌಕರರ ನಾಯಕರು ಸರ್ಕಾರ ಸಕಾರಾತ್ಮಕ ವಾಗಿ ಸ್ಪಂದಿಸಿದೆ ಮುಷ್ಕರ ವಾಪಸ್ಸು ಎಂದು ಫ್ರೀಡಂ ಪಾರ್ಕ್‌ ಗೆ ಹೋದ ನಂತರ  ಮುಷ್ಕರ ವಾಪಸ್ಸು ತೆಗೆದುಕೊಂಡಿಲ್ಲ, ಮಾತುಕತೆ  ವಿಫಲ ಎನ್ನುತ್ತಾರೆ.

ವಿಕಾಸಸೌಧ ದಲ್ಲಿ ಮಾತುಕತೆ  ಸಫಲ, ಫ್ರೀಡಂ ಪಾರ್ಕ್ ನಲ್ಲಿ ಮಾತುಕತೆ ವಿಫಲ.

ಸಾರಿಗೆ ನೌಕರರಿಗೆ ಹುಳಿ ಇಂಡಿದರಾ  ಕೋಡಿಹಳ್ಳಿ ಚಂದ್ರಶೇಖರ್…..  ಸಾರಿಗೆ ನೌಕರರ ದಿಕ್ಕು ತಪ್ಪಿಸಿದ್ದಾರೆ ಎನ್ನುತ್ತಿದ್ದಾರೆ ಸಾರ್ವಜನಿಕರು.

ರೈತರ ಹೋರಾಟ ಬಿಟ್ಟು ಸಾರಿಗೆ ನೌಕರ ಹೋರಾಟಕ್ಕೆ ಯಾಕೆ ಬಂದರು, ಕೊರೋನಾ ಆರ್ಥಿಕ ಸಂಕಷ್ಟ ಸಮಯದಲ್ಲಿ ಸಾರ್ವಜನಿಕರು ಬಸ್ ಪಾಸ್ ಗಳನ್ನು ಪಡೆದಿದ್ದಾರೆ. ಅವರಿಗೆ ಕೋಡಿಹಳ್ಳಿ ಹಣ ಕೊಡುತ್ತಾರಾ ಎನ್ನುತ್ತಾರೆ ಸಾರ್ವಜನಿಕರು….!

images 4

ರೈತರ ಪರ ನಿಲ್ಲದ ಕೊಡಿಹಳ್ಳಿ,ದಲ್ಲಾಳಿಗಳ ಏಜೆಂಟ್….?

ರೈತ ಪದ ಬಳಸಿ ಅವರ ಹೆಸರಿನಲ್ಲಿ ನಾಯಕರಾಗಿ ರುವ ಕೋಡಿಹಳ್ಳಿ ಚಂದ್ರಶೇಖರ್ APMC ಮಾರುಕಟ್ಟೆ ಯ ದಲ್ಲಾಳಿ ಏಜೆಂಟ್ ಪರವಾಗಿ ಕೆಲಸ ಮಾಡಿ ರೈತರನ್ನು ದಿಕ್ಕು ತಪ್ಪಿಸಿದ್ದು ಆಯ್ತು ಈಗ ಸಾರಿಗೆ ನೌಕರರ ಜೀವನ ಹಾಳು ಮಾಡಲು ಹೊರಟಿದ್ದಾರೆ ಎನ್ನುತ್ತಿದ್ದಾರೆ ಸಾರ್ವಜನಿಕರು.

APMC ಮಾರುಕಟ್ಟೆ ಗಳಲ್ಲಿ ಇಂದಿಗೂ ಶೇಕಡ 4 ರಿಂದ ಶೇಕಡ 12 ರ ವರೆಗೆ ಕಮೀಷನ್ ಪಡೆಯುತ್ತಿದ್ದಾರೆ ( ಬಿಳಿ ಚೀಟಿ ಸಂಸ್ಕೃತಿ) ಇಂದಿಗೂ ಕಮೀಷನ್ ದಂದೆ ನಿಂತಿಲ್ಲ, ರೈತರ ಹೋರಾಟಗಾರ ಎನ್ನುವ ಕೋಡಿಹಳ್ಳಿ ಚಂದ್ರಶೇಖರ್ ರೈತರಿಗೆ ಇಂದಿಗೂ ನ್ಯಾಯ ಕೊಡಿಸಲಾಗದೆ ರೈತರನ್ನು ಕತ್ತಲಲ್ಲಿ ಇಟ್ಟು ದಲ್ಲಾಳಿ ಏಜೆಂಟ್ ಪರ ಮಾತನಾಡುತ್ತಾರೆ.

ದಲ್ಲಾಳಿಗಳ ವಿರುಧ್ದ ಹೋರಾಟ- ಉಪವಾಸ ಸತ್ಯಾಗ್ರಹ ದಂತ ಹೋರಾಟ ಮಾಡಿ ರೈತರಿಂದ ವಸೂಲಿ ಮಾಡುತ್ತಿರುವ ಕೋಟಿ- ಕೋಟಿ ಕಮೀಷನ್  ಹೆಸರಿನ ವಂಚನೆ –  ಹಣ ಯಾಕೆ ಇಂದಿಗೂ  ನಿಲ್ಲಸಲಿಲ್ಲ….?

APMC ಮಾರುಕಟ್ಟೆ ಯ ಬಿಳಿ ಚೀಟಿ ಪಧ್ಧತಿ ನಿಲ್ಲಿಸಲು ಕೋಡಿಹಳ್ಳಿಗೆ ಯಾಕೆ ಆಗಿಲ್ಲಾ…?

ಕೋಡಿಹಳ್ಳಿಗೆ ದಲ್ಲಾಳಿ ಏಜೆಂಟ್ ರಿಂದ ಪೇಮೆಂಟ್ ಆಗುತ್ತಿದೆ….?  ಎಂಬ ಕೂಗು ಸಾರ್ವಜನಿಕ ವಲಯ ಮಾತು.

ಕೋಡಿಹಳ್ಳಿ   ಸಾರ್ವಜನಿಕ ಸಾರಿಗೆ ವ್ಯವಸ್ಥೆ ಯನ್ನು ಹಾಳು ಮಾಡಲು ಹೊರಟಿದ್ದಾರೆ, ಸರ್ಕಾರ ಸಾರಿಗೆ ನೌಕರರ ಬಹುತೇಕ ಬೇಡಿಕೆಗಳನ್ನು ಪೂರೈಸಲು ಮುಂದಾಗಿತ್ತು, ಸಂಧಾನ ಸಭೆಯಲ್ಲಿ ಒಪ್ಪಿ ಹೋದವರನ್ನು ದಿಕ್ಕು ತಪ್ಪಿಸಿದ್ದು ಯಾರು ಎಂಬ ವಿಷಯ ಈಗ ಜಗದ್ ಜಾಹಿರು ಹಾಗಿದೆ.

ದೇಶಾದ್ಯಂತ ರೈತರು ಹೋರಾಟದಲ್ಲಿರುವಾಗ ಇವರು ಯಾಕೆ ಹಸಿರು ಶಾಲು ಬಿಟ್ಟು ಕೆಂಪು ಶಾಲಿನ ಕಡೆ ಹೋದರು….? ಮಧ್ಯಮ ವರ್ಗ, ರೈತರು ಪಯಣಿಸುವ ಸರ್ಕಾರಿ ಸಾರಿಗೆ ಬಂದ್ ಮಾಡಿಸಿ ರೈತರಿಗೆ ಮುಳುವಾಗಿದ್ದಾರೆ ಎನ್ನುತ್ತಿದ್ದಾರೆ ಇವರದೆ ರೈತ ನಾಯಕರು.

ಇನ್ನು ಕೆಲವು ಮಂದಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕಾಣದ ‘ ಕೈ’ ಗೆ ಸೇಲ್ ಹಾಗಿದ್ದಾರೆ ಎನ್ನುತ್ತಿದ್ದಾರೆ.

ಈ ಎಲ್ಲಾ ಪ್ರಶ್ನೆ ಗಳಿಗೆ ಕೋಡಿಹಳ್ಳಿಉತ್ತರಿಸಬೇಕು….?