ಬೆಂಗಳೂರು: ಭಾರತವು ಔಷಧ ತಯಾರಿಕೆಗೆ ಬೇಕಾಗುವ ಎಪಿಐ ಹಾಗೂ ವೈದ್ಯಕೀಯ ಉಪಕರಣಗಳಿಗಾಗಿ ವಿದೇಶಗಳ ಮೇಲೆಯೇ ಅವಲಂಬಿತವಾಗಿದೆ.
ಈ ವಲಯದಲ್ಲಿ ಸ್ವಾವಲಂಬನೆ ಗಳಿಸಲು 3 ಬಲ್ಕ್ ಡ್ರಗ್ ಪಾರ್ಕ್ & 4 ಮೆಡಿಕಲ್ ಡಿವೈಸ್ ಪಾರ್ಕ್ ಗಳನ್ನು ಸ್ಥಾಪಿಸಲಾಗುತ್ತಿದೆ. ಇವುಗಳ ಮೂಲಸೌಕರ್ಯಕ್ಕಾಗಿ ಕೇಂದ್ರವು ತಲಾ 1000 ಕೋಟಿ ರೂ ವೆಚ್ಚ ಮಾಡುತ್ತಿದೆ ಎಂದು ಕೇಂದ್ರ ಸಚಿವ ಡಿ ವಿ ಸದಾನಂದ ಗೌಡರು ಬಾಪಿಸ್ಟ್ ಆಸ್ಪತ್ರೆ ಯ ಕಾರ್ಯಕ್ರಮ ದಲ್ಲಿ ತಿಳಿಸಿದರು.
ನಮ್ಮ ಕೇಂದ್ರ ಸರ್ಕಾರವು ದೇಶಾದ್ಯಂತ 7000ಕ್ಕಿಂತ ಅಧಿಕ ಜನೌಷಧಿ ಕೇಂದ್ರಗಳ ಮೂಲಕ ಸಾಮಾನ್ಯರಿಗೂ ಕೈಗೆಟಕುವ ಬೆಲೆಯಲ್ಲಿ ಗುಣಮುಟ್ಟದ ಔಷಧಗಳನ್ನು ಒದಗಿಸುತ್ತಿದೆ.
ವೈದ್ಯಮಿತ್ರರಿಗೆ ನನ್ನ ಪ್ರೀತಿಪೂರ್ವಕ ಆಗ್ರಹವೆನೆಂದರೆ “ನಿಮ್ಮಲ್ಲಿ ಬರುವ ಆರ್ಥಿಕವಾಗಿ ದುರ್ಬಲರಾದ ‘ಪೇಶಂಟ್’ಗಳಿಗೆ ‘ಜನರಿಕ್’ ಔಷಧಗಳನ್ನೇ ‘ಪ್ರಿಸ್ಕ್ರೈಬ್’ ಮಾಡಿ”.ಎಂದು ಮನವಿ ಮಾಾಡಿದರು.