ಬೆಂಗಳೂರು, ಏಪ್ರಿಲ್ 2020 :- ಗ್ರಾಹಕ ಒಳನೋಟಗಳು ಮತ್ತು ಬ್ರಾಂಡ್ ವಿಶ್ಲೇಷಣೆಗಳ ಸಂಸ್ಥೆಯಾದ ಟಿಆರ್‍ಎ ರಿಸರ್ಚ್ ಏಪ್ರಿಲ್ 10ರಿಂದ ಏಪ್ರಿಲ್ 22, 2020ರವರೆಗೆ 16 ನಗರಗಳಲ್ಲಿ ಸಂಶೋಧನಾ ಸಮೀಕ್ಷೆಯನ್ನು ನಡೆಸಿದ್ದು, ಅದರಿಂದ ಕಂಡುಕೊಂಡ ವಿವರಗಳ ಶ್ವೇತಪತ್ರವನ್ನು ಈಗ ಬಿಡುಗಡೆ ಮಾಡಿದೆ. “ಟಿಆರ್‍ಎನ ಕರೋನಾ ವೈರಸ್ ಗ್ರಾಹಕ ಒಳನೋಟಗಳು 2020’’ ಎಂಬ ಶೀರ್ಷಿಕೆಯ ಶ್ವೇತಪತ್ರವು 16 ನಗರಗಳಲ್ಲಿನ 902 ನಗರಗಳ ನಾಗರಿಕರೊಂದಿಗೆ ನಡೆಸಿದ ಸಂಶೋಧನೆಯನ್ನು ಆಧರಿಸಿದೆ. ಸುಮಾರು ಒಂದು ತಿಂಗಳಿಂದ ಸ್ವಯಂ ಇಚ್ಛೆಯಲ್ಲಿ ಗೃಹ ಬಂಧನದಲ್ಲಿರುವ ಅವರ ಗ್ರಹಿಕೆಗಳು, ಮನೋಭಾವಗಳು, ಚಿಂತೆಗಳು, ಭಯಗಳು ಮತ್ತು ನಿರೀಕ್ಷೆಗಳನ್ನು ಇದು ಒಳಗೊಂಡಿದೆ.
ಶ್ವೇತಪತ್ರದ ಪ್ರಕಾರ ನಗರಗಳಲ್ಲಿ ಲಾಕ್‍ಡೌನ್ ನಿರ್ಣಯದ ಒಟ್ಟಾರೆ ಪರಿಣಾಮದ ಪ್ರಭಾವ ಶೇ.91ರಷ್ಟಿದೆ. ಆ 16 ನಗರಗಳಲ್ಲಿ ಐದು ನಗರಗಳು ಶೇ.98ಕ್ಕಿಂತಲೂ ಹೆಚ್ಚಿನ ಅಥವಾ `ಉತ್ಕøಷ್ಟ’ ಅಂಕವನ್ನು ಇದಕ್ಕೆ ನೀಡಿವೆ. ಆದರೆ, ಲಾಕ್‍ಡೌನ್‍ನ ಒಟ್ಟಾರೆ ನಗರಗಳಲ್ಲಿನ ಅನುಷ್ಠಾನ ಪ್ರಭಾವ ಬಹಳಷ್ಟು ಕಡಿಮೆ ಅಂದರೆ, ಶೇ.74ರಷ್ಟಿದೆ. ಶ್ವೇತಪತ್ರ ಕುರಿತು ಟಿಆರ್‍ಎ ರಿಸರ್ಚ್‍ನ ಸಿಇಒ ಎನ್. ಚಂದ್ರಮೌಳಿ ಅವರು ಮಾತನಾಡಿ, “ಲಾಕ್‍ಡೌನ್ ನಿರ್ಣಯ ಮತ್ತು ಅನುಷ್ಠಾನಗಳ ನಡುವಿನ ಪ್ರಭಾವಗಳ ಲೆಕ್ಕಾಚಾರದಲ್ಲಿ ಶೇ.24ರಷ್ಟು ಗಮನಾರ್ಹ ಅಂತರ ಕಂಡುಬಂದಿದೆ. ಕರೋನಾ ವೈರಸ್ ಪ್ರಸರಣ ಕುರಿತು ಮಾಹಿತಿ ಮತ್ತು ಜ್ಞಾನದಲ್ಲಿ ದೊಡ್ಡ ಅಂತರವಿದೆ. ಅದರಲ್ಲಿಯೂ ಮುಂಬಯಿ ಹೊರತುಪಡಿಸಿ ಈ ಅಂತರ 21ರಿಂದ 24 ವರ್ಷಗಳು ಮತ್ತು 46ರಿಂದ 50 ವರ್ಷಗಳ ವಯೋಮಿತಿಗಳಲ್ಲಿ ಹೆಚ್ಚಿದೆ. ಈ ತಪ್ಪು ಮಾಹತಿಯಿಂದ ನಾಗರಿಕರ ಮನೋಭಾವ ಮತ್ತು ಕಾರ್ಯಗಳ ಮೇಲೆ ಪರಿಣಾಮ ಉಂಟಾಗುತ್ತಿದೆ’’ ಎಂದರು.
“ಈ ಬಿಕ್ಕಟ್ಟಿನ ವಿರುದ್ಧ ಹೋರಾಡುವಲ್ಲಿ ಭಾರತೀಯ ಆರೋಗ್ಯ ಸಾಮಥ್ರ್ಯ ಗಮನಾರ್ಹವಾಗಿ ಉನ್ನತವಾಗಿದೆ ಎಂದು ಗ್ರಾಹಕರು ನಂಬುತ್ತಾರೆ. ಇದು ಶೇ.73ರಷ್ಟಿದ್ದು `ಉತ್ತಮ’ ಎನ್ನಬಹುದಾಗಿದೆ. ಆದರೆ, ಈ ಬಿಕ್ಕಟ್ಟನ್ನು ಎದುರಿಸುವಲ್ಲಿ ಭಾರತದ ಆರ್ಥಿಕ ಸಾಮಥ್ರ್ಯ ಕುರಿತು ಅವರ ನಂಬಿಕೆ ಗಮನಾರ್ಹವಾಗಿ ಕಡಿಮೆ ಎಂದರೆ ಶೇ.63ರಷ್ಟಿದೆ. ಇದರಿಂದ ಜನಮನದಲ್ಲಿ ದೀರ್ಘಕಾಲೀನ ಆರ್ಥಿಕ ಮತ್ತು ಹಣಕಾಸು ಪರಿಣಾಮ ಉಂಟಾಗಬಹುದು ಎಂಬ ಭಯ ಪ್ರಮುಖವಾಗಿದೆ’’ ಎಂದು ಚಂದ್ರಮೌಳಿ ಹೇಳಿದರು.
ಈ ಸಮಸ್ಯೆಯನ್ನು ನಿಭಾಯಿಸುವ ವಿಷಯವನ್ನು ಗಮನಿಸಿದರೆ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮವಾಗಿರುವುದು ಕಂಡುಬಂದಿದೆ. “ಲಾಕ್‍ಡೌನ್ ಸಂದರ್ಭದಲ್ಲಿ ಮಕ್ಕಳು ತೀವ್ರ ರೀತಿಯ ಆಘಾತಕ್ಕೆ ಒಳಗಾಗಿರುತ್ತಾರೆ ಎಂದು ಪೋಷಕರು ಅರಿತುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಈ ಪರಿಸ್ಥಿತಿ ಕುರಿತು ಅನುಭೂತಿ ಮತ್ತು ಪ್ರೀತಿಯೊಂದಿಗೆ ಮಾರ್ಗದರ್ಶನ ಮತ್ತು ಪರಿಸ್ಥಿತಿ ಕುರಿತು ವಿವರಿಸಲು ಪೋಷಕರು ಸಮಯ ತೆಗೆದಿಟ್ಟುಕೊಂಡು ಹೆಚ್ಚಿನ ಪ್ರಯತ್ನ ಕೈಗೊಳ್ಳುವ ಅಗತ್ಯವಿರುತ್ತದೆ.’’
ಕುಟುಂಬದ ಚಿಂತೆಯ ಸೂಚ್ಯಂಕದಲ್ಲಿ ಕುಟುಂಬದ ಸದಸ್ಯರಿಗೆ ರೋಗ ಬರಬಹುದು ಎಂಬ ಆತಂಕ ಅತ್ಯುನ್ನತ ಪ್ರಮಾಣ(ಶೇ.74)ದಲ್ಲಿದೆ. ಕೆಲಸ/ವ್ಯವಹಾರ ನಷ್ಟ ಎರಡನೇ ದೊಡ್ಡ ಆತಂಕ(ಶೇ.68)ವಾಗಿದೆ. ವೇತನ ವಿಳಂಬದ ಆತಂಕ(ಶೇ.62)ಮೂರನೆಯದಾಗಿದೆ. ಲಕ್ನೊ ಅತ್ಯುನ್ನತ ಮಟ್ಟದ ಕುಟುಂಬ ಚಿಂತೆಯ ಸೂಚ್ಯಂಕ ಅಂದರೆ ಶೇ.85ರಷ್ಟು ಹೊಂದಿದೆ. ನಂತರದ ಸ್ಥಾನ ನಾಗಪುರ್‍ದ್ದಾಗಿದೆ(ಶೇ.81). ವೈಯಕ್ತಿಕ ಚಿಂತೆಗಳು ಇತರೆ ಚಿಂತೆಗಳನ್ನು ಮೀರಿ ಕಾಡಿವೆ ಎನ್ನುವುದನ್ನು ತೋರುವಂತೆ ಆರ್ಥಿಕ ಪರಿಣಾಮದ ಚಿಂತೆಯ ಸೂಚ್ಯಂಕ ಶೇ.66ರಲ್ಲಿರುವುದು ತಿಳಿಸುತ್ತದೆ.
ಬಹುತೇಕ ನಗರಗಳು ರೋಗದ ಲಕ್ಷಣಗಳ ಬಗ್ಗೆ ಜಾಗೃತಿ ಹೊಂದಿದ್ದರೆ, ಅದು ಹರಡುವುದನ್ನು ಕುರಿತು ಗಮನಾರ್ಹವಾಗಿ ಕಡಿಮೆ ಮಾಹಿತಿ ಇರುವುದು ಕಂಡುಬಂದಿದೆ. ರೋಗ ಹರಡುವುದರ ಬಗ್ಗೆ ಅತ್ಯಂತ ಉನ್ನತಮಟ್ಟದ ತಪ್ಪು ಮಾಹಿತಿ ದಿಲ್ಲಿಯಲ್ಲಿದ್ದು ನಂತರದ ಸ್ಥಾನ ಚಂಡೀಗಢದ್ದಾಗಿದೆ. ರೋಗದ ಲಕ್ಷಣ ಕುರಿತು ಜ್ಞಾನದ ವಿಷಯದಲ್ಲಿ ದಿಲ್ಲಿ ಅತ್ಯುನ್ನತ ಅಂಕ ಪಡೆದಿದ್ದು, ಮುಂಬಯಿ ನಂತರದ ಸ್ಥಾನ ಪಡೆದಿದೆ ಎಂದು ತಿಳಿಸಿದೆ