ಮಂಡ್ಯ ಏ ೨೫;- ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿ ಹಲವಾರು ಜನ ತುತ್ತಾಗುತ್ತಿದ್ದಾರೆ ಅದಕ್ಕೆ ಪತ್ರಕರ್ತರಿಗೂ ಹೊರತಾಗಿಲ್ಲ, ಮುಂಬೈ. ಚನೈ ನಲ್ಲಿ ಸೋಂಕಿಗೆ ತುತ್ತಾಗಿರುವ ಉದಾಹರಣೆಗಳಿವೆ. ಕರ್ನಾಟಕ ಸರ್ಕಾರ ರಾಜ್ಯದ ಮಾದ್ಯಮ ಮಂದಿಗೂ ಪರೀಕ್ಷೆ ಮಾಡಲು ಆದೇಶಿಸಿತ್ತು. ಇಂದು ಮಂಡ್ಯದಲ್ಲಿ ಪತ್ರಕರ್ತರಿಗೆ ಪರೀಕ್ಷೆಮಾಡಲು ಹೋದಾಗ ಜೆಡಿಎಸ್ ಎಮ್ ಎಲ್ ಸಿ ಕೆ.ಟಿ ಶ್ರೀಕಂಠೇಗೌಡ ಮತ್ತು ಅವರ ಮಗ ಪತ್ರಕರ್ತರಿಕು ಹಾಗೂ ಆರೋಗ್ಯ ಸಿಬ್ಬಂದಿಯ ಮೇಲೆ ಗೂಂಡ ಪ್ರವೃತ್ತಿ ತೋರಿದ್ದಾರೆ.
ಪಾದರಾಯಪುರದಲ್ಲಿ ಆಶಾ ಕಾರ್ಯಕರ್ತರು,ಪೋಲೀಸರಮೇಲೆ ಹಲ್ಲೆ ಮಾಡಿದ್ದು ಅನಕ್ಷರಸ್ತರು ಅವರಿಗೆ ಏನು ತಿಳಿದಿಲ್ಲ ಎಂದರು ನಮ್ಮ ಕೆಲ ಜನಪ್ರತಿನಿಧಿಗಳ ಆದರೆ ಮಂಡ್ಯದಲ್ಲಿ ದಾಳಿ ಮಾಡಿದ್ದು ಮೂಲತ ಉಪನ್ಯಾಸಕರಾಗಿದ್ದವರು ಮತ್ತು ಪದವೀದರ ಕ್ಷೇತ್ರದಿಂದ ಆಯ್ಕೆಯಾದೆ MLC ಕೆ.ಟಿ ಶ್ರೀಕಂಠೇಗೌಡ ಮತ್ತು ಅವರ ಪುತ್ರ ಕೃಷಿಕ್ ಗೌಡ ದಾದಗಿರಿ ಮಾಡಿದ್ದಾರೆ.
ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಇಂದು ಪತ್ರಕರ್ತರಿಗೆ ಕೊರೋನಾ ಸೋಂಕು ಪರೀಕ್ಷೆಗೆ ಮುಂದಾಗಿತ್ತು ಜಿಲ್ಲಾಡಳಿತ. ಅಂಬೇಡ್ಕರ್ ಭವನ ಎಮ್ ಎಲ್ ಸಿ ಶ್ರೀಕಂಠೇಗೌಡ ಮನೆ ಹತ್ತಿರ ಇದೆ ಎನ್ನುವ ಕಾರಣಕ್ಕೆ ಅಕ್ಕ-ಪಕ್ಕದ ಜನರ ಗುಂಪು ಕಟ್ಟಿಕೊಂಡು ಬಂದು ದಾಂಧಲೆ ನೆಡೆಸಿದ್ದಾರೆ,
ಅಂಬೇಡ್ಕರ್ ಭವನ ಸರಕಾರಿ ಜಾಗ ಮತ್ತು ವಿಶಾಲವಾದ ಜಾಗ ಎಂದು ಜಿಲ್ಲಾಡಳಿತ ಮುಂಜಾಗ್ರತ ಕ್ರಮಗಳೊಂದಿಗೆ ಇಲ್ಲಿ ವ್ಯವಸ್ಥೆ ಮಾಡಿತ್ತು, ಇಲ್ಲಿ ಪರೀಕ್ಷೆ ಮಾಡುತ್ತಿರುವ ಪತ್ರಕರ್ತರು ಯಾರು ಕೊರೋನಾ ಸೊಂಕಿತರಲ್ಲ ಕೇವಲ ಮುಂಜಾಗ್ರತ ಕ್ರಮವಾಗಿ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಈ ಕ್ರಮಕ್ಕೆ ಒಬ್ಬ ಪದವೀದರ ಕ್ಷೇತ್ರದ ಶಾಸಕನೇ ಅಡ್ಡಿ ಪಡಿಸಿರುವುದಕ್ಕೆ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ.
ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಡಿಸಿ ಮತ್ತು ಎಸ್ಪಿ ಗೆ ದೂರುನೀಡಿದ್ದಾರೆ. ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಡ್ಯ ಡಿಸಿ ಡಾ.ವೆಂಕಟೇಶ್ ಕೋವಿಡ್ ಪರೀಕ್ಷೆಗೆ ಒಳಪಡುತ್ತಿದ್ದ ಪತ್ರಕರ್ತರ ಮೇಲೆ ಹಲ್ಲೆ ಮತ್ತು ನಿಂಧನೆ ಆಗಿರುವ ಬಗ್ಗೆ ದೂರು ಬಂದಿದೆ,ಅವರ ಮೇಲೆ ಹಲ್ಲೆ ಮಾಡುವುದು ತಪ್ಪು, ನಮಗೆ ಹಲ್ಲೆ ಮತ್ತು ನಿಂದನೆ ಬಗ್ಗೆ ವೀಡಿಯೋ ಸಹ ಸಿಕ್ಕಿದೆಅವರ ವಿರುಧ್ಧ ಕಠಿಣ ಕಾನೂನು ಕ್ರಮ ಜರಗಿಸುವುದಾಗಿ ತಿಳಿಸಿದ್ದಾರೆ
. ಕೆ.ಟಿ.ಶ್ರೀಕಂಠೇಗೌಡ ಮತ್ತು ಪುತ್ರನ ಮೇಲೆ ಎಫ್ ಐ ಆರ್
ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ 51 ರಾಷ್ಟ್ರೀಯವಿಪತ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ A1-ಶ್ರೀಕಂಠೇಗೌಡ, A2- ಕೃಷಿಕ್ ಗೌಡ, A3 , A4- ಬೆಂಬಲಿಗರಾಗಿದ್ದಾರೆ IPC 501,269.147,270.323,114 ಪ್ರಕರಣ ದಾಖಲಾಗಿದೆ.ಘಟನೆ ನಡೆದ ಸ್ಥಳದಲ್ಲೇ ಪೋಲೀಸರು ಕೃಷಿಕ್ ಶ್ರೀಕಂಠೇಗೌಡರನ್ನು ಬಂಧಿಸಿ ಕರೆದ್ಯೊದಿದ್ದಾರೆ.
ಸಂಸದೆ ಸುಮಲತ ಅಂಬರೀಶ್ ರಿಂದ ಕಾನೂನು ಕ್ರಮಕ್ಕೆ ಒತ್ತಾಯ
ಸರ್ಕಾರದ ಶಿಷ್ಟಾಚಾರದ ಪ್ರಕಾರ ಹಾಗೂ ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಮಂಡ್ಯ ಜಿಲ್ಲಾಡಳಿತವು ಮಂಡ್ಯ ಜಿಲ್ಲೆಯ ಪತ್ರಕರ್ತರಿಗೆ ಕೊರೋನಾ ವೈರಸ್ ಪರೀಕ್ಷೆಯನ್ನು ನಗರದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಎಂಎಲ್ ಸಿ ಶ್ರೀಕಂಠೇಗೌಡರು ಮತ್ತು ಅವರ ಪುತ್ರ ಹಾಗೂ ಸ್ಥಳೀಯರೊಂದಿಗೆ ಬಂದು ಅಡ್ಡಿಪಡಿಸಿರುವುದು ನನ್ನ ಗಮನಕ್ಕೆ ಬಂದಿದ್ದು, ಪತ್ರಕರ್ತರ ಸೇವೆ ಈ ಒಂದು ಸಂದರ್ಭದಲ್ಲಿ ಅತಿ ಅಗತ್ಯವಿದೆ ಎಂದು ಸನ್ಮಾನ್ಯ ಪ್ರಧಾನ ಮಂತ್ರಿಗಳೆ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪತ್ರಕರ್ತರನ್ನು ಪರೀಕ್ಷೆಗೆ ಒಳಪಡಿಸಿ ಅವರಿಗೆ ಆತ್ಮಸ್ಥೈರ್ಯ ತುಂಬುವುದು ಜಿಲ್ಲಾಡಳಿತದ ಉದ್ದೇಶವಾಗಿತ್ತು. ಈ ಒಂದು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿರುವುದು ಖಂಡನೀಯ. ಈಗಾಗಲೇ ನನಗೆ ಬಂದಿರುವ ಮಾಹಿತಿ ಪ್ರಕಾರ ಮಂಡ್ಯ ಜಿಲ್ಲಾ ಪತ್ರಕರ್ತರ ಸಂಘದಿಂದ ದೂರು ನೀಡಲಾಗಿದ್ದು, ಇದು ಶಿಕ್ಷಾರ್ಹ ಅಪರಾಧ ಆಗಿರುವ ಹಿನ್ನೆಲೆಯಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ನಿಯಮಾನುಸಾರ ಅಗತ್ಯ ಕ್ರಮ ಕೈಗೊಂಡು, ಕೋರೋಣ ಸೋಂಕಿನ ವಿರುದ್ಧ ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರು, ವೈದ್ಯಕೀಯ ಸಿಬ್ಬಂದಿ, ವೈದ್ಯರು ಹಾಗೂ ಎಲ್ಲಾ ವೃಂದದವರಿಗೆ ಸೂಕ್ತ ಭದ್ರತೆ ಹಾಗೂ ರಕ್ಷಣೆ ಒದಗಿಸಲು ಜಿಲ್ಲಾ ವರಿಷ್ಠ ಅಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಕೋರುತ್ತೇನೆ. ಎಂದಿದ್ದಾರೆ ಸಂಸದೆ ಸುಮಲತ ಅಂಬರೀಶ್.
ಘಟನೆಯ ವಿಡಿಯೋ…. ನೋಡಿ