ನವದೆಹಲಿ, ಏಪ್ರಿಲ್ 25: ಭಾರತದಲ್ಲಿ ಕೋವಿಡ್ 19 ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದೆ ದೇಶದಲ್ಲಿ ಇಂದಿಗೆ ೧೮೬೬೮ ಇದು ಕೇಂದ್ರ ವೇ ನೀಡಿದ ಮಾಹಿತಿ ಪ್ರತಿದಿನ ದೇಶದಲ್ಲಿ ಪ್ರತಿದಿನ ಸಾವಿರದ ವರೆಗೂ ಪಾಸೀಟಿವ್ ಕೇಸ್ ಗಳು ಬರುತ್ತಿದೆ. ಇನ್ನು ರಾಜ್ಯದಲ್ಲಿ 489 ಪಾಸಿಟೀವ್ ಕೇಸ್ ಪತ್ತೆಯಾಗಿದ್ದು, ನಿನ್ನೆಯೆ ದಿನ 15 ಕೇಸ್ ಪತ್ತೆಯಾಗಿದೆ
ಪ್ರಧಾನ ಮಂತ್ರಿಗಳ ಸಲಹಾ ಸಮಿತಿ ಯ ಶಿಫಾರಸ್ಸಿನ ಮೇಲೆ ಲಾಕ್ ಡೌನ್ ಸಡಲಿಕೆ ಮಾಡಿದೆ ಇದರಿಂದ ಆತಂಕ ಪಡುವ ಅಗತ್ಯವಿಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಹೀಗಿದ್ದರೂ, ಲಾಕ್ ಡೌನ್ ಹಿಂದಿನ ನಿಯಮಗಳನ್ನು ಸಡಿಲಗೊಳಿಸಿ ಕೇಂದ್ರಸರ್ಕಾರ ಆದೇಶ ಹೊರಡಿಸಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಲಾಕ್ ಡೌನ್ ಸಡಿಲಿಕೆ ನಿರ್ಣಯ ದುರಂತಕ್ಕೆ ಆಹ್ವಾನಿಸಿದಂತೆ.ಪ್ರಕರಣ ಕಡಿಮೆ ಇದ್ದಾಗ ಲಾಕ್ ಡೌನ್ ಹೆಚ್ಚುತ್ತಿರುವಾಗ ಸಡಿಲಿಕೆ ಅದೆಂಥಾ ವಿಚಿತ್ರ.ಸಡಿಲಿಕೆ ಬೇಡ ತಕ್ಷಣ ವಾಪಸ್ ಪಡೆಯಿರಿ. ಎಂದು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ.
ಲಾಕ್ ಡೌನ್ ಸಡಲಿಕೆ ಯಾರ ಯಾರಿಗೆ ಇಲ್ಲಿದೆ ನೋಡಿ…..
ಯಾವ ಯಾವ ಅಂಗಡಿ ಇರುತ್ತೆ…?
* ನಗರ ಸಭೆ ಮತ್ತು ಪುರಸಭೆ,ಗ್ರಾಮ ಪಂಚಾಯತ್ ವ್ಯಾಪ್ತಿಗಳ ಲ್ಲಿ ಅಂಗಡಿಗಳನ್ನು ತೆರೆಯಬಹುದು.
* ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ರೀತಿಯ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.
ಇ-ಕಾರ್ಮಸ್ ಸೇವೆಗಳು- ಅತ್ಯಾವಶ್ಯಕ ವಸ್ತುಗಳ ಪೂರೈಕೆಗೆ ಅವಕಾಶ
ಯಾವ ಯಾವ ಅಂಗಡಿ ಇರುವುದಿಲ್ಲ…?
* ಮಲ್ಟಿ ಬ್ರ್ಯಾಂಡ್ ಮತ್ತು ಸಿಂಗಲ್ ಬ್ರ್ಯಾಂಡ್ ಮಾಲ್ ಗಳು ಬಂದ್.
* ಮಧ್ಯದ ಅಂಗಡಿಗಳಿಗಿಲ್ಲ ಅನುಮತಿ.
* ಸಿನಿಮಾ ಹಾಲ್, ಮಾಲ್ ಗಳು, ಶಾಪಿಂಗ್ ಕಾಂಪ್ಲೆಕ್ಸ್, ಜಿಮ್, ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಸ್ವಿಮ್ಮಿಂಗ್ ಪೂಲ್, ಮನರಂಜನಾ ಸ್ಥಳಗಳು, ಬಾರ್ ತೆಗೆಯುವ ಹಾಗಿಲ್ಲ.
ಯಾವ ನಿಯಮಗಳನ್ನು ಪಾಲಿಸಬೇಕು.?
* ಅಂಗಡಿಗಳು 50% ಕೆಲಸಗಾರರೊಂದಿಗೆ ಮಾತ್ರ ಕಾರ್ಯ ನಿರ್ವಹಿಸಬೇಕು.
* ಎಲ್ಲಾ ಕೆಲಸಗಾರರು ಮಾಸ್ಕ್ ಧರಿಸಬೇಕು.
* ಕಡ್ಡಾಯವಾಗಿ ಎಲ್ಲರೂ ಸಾಮಾಜಿಕ ಅಂತರ ಪಾಲಿಸಬೇಕು.
ಲಾಕ್ ಡೌನ್ ಸಡಲಿಕೆ ಯ ಆದೇಶವನ್ನು ಮಧ್ಯರಾತ್ರಿ ಹೊರಡಿಸಿದ ಕೇಂದ್ರ ಸರ್ಕಾರ ಹಾಟ್ ಸ್ಪಾಟ್ ಮತ್ತು ಕಂಟೇನ್ಮೆಂಟ್ ಝೋನ್ ಗಳಲ್ಲಿ ಯಾವುದೇ ವಿನಾಯಿತಿ ನೀಡಿಲ್ಲ ಆದರೆ ಈ ಆದೇಶಕ್ಕೆ ವಿರೋಧವು ವ್ಯಕ್ತವಾಗಿದೆ..