IMG 20210130 WA0034

ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಂಗ್ರಹ ಅಭಿಯಾನಕ್ಕೆ ಡಿವಿಎಸ್ ಚಾಲನೆ

Genaral STATE

ಬೆಂಗಳೂರು, ಜನವರಿ 30 – ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕಾಗಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಇಂದು
ನಿಧಿ ಸಂಗ್ರಹ ಅಭಿಯಾನಕ್ಕೆ ಬಿಜಿಪಿ ಹಿರಿಯ ನಾಯಕರಾದ ಕೇಂದ್ರ ಸಚಿವ ಶ್ರೀ ಡಿ ವಿ ಸದಾನಂದ ಗೌಡ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಂಘ ಪರಿವಾರದ ನೇತೃತ್ವದಲ್ಲಿ ನಡೆದ ಅಯೋಧ್ಯೆ ಆಂದೋಲನವು ಭಾರತೀಯ ಸಮಾಜದಲ್ಲಿ ಜಾಗ್ರತಿ ಒಗ್ಗಟ್ಟು, ಸಾಮರಸ್ಯ ಮೂಡಿಸಿತು. ದೇಶಭಕ್ತಿಯನ್ನು ಜಾಗ್ರತಗೊಳಿಸಿತು. ಭಾರತ ದೇಶದಲ್ಲಿ ಹಲವು ಪ್ರಾಂತ, ವರ್ಗ, ಭಾಷೆ, ಆಚಾರ- ವಿಚಾರಗಳು ಇವೆ. ಆದರೆ ದೇಶದಲ್ಲಿ ಐಕ್ಯತೆ ಸಾಧಿಸುವ ಶಕ್ತಿ ಅಯೋಧ್ಯೆ ಶ್ರೀರಾಮಚಂದ್ರನಿಗಿದೆ.
ದೇಶದ ಸರ್ವೋಚ್ಛ ನ್ಯಾಯಾಲಯವು ರಾಮಜನ್ಮಭೂಮಿ ಪರವಾಗಿ ತೀರ್ಪು ನೀಡಿತು.
ನಮ್ಮ ಸುದೈವಕ್ಕೆ ಶ್ರೀ ನರೇಂದ್ರ ಮೊದಿಯವರು ನೇತೃತ್ವದ ಬಿಜೆಪಿ ಸರ್ಕಾರ ಇದ್ದಾಗಲೇ ಈ ತೀರ್ಪು ಬಂತು. ಹಾಗೆಯೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಅಗುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದರು.
ಸರ್ಕಾರವು ಸಂವಿಧಾನದ 370ನೇ ಪರಿಚ್ಛೇದವನ್ನು ರದ್ದುಗೊಳಿಸಿ ಜಮ್ಮು-ಕಾಶ್ಮೀರವನ್ನು ದೇಶದಲ್ಲಿ ಎಲ್ಲರೀತಿಯಿಂದಲೂ ಐಕ್ಯಗೊಳಿಸುವ ಕೆಲಸಮಾಡಿದೆ ಎಂದು ಅವರು ಹೇಳಿದರು

IMG 20210130 WA0035
ನಿಧಿ ಸಂಗ್ರಹ ಅಭಿಯಾನಕ್ಕೆ ಮಾರ್ಗದರ್ಶನ ಮಾಡಿದ ಸಂಘದ ಹಿರಿಯರಾದ ಶ್ರೀಧರ್ ಜೀ ಈ ಸಂದರ್ಭದಲ್ಲಿ ಮಾತನಾಡಿದರು.
ಸಂಘ ಪರಿವಾರದ ಕಾರ್ಯಕರ್ತರು ಪ್ರತಿಯೊಂದು ವಾರ್ಡಿನ ಪ್ರತಿಯೊಬ್ಬರ ಮನೆಗೂ ತೆರಳಿ ಮಂದಿರ ನಿರ್ಮಾಣದ ಬಗ್ಗೆ ಇನ್ನಷ್ಟು ಅರಿವು ಮೂಡಿಸಬೇಕು. ಜನಸಾಮಾನ್ಯರು ಪ್ರೀತಿಯಿಂದ ನೀಡುವ ಎಷ್ಟೇ ಸಣ್ಣ ಮೊತ್ತವಾದರೂ ಅಷ್ಟೇ ಪ್ರೀತಿಯಿಂದ ಸ್ವೀಕರಿಸಬೇಕು. ಈ ಮಹತ್ಕಾರ್ಯದಲ್ಲಿ ತಮ್ಮದೂ ಪಾಲಿದೆ ಎಂಬ ಅಭಿಮಾನ ಅವರಲ್ಲಿ ಉಂಟಾಗುವುದು ಮುಖ್ಯ ಎಂದು ಎಂದು ಹೇಳಿದರು.
ಶ್ರೀ ಸದಾನಂದ ಗೌಡ, ಅಂಬೇಡ್ಕರ್ ನಿಗಮದ ಅಧ್ಯಕ್ಷ ಶ್ರೀ ಮುನಿಕೃಷ್ಙ ಸೇರಿದಂತೆ ಹಲವು ಪ್ರಮುಖರು ಈ ಸಂದರ್ಭದಲ್ಲಿ ಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಿಸಿದರು.
ಬೆಂಗಳೂರು ಉತ್ತರ ಜಿಲ್ಲೆಯಲ್ಲಿ ಸಂಘದ ಮಾರ್ಗದರ್ಶನದಲ್ಲಿ ಜಿಲ್ಲಾ ಮತ್ತು ಮಂಡಲ ಪ್ರಮುಖರು ಸಭೆಸೇರಿ ನಿಧಿಸಂಗ್ರಹ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲು ಅಗತ್ಯ ಕ್ರಮಕೈಗೊಳ್ಳಲು ನಿರ್ಧರಿಸಲಾಯಿತು.
ಸಚಿವರಾದ ಶ್ರೀ ಕೆ. ಗೋಪಾಲಯ್ಯ, ಶಾಸಕರಾದ ಸಂಜೀವ್ ಮಠಂದೂರ್, ಡಾ ವೈ ಎನ್ ನಾರಾಯಣಸ್ವಾಮಿ ಹಾಗೂ ಶ್ರೀ ಪ್ರತಾಪಸಿಂಹ ನಾಯಕ, ಜಿಲ್ಲಾಧ್ಯಕ್ಷ ಶ್ರೀ ಬಿ ನಾರಾಯಣ, ಮಾಜಿ ಉಪಮಹಾಪೌರ ಶ್ರೀ ಎಸ್ ಹರೀಶ್, ಮಾಜಿ ಶಾಸಕ ಶ್ರೀ ನೆ ಲ ನರೇಂದ್ರ ಬಾಬು ಮತ್ತಿತರ ಪ್ರಮುಖರು ಪಾಲ್ಗೊಂಡರು.