images 6

ಹುಕ್ಕಾಬಾರ್‍ಗಳ ನಿಷೇಧಕ್ಕೆ ಚಿಂತನೆ….!

STATE Genaral

ಹುಕ್ಕಾಬಾರ್‍ಗಳ ನಿಷೇಧಕ್ಕೆ ಚಿಂತನೆ – ಸಚಿವ ಬಸವರಾಜ ಬೊಮ್ಮಾಯಿ
ಬೆಂಗಳೂರು, ಫೆಬ್ರವರಿ 02(ಕರ್ನಾಟಕ ವಾರ್ತೆ):
ರಾಜ್ಯದಲ್ಲಿ ಹುಕ್ಕಾಬಾರ್‍ಗಳನ್ನು ನಿಷೇಧಿಸಲು  ಪರಿಶೀಲನೆ ನಡೆದಿದೆ. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ತಲೆ ಎತ್ತಿರುವ ಹುಕ್ಕಾಬಾರ್‍ಗಳನ್ನು ನಿಷೇಧಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ವಿಧಾನ ಸಭೆಯಲ್ಲಿ ತಿಳಿಸಿದರು.

IMG 20210202 223104
ಇಂದು ಸದನದಲ್ಲಿ ಶಾಸಕಿ ಸೌಮ್ಯ ರೆಡ್ಡಿ ಅವರು, ಇತ್ತೀಚಿಗೆ ಡ್ರಗ್ಸ್ ಮತ್ತು ಹುಕ್ಕಾ ಬಾರ್ ಕೆಫೆಗಳಿಗೆ ಯುವಕರು ಹೆಚ್ಚಾಗಿ ಮಾರು ಹೋಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೆ ಹಾಗೂ ಇತರೆ ರಾಜ್ಯಗಳು ಡ್ರಗ್ಸ್ ಮತ್ತು ಹುಕ್ಕಾ ಬಾರ್ ಕೆಫೆಗಳನ್ನು ನಿಷೇಧಿಸಿರುವ ರೀತಿ ರಾಜ್ಯದಲ್ಲಿ ಡ್ರಗ್ಸ್‍ಗಳನ್ನು ನಿಷೇಧಿಸುವ ಕುರಿತಂತೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು ಹುಕ್ಕಾಬಾರ್‍ಗಳನ್ನು ನಿಷೇಧಿಸುವ ಬಗ್ಗೆ ಈಗಾಗಲೇ ಪರಿಶೀಲನೆ ನಡೆಯುತ್ತಿದೆ.  ಬೇರೆ ಬೇರೆ ರಾಜ್ಯಗಳು ಹುಕ್ಕಾಬಾರ್‍ಗಳನ್ನು ನಿಷೇಧಿಸುವ ಸಂಬಂಧ  ಯಾವ ಕ್ರಮ ತೆಗೆದುಕೊಂಡಿದ್ದಾರೆ ಹಾಗೂ ಇದಕ್ಕೆ ತೆಗೆದುಕೊಂಡಿರುವ ಕ್ರಮಗಳ ಕುರಿತಂತೆ ಅಧ್ಯಯನ ನಡೆಸಲು ಅಧಿಕಾರಿಗಳಿ ಸೂಚನೆ ನೀಡಿದ್ದೇನೆ ಹಾಗೂ ಬೇರೆ ರಾಜ್ಯಗಳ ಕಾನೂನನ್ನು ಪರಿಶೀಲಿಸಿ  ಮುಂದುವರೆಯುವುದಾಗಿ ತಿಳಿಸಿದರು.
ಸರ್ಕಾರದ ಜೊತೆಗೆ ಸಾರ್ವಜನಿಕರು ಕೈಜೋಡಿಸಬೇಕು. ಗಾಂಜಾ, ಡ್ರಗ್ಸಗಳ ಹಾವಳಿ ಹೆಚ್ಚಾಗಿರುವದರಿಂದ ಪೋಷಕರಿಂದ ಹಿಡಿದು ಎಲ್ಲರೂ ಸಹಕಾರ ನೀಡಬೇಕು ಎಂದು ತಿಳಿಸಿದರು.