IMG 20210201 122600 scaled

ಸಮತೋಲನ ಬಜೆಟ್ – ಎಫ್‍ಕೆಸಿಸಿಐ

STATE Genaral

 

ಬೆಂಗಳೂರು: – ಕೋವಿಡ್ ಅವಧಿಯ ನಂತರದ “ಒಟ್ಟಾರೆ ಸಮತೋಲನ ಬಜೆಟ್ 2021-22, ಎಂದು ಎಫ್‍ಕೆಸಿಸಿಐ ಅಧ್ಯಕ್ಷರು ತಿಳಿಸಿದರು.

ಆತ್ಮನಿರ್ಭರ್ ಪ್ಯಾಕೇಜ್‍ಗಳನ್ನು ಮುಂದುವರಿಸುತ್ತಾ ಮಾನ್ಯ ಹಣಕಾಸು ಸಚಿವೆ ಶ್ರೀಮತಿ. ನಿರ್ಮಲಾ ಸೀತಾರಾಮನ್ ಅವರು ಇಂದು ಕೇಂದ್ರ ಬಜೆಟ್ ಮಂಡಿಸಿದರು

ಕೋವಿಡ್ ನಂತರದ ಎಂಎಸ್‍ಎಂಇಗಳಿಗೆ ಹೆಚ್ಚಿನ ಪರಿಹಾರ ಕ್ರಮಗಳನ್ನು ಫೆಡರೇಷನ್ ನಿರೀಕ್ಷಿಸಿತು. ನಿರೀಕ್ಷೆಯಂತೆ ಆರೋಗ್ಯ ಕ್ಷೇತ್ರವು ಈ ಬಜೆಟ್‍ನಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಮತ್ತು ಈ ನಿಟ್ಟಿನಲ್ಲಿ ಸಾಕಷ್ಟು ಹಂಚಿಕೆ ಮಾಡಲಾಗಿದೆ ಒಂದು ತೃಪ್ತಿಕರ ಸಂಗತಿಯೆಂದರೆ ಸಾಮಾನ್ಯ ಜನರಿಗೆ ಹೆಚ್ಚುವರಿ ತೆರಿಗೆ/ಸೆಸ್ ಹೊರೆಯಾಗದೇ ಮತ್ತು ಹಿಂದಿನ ತೆರಿಗೆ ರಚನೆಯನ್ನು ಹಾಗೆ ಉಳಿಸಿಕೊಳ್ಳಲಾಗಿದೆ.

ಕೋವಿಡ್ ವಿರುದ್ಧದ ನಮ್ಮ ಹೋರಾಟದಲ್ಲಿ ರೂ 35,000 ಕೋಟಿಗಳನ್ನು ಉಚಿತ ವ್ಯಾಕ್ಸಿನೇಷನ್‍ಗಾಗಿ ಮೀಸಲಿಡಲಾಗಿದೆ, ಇದು ಜಾಗತಿಕವಾಗಿ ವಿಶಿಷ್ಟವಾಗಿದೆ.

ಪ್ರಮುಖ ಪರಿಹಾರಗಳು ಮತ್ತು ಹೊಸ ಯೋಜನೆಗಳನ್ನು ಘೋಷಿಸಲು ಸರ್ಕಾರದ ಕೈಗಳನ್ನು ಕಟ್ಟಲಾಗಿತ್ತು. ಅದಾಗ್ಯೂ, ರೂ 1.75 ಲಕ್ಷ ಕೋಟಿಗಳ ಬೃಹತ್ ಹೂಡಿಕೆ ಯೋಜನೆ ಮತ್ತು ಬಂದರು ನಿರ್ವಹಣೆಯ ಖಾಸಗೀಕರಣ ಮತ್ತು ಮೂಲಸೌಕರ್ಯ ಬಾಂಡ್‍ಗಳ ವಿತರಣೆ ಜೊತೆಗೆ ವಿಮಾ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆ ಮಿತಿಯನ್ನು 74% ಕ್ಕೆ ಏರಿಸುವುದು ಪ್ರಮುಖ ಸುಧಾರಣಾ ಪ್ರಕಿಯೆಗಳು.

ದೇಶದ ಪ್ರಮುಖ ಉದ್ಯೋಗದಾತರಾಗಿರುವ ಎಂಎಸ್‍ಎಂಇಗೆ ಈ ಸವಾಲಿನ ಕಾಲದಲ್ಲಿ ಹ್ಯಾಂಡ್‍ಹೋಲ್ಡಿಂಗ್ ಅಗತ್ಯವಿದೆ ನಿರೀಕ್ಷೆಸಿದಂತೆ ಈ ವಲಯಕ್ಕೆ ಹೆಚ್ಚಿನ ಪರಿಹಾರ ಒದಗಿಸಿಲ್ಲ.

ಸ್ಟೀಲ್‍ಸ್ಕ್ರ್ಯಾಪ್ ಸೇರಿದಂತೆ ಉಕ್ಕಿನ ಆಮದು ಸುಂಕದ ಇಳಿಕೆಯಿಂದ ಇತ್ತೀಚಿನ ದಿನಗಳಲ್ಲಿ ಗಗನಕ್ಕೇರಿರುವ ಉಕ್ಕಿನ ಬೆಲೆಯನ್ನು ತಗ್ಗಿಸಬಹುದಾಗಿದೆ.

ಈ ಕ್ರಮವನ್ನು ಬ್ಯಾಕಪ್ ಮಾಡಲು, ಸರ್ಕಾರವು ಯಾವುದೇ ಸ್ಥಳೀಯ ಕಾರ್ಟಲೈಸೇಷನ್ ಮೇಲೆ ನಿಗಾ ಇಡಬೇಕು ಮತ್ತು ಎಂಎಸ್‍ಎಂಇ ಗಳಿಗೆ ರಿಯಾಯಿತಿ ದರದಲ್ಲಿ ಉಕ್ಕಿನ ಸರಬರಾಜನ್ನು ಚಾನಲ್ ಮುಖಾಂತರ ಸರಬರಾಜು ಮಾಡಬೇಕು.

ಏಳು ಮೆಗಾ ಜವಳಿ ಪಾರ್ಕ್‍ಗಳಿಗೆ ಅವಕಾಶ ಕಲ್ಪಿಸುವ ಘೋಷಣೆ ಸ್ವಾಗತಾರ್ಹ.

ಹೊಸ ಶಿಕ್ಷಣ ನೀತಿ 2020 ಗೆ ಸೂಕ್ತ ಮಾನ್ಯತೆ ನೀಡುವ ಸಲುವಾಗಿ, ಈ ಯೋಜನೆಯಡಿ 15,000 ಕ್ಕೂ ಹೆಚ್ಚು ಶಾಲೆಗಳನ್ನು ಗುಣಾತ್ಮಕವಾಗಿ ಬಲಪಡಿಸುವುದಾಗಿ ಸರ್ಕಾರ ಘೋಷಿಸಿದೆ.

ಹಣಕಾಸಿನ ಕೊರತೆ 2021-22 ಅನ್ನು ಹಿಂದಿನ 9.5% ರಿಂದ ಜಿಡಿಪಿಯ 6.8% ಎಂದು ನಿಗಧಿಪಡಿಸಲಾಗಿದೆ. ಕನಿಷ್ಠ ಬೆಂಬಲ ಬೆಲೆ ಹೆಚ್ಚಳವನ್ನು ಹಣಕಾಸು ಸಚಿವರು ಘೋಷಿಸಿದ್ದು ಇದು ರೈತರಿಗೆ ಸ್ವಾಗತಾರ್ಹ ಸಂಕೇತವಾಗಿದೆ.

ಪ್ರತಿದಿನ ಪೆಟ್ರೋಲಿಯಂ ಬೆಲೆ ಏರಿಕೆ ಬಹುತೇಕ ಸಾಮಾನ್ಯ ಪ್ರಕ್ರಿಯೆ ಆಗಿದೆ. ಪ್ರೆಟೋಲಿಯಂ ಬೆಲೆಯನ್ನು ಕಡಿಮೆ ಮಾಡಲು ವಿವಿಧ ತೆರಿಗೆಗಳು ಮತ್ತು ಸುಂಕವನ್ನು ಕಡಿಮೆ ಮಾಡುವ ಬಗ್ಗೆ ಯೋಜಿಸಬೇಕಾಗಿರುವುದು ಪ್ರಮುಖ ಅಂಶವಾಗಿದೆ.

ಡಿಜಿಟಲ್ ವಹಿವಾಟುಗಳನ್ನು ಮತ್ತುಷ್ಟು ಉತ್ತೇಜಿಸಲು ಮತ್ತು ಅನುಸರಣೆ ಹೊರೆಯನ್ನು ಕಡಿಮೆ ಮಾಡಲು, ಮೌಲ್ಯಮಾಪಕ ತನ್ನ 95% ಹಣಕಾಸಿನ ವಹಿವಾಟುಗಳನ್ನು ಡಿಜಿಟಲ್ ಲಾಗಿ ಪೂರ್ಣಗೊಳಿಸಿದಲ್ಲಿ ಅಂತಹ ವ್ಯಕ್ತಿಗಳಿಗೆ ತೆರಿಗೆ ಲೆಕ್ಕಪರಿಶೋಧನೆಯ ಮಿತಿಯನ್ನು 5 ಕೋಟಿಗಳಿಂದ 10 ಕೋಟಿ ರೂ. ಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ.

ಕರ್ನಾಟಕ ರಾಜ್ಯದ ಮಟ್ಟಿಗೆ, ಬೆಂಗಳೂರು ಮೆಟ್ರೊಗೆ ರೂ 14,788 ಕೋಟಿ ಹಂಚಿಕೆ ಮಹತ್ವದ ಘೋಷಣೆಯಾಗಿದೆ. ಮೂಲಸೌಕರ್ಯ ಯೋಜನೆಗಳು ಮತ್ತು ರೈಲ್ವೆ ಮಾರ್ಗ ವಿಸ್ತರಣೆಗಳಲ್ಲಿ, ರಾಜ್ಯಕ್ಕೆ ಸರಿಯಾದ ಆದ್ಯತೆ ನೀಡಿಲ್ಲ.

CGST ಕೇಂದ್ರ ಕಾಯಿದೆ ಅಡಿಯಲ್ಲಿ GST Form 9C ಸಲ್ಲಿಸುವ ಪ್ರಕ್ರಿಯೆಯನ್ನು ರದ್ದುಪಡಿಸಿ ಅದರ ಬದಲು ಸ್ವಂತ ಡಿಕ್ಲೆರೇಶನ್ ಸಲ್ಲಿಸಲು ಅವಕಾಶ ಮಾಡಿರುವುದು ಶ್ಲಾಘನೀಯ.

ಆದಾಯ ತೆರಿಗೆ ನಿರ್ಧಾರವನ್ನು ಮರು ಪರಿಶೀಲಿಸಲು ಮೊದಲಿನ 6 ವರ್ಷಗಳ ಕಾಲಾವಧಿಯನ್ನು 3 ವರ್ಷಕ್ಕೆ ಇಳಿಸಿರುವುದು ಒಂದು ಸ್ವಾಗತಾರ್ಹ ವಿಷಯ.

ಹಿರಿಯ ನಾಗರಿಕರಿಗೆ ತೆರಿಗೆ ಪರಿಹಾರಗಳು, ಮುಖರಹಿತ ನ್ಯಾಯಮಂಡಳಿ ವಿಚಾರಣೆಗಳು ಮತ್ತು 3 ವರ್ಷಗಳ ಆದಾಯ ತೆರಿಗೆಗೆ ನಿರ್ಬಂಧಗಳನ್ನು ಹಾಗೂ ಮೌಲ್ಯಮಾಪನಗಳನ್ನು ತೆರಯುವುದು ಮತ್ತು ಪ್ರಾರಂಭಿಕ ತೆರಿಗೆ ರಿಯಾಯಿತಿಗಳನ್ನು ಮುಂದುವರಿಸುವುದು ಸ್ವಾಗತಾರ್ಹ.

ಬಜೆಟ್ ಕರ್ನಾಟಕ ರಾಜ್ಯಕ್ಕೆ ಕಡಿಮೆ ಉತ್ತೇಜನಕಾರಿಯಾಗಿದೆ ಆದರೆ ಈ ಸವಾಲಿನ ಕಾಲದಲ್ಲಿ ಉತ್ತಮ ಸಮತೋಲನ ಕಾಯಿದೆ ಯಾಗಿದೆ . ಎಂದರು.