ಬೆಂಗಳೂರು ಏ ೨೭:- ಕೋವಿಡ್ ೧೯ ನಿಯಂತ್ರಿಸಲು ದೇಶದಾದ್ಯಂತ ಜಾರಿಗೊಳಿಸಿರುವ ಲಾಕ್ ಡೌನ್ ಅನ್ನು ಮೇ ೧೫ ವರೆಗೆ ವಿಸ್ತರಣೆ ಯಾಗಲಿದೆ ಎಂದು ಮುಖ್ಯಂತ್ರಿ ಸುಳಿವು ನೀಡಿದ್ದಾರೆ.
ಇಂದು ಪ್ರಧಾನಿ ನರೇಂದ್ರ ಮೋದಿ ನಡೆಸಿದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು ಈ ಸಂವಾದದಲ್ಲಿ ಯಡಿಯೂರಪ್ಪ ಪಾಲ್ಗೊಂಡಿದ್ದರು. ಬಳಿಕ ಮಾತನಾಡಿದ ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿ ಕೊರೋನಾ ನಿಯಂತ್ರಣ ಲಾಕ್ ಡೌನ್ ಪರಿಸ್ಥಿತಿ ರಾಜ್ಯದ ಸ್ಥಿತಿ ಗತಿಗಳನ್ನು ತೀಳಿದು ಕೊಂಡರು. ರಾಜ್ಯದಲ್ಲಿ ಸೋಂಕು ಹರಡದಂತೆ ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದೇವೆ, ಮುಂದೆಯು ಇವುಗಳನ್ನು ವಿಸ್ತರಿಸುತ್ತೇವೆ. ಹೀಗಾಗಿ ಮೇ ೩ ನಂತರವು ಎರಡು ವಾರಗಳ ಕಾಲ ಲಾಕ್ ಡೌನ್ ಸಾಧ್ಯತೆ ಇದೆ ಎಂದರು.
ಸಭೆಯಲ್ಲಿ ಬಹುತೇಕ ಮುಖ್ಯಮಂತ್ರಿ ಗಳು ಕೊರೋನಾ ಸೋಂಕು ಹರಡುವಿಕೆ ಇನ್ನು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಲಾಕ್ ಡೌನ್ ಮುಂದುವರೆಸುವುದೇ ಸೂಕ್ತ ಎಂಬ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ. ಪ್ರಧಾನಿ ಮೋದಿ ಕೂಡ ಲಾಕ್ ಡೌನ್ ಮುಂದುವರೆಸುವ ಬಗ್ಗೆ ಸುಳಿವು ನೀಡಿದ್ದಾರೆ. ಲಾಕ್ ಡೌನ್ ೦೩ ಹದಿನೈದು ದಿ ವಿಸ್ತರಣೆ ಮಾಡುವ ಸಾಧ್ಯತೆಗಳಿವೆ.
ರಾಜ್ಯದಲ್ಲಿ ಲಾಕ್ ಡೌನ್
ಮೇ ೩ ರ ನಂತರವೂ ಕರ್ನಾಟಕ ಸಂಪೂರ್ಣ ಲಾಕ್ ಡೌನ್ ಹಾಗುತ್ತಾ ಇಲ್ಲವಾ ಎಂಬ ಅನುಮಾನ ಪ್ರತಿಯೊಬ್ಬರಲ್ಲೂ ಕಾಡುತ್ತಿದ್ದೆ ಪ್ರಧಾನಿ ಮೋದಿಯವರು ಸಿಎಂ ಗಳ ಸಭೆಯಲ್ಲಿ ಕೊರೋನಾ ಸೋಂಕಿತರನ್ನು ಆದರಿಸಿ ವಲಯಗಳಾಗಿ ವಿಂಗಡಿಸಿ ಎಂದಿದ್ದರು
ಕರ್ನಾಟಕದಲ್ಲಿ ಸರ್ಕಾರವು ಸೋಕಿತರ ಆಧಾರದಲ್ಲಿ ಕೆಂಪು, ಕೇಸರಿ, ಹಳದಿ, ಹಸಿರು ನಾಲ್ಕು ವಲಯಗಳನ್ನು ವಿಂಗಡಿಸಿದೆ ಇದರ ಆಧಾರದಲ್ಲೆ ಲಕ್ ಡೌನ ಇರಲಿದೆಎನ್ನಲಾಗುತ್ತಿದೆ ಚಾಮರಾಜನಗರ,ರಾಮನಗರ,ಹಾಸನ,,ಚಿಕ್ಕಮಂಗಳೂರು.ಉಡುಪಿ,ಶಿವಮೊಗ್ಗ,ಚಿತ್ರದುರ್ಗ,ಹಾವೇರಿ,ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳು ಹಸಿರು ವಲಯದಲ್ಲಿದ್ದು ಲಾಕ್ ಡೌನ್ ಸಡಲಿಕೆ ಸಿಗಲಿದೆ ಎನ್ನಲಾಗುತ್ತಿದೆ. ರೆಡ್ ಜೋನ್ ಸಂಪೂರ್ಣ ಬಂದ್ ಆಗಲಿದ್ದು ಇತರೆ ವಲಯಗಳಿಗೆ ಕೆಲವು ವಿನಾಯತಿ ಗಳೊಂದಿಗೆ ಲಾಕ್ ಡೌನ್ ಇರಲಿದೆಯಂತೆ.