ಬೆಂಗಳೂರು ಏ ೨೭: ಲಾಕ್ ಡೌನ್ ನಿಂದಾಗಿ ರಾಜ್ಯದಲ್ಲಿ ಹಣ್ಣು,ತರಕಾರಿ ಹೂವು ಬೆಳೆದು ನಷ್ಟದಲ್ಲಿರುವ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಜೆಡಿ ಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ದೇವೆಗೌಡರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಅವರು ಹಣ್ಣು, ತರಕಾರಿ, ಹೂವು ಬೆಳೆದು ರೈತರು ತೀವ್ರ ಸಂಕಷ್ಟಕ್ಕೆ ಹೊಳಗಾಗಿದ್ದಾರೆ. ಸ್ಥಳೀಯ ಮಾರುಕಟ್ಟೆ ಇಲ್ಲ ಅತ್ತ ಬೇರೆ ರಾಜ್ಯ ಹಾಗೂ ಬೇರೆ ದೇಶಗಳಿಗೆ ರಫ್ತು ಸಾಧ್ಯವಾಗುತ್ತಿಲ್ಲ.ಹಳೆ ಮೈಸೂರು, ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಭಾಗದಲ್ಲಿ ಲಕ್ಷಾಂತರ ಎಕರೆಗಳಲ್ಲಿ ಬೆಳೆದಿದ್ದ ಹಣ್ಣು, ಹೂವು, ತರಕಾರಿ ಬೇಡಿಕೆ ಇಲ್ಲದೆ ಲಕ್ಷಾಂತರ ರೂ ವೆಚ್ಚಮಾಡಿದ್ದ ರೈತರು ಇಂದು ಸಾಲಗಾರರಾಗಿದ್ದಾರೆ.
ಹಣ್ಣು,ಹೂವು, ತರಕಾರಿ ಬೆಳೆದ ರೈತರ ನೆರವಿಗೆ ಬರಬೇಕು ಲಾಕ್ ಡೌನ್ ನಿಂದ ನಷ್ಠಗೊಂಡಿರುವ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು, ಬಜೆಟ್‌ನಲ್ಲಿ ಘೋಷಿಸಿರುವ ಹಲವು ಯೋಜನೆಗಳನ್ನು ಕೈ ಬಿಟ್ಟರು ಸರಿಯೆ ಅನ್ನದಾತರ ಕೈ ಬಿಡಬೇಡಿ ರೈತರ ಪರ ಕಾಳಜಿ ಹೊಂದಿರುವನ ತಮ್ಮಿಂದ ರೈತರು ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.ಆರ್ಥಿಕವಾಗಿ ಸಂಕಷ್ಟಗೊಂಡಿರುವ ರೈತರ ನೆರವಿಗೆ ಮುಂದಾಗಿ ಇಲ್ಲದಿದ್ದರೆ ಆ ಕುಟುಂಬಗಳು ಜಮೀನು ಮಾರಿ ಕೃಷಿ ಬಿಡುವ ಸ್ಥಿತಿ ನಿರ್ಮಾಣವಾಗಲಿದೆ ಎಂಬ ಆತಂಕವನ್ನು ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ