ಬೆಂಗಳೂರು ಏ ೨೮ :- ಕೋವಿಡ್ ೧೯ ನಿಂದ ರಾಜ್ಯದಲ್ಲಿ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ನೇಕಾರ,ಮಡಿವಾಳ, ಕುಂಬಾರ, ಚಮ್ಮಾರ, ಸವಿತಾ ಸಮಾಜ ದವರು ಸಾಂಪ್ರದಾಯಿಕ ವೃತ್ತಿಗಳನ್ನು ಮಾಡಲಾಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ ಇವರಿಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ವಿಧಾನಸೌಧದಲ್ಲಿಂದು ಸಾಂಪ್ರದಾಯಿಕ ವೃತ್ತಿಪರರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಆ ಸಮುದಾಯದ ಮುಖಂಡರ ಸಭೆ ನಡೆಸಿ ಇವರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು. ನಂತರ ಮಾದ್ಯಮದೊಂದಿಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಾಗಿ ಒಂದು ತಿಂಗಳಿಗಿಂದಲ್ಲೂ ಹೆಚ್ಚಾಗಿದೆ. ದಿನನಿತ್ಯದ ದುಡಿಮೆ ಆಧರಿಸಿ ಜೀವನ ಮಾಡುವ ಸಾಂಪ್ರದಾಯಿಕ ವೃತ್ತಿಪರರ ಜೀವನ ದುಸ್ತರವಾಗಿದೆ ಇವರ ನೆರವಿಗೆ ರಾಜ್ಯ ಸರ್ಕಾರ ಧಾವಿಸಿ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಆಗ್ರಹಿಸಿದರು.
ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನ ಪರಿಷತ್ ಸದಸ್ಯರು ಗಳಾದ ಎಂಸಿ ವೇಣುಗೋಪಾಲ್ ಹಾಗೂ ಎಂ ಡಿ ಲಕ್ಷಿನಾರಾಯಣ ಭಾಗವಹಿಸಿದ್ದರು.