ಬೆಂಗಳೂರು ಏ ೨೮:- ರಾಜ್ಯದ ೧೪ ಜಿಲ್ಲೆಗಳಲ್ಲಿ ಮೇ ೩ ರ ನಂತರ ಲಾಕ್ ಡೌನ್ ಸಡಿಲಗೊಳಿಸಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಆದೇಶ ಹೊರಡಿಸಿದೆ. ಯಾವುದು ಕೇಸ್ ದಾಖಲಾಗದ ಗ್ರೀನ್ ಜೋನ್ ನಲ್ಲಿರುವ ಹದಿನಾಲ್ಕು ಜಿಲ್ಲೆಗಳಿಗೆ ಮಾತ್ರ ಸಡಲಿಕೆಯ ಸಿಹಿ ಸುದ್ದಿ ಸಿಕ್ಕಿದೆ..
ರಾಜ್ಯದಲ್ಲಿ ಲಾಕ್ ಡೌನ್ ಪರಸ್ಥಿತಿ ಅವಲೋಕಿಸಲು ಇಂದು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಹಣಕಾಸು ಇಲಾಖೆ ಹಿರಿಯ ಅಧಿಕಾರಿಗಳ ಸಭೆನಡೆಯಿತು. ರಾಜ್ಯವು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಆರ್ಥಿಕ ಪುನಚ್ಚೇತನಕ್ಕೆ ಗ್ರೀನ್ ಜೋನ್ ನಲ್ಲಿ ಲಾಕ್ ಡೌನ್ ಸಡಿಲಿಕೆ ಮಡಬೇಕು ಎಂದು ಹಣಕಾಸು ಇಲಾಖೆಯ ಅಧಿಕಾರಿಗಳು ಸಿಎಂ ಬಿಎಸ್ ವೈ ಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಹದಿನಾಲ್ಲು ಜಿಲ್ಲೆಗಳಲ್ಲಿ ಆರ್ಥಿಕ ಪುನಚ್ಚೇತನಕ್ಕೆ ಒತ್ತು ನೀಡಿದ ಸರ್ಕಾರ
ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಗ್ರೀನ್ ಜೋನ್ ಗಳಾದ ರಾಯಚೂರು, ಶಿವಮೊಗ್ಗ,ಯಾದಗಿರಿ, ಕೊಪ್ಪಳ, ಹಾಸನ,ಚಿತ್ರದುರ್ಗ,ಚಿಕ್ಕಮಂಗಳೂರು,ಚಾಮರಾಜನಗರ, ರಾಮನಗರ,ಹಾವೇರಿ,ಕೋಲಾರ,ದಾವಣಗೆರೆ, ಉಡುಪಿ, ಮತ್ತು ಕೊಡಗಿಗೆ ಸಡಲಿಕೆ ಆದೇಶ ಅನ್ವಯವಾಗಲಿದೆ. ಕೈಗಾರಿಕೆಗಳು ಅಂಗಡಿಗಳನ್ನು ತರೆಯಬಹುದು ಆದರೆ ಸೂಪರ್ ಮಾರ್ಕೆಟ್, ಸಿನಿಮಾ ಥಿಯೇಟರ್,ಶಾಪಿಂಗ್ ಮಹಲ್ ಸಿಂಗಲ್ ಬ್ರಾಂಡ್ ಮಳಿಗೆಗಳಿಗೆ ಅವಕಾಶ ನೀಡಿಲ್ಲ. ಬೆಂಗಳೂರಿಗೆ ರಾಮನಗರ ಹೊಂದಿಕೊಂಡಿರುವುದರಿಂದ ಇಲ್ಲಿ ಕೈಗಾರಿಕೆ ಪ್ರಾರಂಭಕ್ಕೆ ಅನುಮತಿ ನೀಡಿಲ್ಲ.
ಗ್ರೀನ್ ಜೋನ್‌ನಲ್ಲಿರುವ ಜಿಲ್ಲೆಗಳಲ್ಲಿ ಬರುವ ವಿಶೇಷ ಆರ್ಥಿಕ ವಲಯ. ಕೈಗಾರಿಕಾ ವಲಯ, ರಫ್ತು ಆಧಾರಿತ ವಲಯ ಗಳಲ್ಲಿ ಕಾರ್ಯಾರಂಭಕ್ಕೆ ಅನುಮತಿ ನೀಡಲಾಗಿದೆ. ಇವರಿಗೆ ಕೆಲಸ ಮಾಡು ಜಾಗದಲ್ಲೆ ವಾಸ್ತ್ಯಕ್ಕೆ ಅವಕಾಶ ಮಾಡಿಕೊಡಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ಕಡ್ಡಾಯವಾಗಿ ಶೇ.೫೦ ಕಾರ್ಮಿಕರಿಗೆ ಕೆಲಸ ಮಾಡಲು ನೀಡಬೇಕು ಮತ್ತು ಸಾಮಾಜಿಕ ಅಂತರ ಪಾಲಿಸಬೇಕು ಎಂದು ಹೇಳಿದೆ.
ಇನ್ನು ಬಳ್ಳಾರಿ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಗದಗ್, ತುಮಕೂರು, ಚಿಕ್ಕಬಳ್ಳಾಪುರ,ಉತ್ತರಕನ್ನಡ, ಮತ್ತು ಧಾರವಾಡ ಜಿಲ್ಲೆ ಗಳಲ್ಲಿ ಕೊರೋನಾ ಪಾಜಿಟೀವ್ ಇಲ್ಲದ ತಾಲ್ಲೂಕು ವಿಂಗಡಿಸಿ ಕೈಗಾರಿಕೆಗಳು ಮತ್ತು ಅಂಗಡಿಗಳ ಪ್ರಾರಂಭ ಮಾಡುವ ನಿರ್ಧಾರವನ್ನು ತೆಗೆದು ಕೊಳ್ಳುವ ಅಧಿಕಾರವನ್ನು ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡಲಾಗಿದೆ.
ರೆಡ್ ಜೋನ್ ನಲ್ಲಿರು ಬೆಂಗಳೂರು ನಗರ ,ವಿಜಯಪುರ,ಬಾಗಲಕೋಟೆ.ಕಲಬುರಿಗಿ,ಬೀದರ್ ಮತ್ತು ದಕ್ಷಿಣ ಕನ್ನಡ. ಮೈಸೂರು,ಬೆಳಗಾವಿ ಲಾಕ್ ಡೌನ್ ಮುಂದುವರೆಯಲಿದೆ. ಮೇ ೩ ರ ನಂತರವು ಮದ್ಯ ಮಾರಾಟಕ್ಕೆ ಅವಕಾಶ ನೀಡಿಲ್ಲ. ಮೇ ೩ ರ ವರೆಗೆ ಲಾಕ್ ಡೌನ್ ರಾಜ್ಯಾದ್ಯಂತ ಮುಂದುವರೆಯಲಿದೆ.