ಬೆಂಗಳೂರು, ಏಪ್ರಿಲ್ 28 : ಕೇಂದ್ರ ಐ ಟಿ ಮತ್ತು ದೂರ ಸಂಪರ್ಕ ಖಾತೆ ಸಚಿವ ರವಿಶಂಕರ್ ಪ್ರಸಾದ್ ಅವರು ಮಂಗಳವಾರ ಐಟಿ ಕಂಪನಿಗಳಿಗೆ ಮನೆಯಿಂದ ಕೆಲಸಗಳನ್ನು ಜುಲೈ 31 ರವರೆಗೆ ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ. ರಾಜ್ಯಗಳ ಐಟಿ-ಬಿಟಿ ಸಚಿವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ಕರ್ನಾಟಕದ ಪರವಾಗಿ ಪಾಲ್ಗೊಂಡಿದ್ದರು
ಐಟಿ ಶೇ 85 ರಷ್ಟು ಕೆಲಸಗಳನ್ನು ಮನೆಯಿಂದಲೇ ಮಾಡಲಾಗುತ್ತಿದೆ. ಈ ಮೊದಲು ಮನೆಯಿಂದ ಕೆಲಸ ವನ್ನು ಏಪ್ರಿಲ್ 30 ರವರೆಗೆ ಮಾಡಲು ನಿರ್ದರಿಸಿತ್ತು . ವಿಡಿಯೋ ಕಾನ್ಫರೆನ್ಸ್ ಪಾಲ್ಗೊಂಡ ದೇಶದ ಎಲ್ಲಾ ಐಟಿ ಬಿಟಿ ಸಚಿವರು ಜುಲೈ 31ರ ತನಕ ಮನೆಯಿಂದಲೇ ಉದ್ಯೋಗಿಗಳು ಕೆಲಸ ಮಾಡಲು ಅವಕಾಶ ನೀಡಬೇಕು ಎಂದರು.
ಈ ಬೇಡಿಕೆಗೆ ಸ್ಪಂದಿಸಿದ ರವಿ ಶಂಕರ್ ಪ್ರಸಾದ್ ಅವರು, “ಪ್ರಸ್ತುತ ಸಂದರ್ಭದಲ್ಲಿ ಜುಲೈ 31ರ ತನಕ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಲಾಗುತ್ತದೆ. ಮುಂದಿನ ಪರಿಸ್ಥಿತಿಯನ್ನು ನೋಡಿಕೊಂಡು ತೀರ್ಮಾನ ಕೈಗೊಳ್ಳೋಣ” ಎಂದು ಹೇಳಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಸಾದ್, ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಎಲ್ಲಾ ರಾಜ್ಯಗಳ ಅತ್ಯುತ್ತಮ ಕಾರ್ಯತಂತ್ರಗಳನ್ನು ಹಂಚಿಕೊಳ್ಳುವಂತ ಆ್ಯಪ್ ಅನ್ನು ಅಭಿವೃದ್ಧಿಪಡಿಸಲು ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಮೋದಿ ವಿನಂತಿಸಿದ್ದಾರೆ. “ನಾವು ಈ ಸಲಹೆಯನ್ನು ಸ್ವೀಕರಿಸಿದ್ದೇವೆ. ಆ್ಯಪ್ ತಯಾರಿಸಲು ರಾಷ್ಟ್ರೀಯ ಇ-ಆಡಳಿತ ವಿಭಾಗ (ಎನ್‌ಇಜಿಡಿ) ಮತ್ತು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಯನ್ನು ಕೇಳಿದ್ದೇನೆ. ಎನ್‌ಇಜಿಡಿ ಮತ್ತು ಎನ್‌ಐಸಿ ಎರಡೂ ಮೂರು ದಿನಗಳಲ್ಲಿ ಅಪ್ಲಿಕೇಶನ್ ಅಭಿವೃದ್ಧಿಪಡಿಸಲು ಒಪ್ಪಿಕೊಂಡಿವೆ” ಎಂದು ಪ್ರಸಾದ್ ಹೇಳಿದರು.
ಕೋವಿಡ್ ೧೯ ನಿಂದ ಭಾರತಕ್ಕೆ ಹೆಚ್ಚು ಅವಕಾಶಗಳುಸಿಗುವ ಸಾಧ್ಯತೆಯಿದೆ, ಇಡೀ ವಿಶ್ವವೇ ಚೀನಾ ವಿರುದ್ಧ ಇವೆ, ಇದರ ಲಾಭ ವನ್ನು ಪಡೆಯಲು ಬಾರತ ಮುಂದಾಗಬೇಕಿದೆ. ಎಲೆಕ್ಟಾನಿಕ್ ವಸ್ತುಗಳ ಉತ್ಪಾದನೆ ಯ ಹೆಚ್ಚು ಅವಕಾಶಗಳು ತಂದು ಕೊಡುವ ಸಾಧ್ಯತೆಯಿದೆ.
ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಮತ್ತು ಮಂತ್ರಿಗಳಿಗೆ ಈ ಅವಕಾಶವನ್ನು ಸದುಪಯೋಗಪಡಿಸಿ ಕೊಳ್ಳಬೇಕು. ಕೇಂದ್ರ ವು ಪ್ರೋತ್ಸಾಹ ಧನಗಳನ್ನು ನೀಡಿದೆ ,ರಾಜ್ಯಗಳ ಸಹಕಾರ ಇದ್ದಲ್ಲಿ ಯಶಸ್ಸು ಕಾಣಬಹುದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಕೆಲಸ ಮಾಡಬೇಕು ಎಂದು ಮನವಿ ಮಾಡಿದರು,