unnamed

ಶ್ರೀ ಕ್ಷೇತ್ರ ಶಬರಿಮಲೈಗೆ ತೆರಳುವ ಭಕ್ತಾಧಿಗಳಿಗೆ ಕೇರಳ ಸರ್ಕಾರದ ಮಾರ್ಗಸೂಚಿ…

ಶ್ರೀ ಕ್ಷೇತ್ರ ಶಬರಿಮಲೈಗೆ ತೆರಳುವ ಭಕ್ತಾಧಿಗಳಿಗೆ ಕೇರಳ ಸರ್ಕಾರದ ಮಾರ್ಗಸೂಚಿ ಬೆಂಗಳೂರು, ನವೆಂಬರ್ 6 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯದಿಂದ ಕೇರಳ ರಾಜ್ಯದ ಶ್ರೀಕ್ಷೇತ್ರ ಶಬರಿಮಲೈಗೆ ತೆರಳುವ ಭಕ್ತಾಧಿಗಳು/ಯಾತ್ರಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಕೇರಳ ಸರ್ಕಾರದಿಂದ  ಮಾರ್ಗಸೂಚಿಗಳನ್ನು ಈ ಕೆಳಕಂಡಂತೆ  ಹೊರಡಿಸಲಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ. ಯಾತ್ರಾರ್ಥಿಗಳು   https://sabarimalaonline.org/    ವೆಬ್‍ಸೈಟ್‍ನ ಪೋರ್ಟಲ್‍ನಲ್ಲಿ ಕಡ್ಡಾಯವಾಗಿ ನೋವ್ಮದಣಿ ಮಾಡಿಕೊಂಡಿರುವವರಿಗೆ ಅನುವ್ಮತಿಸಿದ ನಂತರದಲ್ಲಿ ಮಾತ್ರ ಶಬರಿಮಲೈ ದರ್ಶನ್ಕೆ ಅವಕಾಶ ಕಲ್ಪಿಸಲಾಗುವುದು.  ಪ್ರಥಮವಾಗಿ ಪ್ರತಿ ದಿನ ಒಂದು ಸಾವಿರ ಯಾತ್ರಾರ್ಥಿಗಳಿಗೆ […]

Continue Reading
IMG 20201104 182533

Republic TV: ಅರ್ನಬ್ ಗೊಸ್ವಾಮಿ ಬಂಧನ…!

ಅರ್ನಬ್ ಗೊಸ್ವಾಮಿ ಬಂಧನ ಪತ್ರಿಕಾ ಸ್ವಾತಂತ್ರ್ಯದ ಮೇಲಿನ‌ ದಾಳಿಯೇ? ಅರ್ನಾಬ್ ಗೋಸ್ವಾಮಿಯ ಬಂಧನವಾಗಿರುವುದು ಕ್ರಿಮಿನಲ್ ಪ್ರಕರಣವೊಂದರಲ್ಲಿ, ಅದೂ ಆತ್ಮಹತ್ಯೆಗೈದ ವ್ಯಕ್ತಿಯೋರ್ವನ ಡೆತ್‍ನೋಟ್‍ನಲ್ಲಿ ಆತನ ಹೆಸರಿದ್ದ ಕಾರಣಕ್ಕೆ. ರಿಪಬ್ಲಿಕ್ ಚಾನಲ್ ಆರಂಭವಾಗುತ್ತಿದ್ದಾಗ, ಅನ್ವಯ ನಾಯ್ಕ್ ಎನ್ನುವ ವ್ಯಕ್ತಿ, ಚಾನ‍ಲ್‍ನ ಸ್ಟುಡಿಯೋ ವಿನ್ಯಾಸ ಮಾಡಿಕೊಟ್ಟಿದ್ದ. ಆದರೆ ಇದರ ಬಾಬ್ತಿನ Rs 5 ಕೋಟಿಗಿಂತಲೂ ಹೆಚ್ಚಿನ ಹಣವನ್ನು ಆತನಿಗೆ ಕೊಡದೇ ಅರ್ನಾಬ್ ಸತಾಯಿಸುತ್ತಿದ್ದ. ಕೊನೆಗೆ ಅನ್ವಯ ನಾಯ್ಕ್ ಆತ್ಮಹತ್ಯೆಗೆ ಶರಣಾಗಿ, ಆರ್ನಾಬ್, ಫಿರೋಜ್ ಶಾ ಹಾಗೂ ನಿತೇಶ್ ಶಾರ್ದಾ, ಈ ಮೂವರು […]

Continue Reading
IMG 20201024 212846

ಆದಾಯ ತೆರಿಗೆ ರಿಟರ್ನ್ಸ್ ಅವಧಿ ವಿಸ್ತರಣೆ….!

ಕೋವಿಡ್-19 ಸೋಂಕು ಭೀತಿಯಿಂದಾಗಿ ತೆರಿಗೆಪಾವತಿದಾರರು ನಿಗದಿತವಾಗಿ ಮತ್ತು ನಿಯಮಗಳಂತೆತೆರಿಗೆ ಪಾವತಿ ಕ್ರಮಗಳ ಪಾಲನೆಗೆ ಹಲವುಸವಾಲುಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರತೆರಿಗೆ ಮತ್ತು ಇತರ ಕಾನೂನುಗಳು(ಕೆಲವು ನಿಯಮಗಳಿಗೆವಿನಾಯಿತಿ) ಸುಗ್ರೀವಾಜ್ಞೆ-2020 ಅಡಿಯಲ್ಲಿ 31 ಮಾರ್ಚ್2020ಕ್ಕೆ ಸಲ್ಲಿಸಬೇಕಾಗಿದ್ದ ಕೆಲವೊಂದು ರಿಟರ್ನ್ಸ್ ಗಳಅವಧಿಯನ್ನು ವಿಸ್ತರಿಸಿದೆ. ಸುಗ್ರೀವಾಜ್ಞೆ ಬದಲಿಗೆ ಇದೀಗತೆರಿಗೆ ಮತ್ತು ಇತರೆ ಕಾನೂನುಗಳು(ಕೆಲವು ಅಂಶಗಳಿಗೆತಿದ್ದುಪಡಿ ಮತ್ತು ವಿನಾಯಿತಿ) ಕಾಯ್ದೆ ಜಾರಿಗೆ ಬಂದಿದೆ. ಸರ್ಕಾರ 2020ರ ಜೂನ್ 24ರಂದು ಅಧಿಸೂಚನೆಹೊರಡಿಸಿ, 2019-20ನೇ ಹಣಕಾಸು ವರ್ಷದ ಆದಾಯತೆರಿಗೆ ಪಾವತಿ ರಿಟರ್ನ್ಸ್ ಸಲ್ಲಿಕೆಗೆ ನೀಡಲಾಗಿದ್ದ ಗಡುವನ್ನು2020ರ ನವೆಂಬರ್ 30ರವರೆಗೆ ವಿಸ್ತರಿಸಿತ್ತು. ಹಾಗಾಗಿ2020ರ ಜುಲೈ 31ಕ್ಕೆ ಮತ್ತು 2020ರ ಅಕ್ಟೋಬರ್ 31ಕ್ಕೆಸಲ್ಲಿಸಬೇಕಿದ್ದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ 2020ರನವೆಂಬರ್ 30ರೊಳಗೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಅದರಂತೆ ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿತೆರಿಗೆ ಲೆಕ್ಕ ಪರಿಶೋಧನೆ ಸೇರಿದಂತೆ ನಾನಾ ಲೆಕ್ಕಪತ್ರಪರಿಶೋಧನಾ ವರದಿಗಳನ್ನು ಸಲ್ಲಿಸಲು ನೀಡಲಾಗಿದ್ದಗಡುವನ್ನು 2020ರ ಅಕ್ಟೋಬರ್ 31ರ ವರೆಗೆವಿಸ್ತರಿಸಲಾಗಿತ್ತು. ಇದೀಗ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ತೆರಿಗೆಪಾವತಿದಾರರಿಗೆ ಮತ್ತಷ್ಟು ಸಮಯಾವಕಾಶವನ್ನುನೀಡುವ ಉದ್ದೇಶದಿಂದ ಆದಾಯ ತೆರಿಗೆ ರಿಟರ್ನ್ಸ್ಸಲ್ಲಿಕೆಗೆ ನೀಡಿದ್ದ ಗಡುವನ್ನು ಮತ್ತೆ ವಿಸ್ತರಿಸಲುನಿರ್ಧರಿಸಲಾಗಿದೆ. ಆ ವಿವರ ಕೆಳಗಿನಂತಿದೆ: (ಎ)   ತೆರಿಗೆ ಪಾವತಿದಾರರಿಗೆ(ತಮ್ಮ ಪಾಲುದಾರರುಸೇರಿ) ಯಾರದು ಲೆಕ್ಕಪರಿಶೋಧನೆ ಆಗಿಲ್ಲವೋಅಂತಹವರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆನೀಡಲಾಗಿದ್ದ ಕೊನೆಯ ದಿನಾಂಕ, ಈ ಹಿಂದೆ 2020ರಅಕ್ಟೋಬರ್ 31ರ ವರೆಗೆ ಇದ್ದ ಗಡುವನ್ನು 2021ರಜನವರಿ 31ರ ವರೆಗೆ ವಿಸ್ತರಣೆ ಮಾಡಲಾಗಿದೆ. (ಬಿ)   ಯಾವ ತೆರಿಗೆ ಪಾವತಿದಾರರು, ಅಂತಾರಾಷ್ಟ್ರೀಯಮತ್ತು ನಿರ್ದಿಷ್ಟ ದೇಶೀಯ ವಹಿವಾಟುಗಳಿಗೆಸಂಬಂಧಿಸಿದಂತೆ ವರದಿಗಳು ಹಾಗೂ ಆದಾಯ ತೆರಿಗೆರಿಟರ್ನ್ಸ್ ಅನ್ನು ಸಲ್ಲಿಸಬೇಕಾಗಿದೆಯೋ ಅಂತಹವರಿಗೆ2020ರ ನವೆಂಬರ್ 30ರ ವರೆಗೆ ಇದ್ದ ಗಡುವನ್ನು 2021ರಜನವರಿ 31ರ ವರೆಗೆ ವಿಸ್ತರಿಸಲಾಗಿದೆ. (ಸಿ)    ಇತರೆ ತೆರಿಗೆ ಪಾವತಿದಾರರಿಗೆ ಆದಾಯ ತೆರಿಗೆಸಲ್ಲಿಕೆಗೆ ಈ ಹಿಂದೆ ನೀಡಲಾಗಿದ್ದ 2020ರ ಜುಲೈ 31ರಗಡುವನ್ನು 2020ರ ಡಿಸೆಂಬರ್ 31ರ ವರೆಗೆವಿಸ್ತರಿಸಲಾಗಿದೆ. ಅದರಂತೆ ಕಾಯ್ದೆಯ ಅನುಸಾರ ನಾನಾ ಲೆಕ್ಕಪರಿಶೋಧನಾ ವರದಿಗಳು, ತೆರಿಗೆ ಲೆಕ್ಕಪರಿಶೋಧನಾವರದಿಗಳು ಹಾಗೂ ಅಂತಾರಾಷ್ಟ್ರೀಯ ಹಾಗೂ ನಿರ್ದಿಷ್ಟದೇಶಿ ವಹಿವಾಟಿಗೆ ಸಂಬಂಧಿಸಿದ ವರದಿಗಳನ್ನು ಸಲ್ಲಿಸಲುನೀಡಿದ್ದ ಗಡುವನ್ನು 2020ರ ಡಿಸೆಂಬರ್ 31ರ ವರೆಗೆವಿಸ್ತರಣೆ ಮಾಡಲಾಗಿದೆ. ಸಣ್ಣ ಮತ್ತು ಮಧ್ಯಮ ವರ್ಗದ ತೆರಿಗೆ ಪಾವತಿದಾರರಿಗೆಸ್ವಲ್ಪಮಟ್ಟಿನ ಪರಿಹಾರವನ್ನು ನೀಡುವ ಉದ್ದೇಶದಿಂದ2020ರ ಜೂನ್ 24ರಂದು ಹೊರಡಿಸಿದ್ದಅಧಿಸೂಚನೆಯಲ್ಲಿ ಸುಮಾರು ಒಂದು ಲಕ್ಷದವರೆಗೆ ತೆರಿಗೆಪಾವತಿಸುವ ತೆರಿಗೆದಾರರು ಸ್ವಯಂ ತೆರಿಗೆಮೌಲ್ಯಮಾಪನ ಪದ್ಧತಿಯಡಿ ತೆರಿಗೆ ಪಾವತಿಗೆನೀಡಲಾಗಿದ್ದ ಅವಧಿಯನ್ನೂ ಸಹ ವಿಸ್ತರಿಸಲಾಗಿದೆ. ಅದರಂತೆ ಸ್ವಯಂ ತೆರಿಗೆ ಮೌಲ್ಯಮಾಪನ ಪಾವತಿ ಅಡಿ2020ರ ಜುಲೈ 31ರ ವರೆಗೆ ಇದ್ದ ಅವಧಿಯನ್ನು 2020ರನವೆಂಬರ್ 30ರ ವರೆಗೆ ವಿಸ್ತರಣೆ ಮಾಡಲಾಗಿದೆ ಮತ್ತುಲೆಕ್ಕ ಪರಿಶೋಧನೆ ಆಗಬೇಕಾಗಿರುವ ಪ್ರಕರಣಗಳಲ್ಲಿ ಈಗಡುವು 2020ರ ಅಕ್ಟೋಬರ್ 31 ರಿಂದ 2020ರನವೆಂಬರ್ 30ರ ವರೆಗೆ ವಿಸ್ತರಿಸಲಾಗಿದೆ. ಸಣ್ಣ ಮತ್ತು ಮಧ್ಯಮ ವರ್ಗದ ತೆರಿಗೆ ಪಾವತಿದಾರರಿಗೆಎರಡನೇ ಬಾರಿ ಸಣ್ಣ ಪ್ರಮಾಣದ ಅವಕಾಶವನ್ನುನೀಡುವ ಸಲುವಾಗಿ ಸ್ವಯಂ ತೆರಿಗೆ ಮೌಲ್ಯಮಾಪನಪದ್ದತಿಯಡಿ ತೆರಿಗೆ ಪಾವತಿ ಅವಧಿಯನ್ನು ಮತ್ತೆ ವಿಸ್ತರಣೆಮಾಡಲಾಗಿದೆ. ಅದರಂತೆ ಸುಮಾರು ಒಂದು ಲಕ್ಷರೂಪಾಯಿಗಳ ವರೆಗೆ ಸ್ವಯಂ ತೆರಿಗೆ ಮೌಲ್ಯಮಾಪನಪದ್ದತಿಯಡಿ ತೆರಿಗೆಯನ್ನು ಪಾವತಿಸುವವರಿಗೆ 2020ರಜನವರಿ 31ರ ವರೆಗೆ ಗಡುವು ವಿಸ್ತರಿಸಲಾಗಿದ್ದು, ಇದುಪ್ಯಾರಾ 3(ಎ) ಮತ್ತು ಪ್ಯಾರಾ 3(ಬಿ) ಅಡಿಯಲ್ಲಿಉಲ್ಲೇಖಿಸಿರುವ ತೆರಿಗೆ ಪಾವತಿದಾರರಿಗೆ ಮತ್ತು 2020ರಡಿಸೆಂಬರ್ 31ರ ಗಡುವು ಪ್ಯಾರಾ […]

Continue Reading
IMG 20201008 222544

ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ವಿಧಿವಶ…!

ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ವಿಧಿವಶರಾಗಿದ್ದಾರೆ ಎಂದು ಪುತ್ರ ಚಿರಾಗ್ ಟ್ವಿಟ್ ಮಾಡಿದ್ದಾರೆ. ರಾಮ್ ವಿಲಾಸ್ ಪಾಸ್ವಾನ್ ಅವರು ಕೆಲ ವಾರಗಳ ಹಿಂದೆ ಆಸ್ಪತ್ರೆಗೆ ದಾಖಲಾಸಿದ್ದು ಇತ್ತೀಚೆಗಷ್ಟೇ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆದರೆ ಇದೀಗ ಅವರು ಮೃತಪಟ್ಟಿದ್ದಾರೆ ಇವರಿಗೆ 74 ವರ್ಷ ವಯಸ್ಸಾಗಿತ್ತು. ಲೋಕ್ ಜನಶಕ್ತಿ ಪಾರ್ಟಿ(ಎಲ್‌ಜೆಪಿ) ನಾಯಕ ರಾಮ್ ವಿಲಾಸ್ ಪಾಸ್ವಾನ್ 50 ವರ್ಷಗಳ ರಾಜಕೀಯ ಜೀವನದಲ್ಲಿ 8 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ  ದೇಶದ ಪ್ರಭಾವಿ ದಲಿತ ನಾಯಕರಾಗಿದ್ದರು ಹೆಚ್ ಡಿ ದೇವೇಗೌಡ ರ […]

Continue Reading
IMG 20201008 134600

ಉಪ ಚುನಾವಣೆ: ಸ್ಟಾರ್ ಪ್ರಚಾರಕರಿಗೆ ಹೊಸ ನಿಯಮ….!

ರಾಜಕೀಯ ಪಕ್ಷಗಳ ಸ್ಟಾರ್ ಪ್ರಚಾರಕರ ಕುರಿತು ಪರಿಷ್ಕøತ ಆದೇಶ ಬೆಂಗಳೂರು, ಅಕ್ಟೋಬರ್ 08 (ಕರ್ನಾಟಕ ವಾರ್ತೆ): ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಭಾರತ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳ ಸ್ಟಾರ್ ಪ್ರಚಾರಕರ ಸಂಖ್ಯೆಯನ್ನು ಮಿತಿಗೊಳಿಸಿ ಆದೇಶ ಹೊರಡಿಸಿದೆ. ಈ ಹಿಂದೆ ಭಾರತ ಚುನಾವಣಾ ಆಯೋಗವು ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಪಕ್ಷಗಳಿಗೆ 40 ಸ್ಟಾರ್ ಪ್ರಚಾರಕರನ್ನು ಬಳಸಿಕೊಳ್ಳುವ ಅವಕಾಶ ನೀಡಲಾಗಿತ್ತು. ಆದರೆ, ಈ ಸಂಖ್ಯೆಯಲ್ಲಿ ಬದಲಾವಣೆ ಮಾಡಿ 30 ಸ್ಟಾರ್ ಪ್ರಚಾರಕರನ್ನು ಬಳಸಿಕೊಳ್ಳಲು ಅವಕಾಶ […]

Continue Reading
IMG 20201006 122149

ಅಕ್ಟೋಬರ್ 15 ರಿಂದ ಸಿನಿಮಾ ಪ್ರದರ್ಶನ ಶುರು…?

ನವದೆಹಲಿ :- ಕೋರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಂದ್ ಅಗಿದ್ದ ಸಿನಿಮಾ ಹಾಲ್, ಮಲ್ಟಿಪ್ಲೆಕ್ಸ್ ಗಳನ್ನು ಅಕ್ಟೋಬರ್‌ 15 ರಿಂದ ಆರಂಭಿಸಲು ಕೇಂದ್ರಸರ್ಕಾರ ಹಲವು ಷರತ್ತು ಗಳೊಂದಿಗೆ ಅನುಮತಿ ನೀಡಿದೆ. ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್  ಮಾತನಾಡಿ ಹಲವು ಷರತ್ತು ಗಳೋಂದಿಗೆ ಸಿನಿಮಾ ಪ್ರದರ್ಶನ ಆರಂಭಿಸಲು ಅನುಮತಿ ನೀಡಲಾಗಿದೆ ಎಂದರು.   ಸಿನಿಮಾ ಹಾಲ್ / ಮಲ್ಟಿಪ್ಲೆಕ್ಸ್  ಗಳ ಅಸನ ಸಾಮರ್ಥ್ಯ ದ ಶೇಕಡ 50 ರಷ್ಟು ಜನರಿಗೆ ಮಾತ್ರ ಪ್ರವೇಶ ನೀಡಬೇಕು.  ಸಾಮಾಜಿಕ ಅಂತರ/ ಮಾಸ್ಕ್ […]

Continue Reading
IMG 20200923 213153

ಕೊರೋನಾ: ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನ…!

ಕೊರೋನಾ: ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನ.. ನವ ದೆಹಲಿ: ಕೊರೊನಾ ಮಹಾಮಾರಿಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನರಾಗಿದ್ದಾರೆ, ನವದೆಹಲಿ ಯ ಏಮ್ಸ್ ಆಸ್ಪತ್ರೆ ಯಲ್ಲಿ‌  ಕೊರೋನಾ ಗೆ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದುಂದ  ಸಂಸದರಾಗಿದ್ದ ನಾಲ್ಕು‌ಬಾರಿ ಆಯ್ಕೆಯಾಗಿದ್ದ ,ಸುರೇಶ್ ಅಂಗಡಿ. ಅವರು ನರೇಂದ್ರ ಮೋದಿಯವರ ಸರ್ಕಾರದಲ್ಲಿ‌ ಮೊದಲಬಾರಿಗೆ  ಕೇಂದ್ರ ರೈಲ್ವೆ ಖಾತೆಯ‌ ರಾಜ್ಯ ಸಚಿವರಾಗಿದ್ದರು. ಸಂಸದರ ನಿಧನಕ್ಕೆ ಪ್ರಧಾನಿಗಳು ಸೇರಿದಂತೆ ದೇಶದ ಗಣ್ಯರು ಸಂತಾಪ ಸೂಚಿಸಿದ್ದಾರೆ. ರಾಜ್ಯ ಬಿಜೆಪಿ […]

Continue Reading
IMG 20200917 WA0050

ದೇಶಾದ್ಯಂತ ಜನೌಷಧಿ ಕೇಂದ್ರಗಳ ವಿಸ್ತರಣೆ : ಡಿವಿಎಸ್

2025 ರ ಮಾರ್ಚ್ ವೇಳೆಗೆ ಜನೌಷಧಿ ಕೇಂದ್ರಗಳ ತೆರೆಯಲು ಸರ್ಕಾರದ ಗುರಿ; ಕೇಂದ್ರ ಸಚಿವ ಶ್ರೀ ಡಿ.ವಿ.ಸದಾನಂದ ಗೌಡ ದೇಶಾದ್ಯಂತ ಎಲ್ಲ ಜಿಲ್ಲೆಗಳಿಗೂ ಜನೌಷಧಿ ಕೇಂದ್ರಗಳ ವಿಸ್ತರಣೆ ಸಕಾಲದಲ್ಲಿ ಔಷಧಗಳ ವಿತರಣೆಗೆ ಪೂರೈಕೆ ಸರಣಿ ಮತ್ತು ಸಾಗಾಣೆ ಸೌಕರ್ಯವೃದ್ಧಿಗೆ ಮಾಹಿತಿ ತಂತ್ರಜ್ಞಾನ ಸಮರ್ಪಕ ಬಳಕೆ ನವದೆಹಲಿ, ಸೆಪ್ಟಂಬರ್ 17: 2025ರ ಮಾರ್ಚ್ ವೇಳೆಗೆ ದೇಶಾದ್ಯಂತ 10 ಸಾವಿರದ 500 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ತೆರೆಯುವ ಮಹತ್ವದ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ […]

Continue Reading
IMG 20200907 213759

ಹೊಸ ಶಿಕ್ಷಣ ನೀತಿ: 21 ನೇ ಶತಮಾನದ ಭಾರತದ ಸಾಮಾಜಿಕ, ಆರ್ಥಿಕ ಸ್ವರೂಪಕ್ಕೆ ಹೊಸ ದಿಕ್ಕು….!

ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ರಾಜ್ಯಪಾಲರುಗಳ ಸಮಾವೇಶ ಉದ್ದೇಶಿಸಿ ಪ್ರಧಾನಿ ಭಾಷಣ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ರಾಜ್ಯಪಾಲರುಗಳ ಸಮಾವೇಶ ಉದ್ದೇಶಿಸಿ ಭಾಷಣ ಮಾಡಿದರು. ವಿವಿಧ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗೌರ್ನರ್ ಗಳು ಮತ್ತು ಎಲ್ಲ ರಾಜ್ಯಗಳ ವಿಶ್ವವಿದ್ಯಾಲಯಗಳ ಕುಲಪತಿಗಳು ಭಾಗಿಯಾಗಿದ್ದರು. ಭಾರತದ ರಾಷ್ಟ್ರಪತಿಯವರ ಉಪಸ್ಥಿತಿ ಸಮಾವೇಶಕ್ಕೆ ಮೆರಗು ನೀಡಿದೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ದೇಶದ ಆಶೋತ್ತರಗಳನ್ನು ಈಡೇರಿಸಲು ಶಿಕ್ಷಣ ನೀತಿ ಮತ್ತು ಶಿಕ್ಷಣ ವ್ಯವಸ್ಥೆ ಮಹತ್ವದ ಸಾಧನಗಳು ಎಂದು ಹೇಳಿದರು. ಶಿಕ್ಷಣದ ಜವಾಬ್ದಾರಿ ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಮಟ್ಟದ ಆಡಳಿತದ ಮೇಲಿದ್ದರೂ, ನೀತಿ ನಿರೂಪಣೆಯಲ್ಲಿ ಅವರ ಹಸ್ತಕ್ಷೇಪ ಕನಿಷ್ಠವಾಗಿರಬೇಕು ಎಂದು ಪ್ರಧಾನಿ ಹೇಳಿದರು. ಹೆಚ್ಚು ಹೆಚ್ಚು ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಯೋಜನೆಯಲ್ಲಿ ತೊಡಗಿಸಿಕೊಂಡಾಗ ಶಿಕ್ಷಣ ನೀತಿಯ ಪ್ರಸ್ತುತತೆ ಮತ್ತು ಸಮಗ್ರತೆ ಹೆಚ್ಚಾಗುತ್ತದೆ ಎಂದು ಹೇಳಿದರು. ನಗರ ಮತ್ತು ಹಳ್ಳಿಗಳಲ್ಲಿ ವಾಸಿಸುವ ಲಕ್ಷಾಂತರ ಜನರು ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಂದ ಪ್ರತಿಕ್ರಿಯೆ ಪಡೆದ ನಂತರವೇ ಹೊಸ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ ಎಂದು ಅವರು ತಿಳಿಸಿದರು. ಈಗ ಶಿಕ್ಷಕರು ಮತ್ತು ಶಿಕ್ಷಣ ತಜ್ಞರು ಸೇರಿದಂತೆ ಎಲ್ಲರೂ ನೀತಿಯನ್ನು ಪಡೆದುಕೊಂಡಿದ್ದಾರೆ ಎಂದು ಅವರು ಹೇಳಿದರು. ನೀತಿಯನ್ನು ಸಾರ್ವತ್ರಿಕವಾಗಿ ಅಂಗೀಕರಿಸಲಾಗುತ್ತಿದೆ ಮತ್ತು ಹಿಂದಿನ ಶಿಕ್ಷಣ ನೀತಿಯಲ್ಲಿಯೇ ಸುಧಾರಣೆಗಳನ್ನು ಪರಿಚಯಿಸಬೇಕಾಗಿತ್ತೆಂಬ ಭಾವನೆ ಮೂಡಿದೆ ಎಂದು ಪ್ರಧಾನಿ ಹೇಳಿದರು. ನೀತಿಯ ಬಗ್ಗೆ ಆರೋಗ್ಯಪೂರ್ಣ ಚರ್ಚೆ ನಡೆಯುತ್ತಿದೆ ಮತ್ತು ಎನ್‌.ಇ.ಪಿ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವುದು ಮಾತ್ರವೇ ಅಲ್ಲದೆ 21 ನೇ ಶತಮಾನದ ಭಾರತದ ಸಾಮಾಜಿಕ ಮತ್ತು ಆರ್ಥಿಕ ಸ್ವರೂಪಕ್ಕೆ ಹೊಸ ದಿಕ್ಕು ನೀಡುತ್ತಿರುವುದರಿಂದ ಇದು ಅಗತ್ಯವಾಗಿದೆ ಎಂದು ಅವರು ಶ್ಲಾಘಿಸಿದರು. ಈ ನೀತಿಯು ಭಾರತವನ್ನು ಸ್ವಾವಲಂಬಿ ಅಥವಾ ಆತ್ಮನಿರ್ಭರ ಮಾಡುವ ಗುರಿ ಹೊಂದಿದೆ ಎಂದು ಅವರು ಹೇಳಿದರು. ಈ ನೀತಿ ಯುವಕರನ್ನು ತ್ವರಿತವಾಗಿ ಬದಲಾಗುತ್ತಿರುವ ಸನ್ನಿವೇಶದಲ್ಲಿ ಭವಿಷ್ಯಕ್ಕೆ ಸಜ್ಜುಗೊಳಿಸುವ ಗುರಿ ಹೊಂದಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ದೇಶದ ಯುವಜನರನ್ನು ಭವಿಷ್ಯದ ಅವಶ್ಯಕತೆಗಳಾದ ಜ್ಞಾನ ಮತ್ತು ಕೌಶಲ ಎರಡರಲ್ಲೂ ಸಜ್ಜುಗೊಳಿಸುವ ನಿಟ್ಟಿನಲ್ಲಿ ಈ ನೀತಿಯನ್ನು ವಿನ್ಯಾಸಗೊಳಿಸಲಾಗಿದೆ ಎಂದರು. ಹೊಸ ಶಿಕ್ಷಣ ನೀತಿಯು ಓದುವುದಕ್ಕಿಂತ ಹೆಚ್ಚಾಗಿ ಕಲಿಕೆಯ ಮೇಲೆ ಗಮನ ಹರಿಸುತ್ತದೆ ಮತ್ತು ಪಠ್ಯಕ್ರಮವನ್ನು ಮೀರಿ ವಿಮರ್ಶಾತ್ಮಕ ಚಿಂತನೆಗೆ ಒತ್ತು ನೀಡುತ್ತದೆ ಎಂದು ಅವರು ಹೇಳಿದರು. ಪ್ರಕ್ರಿಯೆಗಿಂತ ಭಾವೋದ್ರೇಕಕ್ಕೆ, ಪ್ರಾಯೋಗಿಕತೆ ಮತ್ತು ಕಾರ್ಯಕ್ಷಮತೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಅವರು ಹೇಳಿದರು. ಹೊಸ ಶಿಕ್ಷಣ ನೀತಿಯು ಕಲಿಕೆಯ ಫಲಶ್ರುತಿ ಮತ್ತು ಶಿಕ್ಷಕರ ತರಬೇತಿ ಮತ್ತು ಪ್ರತಿ ವಿದ್ಯಾರ್ಥಿಯ ಸಬಲೀಕರಣದತ್ತ ಕೇಂದ್ರೀಕರಿಸುತ್ತದೆ ಎಂದು ಅವರು ಹೇಳಿದರು. ಹೊಸ ಶಿಕ್ಷಣ ನೀತಿ ಭಾರತವನ್ನು 21ನೇ ಶತಮಾನದ ಆರ್ಥಿಕ ಅರಿವಿನ ರಾಷ್ಟ್ರವಾಗಿ ಮಾಡುವ ಗುರಿ ಹೊಂದಿದೆ. ಹೊಸ ಶಿಕ್ಷಣ ನೀತಿ ಕಡಲಾಚೆಯ ಅಗ್ರ ಅಂತರಾಷ್ಟ್ರೀಯ ವಿಶ್ವವಿದ್ಯಾಲಯಗಳ ಕ್ಯಾಂಪಸ್ ಭಾರತದಲ್ಲಿ ನೆಲೆಗೊಳ್ಳುವುದಕ್ಕೆ ಅವಕಾಶ ಕಲ್ಪಿಸಿ ಪ್ರತಿಭಾ ಫಲಾಯನ ತಡೆಯಲಿದೆ. ಹೊಸ ನೀತಿಯ ಕಾರ್ಯಾನುಷ್ಠಾನದ ಕುರಿತು ದೇಶದಲ್ಲಿ ಈಗ ಪ್ರಯತ್ನ ನಡೆದಿದೆ ಎಂದು ಪ್ರಧಾನಿ ಹೇಳಿದರು. ಎಲ್ಲಾ ಆತಂಕಗಳನ್ನು ಪರಿಹರಿಸಲು ಎಲ್ಲಾ ಭಾಧ್ಯಸ್ಥರ ಸಲಹೆಗಳನ್ನು ಮುಕ್ತ ಮನಸ್ಸಿನಿಂದ ಆಲಿಸಲಾಗುತ್ತಿದೆ ಎಂದು ಅವರು ಹೇಳಿದರು. ಈ ಶಿಕ್ಷಣ ನೀತಿಯು ಸರ್ಕಾರದ ಶಿಕ್ಷಣ ನೀತಿಯಲ್ಲ ಆದರೆ ದೇಶದ ಶಿಕ್ಷಣ ನೀತಿಯಾಗಿದೆ ಎಂದು ಹೇಳಿದರು. ರಾಷ್ಟ್ರೀಯ […]

Continue Reading
IMG 20200907 WA0080

ನೂತನ ಶಿಕ್ಷಣ ನೀತಿಯೂ ಇಡೀ ದೇಶಕ್ಕೆ ಹೊಸ ದಿಕ್ಸೂಚಿ….!

ನೂತನ  ಶಿಕ್ಷಣ ನೀತಿಯೂ ಇಡೀ ದೇಶಕ್ಕೆ ಹೊಸ ದಿಕ್ಸೂಚಿ ನೂತನ ಶಿಕ್ಷಣ ನೀತಿ ಜಾರಿಯಿಂದ ಜ್ಞಾನ ಆರ್ಥಿಕತೆಯಲ್ಲಿ ಭಾರತಕ್ಕೆ ಅಗ್ರಸ್ಥಾನ: ಪ್ರಧಾನಿ ನಿರೀಕ್ಷೆ ರಾಜ್ಯಪಾಲರ ಜತೆ ನಮ್ಮೇಳನದಲ್ಲಿ ಭಾಗಿಯಾಗಿದ್ದ ಡಿಸಿಎಂ ಬೆಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಯಿಂದ 21ನೇ ಶತಮಾನದಲ್ಲಿ ಭಾರತವು ʼಜ್ಞಾನ ಆರ್ಥಿಕತೆʼಯಲ್ಲಿ ಜಗತ್ತಿನಲ್ಲಿಯೇ ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳೀದರು. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಹಿನ್ನೆಲೆಯಲ್ಲಿ ಸೋಮವಾರ ನವದೆಹಲಿಯಿಂದಲೇ ದೇಶದ ಎಲ್ಲ ರಾಜ್ಯಪಾಲರು ಮತ್ತು ಶಿಕ್ಷಣ […]

Continue Reading