e9ef7b66 a631 44ed 9dc6 ed74fd447cfc

ಮೊದಲ ದಿನ ಕುಡುಕರು ಖರೀದಿಸಿದ್ದು 12.4 ಲಕ್ಷ ಲೀಟರ್ ಎಣ್ಣೆ ..!

STATE

ಬೆಂಗಳೂರು ಮೇ 04 :- ಲಾಕ್ ಡೌನ್ ನಂತರ ಗ್ರೀನ್ ಮತ್ತು ಆರೆಂಜ್ ಝೋನ್ ಗಳಲ್ಲಿ ಮದ್ಯ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿದೆ. ಬೆಳಗಿಜಾವದಿಂದ ವೈನ್‌ ಶಾಪ್‌  ಯಾವಾಗ ತೆಗೆಯುತ್ತೆ ಎಂದು ಸಾಲು ಗಟ್ಟಿನಿಂತಿದ್ದು ಮದ್ಯ ವ್ಯಸನಿಗಳು  ಇಂದು ಒಂದೇ ದಿನ 12.4 ಲಕ್ಷ ಲೀಟರ್‌ ಎಣ್ಣೆ ಖರೀದಿಸಿದ್ದಾರೆ.

ಇಂದು ಒಂದೇ ದಿನ ನಡೆದ ವಹಿವಾಟಿನಲ್ಲಿ ಅಂದಾಜು 3.9 ಲಕ್ಷ ಲೀಟರ್ ಬಿಯರ್ ಮತ್ತು 8.5 ಲಕ್ಷ ಲೀಟರ್ ಭಾರತೀಯ ತಯಾರಿಕಾ ಮದ್ಯ ಮಾರಾಟವಾಗಿರುತ್ತದೆ. ಈ ಮಾರಾಟದ ಅಂದಾಜು ಮೌಲ್ಯ ಸುಮಾರು 45 ಕೋಟಿ ಆಗಿರುತ್ತದೆ ಎಂದಿದೆ ಅಬಕಾರಿ ಇಲಾಖೆ

ಸಿಎಲ್-2 ಮತ್ತು 700 ಸಿಎಲ್-11(ಸಿ) (ಎಂ.ಎಸ್.ಐ.ಎಲ್) ಸನ್ನದನ್ನು  ಶಾಪ್‌ ಗಳಲ್ಲಿ ಬೆಳಿಗ್ಗೆ 9:00 ರಿಂದ ಸಂಜೆ 7:00 ರವರೆಗೆ ಮದ್ಯ ಮಾರಾಟ ಮಾಡಿದರು,, ಕಟ್ಟುನಿಟ್ಟಾಗಿ ಎಂ.ಆರ್.ಪಿ (MRP) ದರದಲ್ಲೇ ಮದ್ಯ ಮಾರಾಟ ಮಾಡಲಾಯಿತು. ಸಾಮಾಜಿಕ ಅಂತರ ಕಾಯ್ದು ಕೊಂಡು ಮದ್ಯ ವ್ಯಸನಿಗಳು ಮದ್ಯ ಖರೀದಿಸಿದರು.

ಎಂ.ಆರ್.ಪಿ (MRP) ಉಲ್ಲಂಘಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಕೆಲವು ದೂರುಗಳು ಬಂದಲ್ಲಿ ಅಂತಹ ಸನ್ನದುಗಳನ್ನು ಪರಿಶೀಲಿಸಿ ಅಮಾನತ್ತನ್ನು ಒಳಗೊಂಡಂತೆ ಕಾನೂನಿನ್ವಯ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಕೆ.ಎಸ್.ಬಿ.ಸಿ.ಎಲ್ ಡಿಪೋಗಳಲ್ಲಿ ಸಾಕಷ್ಟು ಮದ್ಯ ದಾಸ್ತಾನು  ಇದೆ. ಹಾಗೂ ಡಿಸ್ಟಿಲರಿ ಮತ್ತು ಬ್ರೀವರಿಗಳನ್ನು ನಡೆಸಲು ಅನುಮತಿಯನ್ನು ನೀಡಲಾಗಿದೆ ಎಂದಿದೆ ಅಬಕಾರಿ ಇಲಾಖೆ..