0b98fc2a c459 47c7 ba30 9a935b746d26

ಕಡೆಗೂ ಎಚ್ಚೆತ್ತ ಸಾರಿಗೆ ಸಚಿವರು..!

STATE

ಬೆಂಗಳೂರು ಮೇ ೩ :- ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರು ಎಂಬ ಗಾದೆ ಮಾತಿನಂತೆ ವಲಸೆ ಕಾರ್ಮಿಕರ ವಿಚಾರದಲ್ಲಿ ಅವರನ್ನು ಸುರಕ್ಷಿತವಾಗಿ ಅವರವರ ಊರುಗಳಿಗೆ ಕಳುಹಿಸಿ ಕೊಡುವ ವಿಚಾರದಲ್ಲಿ ಎಚ್ಚೆತ್ತ ಸಾರಿಗೆ ಸಚಿವ ಲಕ್ಷಣ ಸವದಿ ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ ಪಾದಾರ್ಪಣೆ ಮಾಡಿದರು.

ಮಾದ್ಯಮ ಸಾರ್ವಜನಿಕರು, ವಿರೋಧಪಕ್ಷಗಳು ಅಷ್ಟೆ ಏಕೆ ಸ್ವತಾ ಮುಖ್ಯಮಂತ್ರಿ ಯಡಿಯೂರಪ್ಪ ಅಸಮಧಾನ,ಆಕ್ರೋಶದ ನಂತರ ಸಚಿವ ಲಕ್ಷಣ ಸವದಿ ಕೆಂಪೇಗೌಡ ನಿಲ್ದಾಣ ಕ್ಕೆ ಬಂದು ವಲಸೆ ಕಾರ್ಮಿಕರ ಬೇಕು ಬೇಡ ,ಕುಂದು ಕೊರತೆಗಳನ್ನು ಆಲಿಸಿದ್ದಾರೆ ನಿನ್ನೆ ವಲಸೆ ಕಾರ್ಮಿಕರು ತಂಡೊಪ ತಂಡವಾಗಿ ಬಸ್‌ ನಿಲ್ದಾಣಕ್ಕೆ ಆಗಮಿಸಿ ಅವ್ಯವಸ್ಥೆಗಳ ಬಗ್ಗೆ ಮಾದ್ಯಮಗಳ ಬಳಿ ಅಳಲು ತೋಡಿಕೊಂಡಿದ್ದರು.

ಈ ವಿಚಾರ ಬಹಿರಂಗ ಬಹಿರಂಗವಾಗುತ್ತಿದ್ದಂತೆ ಕೆಂಡಾಮಂಡಲವಾದ ಮುಖ್ಯಮಂತ್ರಿ ಯಡಿಯೂರಪ್ಪ ಸಾರಿಗೆ ಸಚಿವರಿಗೆ ತರಾಟೆಗೆ ತೆಗೆದು ಕೊಂಡರು ಎನ್ನಲಾಗಿದೆ.

ವಲಸೆ ಕಾರ್ಮಿಕರನ್ನು ಸುಲಿಗೆ,ಲೂಟಿ ಮಾಡಲು ಹೊರಟ್ಟಿದ್ದ  ಸರ್ಕಾರದ ನಡೆಯನ್ನು ವಿರೋಧ ಪಕ್ಷಗಳು ಕಟುವಾಗಿ ಟೀಕಿಸಿ  ಸರ್ಕಾರಕ್ಕೆ ಮಾನವೀಯತೆಯಿಲ್ಲ,ಹೃದಯ ಅನುಕಂಪವಿಲ್ಲ,ಕಲ್ಲು ಬಂಡೆ ಸರ್ಕಾರ ವೆಂದು ತೀವ್ರವಾದ ತರಾಟೆಗೆ ಕೊಂಡರು.

ವಲಸೆ ಕಾರ್ಮಿಕರನ್ನು ಅವರ ಸ್ವಂತ ಸ್ಥಳಗಳಿಗೆ ಉಚಿತವಾಗಿ ಕಳುಹಿಸಲು ತಗುವ ವೆಚ್ಚವನ್ನು ಕರ್ನಾಟಕ ಕಾಂಗ್ರಸ್‌ ಬರಿಸಲಿದೆ ಎಂದು ಒಂದು ಕೋಟಿ ರೂಪಾಯಿ ಚೆಕನ್ನು ಸಾರಿಗೆ ನಿಗಮಕ್ಕೆ ಕಳುಹಿದ ಘಟನೆಯೂ ನಡೆದಿದೆ.

ವಲಸೆ ಕಾರ್ಮಿಕರ ಸಮಸ್ಯೆಯ ಬಗ್ಗೆ

ಕೊನೆಗೆ ಎಚ್ಚೆತ್ತ ಸರ್ಕಾರ ಉಚಿತವಾಗಿ ವಲಸೆ ಕಾರ್ಮಿಕರನ್ನು ಅವರ ಗ್ರಾಮ ಗಳಿಗೆ ಕಳುಹಿಸಲು ತೀರ್ಮಾನಿಸಿದೆ, ಕೆ ಎಸ್‌ ಆರ್ ಟಿಸಿ ಯು ಯಾವುದೇ  ಹಣದ ಚೆಕ್ ಅನ್ನು ಯಾರಿಂದ ಪಡೆದಿಲ್ಲ, ಇಂದು ಕಾರ್ಯಾಚರಣೆಯಾಗಿರು ಎಲ್ಲಾ ಬಸ್‌ ಗಳಲ್ಲಿ ಕಾರ್ಮಿಕರನ್ನು ಉಚಿತವಾಗಿ ಕರೆದುಕೊಂಡು ಹೋಗಿದ್ದೇವೆ .ಬಸ್‌ ತೆರಳುವ ಮುನ್ನ ಕಾರ್ಮಿಕರ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ, ಅವರ ಆರೋಗ್ಯ ತಪಾಸಣೆಮಾಡಿ ಕಳುಹಿಸುತ್ತಿದ್ದೇವೆ ಮತ್ತು ಅವರು ಇಳಿಯುವ ಊರುಗಳಲ್ಲಿಯೂ  ಆರೋಗ್ಯ ತಪಾಸಣೆ ನಡೆಸಿ ಮನೆಗಳಿಗೆ ಕಳುಹಿಸಲಾಗುವುದು ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.