ಬೆಂಗಳೂರು ಮೇ ೫:- ಲಾಕ್ ಡೌನ್ ಸಂದರ್ಭದಲ್ಲಿ ಬೇರೆ ಬೇರೆ ಜಿಲ್ಲೆಯಲ್ಲಿ ಸಿಲುಕಿರುವ ಸಾರ್ವಜನಿಕರು, ಅಂತರ್ ಜಿಲ್ಲೆಗಳ ನಡುವೆ ಸಂಚಾರ ಮಾಡುವುದಕ್ಕಾಗಿ ಆನ್ ಲೈನ್ ಮೂಲಕ ಇ- ಪಾಸ್ ನೀಡಲಾಗುತ್ತಿದೆ.ಪೊಲೀಸ್ ಇಲಾಖೆಯಿಂದ ಈ ಪಾಸ್ ಗಳನ್ನು ವಿತರಿಸಲಾಗುತ್ತದೆ. ಲಾಕ್ ಡೌನ್ ನಿಂದ ಬೇರೆ ಊರುಗಳಲ್ಲಿ ಸಿಲುಕಿವವರಿಗೆ ಮಾತ್ರ ಎಂದು ಬೆಂಗಳೂರು ಹೆಚ್ಚುವರಿ ಪೊಲೀಸ್ ಕಮೀಷನರ್ ಹೇಮಂತ್ ನಿಬಾಳ್ಕರ್ ಮಂಗಳವಾರ ಟ್ವಿಟ್ ಮಾಡಿ ತಳಿಸಿದ್ದಾರೆ.
ತಮ್ಮ ಊರುಗಳಲ್ಲಿಯೇ ಇದ್ದವರು ಮತ್ತೊಂದು ಊರಿಗೆ ಪ್ರಯಾಣಿಸಲು ಈ ಅವಕಾಶ ನೀಡಲಾಗಿಲ್ಲ ಕೇವಲ ತಮ್ಮ ಊರಿಗೆ ಬರಲಾರದೆ ಬೇರೆ ಊರುಗಳಲ್ಲಿ ಸಿಲಿಕಿರುವ ವಲಸೆ ಕಾರ್ಮಿಕರು, ಪ್ರವಾಸಿಗರು,ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರ ತೀರ್ಮಾನಿಸಿದೆ.ದಯಮಾಡಿ ಗುಂಪು ಗೂಡಬೇಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಸಾಮಾನ್ಯ ಕಾರಣಗಳಿಗೆ ಪ್ರಯಾಣ ಮಾಡಲು ಮನವಿ ಸಲ್ಲಿಸಬೇಡಿ ಎಂದು ಸಾರ್ವಜನಿಕರಲ್ಲಿ ಕೋರಿದ್ದಾರೆ.
ಪಾಸ್ ಪಡೆಯಲು ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು
https://kspclearpass.idp.mygate.com/otp ಅರ್ಹರು ಪಾಸ್ ಪಡೆದು ಚೆಕ್ ಪೋಸ್ಟ್ ಗಳಲ್ಲಿ ತೋರಿಸಿ, ಆರೋಗ್ಯ ತಪಾಸಣೆ ಮಾಡಿಸಿ ಕೊಂಡು ಪ್ರಯಾಣಿಸಬಹುದು.