migrants

ಕೊವಿಡ್ ೧೯- ವಿದೇಶದಲ್ಲಿರುವ ಭಾರತೀಯರನ್ನು ಕರೆತರಲು ನೋಡೆಲ್ ಅಧಿಕಾರಿಗಳ ನೇಮಕ

Genaral STATE

ಬೆಂಗಳೂರು, ಮೇ 5 ( ಕರ್ನಾಟಕ ವಾರ್ತೆ ) : ಹಲವು ಭಾರತೀಯರು ವಿದೇಶಗಳಲ್ಲಿ ವ್ಯಾಸಂಗ ಇಲ್ಲವೆ ಕೆಲಸವನ್ನು ಮಾಡುತ್ತಿದ್ದು ಕರೋನಾ-19 ಮಹಾಮಾರಿಯಿಂದ ತಮ್ಮ ಸ್ವದೇಶಕ್ಕೆ ಮರಳಲು ಸಾಧ್ಯವಾಗದೆ ಆತಂಕದಲ್ಲಿದ್ದಾರೆ.  ಅಲ್ಲದೆ ಭಾರತಕ್ಕೆ ಮರಳಲು ಯಾವುದೇ ಪ್ಯಾಸೆಂಜರ್ ವಿಮಾನ ಸಹ ಇಲ್ಲವಾಗಿದೆ. ಈ ನಿಟ್ಟಿನಲ್ಲಿ ಇಂತಹವರಿಗೆ ಸಹಾಯಹಸ್ತ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ವಿದೇಶದಲ್ಲಿ ಸಿಲುಕಿರುವವರ ಸಮಗ್ರ ಮಾಹಿತಿಯನ್ನು ಆಯಾ ದೇಶದ ರಾಯಭಾರಿಗಳನ್ನು ಸಂಪರ್ಕಿಸಿ ಪದೆದುಕೊಳ್ಳಲಾಗುತ್ತಿದೆ.


     ವಿದೇಶಲ್ಲಿ ನೆಲಸಿರುವ ಭರತೀಯ ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರು ಕರ್ನಾಟಕಕ್ಕೆ ಮರಳಲು ಅನುಕೂಲವಾಗುವಂತೆ ವಿಕೋಪ ನಿರ್ವಹಣಾ ಕಾಯ್ದೆ-2005ರನ್ವಯ ರಾಜ್ಯ ಸರ್ಕಾರ ಈ ಕೆಳಕಂಡ ನೋಡಲ್ ಅಧಿಕಾರಿಗಳನ್ನು ಕೇಂದ್ರ, ರಾಜ್ಯ ಸರ್ಕಾರಗಳ ಸಮನ್ವಯದಲ್ಲಿ ಕೆಲಸ ನಿರ್ವಹಿಸಲು ನೇಮಿಸಲಾಗಿದೆ.
1)ಉಮೇಶ್ ಕುಮಾರ್ , ಐ.ಪಿ.ಎಸ್
2) ಸಿ.ಎನ್.ಮೀನಾ ನಾಗರಾಜ್, ಐ.ಎ.ಎಸ್

ಈ ಸಂಬಂಧ ನೇಮಕಗೊಂಡಿರುವ ನೋಡಲ್ ಅಧಿಕಾರಿಗಳಿಗೆ ಎಲ್ಲಾ ಜಿಲ್ಲಾಡಳಿತಗಳು ಹಾಗೂ ಸಂಬಂಧಿಸಿದ ಇತರ ಇಲಾಖೆಗಳು ಸಹಕಾರ ನೀಡುವಂತೆ ಸೂಚಿಸಲಾಗಿದೆ ಎಂದು ಸರ್ಕಾರದ ಪ್ರಧಾನ  ಕಾರ್ಯದರ್ಶಿಗಳು
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಇವರ ಪ್ರಕಟಣೆ ತಿಳಿಸಿದೆ.