ಬೆಂಗಳೂರು, ಮೇ 5 :- ಮುಖ್ಯುಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ತಮ್ಮ ಗೃಹ ಕಚೇರಿ ಕೃಷ್ಣದಲ್ಲಿ ಬಿಲ್ಡರುಗಳ ಸಭೆ ನಡೆಸಿ, ವಲಸೆ ಕಾರ್ಮಿಕರ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು.ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಬಾರದು ಮತ್ತು ವದಂತಿಗಳಿಗೆ ಕಿವಿಕೊಡಬೇಡಿ ಸರ್ಕಾರ ನಿಮ್ಮೊಂದಿಗಿದೆ ಎಂದು ಮನವಿ ಮಾಡಿದರು
ಲಾಕ್ ಡೌನ್ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಲಸೆ ಕಾರ್ಮಿಕರು ಕೆಲಸ ಕಳೆದು ಕೊಂಡು ಮೂರು ಹೊತ್ತಿನ ಊಟಕ್ಕೂ ಪರದಾಡುತ್ತಾ ದಿನ ಕಳೆಯುತ್ತಿದ್ದರು, ಸರ್ಕಾರ ಲಾಕ್ ಡೌನ್ ಸಡಿಲಿಸಿ ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ಹೊಗಲು ಅವಕಾಶ ನೀಡಿದ್ದೇ ತಡ ಎಲ್ಲಾ ಕಾರ್ಮಿಕರು ತಮ್ಮ ಊರುಗಳತ್ತ ಮರಳುತ್ತಿದ್ದಾರೆ ಉತ್ತರ ಕರ್ನಾಟಕ ಸೇರಿದಂತೆ,ಒರಿಸ್ಸಾ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್ ನತ್ತ ಪ್ರಯಾಣ ಬೆಳಸಿದ್ದಾರೆ.ಕಾಯಕಕ್ಕಾಗಿ ಬೆಂಗಳೂರಿಗೆ ಬಂದಿದ್ದ ಕಾರ್ಮಿಕರು ಊರಿಗೆ ಮರಳುತ್ತಿರು ಸಂತೋ಼ಷ ಜೊತೆಗೆ ಮುಂದಿನ ಭವಿಷ್ಯದ ಆತಂಕ ಕಾಡತೊಡಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಿಂದ ತಂಡೋಪತಂಡವಾಗಿ ಊರಿಗೆ ತೆರಳುತ್ತಿರುವುದು ನಿರ್ಮಣ ವಲಯದಲ್ಲಿ ಆತಂಕ ಮೂಡಿಸಿದೆ. ಲಾಕ್ ಡೌನ್ ಸಡಿಲಿಸಿ ಕಟ್ಟಡ ನಿರ್ಮಾಣ ಕೆಲಸ ಆರಂಭಿಸಲು ಅನುಮತಿ ನೀಡಿದೆ. ಆದರೆ ಕಾರ್ಮಿಕರು ನಗರ ತೊರೆಯುತ್ತಿರುವುದು ಬಿಲ್ಡರ್ ಗಳಲ್ಲಿ ಆತಂಕ ಮೂಡಿಸಿದೆ.
.
ಬಿಲ್ಡರುಗಳ ಜೊತೆ ಮುಖ್ಯಮಂತ್ರಿಗಳ ಸಭೆಯ ಮುಖ್ಯಾಂಶಗಳು
೧. ರಾಜ್ಯದಲ್ಲಿ ಕೋವಿಡ್ 19 ಪರಿಸ್ಥಿತಿ ಇತರ ರಾಜ್ಯಗಳಿಗೆ ಹೋಲಿಸಿದರೆ, ಹತೋಟಿಯಲ್ಲಿದೆ. ಈ ನಿಟ್ಟಿನಲ್ಲಿ ಕೆಂಪು ವಲಯ ಹೊರತು ಪಡಿಸಿ, ವ್ಯಾಪಾರ, ಕಟ್ಟಡ ನಿರ್ಮಾಣ ಕಾಮಗಾರಿ ಮತ್ತು ಕೈಗಾರಿಕಾ ಚಟುವಟಿಕೆಗಳನ್ನು ಮತ್ತೆ ಪ್ರಾರಂಭಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರ ಅನಗತ್ಯ ಪ್ರಯಾಣವನ್ನು ನಿಯಂತ್ರಿಸಬೇಕಾಗಿದೆ ಎಂದು ಅವರಿಗೆ ಮನವರಿಕೆ ಮಾಡಲಾಯಿತು.
೨ ಈ ಹಿನ್ನೆಲೆಯಲ್ಲಿ ಕೆಂಪು ವಲಯ ಹೊರತು ಪಡಿಸಿ, ಇತರ ಸ್ಥಳಗಳಲ್ಲಿ ನಿರ್ಮಾಣ ಚಟುವಟಿಕೆಗಳನ್ನು ಸಂಪೂರ್ಣವಾಗಿ ಪ್ರಾರಂಭಿಸುವಂತೆ ಸೂಚಿಸಲಾಗಿದೆ.
೩. ಕಾರ್ಮಿಕರಿಗೆ ಅಗತ್ಯ ಮೂಲಸೌಲಭ್ಯ ಒದಗಿಸಿ, ಉದ್ಯೋಗ ನೀಡಿ, ವೇತನ ನೀಡಿ ಅವರನ್ನು ಉಳಿಸಿಕೊಳ್ಳುವಂತೆ ಸಲಹೆ ನೀಡಿದರು.
೪ ನಿರ್ಮಾಣ ಚಟುವಟಿಕೆಗಳು ಅಬಾಧಿತವಾಗಿ ನಡೆಸಲು ಎಲ್ಲ ಅಗತ್ಯ ಸಹಕಾರ ನೀಡಲು ಸರ್ಕಾರ ಸಿದ್ಧವಿದೆ. ಅವಧಿ ಮೀರಿದ ಚಟುವಟಿಕೆಗಳಿಗೆ ಪೊಲೀಸ್ ಇಲಾಖೆಯಿಂದ ಪಾಸ್ ವಿತರಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಲಾಯಿತು.
೫. ಬೇರೆ ಜಿಲ್ಲೆಗಳಿಗೆ ತೆರಳಿರುವ ಕಾರ್ಮಿಕರನ್ನು ವಾಪಸ್ ಕರೆಸಲು ಅಗತ್ಯ ಪಾಸುಗಳನ್ನು ಸಹ ಒದಗಿಸಲಾಗುವುದು ಎಂದು ತಿಳಿಸಲಾಯಿತು.
೬ ಕಾರ್ಮಿಕರು ವದಂತಿಗಳಿಗೆ ಕಿವಿಗೊಡದೆ, ಅನಗತ್ಯ ಪ್ರಯಾಣ ಮಾಡುವ ಯೋಜನೆ ಕೈಬಿಡಬೇಕಾಗಿದೆ. ಈ ರೀತಿ ಆತಂಕಕ್ಕೆ ಒಳಗಾಗಿರುವ ಕಾರ್ಮಿಕರ ಮನವೊಲಿಸಲು ಸಚಿವರಿಗೆ ಸೂಚಿಸಲಾಗಿದೆ.
೭ ಕಾರ್ಮಿಕರ ಕ್ಯಾಂಪ್ ಗಳಿಗೆ ತೆರಳಿ ಅವರ ಮನವೊಲಿಸುವಂತೆ ಬಿಲ್ಡರುಗಳಿಗೂ ಸಹ ಸೂಚಿಸಲಾಯಿತು.
೮ ಖಾಸಗಿ ಸಂಸ್ಥೆಗಳ ಅನುಕೂಲಕ್ಕಾಗಿ ಬಿಎಂಟಿಸಿ ವತಿಯಿಂದ ಒಪ್ಪಂದದ ಮೇರೆಗೆ ರಿಯಾಯಿತಿ ದರದಲ್ಲಿ ಬಸ್ ಸೌಲಭ್ಯ ಒದಗಿಸಲಾಗುವುದು.
ತಡವಾಗಿ ಎಚ್ಚೆತ್ತ ಸರ್ಕಾರ
ಕಳೆದ ನಾಲ್ಕು- ಐದು ದಿನಗಳಿಂದ ವಲಸೆ ಕಾರ್ಮಿಕರು ತಂಡೋಪ-ತಂಡವಾಗಿ ತಮ್ಮ – ತಮ್ಮ ಊರುಗಳಿಗೆ ತೆರಳಿರುವ ಮತ್ತು ತೆರಳುತ್ತಿರುವ ಸಮಯ ದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಇಂದು ಕಾರ್ಮಿಕರಿ ಬಗ್ಗೆ ನೀಡಿರುವ ಹೇಳಿಕೆ ಬಹಳಷ್ಟು ತಡವಾಯಿತು ಎನ್ನುವ ಕೂಗು ಕಾರ್ಮಿಕ ವಲಯದಲ್ಲಿ ಕೇಳಿಬರುತ್ತಿದೆ.