ಬೆಂಗಳೂರು ಮೇ ೫ :- ಲಾಕ್ ಡೌನ್ ನಿಂದ ಸ್ಥಗಿತಗೊಂಡಿದ್ದ ಧಾರವಾಹಿಗಳ ಚಿತ್ರೀಕರಣಕ್ಕೆ ಸರಕಾರ ಅನುಮತಿ ನೀಡಿದೆ. ಕಿರುತೆರೆ ಸೂಟಿಂಗ್ ಬ್ರೇಕ್ ಬಿದ್ದು ಒಂದುವರೆ ತಿಂಗಳಾಗಿತ್ತು,ಲಾಕ್ ಡೌನ್ ಸಡಿಲಿಕೆ ಯಾಗಿರುವುದರಿಂದ ಕಿರುತೆರೆ ಚಿತ್ರೀಕರಣಕ್ಕೆ ಅನುಮತಿ ಕೊಡಬೇಕೆಂದು ಟೆಲಿವಿಷನ್ ಅಸೋಸಿಯೇ಼ನ್ ಅಧ್ಯಕ್ಷ ಎಸ್ ವಿ ಶಿವಕುಮಾರ್ ಭಾನುವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬಳಿ ಮನವಿ ಮಾಡಿಕೊಂಡಿದ್ದರು.
ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಂದಾಯ ಸಚಿವ ಆರ್.ಆಶೋಕ್ ಅವರು ಕೆಲವು ಷರತ್ತು ಗಳೊಂದಿಗೆ ಧಾರವಾಹಿಗಳ ಒಳಾಂಗಣ ದೃಶ್ಯಗಳ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿದೆ ಎಂದರು
,ಕಡಿಮೆ ಪ್ರಮಾಣದಲ್ಲಿ ಚಿತ್ರೀಕರಣದ ವೇಳೆ ಇರಬೇಕು, ಹೊರಗಡೆ. ರಸ್ತೆಯಲ್ಲಿ ಚಿತ್ರೀಕರಣ ಮಾಡುವಂತಿಲ್ಲ. ಕೇವಲ ಧಾರವಾಹಿಗಳ ಚಿತ್ರೀಕರಣ ಮಾಡುವುಕ್ಕೆ ಮಾತ್ರ ಅವಕಾಶನೀಡಲಾಗಿದ್ದು, ರಿಯಾಲಿಟಿ, ಅಥಾವ ರಿಯಾಲಿಟಿ ಶೋಗಳನ್ನು ಚಿತ್ರೀಕರಣ ಮಾಡುವಂತಿಲ್ಲ ಎಂದು ಸಚಿವರು ತಿಳಿಸಿದರು.