YOgraj 1

ಲಾಕ್​ಡೌನ್​ ನಡುವೆಯೂ ಆ್ಯಕ್ಷನ್ ಕಟ್ ಹೇಳಿದ ಯೋಗರಾಜ್​ ಭಟ್​

FILM NEWS

ಲಾಕ್​ಡೌನ್​ ನಡುವೆಯೂ ಇದ್ದಕ್ಕಿದಂತೆ ನಿರ್ದೇಶಕ ಯೋಗರಾಜ್​ ಭಟ್​​​ ರಸ್ತೆಗಿಳಿದಿದರು. ಬಿಳಿ ಹ್ಯಾಟು, ಸನ್​ಗ್ಲಾಸ್ ಧರಿಸಿ, ಕ್ಯಾಮೆರಾ ಹಿಡ್ದು ಆ್ಯಕ್ಷನ್​ ಕಟ್ ಹೇಳುತ್ತಿದರು.​ ಇದೇನಪ್ಪಾ(?) ಲಾಕ್​ಡೌನ್​ ನಡುವೆ ಭಟ್ರು ಸಿನಿಮಾ ಶೂಟಿಂಗ್​ ಮಾಡುತ್ತಾರೆ. ಯಾವ್​ ಸಿನಿಮಾ ಏನ್​ ಕಥೆ(?) ಯಾರು ಶೂಟಿಂಗ್​ಗೆ​ ಪರ್ಮಿಷನ್​ ಕೊಟ್ರು ಅನ್ನೋ ಪ್ರಶ್ನೆಗಳು ಎದ್ದಿತ್ತು. ಸಾಲದಕ್ಕೆ ನೂರಾರು ಜನ ಪೊಲೀಸರು ಅಲ್ಲಿ ಸೇರಿದರು.

ಟೌನ್​ಹಾಲ್​ ಮುಂದೆ ಯೋಗರಾಜ್​ ಭಟ್ರು ಶೂಟಿಂಗ್​ ಮಾಡಿದ್ದು ನಿಜ, ಪೊಲೀಸರು ಅಲ್ಲಿ ಸೇರಿದ್ದು ನಿಜ. ಆದರೆ, ಅದು ಸಿನಿಮಾ ಶೂಟಿಂಗ್​ ಅಲ್ಲ. ಮತ್ತೊಂದು ವಿಶೇಷ ಅಂದ್ರೆ ಪೊಲೀಸರೇ ಶೂಟಿಂಗ್​ನಲ್ಲಿ ಭಾಗವಹಿಸಿದರು. ಅಂದ ಹಾಗೇ ಇದು ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಹಾಡಿನ ಚಿತ್ರೀಕರಣ. ಅದರ ಜವಾಬ್ದಾರಿಯನ್ನು ವಹಿಸಿಕೊಂಡಿದ್ದವರು ನಿರ್ದೇಶಕ ಯೋಗರಾಜ್​ ಭಟ್.

ಭಟ್ಟರ ಮಾತಿನಲ್ಲಿ ಹಾಸ್ಯ, ವಿಡಂಬನೆ, ಸಣ್ಣದೊಂದು ಕೊಂಕು, ದೊಡ್ಡದೊಂದು ಸಂದೇಶ ಎಲ್ಲವೂ ಇರುತ್ತೆ. ಸಂದರ್ಭಕ್ಕೆ ತಕ್ಕಂತೆ ಹಾಡುಗಳನ್ನು ಮಾಡಿ ಹಿಟ್​ ಮಾಡಿದವರು ಯೋಗರಾಜ್​ ಭಟ್​. ಈ ಹಿಂದೆ ಎಲೆಕ್ಷನ್​, ಜಿಎಸ್​ಟಿ ಬಗ್ಗೆ ಕೂಡ ಸಾಂಗ್​ ಮಾಡಿದರು. ಇದೀಗ ಕೊರೊನಾ ವೈರಸ್​ ಮತ್ತು ಲಾಕ್​ಡೌನ್ ಕುರಿತು ಹೊಸ ಹಾಡು ಸಿದ್ಧವಾಗುತ್ತಿದೆ. ಅರ್ಜುನ್​ ಜನ್ಯಾ ಟ್ಯೂನ್​ ಹಾಕಿರೋ ಈ ಹಾಡಿಗೆ ಭಟ್ರು ಸಾಹಿತ್ಯ ಬರೆದಿದ್ದು, ವಿಜಯ ಪ್ರಕಾಶ್​ ಹಾಡಿದ್ದಾರೆ.

ಕೊರೊನಾದಿಂದಾಗಿರುವ ನಷ್ಟ, ಉದ್ಬವಿಸಿರೋ ಸಮಸ್ಯೆ, ಮುಂದೇನು ಅನ್ನೋದನ್ನ ಭಟ್ರು ಹಾಡಿನ ರೂಪಕ್ಕಿಳಿಸಿ​​ದ್ದಾರೆ. 4 ನಿಮಿಷಗಳ ಜಾಗೃತಿ ಮೂಡಿಸುವ ಹಾಡನ್ನು ಟೌನ್​ ಹಾಲ್​ ಮುಂದೆ ಶೂಟ್​ ಮಾಡಲಾಗುತ್ತಿದೆ. ಅದರ ಸಂಪೂರ್ಣ ಜವಾಬ್ದಾರಿ ವಿಕಟ ಕವಿಗಳ ಹೆಗಲೇರಿದೆ. ಪೊಲೀಸರನ್ನೇ ಕಲಾವಿರನ್ನ ಬಳಸಿಕೊಂಡು ಹಾಡನ್ನ ಶೂಟ್​ ಮಾಡುತ್ತಿದ್ದು, ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​, ಡಿಸಿಪಿ ಶಶಿಕುಮಾರ್​ ಸೇರಿದಂತೆ ಸಾಕಷ್ಟು ಹಿರಿಯ ಪೊಲೀಸ್​ ಅಧಿಕಾರಿಗಳು ಶೂಟಿಂಗ್​ನಲ್ಲಿ ಭಾಗವಹಿಸಿದ್ದಾರೆ.

ಸಿಎಂ ಯಡಿಯೂರಪ್ಪ, ಸಚಿವರಾದ ಶ್ರೀರಾಮುಲು, ಇನ್​ಫೋಸಿಸ್ ಪ್ರತಿಷ್ಟಾನದ ಅಧ್ಯಕ್ಷೆ ಸುಧಾಮೂರ್ತಿಯವರ ಸಂದೇಶವು ಈ ಹಾಡಿನಲ್ಲಿ ಇರಲಿದೆ. ಲಾಕ್​ಡೌನ್​ ಸಮಯದಲ್ಲಿ ವೈದ್ಯರು, ಪೊಲೀಸರು, ಬಿಬಿಎಂಪಿ ಸಿಬ್ಬಂದಿ, ಮಾಧ್ಯಮದವರು ಸೇರಿದಂತೆ ಹಲವರ ನಿರಂತರ ಶ್ರಮ, ನಾವು ನೀವು ಎಲ್ಲರೂ ಎದುರಿಸುತ್ತಿರುವ ಸಂಕಷ್ಟ ಹೀಗೆ ಹಲವು ವಿಷಯಗಳನ್ನ ಸೇರಿಸಿ, ಹಾಡನ್ನ ಕಟ್ಟಿಕೊಡಲಾಗ್ತಿದೆ..

ಒಂದಷ್ಟು ಗೂಡಾರ್ಥವನ್ನ ಸೇರಿಸಿ, ‘ಯಾರು ನೀ ಕೇಳಿದ್ದು ಮಾನವ ಕೊರೊನಾ’ ಅಂತ ಶುರುವಾಗುವ ಈ ಹಾಡನ್ನ ಭಟ್ರು ಬರೆದಿದ್ದಾರೆ.. ಈಗಾಗಲೇ ಕೊರೊನಾ ಬಗ್ಗೆ ಸಾಕಷ್ಟು ಹಾಡುಗಳು ಬರ್ತಾಯಿದ್ದು, ಈ ಹಾಡನ್ನ ಬಹಳ ದೊಡ್ಡಮಟ್ಟದಲ್ಲಿ ಕಟ್ಟಿಕೊಡಲಾಗ್ತಿದೆ.. ಅರ್ಜುನ್​ ಜನ್ಯಾ, ಯೋಗರಾಜ್​ ಭಟ್​​, ವಿಜಯ ಪ್ರಕಾಶ್​​​​​​​ ಕಾಂಬಿನೇಷನ್​ ಆಗಿರೋದ್ರಿಂದ ಹಾಡು ಮತ್ತಷ್ಟು ಕುತೂಹಲ ಕೆರಳಿಸಿದೆ.