ಬೆಂಗಳೂರು ಮೇ ೫ :- ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯ ಸರ್ಕಾರವನ್ನು ಕುಡುಕರು ಕೈ ಹಿಡಿದಿದ್ದಾರೆ, ಎರಡನೇ ದಿನದ ಮದ್ಯ ಮಾರಾಟ ರಾಜ್ಯ ಅಬಕಾರಿ ಇಲಾಖೆಯ ಬೊಕ್ಕಸಕ್ಕೆ 197 ಕೋಟಿ ಆದಾಯ ಬಂದಿದೆ. ಮೊದಲ ದಿನದ ದಾಖಲೆಯನ್ನು ಮುರಿದಿದೆ.ರಾಜ್ಯಾದ್ಯಂತ ಎರಡನೇ ದಿನವೂ ಪುರುಷರು ಮತ್ತು ಮಹಿಳೆಯರು ಸೇರಿದಂತೆ ಎಲ್ಲಾ ವಯಸ್ಸಿನವರು ಬಾರ್ ಗಳ ಮುಂದೆ ಸಾಲುಗಟ್ಟಿ ನಿಂತಿದ್ದರಿಂದ ಸುಮಾರು 197 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ.
ಅಬಕಾರಿ ಇಲಾಖೆ ಮಾಹಿತಿ ಪ್ರಕಾರ ಇಂದು 7.09 ಲೀಟರ್ ಬಿಯರ್ ಮತ್ತು 36 ಲಕ್ಷ ಲೀಟರ್ ಭಾರತೀಯ ತಯಾರಿಕಾ ಮದ್ಯ ಮಾರಾಟವಾಗಿದೆ, ಬಿಯರ್ ನಿಂದ 15 ಕೋಟಿ, ಭಾರತೀಯ ಮದ್ಯದಿಂದ 182 ಕೋಟಿ ರೂ ಒಟ್ಟು 197 ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ಆದಾಯ ಇಲಾಖೆ ಮೂಲಗಳು ತಿಳಿಸಿವೆ.
ದಾಖಲೆ ಎಣ್ಣೆ ಮಾರಾಟ
ಮೊದಲದಿನ( 4-5-20) ರಂದು ೪೫ ಕೋಟಿ , ಇಂದು 197 ಕೋಟಿ ಇಷ್ಟು ಪ್ರಮಾಣದ ಮದ್ಯ ಮಾರಾಟದ ಆದಾಯವೂ ಭಾರತದ ಇತಿಹಾಸದಲ್ಲೆ ಮೊದಲು ಎನ್ನಲಾಗುತ್ತಿದೆ.